ವರ್ಷದ ಕೊನೆಯ ವಾರ ಈ ರಾಶಿಯವರಿಗೆ ಅದೃಷ್ಟ ! ಸಂತಸ ಸಂಭ್ರಮದಿಂದಲೇ ಬರಮಾಡಿಕೊಳ್ಳುವರು ಹೊಸ ವರ್ಷ

Weekly Horoscope : 2023ರ ಕೊನೆಯ ವಾರ ಕೆಲವು ರಾಶಿಯವರಿಗೆ ಆರ್ಥಿಕ ಲಾಭ ಮತ್ತು ಸಂತೋಷವನ್ನು ನೀಡುತ್ತದೆ.  ಹೇಗಿರಲಿದೆ ನಿಮ್ಮ ವಾರ ಭವಿಷ್ಯ ? 

Written by - Ranjitha R K | Last Updated : Dec 23, 2023, 10:39 AM IST
  • ಜ್ಯೋತಿಷ್ಯದ ಪ್ರಕಾರ, ಮುಂಬರುವ ವಾರವು ವಿಶೇಷವಾಗಿರುತ್ತದೆ
  • ವರ್ಷದ ಕೊನೆ ವಾರ ಯಾರಿಗೆ ಶುಭ ?
  • ಯಾರಿಗೆ ಅದೃಷ್ಟ ಹೊತ್ತು ತರಲಿದೆ
ವರ್ಷದ ಕೊನೆಯ ವಾರ ಈ ರಾಶಿಯವರಿಗೆ ಅದೃಷ್ಟ ! ಸಂತಸ ಸಂಭ್ರಮದಿಂದಲೇ ಬರಮಾಡಿಕೊಳ್ಳುವರು ಹೊಸ ವರ್ಷ  title=

ಬೆಂಗಳೂರು :  Weekly Horoscope : ಜ್ಯೋತಿಷ್ಯದ ಪ್ರಕಾರ, ಮುಂಬರುವ ವಾರವು ವಿಶೇಷವಾಗಿರುತ್ತದೆ. 2023 ರ ಡಿಸೆಂಬರ್ 24 ರಿಂದ ಡಿಸೆಂಬರ್ 30 ರವರೆಗಿನ ಸಮಯವು ಕೆಲವು ರಾಶಿಯವರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. 2023ರ ಕೊನೆಯ ವಾರ ಕೆಲವು ರಾಶಿಯವರಿಗೆ ಆರ್ಥಿಕ ಲಾಭ ಮತ್ತು ಸಂತೋಷವನ್ನು ನೀಡುತ್ತದೆ.  

ಮೇಷ ರಾಶಿ : ಮೇಷ ರಾಶಿಯ ಜನರು ಈ ವಾರ ಯಾರಿಗೂ ಸಾಲ ನೀಡಬಾರದು. ಯಾರಿಂದಲೂ ಸಾಲ ಪಡೆಯಲೂ ಬಾರದು. ಇಲ್ಲದಿದ್ದರೆ ಆರ್ಥಿಕ ನಷ್ಟವಾಗಬಹುದು. ಸಾಧ್ಯವಾದಷ್ಟು ವಿವಾದಗಳಿಂದ ದೂರವಿರಿ.  

ವೃಷಭ ರಾಶಿ : ಅನುಮಾನಾಸ್ಪದ ಅಥವಾ ಅಪಾಯಕಾರಿ ವ್ಯವಹಾರಗಳನ್ನು ಮಾಡಬೇಡಿ. ದುರಾಸೆಗೆ ಬಿದ್ದು ತಪೋಪು ಕೆಲಸಕ್ಕೆ ಕೈ ಹಾಕಬೇಡಿ. ಸರ್ಕಾರಿ ವ್ಯವಸ್ಥೆಯಿಂದ ಲಾಭ ಪಡೆಯುವ ಸಾಧ್ಯತೆಗಳಿವೆ. 

ಮಿಥುನ ರಾಶಿ : ನಿಮ್ಮ ಕುಟುಂಬದಲ್ಲಿ ಸಂತೋಷ ಇರುತ್ತದೆ. ದೀರ್ಘಕಾಲದ ಸಮಸ್ಯೆಗಳು ಬಗೆಹರಿಯಲಿವೆ. ಅತಿಥಿಗಳ ಆಗಮನವಾಗಬಹುದು. 

ಇದನ್ನೂ ಓದಿ : ಸದಾ ಸಿರಿವಂತರ ಸಾಲಿನಲ್ಲಿ ನಿಲ್ಲುತ್ತಾರೆ ಈ ರಾಶಿಯವರು! ಎಂಥಾ ಪರಿಸ್ಥಿತಿಯಲ್ಲಿಯೂ ಇವರ ಜೇಬು ಖಾಲಿಯಾಗುವುದೇ ಇಲ್ಲ !

ಕರ್ಕಾಟಕ ರಾಶಿ : ಯಾವುದೇ ತಪ್ಪು ಕೆಲಸ ಮಾಡಬೇಡಿ. ನಿಮ್ಮ ಇಮೇಜ್ ಹಾಳಾಗಬಹುದು. ನೀವು ಪೂರೈಸಬಹುದಾದ ಭರವಸೆಯನ್ನು ಮಾತ್ರ ನೀಡಿ. ಸುಮ್ಮನೆ ಮಾತಿಗೆ ಯಾರಿಗೂ ಯಾವುದೇ ರೀತಿಯ ಭರವಸೆ ನೀಡಬೇಡಿ. ಆರ್ಥಿಕ ಸ್ಥಿತಿಯು ಸಾಮಾನ್ಯವಾಗಿರುತ್ತದೆ. 

ಸಿಂಹ ರಾಶಿ : ಸಂದರ್ಭಗಳು ನಿಮ್ಮ ಪರವಾಗಿಲ್ಲ, ನಿಮ್ಮ ತಪ್ಪುಗಳಿಂದ ಕೆಲವು ಸನ್ನಿವೇಶಗಳು ಇನ್ನಷ್ಟು ಕೆಟ್ಟದಾಗುವಂತೆ ಮಾಡಬೇಡಿ. ಒಳ್ಳೆಯ ಸಮಯಕ್ಕಾಗಿ ಕಾಯುವುದು ಉತ್ತಮ.

ಕನ್ಯಾ ರಾಶಿ : ನಿಮ್ಮ ಗೌರವಕ್ಕೆ ಧಕ್ಕೆಯಾಗಬಹುದು. ಕುಟುಂಬದ ಸದಸ್ಯರು ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ. ಮಹಿಳಾ ಸಹೋದ್ಯೋಗಿಗಳು ನಿಮಗೆ ಹಾನಿ ಉಂಟು ಮಾಡಬಹುದು. 

ತುಲಾ ರಾಶಿ : ಇಲ್ಲಿಯವರೆಗೆ ವೃತ್ತಿಜೀವನದಲ್ಲಿ ನೀವು ಪಟ್ಟ ಶ್ರಮಕ್ಕೆ ತಕ್ಕ  ಫಲ ಸಿಗುವ ಸಮಯ ಬಂದಿದೆ. ಹೊಸ ಜವಾಬ್ದಾರಿ ನಿಮ್ಮ ಹೆಗಲೇರುವುದು. ಜೀವನದಲ್ಲಿ ಸೌಕರ್ಯಗಳು ಮತ್ತು ಐಷಾರಾಮಿಗಳು ಹೆಚ್ಚಾಗುತ್ತವೆ. 

ಇದನ್ನೂ ಓದಿ : ಲಕ್ಷ್ಮೀ ನಾರಾಯಣ ಯೋಗ ಈ 5 ರಾಶಿಯವರಿಗೆ ಅದೃಷ್ಟ.. ಧನ ಸಂಪತ್ತು ಕೊಟ್ಟು ಕಾಯುವಳು ವಿಷ್ಣುಪ್ರಿಯೆ!

ವೃಶ್ಚಿಕ ರಾಶಿ : ದೊಡ್ಡ ಹೂಡಿಕೆ ಮಾಡಲು ಸಮಯ ಸರಿಯಲ್ಲ. ಹೂಡಿಕೆ ಮಾಡಲೇ ಬೇಕು ಎಂದಾದರೆ ಅನುಭವಿ ವ್ಯಕ್ತಿಯಿಂದ ಸಲಹೆ ಪಡೆಯಿರಿ. ನಿಮ್ಮ ಕೆಲಸದ ಮೇಲೆ ಪೂರ್ಣ ಗಮನ ಹರಿಸಿ. ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸ ಮುಗಿಸಿಕೊಳ್ಳಿ. 

ಧನು ರಾಶಿ : ಈ ವಾರ ವಿಶ್ರಾಂತಿ ಮನಸ್ಥಿತಿಯಲ್ಲಿರುತ್ತೀರಿ. ಕೆಲವು ಒಳ್ಳೆಯ ಸುದ್ದಿಗಳು ಸಿಗಬಹುದು. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಕೆಲವು ಸಮಸ್ಯೆಗಳನ್ನು ಎದುರಿಸಬಹುದು. 

ಮಕರ ರಾಶಿ : ಜೀವನ ಸಂಗಾತಿಯ ಬೆಂಬಲ ನಿಮ್ಮ ಜೊತೆಗೆ ಇರುತ್ತದೆ. ಅವರ ಬೆಂಬಲದಿಂದ ದೊಡ್ಡ ಸಮಸ್ಯೆಗಳು ಬಗೆಹರಿಯುತ್ತದೆ. ಕುಟುಂಬದ ಕಿರಿಯ ಸದಸ್ಯರಿಗೆ ಪ್ರೀತಿ ತೋರಿಸುವುದು ಉತ್ತಮ. 

ಕುಂಭ ರಾಶಿ : ಇತರರ ಕೆಲಸದಲ್ಲಿ ತಪ್ಪು ಹುಡುಕಬೇಡಿ. ಕುಟುಂಬದಲ್ಲಿ ಯಾರೊಂದಿಗಾದರೂ ಜಗಳವಾಗಬಹುದು. ನಿಮ್ಮ ಸ್ವಭಾವ ಮತ್ತು ಮಾತನ್ನು ನಿಯಂತ್ರಣದಲ್ಲಿ  ಇಟ್ಟುಕೊಳ್ಳಬಹುದು.  ವೃತ್ತಿ ಜೀವನ ಸಾಮಾನ್ಯವಾಗಿರುತ್ತದೆ. 

ಇದನ್ನೂ ಓದಿ : ಮೇಷ ರಾಶಿಯಲ್ಲಿ ಗಜಕೇಸರಿ ರಾಜಯೋಗ ರಚನೆ, ಧನಲಕ್ಷ್ಮಿ ಕೃಪೆಯಿಂದ ಈ ರಾಶಿಗಳ ಜನರಿಗೆ ಭಾರಿ ಧನಲಾಭ!

ಮೀನ ರಾಶಿ : ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ತಂದೆ ಅಥವಾ ತಜ್ಞರಿಂದ ಸಲಹೆ ಪಡೆಯುವುದು ಉತ್ತಮ. 

(  ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News