ಇನ್ನೆರಡು ತಿಂಗಳಲ್ಲಿ ಈ ರಾಶಿಯವರಿಗೆ ಧನಿಕರಾಗುವ ಯೋಗ ! ಅದೃಷ್ಟ ಕರುಣಿಸಲಿದ್ದಾರೆ ರಾಹು -ಕೇತು

Rahu Ketu ka Rashi Pativartan 2023: ಕ್ಟೋಬರ್ 30, 2023 ರಂದು ಮಧ್ಯಾಹ್ನ 01.33 ಕ್ಕೆ ರಾಹು ಮೇಷ ರಾಶಿಯಿಂದ ಹೊರಬಂದು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಅದೇ ಸಮಯದಲ್ಲಿ, ಕೇತುವು ತುಲಾ ರಾಶಿಯನ್ನು ಬಿಟ್ಟು ಕನ್ಯಾರಾಶಿಯನ್ನು ಪ್ರವೇಶಿಸುತ್ತಾನೆ. ರಾಹು-ಕೇತುಗಳ ರಾಶಿ ಬದಲಾವಣೆಯು 2 ರಾಶಿಯ ಜನರಿಗೆ ತುಂಬಾ ಶುಭವಾಗಿರಲಿದೆ.    

Written by - Ranjitha R K | Last Updated : Aug 14, 2023, 10:39 AM IST
  • ರಾಹು - ಕೇತು ಸದಾ ಹಿಮ್ಮುಖವಾಗಿ ಚಲಿಸುವ ಗ್ರಹ
  • ಈ ಎರಡೂ ಗ್ರಹಗಳು ಒಂದೂವರೆ ವರ್ಷದಲ್ಲಿ ರಾಶಿಯನ್ನು ಬದಲಾಯಿಸುತ್ತವೆ.
  • ರಾಹು-ಕೇತು ಸಂಕ್ರಮಣಕ್ಕೆ ಜ್ಯೋತಿಷ್ಯದಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.
ಇನ್ನೆರಡು ತಿಂಗಳಲ್ಲಿ ಈ ರಾಶಿಯವರಿಗೆ ಧನಿಕರಾಗುವ ಯೋಗ ! ಅದೃಷ್ಟ ಕರುಣಿಸಲಿದ್ದಾರೆ ರಾಹು -ಕೇತು  title=

Rahu Ketu ka Rashi Pativartan 2023 :  ರಾಹು ಮತ್ತು ಕೇತು ಎರಡೂ ಗ್ರಹಗಳು ಸದಾ ಹಿಮ್ಮುಖವಾಗಿ ಚಲಿಸುವ ಗ್ರಹಗಳಾಗಿವೆ. ಅಲ್ಲದೆ ಈ ಎರಡೂ ಗ್ರಹಗಳು ಒಂದೂವರೆ ವರ್ಷದಲ್ಲಿ ರಾಶಿಯನ್ನು ಬದಲಾಯಿಸುತ್ತವೆ. ರಾಹು-ಕೇತುಗಳನ್ನು ಕ್ರೂರ ಗ್ರಹಗಳು ಎಂದು ಕರೆಯಲಾಗುತ್ತದೆ. ರಾಹು-ಕೇತು ಯಾವಾಗಲೂ ಅಶುಭ ಫಲವನ್ನೇ ಉಂಟು  ಮಾಡುತ್ತದೆ ಎನ್ನುವುದು ಸಾಮಾನ್ಯ ನಂಬಿಕೆ. ಆದರೆ ಪ್ರತಿ ಸಂದರ್ಭದಲ್ಲಿಯೂ ಇದು ನಿಜವಲ್ಲ. ರಾಹು-ಕೇತು ಸಂಕ್ರಮಣಕ್ಕೆ ಜ್ಯೋತಿಷ್ಯದಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಈ ಎರಡೂ ಗ್ರಹಗಳು ಒಂದೇ ದಿನ ರಾಶಿಯನ್ನು ಬದಲಾಯಿಸುತ್ತವೆ. 2023 ರ ವರ್ಷವು ರಾಹು-ಕೇತುಗಳ ಸ್ಥಾನದ ದೃಷ್ಟಿಯಿಂದ ಬಹಳ ವಿಶೇಷವಾಗಿದೆ. ರಾಹು-ಕೇತು ಈ ವರ್ಷ ಅಕ್ಟೋಬರ್ 30, 2023 ರಂದು ತಮ್ಮ ರಾಶಿಯನ್ನು ಬದಲಾಯಿಸಲಿವೆ. ಸದ್ಯ ರಾಹು ಮೇಷದಲ್ಲಿ ಮತ್ತು ಕೇತು ತುಲಾ ರಾಶಿಯಲ್ಲಿ ಕುಳಿತಿದ್ದಾರೆ. ಅಕ್ಟೋಬರ್ 30, 2023 ರಂದು ಮಧ್ಯಾಹ್ನ 01.33 ಕ್ಕೆ ರಾಹು ಮೇಷ ರಾಶಿಯಿಂದ ಹೊರಬಂದು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಅದೇ ಸಮಯದಲ್ಲಿ, ಕೇತುವು ತುಲಾ ರಾಶಿಯನ್ನು ಬಿಟ್ಟು ಕನ್ಯಾರಾಶಿಯನ್ನು ಪ್ರವೇಶಿಸುತ್ತಾನೆ. ರಾಹು-ಕೇತುಗಳ ರಾಶಿ ಬದಲಾವಣೆಯು 2 ರಾಶಿಯ ಜನರಿಗೆ ತುಂಬಾ ಶುಭವಾಗಿರಲಿದೆ.  

ರಾಹು ಕೇತು ಸಂಕ್ರಮಣ ಈ ರಾಶಿಯವರ ಅದೃಷ್ಟವನ್ನೇ ಬದಲಾಯಿಸುತ್ತದೆ :  
ರಾಹು-ಕೇತುಗಳ ರಾಶಿ ಬದಲಾವಣೆಯು 2 ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಈ ಎರಡು ರಾಶಿಯವರು ಈ ಗ್ರಹಗಳ ಅಶುಭ ಪರಿಣಾಮಗಳಿಂದ ಮುಕ್ತಿ ಪಡೆಯುತ್ತಾರೆ. ಅದೃಷ್ಟ ಇವರ ಕೈ ಹಿಡಿಯಲಿದೆ. 

ಇದನ್ನೂ ಓದಿ : ಹಸ್ತದಲ್ಲಿ ಈ ರೇಖೆ ಇದ್ದರೆ ಜೀವನದಲ್ಲಿ ಆಗುವುದು ಸಿರಿವಂತ ಸಂಗಾತಿಯ ಪ್ರವೇಶ ! ಅತ್ತೆ ಮನೆಯಿಂದ ಸಿಗುವುದು ಭರ್ಜರಿ ಆಸ್ತಿ

ವೃಷಭ ರಾಶಿ : ರಾಹು-ಕೇತು ಸಂಕ್ರಮಣವು ವೃಷಭ ರಾಶಿಯವರಿಗೆ ಬಹಳ ಶುಭ ಫಲಿತಾಂಶಗಳನ್ನು ನೀಡಲಿದೆ. ಈ ರಾಶಿಯವರು ರಾಹು-ಕೇತು ಅಶುಭ ಪರಿಣಾಮಗಳಿಂದ ಮುಕ್ತಿ ಪಡೆಯುತ್ತಾರೆ. ರಾಹು-ಕೇತುವಿನ ಅಶುಭ ನೆರಳು ಅವರಿಂದ ದೂರವಾಗುತ್ತದೆ. ಇಲ್ಲಿಯವರಿಗೆ ಕೈಗೂಡದ ಎಲ್ಲಾ ಕೆಲಸಗಳು ಈಗ ಪೂರ್ಣಗೊಳ್ಳಲಿವೆ. ಆರ್ಥಿಕ ಪರಿಸ್ಥಿತಿಯಲ್ಲಿ ಬಲವಾದ ಸುಧಾರಣೆ ಕಂಡು ಬರುವುದು. ಆದಾಯದಲ್ಲಿ ಹೆಚ್ಚಳವಾಗಿ ಎಲ್ಲಾ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುವುದು. ವೃತ್ತಿ ಜೀವನದಲ್ಲಿ ಬಯಸಿದ ಸ್ಥಾನ ಮತ್ತು ಹಣ ಪಡೆಯುವಿರಿ. ವ್ಯಾಪಾರ ಮಾಡುವವರು ಹೆಚ್ಚಿನ ಲಾಭವನ್ನು ಗಳಿಸುವುದು ಸಾಧ್ಯವಾಗುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ದೈಹಿಕ ಸಮಸ್ಯೆಗಳು ಕೊನೆಗೊಳ್ಳುತ್ತವೆ. 

ಸಿಂಹ ರಾಶಿ : ರಾಹು-ಕೇತುಗಳ ಸಂಚಾರವು ಸಿಂಹ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಜನರು ಬಹಳ ದಿನಗಳಿಂದ ಎದುರಿಸುತ್ತಿದ್ದ  ಸಮಸ್ಯೆಗೆ ಪರಿಹಾರ ಸಿಗುತ್ತದೆ. ಆದಾಯ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಹಳೆಯ ನಷ್ಟವನ್ನು ಭರಿಸುವುದು ಸಾಧ್ಯವಾಗುತ್ತದೆ. ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೆ ಏರುವ ಎಲ್ಲಾ ಅವಕಾಶಗಳಿವೆ. ವಿದೇಶ ಪ್ರವಾಸಕ್ಕೆ ಹೋಗಬಹುದು. 

ಇದನ್ನೂ ಓದಿ : ಈ ರಾಶಿಯ ಜಾತಕದಲ್ಲಿ ಮಹಾಲಕ್ಷ್ಮೀ ಯೋಗ! ಹಣದ ಸುರಿಮಳೆ, ಉದ್ಯೋಗದಲ್ಲಿ ಬಡ್ತಿ-ಶ್ರೀಮಂತಿಕೆ ಅರಸಿ ಬರುವುದು!

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News