ತಮ್ಮ ಲಾಭಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಈ 5 ರಾಶಿಯ ಜನ

ಮನುಷ್ಯ ಎಂದ ಮೇಲೆ ಒಂದಲ್ಲಾ ಒಂದು ವಿಚಾರದಲ್ಲಿ ಸ್ವಾರ್ಥಿಯಾಗಿರುವುದು. ಸಹಜವೇ. ಆದರೆ, ನಮ್ಮಲ್ಲಿ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಎಂತಹ ಕೀಳು ಕೆಲಸ ಮಾಡಲು ಕೂಡ ಹಿಂದೂ ಮುಂದು ನೋಡುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದಲ್ಲೂ ಕೂಡ ಇಂತಹವರ ಬಗ್ಗೆ ಉಲ್ಲೇಖಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಐದು ರಾಶಿಯ ಜನರು ತಮ್ಮ ಸ್ವಾರ್ಥ ಸಾಧನೆಗಾಗಿ ಏನು ಬೇಕಾದರೂ ಮಾಡುತ್ತಾರೆ ಎಂದು ಉಲ್ಲೇಖಿಸಲಾಗಿದೆ. 

Written by - Yashaswini V | Last Updated : Feb 27, 2023, 12:35 PM IST
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯ ಜನರು ತಮ್ಮ ಸ್ವಾರ್ಥವನ್ನು ಸಾಧಿಸಿಕೊಳ್ಳಲು ಎಂತಹ ಕೀಳು ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ.
  • ಕೆಲವು ರಾಶಿಯ ಜನರು ಎಷ್ಟು ಸ್ವಾರ್ಥಿಗಳಾಗಿರುತ್ತಾರೆ ಎಂದರೆ ಅವರು ತಾವು ಬಯಸಿದ್ದನ್ನು ಪಡೆಯಲು ಏನು ಬೇಕಾದರೂ ಮಾಡುತ್ತಾರೆ.
  • ಯಾವ ರಾಶಿಯ ಜನರು ತಮ್ಮ ಸ್ವಾರ್ಥಕ್ಕಾಗಿ ಎಂತಹ ನೀಚ ಕೆಲಸ ಬೇಕಾದರೂ ಮಾಡಬಲ್ಲರು ಎಂದು ತಿಳಿಯೋಣ...
ತಮ್ಮ ಲಾಭಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಈ 5 ರಾಶಿಯ ಜನ  title=
Personality by Zodiac Sign

ಬೆಂಗಳೂರು: ಜ್ಯೋತಿಷ್ಯದಲ್ಲಿ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆಯೂ ಉಲ್ಲೇಖಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯ ಜನರು ಎಷ್ಟು ಸ್ವಾರ್ಥಿಗಳಾಗಿರುತ್ತಾರೆ ಎಂದರೆ ಅವರು ತಾವು ಬಯಸಿದ್ದನ್ನು ಪಡೆಯಲು, ತಮ್ಮ ಸ್ವಾರ್ಥವನ್ನು ಸಾಧಿಸಿಕೊಳ್ಳಲು ಎಂತಹ ಕೀಳು ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ. ಅವರನ್ನು ಜ್ಯೋತಿಷ್ಯದಲ್ಲಿ ಮೋಸಗಾರರು ಎಂದು ಕೂಡ ಬಣ್ಣಿಸಲಾಗುತ್ತದೆ. ಹಾಗಿದ್ದರೆ, ಯಾವ ರಾಶಿಯ ಜನರು ತಮ್ಮ ಸ್ವಾರ್ಥಕ್ಕಾಗಿ ಎಂತಹ ನೀಚ ಕೆಲಸ ಬೇಕಾದರೂ ಮಾಡಬಲ್ಲರು ಎಂದು ತಿಳಿಯೋಣ...

ತಮ್ಮ ಲಾಭಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಈ 5 ರಾಶಿಯ ಜನ:-
ವೃಷಭ ರಾಶಿ: 

ತುಂಬಾ ಶ್ರಮ ಜೀವಿಗಳಾದ ವೃಷಭ ರಾಶಿಯವರು ಯಾವುದೇ ಕೆಲಸವನ್ನು ಬಹಳ ಶ್ರದ್ಧೆಯಿಂದ ಮಾಡುತ್ತಾರೆ. ತಾವು ಹಿಡಿದ ಕೆಲಸವನ್ನು ಪೂರ್ಣಗೊಳಿಸಿದ ಬಳಿಕವೇ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ರಾಶಿಯವರನ್ನು ತುಂಬಾ ಸ್ವಾರ್ಥಿಗಳು ಎಂದು ಬಣ್ಣಿಸಲಾಗುತ್ತದೆ. ಈ ರಾಶಿಯವರು ತಮ್ಮ ಸ್ವಾರ್ಥ ಈಡೇರಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತಾರೆ.

ಮಿಥುನ ರಾಶಿ:
ಮಿಥುನ ರಾಶಿಯವರು ಸ್ವಭಾವತಃ ಹಠಮಾರಿಗಳು. ಇವರು, ತಮ್ಮ ಕನಸುಗಳ ಈಡೇರಿಕೆಗಾಗಿ ಎಂತಹ ಹಂತಕ್ಕೂ ತಲುಪಬಲ್ಲರು. ಇವರು ತಮ್ಮ ಸ್ವಾರ್ಥ ಸಾಧನೆಗಾಗಿ ಕತ್ತೆಯ ಕಾಲನ್ನೂ ಹಿಡಿಯಬಲ್ಲರು, ಏರಿದ ಏಣಿಯನ್ನೂ ಒದೆಯಬಲ್ಲರು.

ಇದನ್ನೂ ಓದಿ- ಕೇತು ಕೃಪೆಯಿಂದ ಶ್ರೀಮಂತರಾಗುತ್ತಾರೆ ಈ ರಾಶಿಯವರು

ಸಿಂಹ ರಾಶಿ: 
ಸಿಂಹ ರಾಶಿಯವರು ಎಂತಹುದೇ ಪರಿಸ್ಥಿತಿಯಲ್ಲೂ ಕೂಡ ಸದಾ ತಾವೇ ಮುಂದಿರಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ಸಮರ್ಪಿತ ಮನೋಭಾವದಿಂದ ದುಡಿಯುವ ಇವರು, ಅಗತ್ಯವಿದ್ದಾಗ ತಮ್ಮನ್ನು ಕಣ್ಮುಚ್ಚಿ ನಂಬುವವರಿಗೂ ಮೋಸ ಮಾಡಲು ಹಿಂಜರಿಯುವುದಿಲ್ಲ.

ತುಲಾ ರಾಶಿ: 
ಸ್ವಭಾವತಃ ಇತರರಿಗೆ ಒಳ್ಳೆಯದನ್ನೇ ಬಯಸುವ ತುಲಾ ರಾಶಿಯ ಜನರು ತಮ್ಮ ಗುರಿಯ ಕಡೆಗೆ ಎಂದಿಗೂ ನಿರ್ಲಕ್ಷ್ಯ ಹೊಂದಿರುವುದಿಲ್ಲ. ಯಾವುದೇ ಕೆಲಸವನ್ನು ಪೂರ್ಣಗೊಳಿಸಲು ದೃಢ ನಿರ್ಧಾರದಿಂದ ಮುನ್ನುಗ್ಗುವ ಇವರು ಇತರರ ಮಾತಿಗೆ ಬೆಲೆ ಕೊಡುವುದಿಲ್ಲ. ಅಷ್ಟೇ ಅಲ್ಲ, ಎಷ್ಟೇ ಪ್ರೀತಿ ಪಾತ್ರರಾದರೂ ಕೂಡ ಇವರಿಗೆ ತಮ್ಮ ಸ್ವಾರ್ಥದ ಮುಂದೆ ಬೇರೇನೂ ಕಾಣುವುದೂ ಇಲ್ಲ.

ಇದನ್ನೂ ಓದಿ- ಮಾರ್ಚ್‌ನಲ್ಲಿ ವೃತ್ತಿ ಬದುಕಿನಲ್ಲಿ ಹೊಸ ಶಿಖರವನ್ನು ಏರಲಿದ್ದಾರೆ ಈ ರಾಶಿಯವರು

ಕುಂಭ ರಾಶಿ:
ಯಾರೊಂದಿಗೂ ಅನಗತ್ಯ ಸಮಯ ಕಳೆಯದ, ಕೆಲಸದಲ್ಲಿ ಗಂಭೀರ ಸ್ವಭಾವದವರಾದ ಕುಂಭ ರಾಶಿಯವರು ತಮ್ಮ ಸ್ವಾರ್ಥ ಸಾಧನೆಗಾಗಿ ತಮ್ಮದೇ ಆದ ಜನರ ವಿರುದ್ಧ ನಡೆಯಲೂ ಕೂಡ ಹಿಂಜರಿಯುವಿಲ್ಲ. ಮೇಲ್ನೋಟಕ್ಕೆ ಉತ್ತಮರಂತೆ ಕಾಣುವ ಇವರು ಗೊತ್ತಿಲ್ಲದೆ ತಮ್ಮವರಿಗೆ ಮೋಸ ಮಾಡಿ ಮುಂದೆ ನಡೆಯುತ್ತಾರೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News