ಶನಿಶ್ಚರಿ ಅಮವಾಸ್ಯೆಯಂದು ಈ ಕೆಲಸ ಮಾಡಿದರೆ ಶನಿ ಸಾಡೇಸಾತಿ-ಧೈಯಾ ಪ್ರಭಾವದಿಂದ ಸಿಗುತ್ತೆ ಮುಕ್ತಿ

Shanishchari Amavasya: ಈ ವರ್ಷ ಜನವರಿ 21 ರಂದು ಶನಿಶ್ಚರಿ ಅಮಾವಾಸ್ಯೆಯನ್ನು ಆಚರಿಸಲಾಗುತ್ತಿದೆ. ಶನಿಯ ವಕ್ರದೃಷ್ಟಿ, ಶನಿ ಸಾಡೇಸಾತಿ-ಧೈಯಾ ಪ್ರಭಾವದಿಂದ ಪರಿಹಾರ ಪಡೆಯಲು ಬಯಸುವವರಿಗೆ ಈ ದಿನ ತುಂಬಾ ವಿಶೇಷವಾಗಿದೆ. ಶನಿಶ್ಚರಿ ಅಮವಾಸ್ಯೆಯಂದು ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಶನಿಯ ದುಷ್ಪರಿಣಾಮಗಳಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗುತ್ತದೆ. 

Written by - Yashaswini V | Last Updated : Jan 20, 2023, 11:46 AM IST
  • ಮೊನ್ನೆಯಷ್ಟೇ ಜನವರಿ 17ರಂದು ಶನಿಯು ಮೂರು ದಶಕಗಳ ಬಳಿಕ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ.
  • ಇದರೊಂದಿಗೆ ಮಕರ, ಕುಂಭ ಮತ್ತು ಮೀನ ರಾಶಿಯವರಿಗೆ ಶನಿಯ ಸಾಡೇಸಾತಿ ಪ್ರಭಾವ ಆರಂಭವಾಗಿದೆ.
  • ಕರ್ಕಾಟಕ ಮತ್ತು ವೃಶ್ಚಿಕ ರಾಶಿಯವರಿಗೆ ಶನಿ ಧೈಯಾ ಪ್ರಭಾವ ಆರಂಭವಾಗಿದೆ.
ಶನಿಶ್ಚರಿ ಅಮವಾಸ್ಯೆಯಂದು  ಈ ಕೆಲಸ ಮಾಡಿದರೆ ಶನಿ ಸಾಡೇಸಾತಿ-ಧೈಯಾ ಪ್ರಭಾವದಿಂದ ಸಿಗುತ್ತೆ ಮುಕ್ತಿ  title=
Shanishchari Amavasya

Shanishchari Amavasya: ವೈದಿಕ ಜ್ಯೋತಿಷ್ಯದಲ್ಲಿ ನವಗ್ರಹಗಳಲ್ಲಿ ಶನಿ ಗ್ರಹಕ್ಕೆ ತುಂಬಾ ಮಹತ್ವವನ್ನು ನೀಡಲಾಗುತ್ತದೆ. ನ್ಯಾಯದ ದೇವರು, ಕ್ರೂರ ಗ್ರಹ, ಕರ್ಮಗಳಿಗೆ ತಕ್ಕ ಫಲ ನೀಡುವವನು ಎಂದೆಲ್ಲಾ ಬಣ್ಣಿಸಲ್ಪಡುವ ಶನಿ ದೇವನ ದೃಷ್ಟಿ ಬಿತ್ತೆಂದರೆ ಪಾತಾಳದಲ್ಲಿ ಅಡಗಿದರೂ ಅವನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗಾಗಿಯೇ, ಶನಿಯ ಸಾಡೇಸಾತಿ-ಧೈಯಾ ಪ್ರಭಾವ ಹಾಗೂ ಶನಿಯ ವಕ್ರದೃಷ್ಟಿಯ ಬಗ್ಗೆ ಕೇಳಿದರೂ ಕೂಡ ಜನರು ಕನಸಿನಲ್ಲಿಯೂ ಬೆಚ್ಚಿಬೀಳುತ್ತಾರೆ. 

ಮೊನ್ನೆಯಷ್ಟೇ ಜನವರಿ 17ರಂದು ಶನಿಯು ಮೂರು ದಶಕಗಳ ಬಳಿಕ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಇದರೊಂದಿಗೆ ಮಕರ, ಕುಂಭ ಮತ್ತು ಮೀನ ರಾಶಿಯವರಿಗೆ ಶನಿಯ ಸಾಡೇಸಾತಿ ಪ್ರಭಾವ ಆರಂಭವಾಗಿದೆ.  ಕರ್ಕಾಟಕ ಮತ್ತು ವೃಶ್ಚಿಕ ರಾಶಿಯವರಿಗೆ ಶನಿ ಧೈಯಾ ಪ್ರಭಾವ ಆರಂಭವಾಗಿದೆ. ಈ ಸಮಯದಲ್ಲಿ ಶನಿಯ ವಕ್ರ ದೃಷ್ಟಿ ಈ ರಾಶಿಯವರ ಮೇಲಿರಲಿದ್ದು ಇವರು ಜೀವನದಲ್ಲಿ ನಾನಾ ರೀತಿಯ ಕಷ್ಟ-ಕಾರ್ಪಣ್ಯಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಶನಿ ವಕ್ರ ದೃಷ್ಟಿಯ ಪ್ರಭಾವವನ್ನು ಕಡಿಮೆ ಮಾಡಲು ನಾಳೆ (ಜನವರಿ 21) ಬಹಳ ವಿಶೇಷವಾಗಿದೆ. ವಾಸ್ತವವಾಗಿ, ಜನವರಿ 21ರಂದು ಶನಿ ಅಮಾವಾಸ್ಯೆ ಇದನ್ನು ಶನಿಶ್ಚರಿ ಅಮಾವಾಸ್ಯೆ ಎಂತಲೂ ಕರೆಯಲಾಗುತ್ತದೆ. ಈ ದಿನದಂದು ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಶನಿಯ ವಕ್ರ ದೃಷ್ಟಿಯಿಂದ ಉಂಟಾಗುವ ದುಷ್ಪರಿಣಾಮಗಳನ್ನು ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- Gupt Navratri Effect: ಈ 5 ರಾಶಿಯವರಿಗೆ ಪ್ರತಿ ಕೆಲಸದಲ್ಲೂ ಯಶಸ್ಸು ನೀಡಲಿದೆ ಗುಪ್ತ ನವರಾತ್ರಿ

ಶನಿಯ ವಕ್ರ ದೃಷ್ಟಿಯಿಂದ ಪರಿಹಾರ ಪಡೆಯಲು  ಶನಿ ಅಮಾವಾಸ್ಯೆ/ಶನಿಶ್ಚರಿ ಅಮಾವಾಸ್ಯೆಯಂದು ಈ ಪರಿಹಾರಗಳನ್ನು ಕೈಗೊಳ್ಳಿ:
ಶನಿ ದೇವರನ್ನು ಮೆಚ್ಚಿಸಲು ಶನಿವಾರ ತುಂಬಾ ವಿಶೇಷವಾಗಿದೆ. ಮಾಘ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯನ್ನು ಶನಿ ಅಮಾವಾಸ್ಯೆ, ಶನಿಶ್ಚರಿ ಅಮಾವಾಸ್ಯೆ ಅಥವಾ ಮೌನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ಬಾರಿ ಶನಿ ಅಮಾವಾಸ್ಯೆಯು ಶನಿವಾರದಂತೆ ಇರುವುದರಿಂದ ಈ ದಿನ ಕೆಲವು ಕ್ರಮಗಳನ್ನು ಕೈಗೊಳ್ಳುವುದರಿಂದ ಶನಿದೇವನ ಕೃಪೆಗೆ ಪಾತ್ರರಾಗಬಹುದು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- ಶನೈಶ್ಚರ ಅಮವಾಸ್ಯೆಯಾದ ನಾಳೆ ಈ ಕೆಲಸಗಳನ್ನು ಮಾಡಿದರೆ ಎಂದಿಗೂ ಕ್ಷಮಿಸುವುದಿಲ್ಲ ಶನಿ ದೇವ 

ನಾಳೆ ಈ ಕೆಲಸಗಳನ್ನು ಮಾಡುವುದರಿಂದ ಶನಿಯ ವಕ್ರ ದೃಷ್ಟಿಯಿಂದ ಪರಿಹಾರ ಪಡೆಯಬಹುದು:
ಶನಿಶ್ಚರಿ ಅಮಾವಾಸ್ಯೆಯ ದಿನ ಈ ಕ್ರಮಗಳನ್ನು ಕೈಗೊಳ್ಳುವುದರಿಂದ ಶನಿ ಸಾಡೇಸಾತಿ-ಧೈಯಾ ಪ್ರಭಾವದಿಂದ ಪರಿಹಾರ ಪಡೆಯಬಹುದು.
* ಶನಿ ಅಮಾವಾಸ್ಯೆಯ ದಿನ ಸಾಧ್ಯವಾದರೆ ಪುಣ್ಯ ನದಿಯಲ್ಲಿ ಸ್ನಾನ ಮಾಡುವುದು ತುಂಬಾ ಮಂಗಳಕರ. ಇದು ಸಾಧ್ಯವಾಗದಿದ್ದರೆ ಮನೆಯಲ್ಲಿಯೇ ಸ್ನಾನ ಮಾಡಿ ಮಡಿಯಾದ ಉಡುಪನ್ನು ಧರಿಸಿ.
* ಸ್ನಾನದ ಬಳಿಕ ಶನಿದೇವನಿಗೆ ವೀಳ್ಯದೆಲೆಯನ್ನು ಸ್ಥಾಪಿಸಿ ಮತ್ತು ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ. 
* ಶನಿ ದೇವನಿಗಾಗಿ ಸಾಸಿವೆ ಎಣ್ಣೆಯಲ್ಲಿ ಖಾದ್ಯವನ್ನು ತಯಾರಿಸಿ ನೇವೇದ್ಯವಾಗಿ ಅರ್ಪಿಸಿ.
* ಶನಿ ಚಾಲೀಸಾವನ್ನು ಪಠಿಸಿ. 
* 5, 7, 11 ಅಥವಾ 21 ಬಾರಿ ಶನಿ ಮಂತ್ರವನ್ನು ಪಠಿಸಿ.
* ಇದಲ್ಲದೆ, ನಿರ್ಗತಿಕರಿಗೆ, ಅಗತ್ಯವಿರುವವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News