Surya Transit 2023: ಹತ್ತು ದಿನಗಳ ಬಳಿಕ ಸೂರ್ಯನಂತೆ ಉಜ್ವಲಿಸಲಿದೆ ಈ ರಾಶಿಯವರ ಭವಿಷ್ಯ

Surya Transit 2023: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜ ಎಂದು ನಂಬಲಾಗಿರುವ ಸೂರ್ಯನು ಪ್ರತಿ ತಿಂಗಳು ನಿರ್ದಿಷ್ಟ ಸಮಯದಲ್ಲಿ ರಾಶಿ ಪರಿವರ್ತನೆ ಹೊಂಡುತ್ತಾನೆ. ಇದೀಗ ಜೂನ್‌ನಲ್ಲಿ ಸೂರ್ಯನು ಮಿಥುನ ರಾಶಿಗೆ ಪದಾರ್ಪಣೆ ಮಾಡಲಿದ್ದು ಕೆಲವು ರಾಶಿಯವರ ಜೀವನದಲ್ಲಿ ನಿದ್ರಾವಸ್ಥೆಯಲ್ಲಿರುವ ಅದೃಷ್ಟವನ್ನು ಎಚ್ಚರಗೊಳಿಸಲಿದ್ದಾನೆ ಎಂದು ಹೇಳಲಾಗುತ್ತಿದೆ.   

Written by - Yashaswini V | Last Updated : Jun 5, 2023, 09:07 AM IST
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಿಥುನ ರಾಶಿಗೆ ಸೂರ್ಯನ ಪ್ರವೇಶವು, ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ
  • ಆದರೂ, ಮೂರು ರಾಶಿಯವರ ಮೇಲೆ ಈ ಸಮಯದಲ್ಲಿ ಸೂರ್ಯ ದೇವನ ವಿಶೇಷ ಕೃಪೆ ಇರಲಿದೆ ಎಂದು ಬಣ್ಣಿಸಲಾಗುತ್ತಿದೆ.
  • ಮಿಥುನ ರಾಶಿಗೆ ಸೂರ್ಯನ ಪ್ರವೇಶವು ಮೂರು ರಾಶಿಯವರ ಜೀವನದಲ್ಲಿ ಹಠಾತ್ ಹಣಕಾಸಿನ ಲಾಭದ ಜೊತೆಗೆ ಉದ್ಯೋಗ-ವ್ಯವಹಾರದಲ್ಲಿ ಬಂಪರ್ ಪ್ರಗತಿಯನ್ನು ಸಹ ತರಲಿದೆ
Surya Transit 2023: ಹತ್ತು ದಿನಗಳ ಬಳಿಕ ಸೂರ್ಯನಂತೆ ಉಜ್ವಲಿಸಲಿದೆ ಈ ರಾಶಿಯವರ ಭವಿಷ್ಯ  title=

Surya Transit 2023 Effect: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತಂದೆ, ಆತ್ಮ, ಆತ್ಮ ವಿಶ್ವಾಸ, ಯಶಸ್ಸು, ವೃತ್ತಿ, ಆಡಳಿತ ಮತ್ತು ಆರೋಗ್ಯದ ಅಂಶವೆಂದು ಪರಿಣಗಣಿಸಲ್ಪಟ್ಟಿರುವ ಸೂರ್ಯ ದೇವನು ಶೀಘ್ರದಲ್ಲೇ ರಾಶಿ ಪರಿವರ್ತನೆ ಹೊಂದಲಿದ್ದಾನೆ. ಪ್ರಸ್ತುತ, ವೃಷಭ ರಾಶಿಯಲ್ಲಿರುವ ಸೂರ್ಯನು ಇನ್ನೂ ಹತ್ತು ದಿನಗಳ ಬಳಿಕ ಎಂದರೆ 15 ಜೂನ್ 2023ರಂದು ಸಂಕ್ರಮಿಸಿ ಮಿಥುನ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಿಥುನ ರಾಶಿಗೆ ಸೂರ್ಯನ ಪ್ರವೇಶವು, ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಮೂರು ರಾಶಿಯವರ ಮೇಲೆ ಈ ಸಮಯದಲ್ಲಿ ಸೂರ್ಯ ದೇವನ ವಿಶೇಷ ಕೃಪೆ ಇರಲಿದೆ ಎಂದು ಬಣ್ಣಿಸಲಾಗುತ್ತಿದೆ. ಮಿಥುನ ರಾಶಿಗೆ ಸೂರ್ಯನ ಪ್ರವೇಶವು ಮೂರು ರಾಶಿಯವರ ಜೀವನದಲ್ಲಿ ಹಠಾತ್ ಹಣಕಾಸಿನ ಲಾಭದ ಜೊತೆಗೆ ಉದ್ಯೋಗ-ವ್ಯವಹಾರದಲ್ಲಿ ಬಂಪರ್ ಪ್ರಗತಿಯನ್ನು ಸಹ ತರಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿ ಚಕ್ರಗಳು ಯಾವುವು ಎಂದು ತಿಳಿಯೋಣ... 

ಇದನ್ನೂ ಓದಿ- Shukra Gochar: ಜುಲೈ 7ರವರೆಗೆ ಈ ರಾಶಿಯವರಿಗೆ ವ್ಯಾಪಾರದಲ್ಲಿ ಬಂಪರ್ ಹಣ, ಉದ್ಯೋಗದಲ್ಲಿ ಪ್ರಗತಿ

ಜೂನ್ 15ರಿಂದ ಸೂರ್ಯನಂತೆ ಕಂಗೊಳಿಸಲಿದೆ ಈ ರಾಶಿಯವರ ಅದೃಷ್ಟ: 
ಮಿಥುನ ರಾಶಿ: 

15 ಜೂನ್ 2023ರಂದು ಮಿಥುನ ರಾಶಿಯಲ್ಲೇ ಸೂರ್ಯ ರಾಶಿ ಪರಿವರ್ತನೆ ಆಗಲಿದೆ. ಹಾಗಾಗಿ, ಇದರ ಗರಿಷ್ಠ ಪರಿಣಾಮ ಈ ರಾಶಿಯವರ ಮೇಲೆ ಹೆಚ್ಚಾಗಿ ಕಂಡು ಬರಲಿದ್ದು, ಈ ಸಮಯದಲ್ಲಿ ಮಿಥುನ ರಾಶಿಯ ಜನರಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಇದರಿಂದಾಗಿ, ನೀವು ಕೈ ಹಾಕುವ ಕೆಲಸ ಕಾರ್ಯಗಳಲ್ಲಿ ಯಶಸ್ಸಿನ ಉನ್ನತ ಶಿಖರವನ್ನು ಏರುವಿರಿ. ನಿಮ್ಮ ವಾಕ್ ಚಾತುರ್ಯದಿಂದ ಅನಿರೀಕ್ಷಿತ ಮೂಲಗಳಿಂದ ಹಣ ದೊರೆಯಲಿದೆ. 

ತುಲಾ ರಾಶಿ: 
ಗ್ರಹಗಳ ರಾಜ ಸೂರ್ಯನ ರಾಶಿ ಪರಿವರ್ತನೆಯಿಂದ ತುಲಾ ರಾಶಿಯವರು ನಾನಾ ರೀತಿಯ ಲಾಭವನ್ನು ಪಡೆಯಲಿದ್ದಾರೆ. ಈ ಸಮಯದಲ್ಲಿ ತುಲಾ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದ್ದು, ಕೈ ಹಾಕುವ ಪ್ರತಿ ಕೆಲಸದಲ್ಲೂ ಯಶಸ್ಸು ನಿಮ್ಮದಾಗಲಿದೆ. ಮನೆಯಲ್ಲಿ ಮಂಗಳಕರ ಕಾರ್ಯಗಳು ಜರುಗಲಿದ್ದು ನಿಮ್ಮ ಬಹುದಿಂದಾದ ಕನಸುಗಳು ನನಸಾಗುವ ಸಮಯ ಇದಾಗಿದೆ. ಹಠಾತ್ ಹಣಕಾಸಿನ ಲಾಭದಿಂದ ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. 

ಇದನ್ನೂ ಓದಿ- ಇನ್ನೆರಡು ದಿನಗಳಲ್ಲಿ ಬೆಳಗುವುದು ಈ ರಾಶಿಯವರ ಅದೃಷ್ಟ! ರಾಜರಂತಹ ಬದುಕು… ಹೊಡೆಯಲಿದೆ ಬಂಪರ್ ಲಾಟರಿ

ಕುಂಭ ರಾಶಿ: 
ಸೂರ್ಯ ರಾಶಿ ಬದಲಾವಣೆಯು  ಕುಂಭ ರಾಶಿಯವರ ಬಹುದಿನದ ಸಮಸ್ಯೆಗಳಿಗೆ ಪರಿಹಾರವನ್ನು ನೀಡಲಿದೆ. ಈ ವೇಳೆ ನೀವು ನಿಮ್ಮ ಮಕ್ಕಳಿಂದ ಗುಡ್ ನ್ಯೂಸ್ ಪಡೆಯುವ ಸಾಧ್ಯತೆಯೂ ಇದೆ. ನಿಮ್ಮ ಹಳೆಯ ಹೂಡಿಕೆಗಳಿಂದ ಬಂಪರ್ ಲಾಭವಾಗಲಿದ್ದು ಇದರಿಂದಾಗಿ ನಿಮ್ಮ ಹಲವು ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆ. ಒಟ್ಟಾರೆಯಾಗಿ ಜೂನ್ 15, 2023ರ ಬಳಿಕ ಈ ರಾಶಿಯವರಿಗೆ ಸುವರ್ಣ ಸಮಯ ಎಂತಲೇ ಹೇಳಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News