Surya Gochara: ವಾಶಿ ರಾಜಯೋಗದಿಂದ ಸೂರ್ಯನಂತೆ ಕಂಗೊಳಿಸಲಿದೆ ಮೂರು ರಾಶಿಯವರ ಭವಿಷ್ಯ

Vashi Rajayoga: ಗ್ರಹಗಳ ರಾಜ ಸೂರ್ಯ ದೇವನು ತನ್ನದೇ ಆದ ಸಿಂಹ ರಾಶಿಯಾಲ್ಲಿ ಪ್ರವೇಶಿಸಿದಾಗ ರಾಜ ಯೋಗ ನಿರ್ಮಾಣವಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವಾಶಿ ಎಂಬ ರಾಜಯೋಗ ನಿರ್ಮಾಣದೊಂದಿಗೆ ಮೂರು ರಾಶಿಯವರ ಭವಿಷ್ಯವೂ ಸೂರ್ಯನಂತೆಯೇ ಕಂಗೊಳಿಸಲಿದೆ ಎಂದು ಹೇಳಲಾಗುತ್ತಿದೆ. ಏನೀ ವಾಶಿ ರಾಜಯೋಗ, ಯಾವ ರಾಶಿಯವರ ಮೇಲೆ ಇದರ ಶುಭ ಪರಿಣಾಮಗಳು ಕಂಡು ಬರುತ್ತದೆ ಎಂದು ತಿಳಿಯಿರಿ. 

Written by - Yashaswini V | Last Updated : Jul 27, 2023, 08:51 AM IST
  • ಶೀಘ್ರದಲ್ಲೇ ತನ್ನದೇ ಆದ ಸಿಂಹ ರಾಶಿಯನ್ನು ಪ್ರವೇಶಿಸಲಿರುವ ಸೂರ್ಯ
  • ಸೂರ್ಯ ಸಂಚಾರದಿಂದ ಅತ್ಯಂತ ಮಂಗಳಕರ ವಾಶಿ ರಾಜಯೋಗ ನಿರ್ಮಾಣ
  • ಮೂರು ರಾಶಿಯವರಿಗೆ ಇಷ್ಟಾರ್ಥ ಸಿದ್ದಿಯೋಗ
Surya Gochara: ವಾಶಿ ರಾಜಯೋಗದಿಂದ ಸೂರ್ಯನಂತೆ ಕಂಗೊಳಿಸಲಿದೆ ಮೂರು ರಾಶಿಯವರ ಭವಿಷ್ಯ  title=

Sun Transit Vashi Rajayoga: ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಪ್ರತಿ ಗ್ರಹವೂ ಕೂಡ ಒಂದು ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತದೆ. ಗ್ರಹಗಳ ರಾಜನಾದ ಸೂರ್ಯದೇವನೂ ಪ್ರತಿ ತಿಂಗಳಿಗೊಮ್ಮೆ ರಾಶಿ ಪರಿವರ್ತನೆ ಹೊಂಡುತ್ತಾನೆ. ಸೂರ್ಯ ರಾಶಿ ಪರಿವರ್ತನೆಯನ್ನು ಸಂಕ್ರಾಂತಿ ಎಂತಲೂ ಕರೆಯಲಾಗುತ್ತದೆ. ಸದ್ಯ, ಕರ್ಕಾಟಕ ರಾಶಿಯಲ್ಲಿರುವ ಸೂರ್ಯ ಮುಂದಿನ ತಿಂಗಳು ತನ್ನದೇ ರಾಶಿಚಕ್ರ ಚಿಹ್ನೆ ಸಿಂಹ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರೊಂದಿಗೆ ಶುಭಕರ ವಾಶಿ ರಾಜಯೋಗವೂ ನಿರ್ಮಾಣವಾಗಲಿದೆ. 

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನೆರಳು ಗ್ರಹಗಳಾದ ರಾಹು ಮತ್ತು ಕೇತು ಗ್ರಹಗಳು ಹಾಗೂ ಚಂದ್ರನನ್ನು ಹೊರತುಪಡಿಸಿ ಯಾವುದೇ ಗ್ರಹವು ಸೂರ್ಯನಿಂದ ಹನ್ನೆರಡನೆಯ ಮನೆಯನ್ನು ಪ್ರವೇಶಿಸಿದಾಗ  ಅಗಾಧವಾದ ಲಾಭವನ್ನು ನೀಡುವ ವಾಶಿ ರಾಜಯೋಗವು ರೂಪುಗೊಳ್ಳುತ್ತದೆ.  ಇದೀಗ 16 ಆಗಸ್ಟ್ 2023ರಂದು ಸೂರ್ಯನು ಸಿಂಹ ರಾಶಿಗೆ ಪದಾರ್ಪಣೆ ಮಾಡಲಿದ್ದು ವಾಶಿ ರಾಜಯೋಗವು ರೂಪುಗೊಳ್ಳಲಿದೆ. ಇದು ಎಲ್ಲಾ ರಾಶಿಯವರ ಜೀವನದಲ್ಲಿ ಮಹತ್ವದ ಪರಿಣಾಮವನ್ನು ಬೀರುತ್ತದೆ. ಆದಾಗ್ಯೂ, ಈ ಸಮಯದಲ್ಲಿ ಮೂರು ರಾಶಿಯ ಜನರ ಜೀವನದಲ್ಲಿ ಅವರ ಪ್ರತಿಯೊಂದು ಕನಸೂ ಸಹ ನನಸಾಗುವ ಸಮಯ ಎಂತಲೇ ಹೇಳಲಾಗುತ್ತದೆ. 

ಇದನ್ನೂ ಓದಿ- Chaturgrahi Yoga: 21 ದಿನಗಳ ಬಳಿಕ ಈ ರಾಶಿಯವರಿಗೆ ಶ್ರೀಮಂತರಾಗುವ ಯೋಗ

ಸಿಂಹ ರಾಶಿಗೆ ಸೂರ್ಯನ ಪ್ರವೇಶದಿಂದ ವಾಶಿ ರಾಜಯೋಗ ನಿರ್ಮಾಣ: ಮೂರು ರಾಶಿಯವರಿಗೆ ಭಾರೀ ಪ್ರಯೋಜನ: 
ಸಿಂಹ ರಾಶಿ: 

ಸ್ವ ರಾಶಿಯಲ್ಲಿಯೇ ಸೂರ್ಯ ರಾಶಿ ಪರಿವರ್ತನೆಯಿಂದ ವಾಶಿ ರಾಜಯೋಗ ನಿರ್ಮಾಣವಾಗುತ್ತಿದೆ. ಇದು ಸಿಂಹ ರಾಶಿಯವರಲ್ಲಿ ಆತ್ಮಸ್ಥೈರ್ಯವನ್ನು ವೃದ್ಧಿಸಲಿದ್ದು, ಇದರಿಂದ ವ್ಯಕ್ತಿತ್ವ ಸುಧಾರಣೆ ಆಗಲಿದೆ. ಈ ಸಮಯದಲ್ಲಿ ನೀವು ಕೈಗೊಂಡಿರುವ ಕೆಲಸ ಕಾರ್ಯಗಳಲ್ಲಿ ಭಾರೀ ಪ್ರಯೋಜನವನ್ನು ಕಾಣಬಹುದಾಗಿದೆ. ಇನ್ನೂ ಮದುವೆ ಆಗದವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ವ್ಯಾಪಾರಸ್ಥರಿಗೂ ಇದು ಅತ್ಯುತ್ತಮ ಸಮಯ ಎಂದು ಸಾಬೀತುಪಡಿಸಲಿದೆ.  ಇದರಿಂದ ಬಂಪರ್ ಆರ್ಥಿಕ ಪ್ರಗತಿಯೂ ದೊರೆಯಲಿದೆ. 

ವೃಶ್ಚಿಕ ರಾಶಿ: 
ವೃಶ್ಚಿಕ ರಾಶಿಯವರು ಸದ್ಯ ಶನಿ ಧೈಯಾ ಪ್ರಭಾವದಿಂದಾಗಿ ಬಹಳಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಆದರೆ, ಸೂರ್ಯ ಸಂಚಾರದಿಂದ ನಿರ್ಮಾಣವಾಗಲಿರುವ ವಾಶಿ ರಾಜಯೋಗವು ವೃಶ್ಚಿಕ ರಾಶಿಯವರಿಗೆ ಒಳ್ಳೆಯ ದಿನಗಳನ್ನು ತರಲಿದ್ದು ಇದರೊಂದಿಗೆ  ಅಗಾಧವಾದ ಲಾಭವನ್ನು ನೀಡಲಿದೆ. ಉದ್ಯೋಗಸ್ಥರಿಗೆ ನೀವು ಕೆಲಸ ಮಾಡುವ ಸ್ಥಳದಲ್ಲಿ ಮನ್ನಣೆ, ಕೀರ್ತಿ ದೊರೆಯಲಿದೆ. ಇದೇ ಸಂದರ್ಭದಲ್ಲಿ ನೀವು ಯಾವುದೇ ವ್ಯವಹಾರವನ್ನು ಆರಂಭಿಸಿದ್ದರೆ ಯಶಸ್ಸು ನಿಮ್ಮದಾಗಲಿದೆ. ಇಷ್ಟು ದಿನ ಕಷ್ಟದ ದಿನಗಳನ್ನೇ ಕಂಡಿರುವ ನಿಮಗೆ ಮುಂದಿನ ದಿನಗಳಲ್ಲಿ ಪ್ರಗತಿಯ ಹಾದಿ ತೆರೆಯಲಿದ್ದು ನೀವು ಕೈ ಹಾಕಿದ ಕೆಲಸಗಳಲ್ಲೆಲ್ಲಾ ಯಶಸ್ಸನ್ನು ಕಾಣುವಿರಿ. ಪೂರ್ವಿಕರ ಆಸ್ತಿಯಿಂದ ಲಾಭವಾಗಲಿದೆ. ಹಣಕಾಸಿನ ಹರಿವೂ ಹೆಚ್ಚಾಗಲಿದೆ. 

ಇದನ್ನೂ ಓದಿ- 13 ವರ್ಷಗಳ ಬಳಿಕ ಈ ರಾಶಿಗೆ ಒಲಿದ ಶ್ರೀಮಂತಿಕೆ ಭಾಗ್ಯ! ಸಂಪತ್ತಿನ ಮಳೆ-ಶುಕ್ರನಿಂದ ಹೆಚ್ಚಾಗುವುದು ಅದೃಷ್ಟ, ಸಂಪತ್ತು

ಧನು ರಾಶಿ: 
ಸೂರ್ಯ ಸಂಚಾರದಿಂದ ರೂಪುಗೊಳ್ಳಲಿರುವ ವಾಶಿ ರಾಜಯೋಗವು ಧನು ರಾಶಿಯವರ ಜೀವನದಲ್ಲಿ ಭಾರೀ ಲಾಭವನ್ನು ತರಲಿದೆ. ಈ ಸಮಯದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದ್ದು, ಪ್ರತಿ ಕೆಲಸದಲ್ಲೂ ಯಶಸ್ಸನ್ನು ಕಾಣುವಿರಿ. ಉದ್ಯೋಗಕ್ಕಾಗಿ, ಇಲ್ಲವೇ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ಕನಸು ನನಸಾಗಲಿದೆ. ವೃತ್ತಿಜೀವನ ಚೆನ್ನಾಗಿ ಸಾಗಲಿದೆ.  ಕೌಟುಂಬಿಕ ಸುಖದಿಂದಾಗಿ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ವ್ಯಾಪಾರ-ವ್ಯವಹಾರದಲ್ಲಿ ಭಾರೀ ಯಶಸ್ಸು ಕಾಣುವಿರಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News