Surya Gochar 2024: ಇನ್ನೂ 24ಗಂಟೆಗಳಲ್ಲಿ ಬದಲಾಗಲಿದೆ ಈ ರಾಶಿಯವರ ಅದೃಷ್ಟ, ಪ್ರತಿ ಕೆಲಸದಲ್ಲೂ ಸಿಗುತ್ತೆ ಯಶಸ್ಸು

Surya Gochar 2024: ಗ್ರಹಗಳ ರಾಜ ಸೂರ್ಯದೇವ ಇನ್ನೂ 24 ಗಂಟೆಗಳಲ್ಲಿ ರಾಶಿ ಬದಲಾವಣೆ ಮಾಡಲಿದ್ದು, ಇದರ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ವೇಳೆ ಕೆಲವು ರಾಶಿಯವರ ಅದೃಷ್ಟವೇ ಬದಲಾಗಲಿದ್ದು, ಅವರು ಕೈ ಹಾಕುವ ಪ್ರತಿ ಕೆಲಸದಲ್ಲೂ ಯಶಸ್ಸನ್ನು ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Mar 13, 2024, 08:59 AM IST
  • ಮಾರ್ಚ್ 14, 2024 ರಂದು, ಸೂರ್ಯನು ಮೀನರಾಶಿಗೆ ಪ್ರವೇಶಿಸಲಿದ್ದಾನೆ
  • ಸೂರ್ಯದೇವ 14 ಮಾರ್ಚ್ 2024 ರಿಂದ 14 ಏಪ್ರಿಲ್ 2024 ರವರೆಗೆ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ.
  • ಸದ್ಯ ರಾಹು ಕೂಡ ಮೀನ ರಾಶಿಯಲ್ಲಿಯೇ ಸಂಚರಿಸುತ್ತಿದ್ದಾನೆ.
Surya Gochar 2024: ಇನ್ನೂ 24ಗಂಟೆಗಳಲ್ಲಿ ಬದಲಾಗಲಿದೆ ಈ ರಾಶಿಯವರ ಅದೃಷ್ಟ, ಪ್ರತಿ ಕೆಲಸದಲ್ಲೂ ಸಿಗುತ್ತೆ ಯಶಸ್ಸು  title=

Surya Gochar 2024: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜ ಸೂರ್ಯ ದೇವನು 14 ಮಾರ್ಚ್ 2024ರಂದು ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಏಪ್ರಿಲ್ 14, 2024 ರವರೆಗೆ ಮೀನ ರಾಶಿಯಲ್ಲಿಯೇ ಸಂಚರಿಸಲಿರುವ ಸೂರ್ಯದೇವ ಈ ಸಮಯದಲ್ಲಿ ದ್ವಾದಶ ರಾಶಿಯವರ ಜೀವನದಲ್ಲಿ ಧನಾತ್ಮಕ-ಋಣಾತ್ಮಕ ಪರಿಣಾಮಗಳನ್ನು ಬೀರಲಿದ್ದಾನೆ. ಸದ್ಯ ರಾಹು ಕೂಡ ಮೀನ ರಾಶಿಯಲ್ಲಿಯೇ ಸಂಚರಿಸುತ್ತಿದ್ದು, ಮೀನ ರಾಶಿಯಲ್ಲಿ ಸೂರ್ಯ-ರಾಹು ಯುತ್ತಿಯಿಂದ 'ಗ್ರಹಣ ಯೋಗ' ನಿರ್ಮಾಣವಾಗಲಿದೆ. ಇದರಿಂದಾಗಿ  ಐದು ರಾಶಿಯವರಿಗೆ ತುಂಬಾ ಪ್ರಯೋಜನಕಾರಿ ಎಂದು  ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

ಸೂರ್ಯ ರಾಶಿ ಪರಿವರ್ತನೆ: ಈ ರಾಶಿಯವರ ಅದೃಷ್ಟವೇ ಬದಲು 
ವೃಷಭ ರಾಶಿ: 

ಸೂರ್ಯ ರಾಶಿ ಬದಲಾವಣೆಯಿಂದ ನಿರ್ಮಾಣವಾಗಲಿರುವ ಗ್ರಹಣ ಯೋಗವು ವೃಷಭ ರಾಶಿಯವರ ವೃತ್ತಿ-ವ್ಯವಹಾರದಲ್ಲಿ ಬಂಪರ್ ಲಾಭವನ್ನು ನೀಡಲಿದೆ. ಈ ಸಮಯದಲ್ಲಿ ಹಣಕಾಸಿನ ಪರಿಸ್ಥಿತಿಗಳು ಅನುಕೂಲಕರವಾಗಿದ್ದು, ಬೇರೆಡೆ ಸಿಲುಕಿರುವ ಹಣ ಕೈ ಸೇರಲಿದೆ. ಅದೃಷ್ಟದ ಸಂಪೂರ್ಣ ಬೆಂಬಲದಿಂದಾಗಿ ನೀವು ಕೈ ಹಾಕುವ ಪ್ರತಿ ಕೆಲಸದಲ್ಲೂ ವಿಜಯಲಕ್ಷ್ಮಿ ಒಲಿಯಲಿದ್ದಾಳೆ. 

ಮಿಥುನ ರಾಶಿ: 
ಸೂರ್ಯದೇವನ ಆಶೀರ್ವಾದದಿಂದಾಗಿ ಈ ಸಮಯದಲ್ಲಿ ಮಿಥುನ ರಾಶಿಯವರು ವೃತ್ತಿ ಬದುಕಿನಲ್ಲಿ ಯಶಸ್ಸನ್ನು ಕಾಣುವಿರಿ. ದೀರ್ಘ ಸಮಯದಿಂದ ಸ್ಥಗಿತಗೊಂಡಿರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ವೈವಾಹಿಕ ಜೀವನವೂ ಆನಂದದಾಯಕವಾಗಿರಲಿದೆ. 

ಇದನ್ನೂ ಓದಿ- Shukra Gochar 2024: ತಿಂಗಳಾಂತ್ಯದಲ್ಲಿ ಸಂಪತ್ತುಕಾರಕನ ರಾಶಿ ಬದಲಾವಣೆ, 5 ರಾಶಿಯವರಿಗೆ ಶುಕ್ರದೆಸೆ

ಕನ್ಯಾ ರಾಶಿ: 
ಸೂರ್ಯ ರಾಶಿ ಪರಿವರ್ತನೆ ಸೂರ್ಯ-ರಾಹು ಯುತಿಯಿಂದಾಗಿ ಕನ್ಯಾ ರಾಶಿಯವರ ಜೀವನದಲ್ಲಿ ಸುಖ-ಸಂಪತ್ತು ಹೆಚ್ಚಾಗಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ನ್ಯಾಯಾಲಯದಲ್ಲಿರುವ ಪ್ರಕರಣಗಳಲ್ಲಿ ಜಯ ಸಿಗಲಿದೆ. 

ಧನು ರಾಶಿ: 
ಈ ವೇಳೆ ಧನು ರಾಶಿಯ ಜನರಿಗೆ ವಿತ್ತೀಯ ಲಾಭದಿಂದಾಗಿ ಸಾಲಗಳಿಂದ ಮುಕ್ತಿ ದೊರೆಯಲಿದೆ. ಉದ್ಯೋಗ ರಂಗದಲ್ಲಿ ಪ್ರಗತಿಯನ್ನು ಕಾಣುವಿರಿ. ವಿವಾಹಿತ ದಂಪತಿಗಳು ಮಕ್ಕಳಿಂದ ಸಂತೋಷವನ್ನು ಪಡೆಯುವರು. ಪ್ರೀತಿ-ಪ್ರೇಮದಲ್ಲಿರುವವರಿಗೆ ನಿಮ್ಮ ಪ್ರೀತಿಯನ್ನು ಮನೆಯವರು ಸಮ್ಮತಿಸುವ ಸಾಧ್ಯತೆ ಇದೆ. 

ಇದನ್ನೂ ಓದಿ- Budhaditya Rajyoga: ಮೀನ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ, 4 ರಾಶಿಯವರಿಗೆ ಬಂಪರ್ ಧನಲಾಭ

ಮಕರ ರಾಶಿ: 
ಸೂರ್ಯ ಸಂಚಾರದಿಂದ ಮಕರ ರಾಶಿಯವರ ಜೀವನದಲ್ಲಿ ಒಳ್ಳೆಯ ದಿಂಗಳು ಆರಂಭವಾಗಲಿವೆ. ಸ್ವಂತ ಉದ್ಯೋಗ ಮಾಡುವವರಿಗೆ ಬಂಪರ್ ಆರ್ಥಿಕ ಲಾಭದ ಸಾಧ್ಯತೆ ಇದ್ದು, ನಿಮ್ಮ ಸಂಪತ್ತು ವೃದ್ದಿಯಾಗಲಿದೆ. ಒಟ್ಟಾರೆಯಾಗಿ ಇದು ನಿಮಗೆ ಅದೃಷ್ಟದ ಸಮಯ ಎಂದು ಹೇಳಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News