Sun Transit: ಈ ರಾಶಿಯವರಿಗೆ ಸರ್ಕಾರಿ ನೌಕರಿ ಸಾಧ್ಯತೆ, ನಿಮ್ಮ ರಾಶಿ ಫಲ ಹೇಗಿದೆ?

Sun Transit: ಗ್ರಹಗಳ ರಾಜ ಎಂದು ಬಣ್ಣಿಸಲ್ಪಡುವ ಸೂರ್ಯ ದೇವನು ಇತ್ತೀಚೆಗಷ್ಟೇ ತನ್ನ ರಾಶಿಯನ್ನು ಬದಲಿಸಿದ್ದು, ಈ ಸಮಯವನ್ನು ಕೆಲವು ರಾಶಿಯವರ ದೃಷ್ಟಿಯಿಂದ ಶುಭ ಸಮಯ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಕೆಲವು ರಾಶಿಯವರಿಗೆ ಸರ್ಕಾರಿ ಉದ್ಯೋಗ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಆ ಅದೃಷ್ಟದ ರಾಶಿಗಳು ಯಾವುವು ತಿಳಿಯಿರಿ. 

Written by - Yashaswini V | Last Updated : Jun 19, 2023, 04:22 PM IST
  • ಗ್ರಹಗಳ ರಾಜ ಸೂರ್ಯದೇವನು ಜೂನ್ 15, 2023 ರಂದು ಸಂಜೆ 6.29 ಕ್ಕೆ ಮಿಥುನ ರಾಶಿಯನ್ನು ಪ್ರವೇಶಿಸಿದ್ದಾನೆ
  • 32 ದಿನಗಳವರೆಗೆ ಎಂದರೆ ಜುಲೈ 17, 2023ರವರೆಗೆ ಸೂರ್ಯ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ

    ಈ ಅವಧಿಯಲ್ಲಿ, ದ್ವಾದಶ ರಾಶಿಗಳಿಗೆ ಏನು ಫಲ ತಿಳಿಯಿರಿ.
Sun Transit: ಈ ರಾಶಿಯವರಿಗೆ ಸರ್ಕಾರಿ ನೌಕರಿ ಸಾಧ್ಯತೆ, ನಿಮ್ಮ ರಾಶಿ ಫಲ ಹೇಗಿದೆ?  title=

Surya Rashi Parivartane: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯನನ್ನು ಗ್ರಹಗಳ ರಾಜ ಎಂದು ಹೇಳಲಾಗುತ್ತದೆ. ಸೂರ್ಯನು ಇತ್ತೀಚೆಗೆ ಜೂನ್ 15ರಂದು ತನ್ನ ರಾಶಿಯನ್ನು ಬದಲಾಯಿಸುವ ಮೂಲಕ ಮಿಥುನ ರಾಶಿಯನ್ನು ಪ್ರವೇಶಿಸಿದ್ದಾನೆ. ಜುಲೈ 17ರವರೆಗೆ ಇದೇ ರಾಶಿಯಲ್ಲಿ ಸಂಚರಿಸಲಿರುವ ಸೂರ್ಯ ದೇವನು ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಇದನ್ನು ಕೆಲವು ರಾಶಿಯವರ ದೃಷ್ಟಿಯಿಂದ ಅತ್ಯುತ್ತಮ ಸಮಯ ಎಂದು ಬಣ್ಣಿಸಲಾಗುತ್ತಿದೆ. 

ಸೂರ್ಯ ರಾಶಿ ಪರಿವರ್ತನೆ ನಿಮ್ಮ ಮೇಲೆ ಏನು ಪರಿಣಾಮ ಬೀರಲಿದೆ ತಿಳಿಯಿರಿ:- 
ಮೇಷ ರಾಶಿ: 

ಸೂರ್ಯ ಸಂಚಾರವು ಸರ್ಕಾರಿ ಉದ್ಯೋಗಕ್ಕಾಗಿ ಯತ್ನಿಸುತ್ತಿರುವ ಮೇಷ ರಾಶಿಯವರಿಗೆ ಭಾರೀ ಪ್ರಯೋಜನವನ್ನು ನೀಡಲಿದೆ. ಈ ಸಮಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಯತ್ನಿಸುತ್ತಿರುವವರಿಗೆ ವಿಜಯಲಕ್ಷ್ಮಿ ಒಲಿಯಲಿದ್ದಾಳೆ. ನಿಮ್ಮ ಆದಾಯ ಹೆಚ್ಚಾಗುತ್ತದೆ. ನಿಮ್ಮ ಕಾರ್ಯಗಳು ಮೆಚ್ಚುಗೆಗೆ ಪಾತ್ರವಾಗುತ್ತವೆ.

ವೃಷಭ ರಾಶಿ: 
ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ವೃಷಭ ರಾಶಿಯ ಯುವಕರಿಗೆ ಉತ್ತಮ ಸಮಯ ಇದಾಗಿದ್ದು, ನಿಮ್ಮ ನೆಚ್ಚಿನ ಉದ್ಯೋಗವನ್ನು ಪಡೆಯುವ ಸಾಧ್ಯತೆ ಇದೆ. ನಿಮ್ಮ ವ್ಯಕ್ತಿತ್ವದಲ್ಲಿ ಧನಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಹೊಸ ವಸ್ತುಗಳ ಖರೀದಿಗೆ ಈ ಸಮಯ ತುಂಬಾ ಅನುಕೂಲಕರವಾಗಿದೆ. 

ಮಿಥುನ ರಾಶಿ: 
ನಿಮ್ಮ ಮಾತೇ ನಿಮ್ಮ ಬಂಡವಾಳವಾಗಿದ್ದು ಈ ಸಮಯದಲ್ಲಿ ನಿಮ್ಮ ವಾಕ್ ಚಾತುರ್ಯದಿಂದ ಆರ್ಥಿಕ ಲಾಭವಾಗಲಿದೆ. ರಾಜಕೀಯ ರಂಗದಲ್ಲಿರುವವರಿಗೂ ಹೊಸ ಹೊಸ ಅವಕಾಶಗಳು ಲಭ್ಯವಾಗಲಿವೆ. 

ಕರ್ಕಾಟಕ ರಾಶಿ: 
ಸೂರ್ಯ ಸಂಚಾರದ ಪರಿಣಾಮವಾಗಿ ದೀರ್ಘ ಸಮಯದಿಂದ ನೆನೆಗುದಿಗೆ ಬಿದ್ದಿದ್ದ ನಿಮ್ಮ ಕೆಲಸಗಳಿಗೆ ವೇಗ ದೊರೆಯಲಿದೆ. ಮಕ್ಕಳ ಕಡೆಯಿಂದ ಶುಭ ಸುದ್ದಿಗಳು ಕೇಳಿಬರಲಿದ್ದು ಮನಸ್ಸಿಗೆ ಸಂತೋಷವಾಗಲಿದೆ. 

ಇದನ್ನೂ ಓದಿ- Tulsi Remedis: ಒಣಗಿದ ತುಳಸಿ ಸಸ್ಯದಿಂದ ನಿಮ್ಮ ಖಜಾನೆಯನ್ನೂ ತುಂಬಿಸಬಹುದು

ಸಿಂಹ ರಾಶಿ: 
ಸಿಂಹ ರಾಶಿಯವರು ಈ ಅವಧಿಯಲ್ಲಿ ಶುಭ ಫಲಿತಾಂಶಗಳನ್ನು ಕಾಣುತ್ತಾರೆ. ಸಮಾಜದ ಪ್ರಭಾವಿ ವ್ಯಕ್ತಿಗಳ ಪರಿಚಯವಾಗುತ್ತದೆ. ಉದ್ಯೋಗ ಸಂಬಂಧಿತ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಮನೆ ಅಥವಾ ವಾಹನವನ್ನು ಖರೀದಿಸಲು ಈ ಸಮಯವು ತುಂಬಾ ಒಳ್ಳೆಯದು.  

ಕನ್ಯಾ ರಾಶಿ: 
ಗ್ರಹಗಳ ರಾಜ ಸೂರ್ಯನ ಸಂಕ್ರಮಣ ಈ ರಾಶಿಯವರಿಗೆ ಉದ್ಯೋಗ-ವ್ಯವಹಾರದಲ್ಲಿ ಭಾರೀ ಯಶಸ್ಸನ್ನು ನೀಡಲಿದೆ. ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. ಉದ್ಯೋಗವನ್ನು ಬದಲಾಯಿಸಲು ಯೋಚಿಸುತ್ತಿರುವ ಜನರು ಹೊಸ ಆಫರ್ ಲೆಟರ್‌ಗಳನ್ನು ಪಡೆಯಬಹುದು. 

ತುಲಾ ರಾಶಿ: 
ಈ ಸಮಯದಲ್ಲಿ ನೀವು ಹಣಕಾಸಿನ ಪ್ರಯೋಜನವನು ಪಡೆಯುತ್ತೀರಿ. ಆದರೂ, ನಿಮ್ಮ ಖರ್ಚುಗಳು ಕೂಡ ಹೆಚ್ಚಾಗಿಯೇ ಇರಲಿವೆ. ಆರೋಗ್ಯ ಸುಧಾರಿಸಲಿದೆ. ವಿದ್ಯಾರ್ಥಿಗಳ ದೃಷ್ಟಿಯಿಂದಲೂ ಸಮಯ ಉತ್ತಮವಾಗಿದೆ. 

ವೃಶ್ಚಿಕ ರಾಶಿ: 
ಈ ಸಮಯದಲ್ಲಿ ನೀವು ದಿಢೀರ್ ಪ್ರಯಾಣ ಕೈಗೊಳ್ಳಬೇಕಾಗಬಹುದು. ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಅತ್ಯುತ್ತಮ ಸಮಯ ಇದಾಗಿದೆ. ವೃತ್ತಿ ಬದುಕಿನಲ್ಲಿ ಕೆಲವು ಧನಾತ್ಮಕ ತಿರುವು ಕಂಡು ಬರಲಿದೆ. ಇದು ನಿಮ್ಮನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯಲಿದೆ. ಹಣವು ಪ್ರಯೋಜನಕಾರಿ ಆಗಿದೆ. 

ಇದನ್ನೂ ಓದಿ- Weekly Horoscope: ದ್ವಾದಶ ರಾಶಿಗಳ ಸಾಪ್ತಾಹಿಕ ಭವಿಷ್ಯ ಹೇಗಿದೆ

ಧನು ರಾಶಿ: 
ಸೂರ್ಯನ ರಾಶಿ ಪರಿವರ್ತನೆಯು ಧನು ರಾಶಿಯವರಿಗೆ ಆರೋಗ್ಯದ ವಿಷಯದಲ್ಲಿ ಕೆಲವು ತೊಂದರೆಗಳನ್ನು ತಂದೊಡ್ಡಲಿದೆ. ಈ ಸಮಯದಲ್ಲಿ ವ್ಯಾಪಾರ-ವ್ಯವಹಾರದಲ್ಲಿಯೂ ನಷ್ಟ ಸಾಧ್ಯತೆ ಇರುವುದರಿಂದ, ಹೊಸ ವ್ಯವಹಾರಗಳಿಗೆ ಕೈ ಹಾಕಬೇಡಿ 

ಮಕರ ರಾಶಿ: 
ಉದ್ಯೋಗಸ್ಥರು ಉನ್ನತ ಸ್ಥಾನವನ್ನು ಪಡೆಯಬಹುದು. ವ್ಯಾಪಾರದಲ್ಲಿಯೂ ಉತ್ತಮ ಪ್ರಗತಿ ಕಂಡುಬರಲಿದೆ. ಎಲ್ಲಿಂದಲಾದರೂ ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ವಿದೇಶಿ ಸಂಪರ್ಕಗಳ ಮೂಲಕ ನಿಮ್ಮ ವೃತ್ತಿಜೀವನದಲ್ಲಿ ನೀವು ಲಾಭವನ್ನು ಪಡೆಯುತ್ತೀರಿ. 

ಕುಂಭ ರಾಶಿ: 
ಸೂರ್ಯ ರಾಶಿ ಪರಿವರ್ತನೆಯಿಂದ ಕುಂಭ ರಾಶಿಯವರಿಗೆ ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಕೆಲಸದ ಸ್ಥಳದಲ್ಲಿ ನೀವು ಹೊಸ ಜವಾಬ್ದಾರಿಯನ್ನು ಪಡೆಯಬಹುದು. ಬಡ್ತಿ ಸಿಗುವ ಸಾಧ್ಯತೆಗಳಿವೆ. ನೀವು ವ್ಯವಹಾರದಲ್ಲಿ ಪ್ರಗತಿ ಸಾಧಿಸಬಹುದು. ನಿಮ್ಮ ವ್ಯಾಪಾರವನ್ನು ನೀವು ವಿಸ್ತರಿಸಬಹುದು. ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ಯುವಕರಿಗೆ ಸೂರ್ಯನ ಸಂಚಾರವು ಮಂಗಳಕರವಾಗಿರುತ್ತದೆ. 

ಮೀನ ರಾಶಿ: 
ವ್ಯಾಪಾರದಲ್ಲಿ ಪ್ರಗತಿ ಕಂಡು ಬರಲಿದೆ. ಆದರೂ, ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯಿಂದ ಮುಂದುವರೆಯುವುದು ಒಳ್ಳೆಯದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News