Surya Gochar 2022: ನಾಲ್ಕು ದಿನಗಳ ಬಳಿಕ ಈ ರಾಶಿಯವರಿಗೆ ಭಾರೀ ಯಶಸ್ಸು, ಸಂಪತ್ತು ನೀಡಲಿದ್ದಾನೆ ಸೂರ್ಯ ದೇವ

Surya Gochar 2022 Effect: ವೈದಿಕ ಜ್ಯೋತಿಷ್ಯದ ಪ್ರಕಾರ, ಇನ್ನು ನಾಲ್ಕು ದಿನಗಳಲ್ಲಿ ಅಂದರೆ ಡಿಸೆಂಬರ್ 16ರಂದು ಗ್ರಹಗಳ ರಾಜ ಸೂರ್ಯ ದೇವಾನು ವೃಶ್ಚಿಕ ರಾಶಿಯನ್ನು ತೊರೆದು ಧನು ರಾಶಿಯನ್ನು ಪ್ರವೆಶಿಸಲಿದ್ದಾನೆ. ಧನುರ್ ಮಾಸವನ್ನು ಯಾವುದೇ ಶುಭ ಕಾರ್ಯಗಳಿಗೆ ಶುಭ ಎಂದು ಪರಿಗಣಿಸಲಾಗುವುದಿಲ್ಲ. ಆದರೆ, ಈ ಮಾಸದಲ್ಲಿ ಸೂರ್ಯ ದೇವನು ಐದು ರಾಶಿಯವರಿಗೆ ಭಾರೀ ಅದೃಷ್ಟವನ್ನು ಕರುಣಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯಿರಿ.

Written by - Yashaswini V | Last Updated : Dec 12, 2022, 07:11 AM IST
  • 2022 ರ ಕೊನೆಯ ಸೂರ್ಯ ಸಂಕ್ರಮಣವು 16 ಡಿಸೆಂಬರ್ 2022 ರಂದು ಸಂಭವಿಸಲಿದೆ.

    ಈ ದಿನ ಸೂರ್ಯನು ತನ್ನ ರಾಶಿಯನ್ನು ಬದಲಾಯಿಸುವ ಮೂಲಕ ಧನು ರಾಶಿಯನ್ನು ಪ್ರವೇಶಿಸುತ್ತಾನೆ
  • ಸೂರ್ಯನು ಜನವರಿ 14, 2023 ರ ರಾತ್ರಿಯವರೆಗೆ ಧನು ರಾಶಿಯಲ್ಲಿ ಇರುತ್ತಾನೆ
Surya Gochar 2022: ನಾಲ್ಕು ದಿನಗಳ ಬಳಿಕ ಈ ರಾಶಿಯವರಿಗೆ ಭಾರೀ ಯಶಸ್ಸು, ಸಂಪತ್ತು ನೀಡಲಿದ್ದಾನೆ ಸೂರ್ಯ ದೇವ  title=
Surya Gochar 2022 Effect

Surya Gochar 2022 Effect: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಎಲ್ಲಾ ಗ್ರಹಗಳಂತೆ ಗ್ರಹಗಳ ಸೂರ್ಯ ದೇವನೂ ಕೂಡ ನಿರ್ದಿಷ್ಟ ಅವಧಿಯಲ್ಲಿ ರಾಶಿ ಪರಿವರ್ತನೆ ಮಾಡುತ್ತಾನೆ. ಪ್ರಸ್ತುತ ವೃಶ್ಚಿಕ ರಾಶಿಯಲ್ಲಿರುವ ಸೂರ್ಯನು ಇನ್ನು ನಾಲ್ಕು ದಿನಗಳ ನಂತರ ಅಂದರೆ 16 ಡಿಸೆಂಬರ್ 2022 ರಂದು ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಈ ದಿನ ಸೂರ್ಯನು ವೃಶ್ಚಿಕ ರಾಶಿಯನ್ನು ತೊರೆದು ಧನು ರಾಶಿಯನ್ನು ಪ್ರವೇಶಿಸಲಿದ್ದಾನೆ. ಧನು ರಾಶಿಗೆ ಸೂರ್ಯನ ರಾಶಿ ಪರಿವರ್ತನೆಯೊಂದಿಗೆ ಧನುರ್ ಮಾಸ ಆರಂಭವಾಗುತ್ತದೆ. ಈ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದನ್ನು ಶುಭ ಎಂದು ಪರಿಗಣಿಸಲಾಗುವುದಿಲ್ಲ. ಆದಾಗ್ಯೂ, ಧನು ರಾಶಿಗೆ ಪ್ರವೇಶಿಸಲಿರುವ ಸೂರ್ಯನು ಕೆಲವು ರಾಶಿಯವರಿಗೆ ಭಾರೀ ಅದೃಷ್ಟವನ್ನು ಕರುಣಿಸಲಿದ್ದಾನೆ. ಇದರಿಂದ ಅವರ ಜೀವನವು ಸೂರ್ಯನಂತೆ ಹೊಳೆಯಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...

ಧನು ರಾಶಿಗೆ ಸೂರ್ಯನ ಪ್ರವೇಶ; ಸೂರ್ಯನಂತೆ ಉಜ್ವಲಿಸಲಿದೆ ಈ ಐದು ರಾಶಿಯವರ ಜೀವನ:
ಮೇಷ ರಾಶಿ:

ಸೂರ್ಯ ರಾಶಿ ಪರಿವರ್ತನೆಯು ಮೇಷ ರಾಶಿಯವರಿಗೆ ಒಳ್ಳೆಯ ದಿನಗಳನ್ನು ತರಲಿದೆ. ಈ ಸಮಯದಲ್ಲಿ ನಿಮ್ಮ ಹಳೆಯ ವ್ಯಾಜ್ಯಗಳು ಕೊನೆಗೊಳ್ಳಲಿವೆ. ನಿಮ್ಮ ಉದ್ಯೋಗ ವ್ಯವಹಾರದಲ್ಲಿ ಇಷ್ಟು ದಿನಗಳು ಕಾಡುತ್ತಿದ್ದ ತೊಂದರೆಗಳು ನಿವಾರಣೆ ಆಗಲಿವೆ. ಸೂರ್ಯನು ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲಿದ್ದಾನೆ. 

ಮಿಥುನ ರಾಶಿ:
ಸೂರ್ಯನ ಸಂಚಾರವು ಮಿಥುನ ರಾಶಿಯವರಿಗೆ ಜೀವನದಲ್ಲಿ ಹಣ, ಕೀರ್ತಿ, ಪ್ರಗತಿ ಎಲ್ಲವನ್ನೂ ಕರುಣಿಸಲಿದೆ. ಸೂರ್ಯ ರಾಶಿ ಪರಿವರ್ತನೆಯ ಪರಿಣಾಮದಿಂದಾಗಿ ಈ ಸಮಯದಲ್ಲಿ ನಿಮ್ಮ ಹಳೆಯ ಸಮಸ್ಯೆಗಳು ಪರಿಹಾರಗೊಂಡು, ಉತ್ತಮ ವೈವಾಹಿಕ ಜೀವನವನ್ನು ನಿಮ್ಮದಾಗಿಸಬಹುದು. ಹಣಕಾಸಿನ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ.

ಇದನ್ನೂ ಓದಿ- Rahu Ketu Gochar 2023 Effect: 2023ರಲ್ಲಿ ಈ ನಾಲ್ಕು ರಾಶಿಯವರ ಜೀವನದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಲಿದ್ದಾರೆ ರಾಹು-ಕೇತು

ಕನ್ಯಾ ರಾಶಿ:
ಡಿಸೆಂಬರ್ ತಿಂಗಳಿನಲ್ಲಿ  ಸೂರ್ಯನ ಸಂಕ್ರಮಣವು ಈ ರಾಶಿಯವರಿಗೆ ಮಂಗಳಕರ ಫಲಗಳನ್ನು ತರಲಿದೆ. ಈ ಸಮಯದಲ್ಲಿ ನೀವು ಉದ್ಯೋಗ ವ್ಯವಹಾರದಲ್ಲಿ ಉತ್ತುಂಗಕ್ಕೇರುವ ಬಲವಾದ ಅವಕಾಶಗಳು ಇರಲಿವೆ. ಮಾತ್ರವಲ್ಲ, ನಿಮ್ಮ ಕನಸಿನ ಮನೆಯನ್ನು ಖರೀದಿಸಬಹುದು. ವಾಹನ ಖರೀದಿ ಯೋಗವೂ ಇದೆ. 

ಸಿಂಹ ರಾಶಿ:
ಸಿಂಹ ರಾಶಿಗೆ ಅಧಿಪತಿಯಾದ ಸೂರ್ಯ ದೇವನ ರಾಶಿ ಬದಲಾವಣೆಯು ಈ ರಾಶಿಯವರಿಗೆ ಸುವರ್ಣ ದಿನಗಳನ್ನು ಹೊತ್ತು ತರಲಿದೆ. ಈ ಸಮಯದಲ್ಲಿ ನಿಮ್ಮ ಹಣಕಾಸಿನ ಮುಗ್ಗಟ್ಟುಗಳು ಬಗೆಹರಿಯಲಿವೆ. ಉದ್ಯೋಗದಲ್ಲಿ ಪ್ರಮೋಷನ್ ಜೊತೆಗೆ ಇನ್ಕ್ರಿಮೆಂಟ್ ಸಾಧ್ಯತೆಯೂ ಇದೆ. ಒಟ್ಟಾರೆಯಾಗಿ ಸೂರ್ಯನ ಸಂಚಾರವು ನಿಮ್ಮ ಜೀವನವನ್ನು ಹೊಳೆಯುವಂತೆ ಮಾಡಲಿದೆ. 

ಇದನ್ನೂ ಓದಿ- Rahu Transit: 2023ರಲ್ಲಿ ಮೂರು ರಾಶಿಯವರಿಗೆ ಅಪಾರ ಧನ-ಸಂಪತ್ತು ಕರುಣಿಸಲಿದ್ದಾನೆ ರಾಹು

ಧನು ರಾಶಿ:
ಈ ವರ್ಷದ ಕೊನೆಯ ತಿಂಗಳಿನಲ್ಲಿ ಧನು ರಾಶಿಯಲ್ಲಿಯೇ ಸೂರ್ಯ ಸಂಚರಿಸುತ್ತಿದ್ದು ಈ ರಾಶಿಯವರಿಗೆ ವರದಾನವೆಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದ್ದು, ನಿಮ್ಮೆಲ್ಲಾ ಕೆಲಸಗಳಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ನೀವು ಹೂಡಿಕೆ ಬಗ್ಗೆ ಯೋಜಿಸುತ್ತಿದ್ದಾರೆ ಇದು ಉತ್ತಮ ಸಮಯ. ಉದ್ಯೋಗಸ್ಥರಿಗೆ ಶುಭ ಸಮಯ, ವ್ಯಾಪಾರ-ವ್ಯವಹಾರ ಮಾಡುವವರಿಗೂ ಲಾಭದಾಯಕವಾದ ಸಮಯ ಇದಾಗಿದೆ. 

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News