Sun Transit 2024: ಇನ್ನೂ ಮೂರೇ ದಿನದಲ್ಲಿ ಸೂರ್ಯ ರಾಶಿ ಬದಲಾವಣೆ, ಈ ರಾಶಿಯವರಿಗೆ ಧನಲಾಭ

Sun Transit 2024: ಕೇವಲ ಇನ್ನೆರಡು ದಿನಗಳ ಬಳಿಕ ಗ್ರಹಗಳ ರಾಜ ಸೂರ್ಯ ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಸೂರ್ಯ ರಾಶಿ ಬದಲಾವಣೆಯು ದ್ವಾದಶ ರಾಶಿಯವರ ಜೀವನದಲ್ಲಿ ಬಹಳ ಮಹತ್ವದ ಪರಿಣಾಮವನ್ನು ಬೀರುತ್ತದೆ. ಆದರೂ, ಈ ಸಮಯವನ್ನು ನಾಲ್ಕು ರಾಶಿಯವರಿಗೆ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Jan 12, 2024, 08:12 AM IST
  • ಪ್ರಸ್ತುತ, ಧನು ರಾಶಿಯಲ್ಲಿರುವ ಸೂರ್ಯ ಇನ್ನೆರಡು ದಿನಗಳ ಬಳಿಕ ತನ್ನ ರಾಶಿಚಕ್ರವನ್ನು ಬದಲಾಯಿಸಿ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ.
  • ಜನವರಿ 15, 2024 ರಂದು ಮಕರ ರಾಶಿಗೆ ಪ್ರವೇಶಿಸಲಿರುವ ಸೂರ್ಯ ಮುಂದಿನ ಒಂದು ತಿಂಗಳು ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ.
  • ಈ ಸಮಯದಲ್ಲಿ ನಾಲ್ಕು ರಾಶಿಯ ಜನರ ಜೀವನದಲ್ಲಿ ಮಹತ್ವದ ಬದಲಾವಣೆಗಳು ಕಂಡುಬರಲಿವೆ.
Sun Transit 2024: ಇನ್ನೂ ಮೂರೇ ದಿನದಲ್ಲಿ ಸೂರ್ಯ ರಾಶಿ ಬದಲಾವಣೆ, ಈ ರಾಶಿಯವರಿಗೆ ಧನಲಾಭ  title=

Sun Transit 2024: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಅಧಿಪತಿ ಸೂರ್ಯದೇವ ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಸೂರ್ಯನ ರಾಶಿ ಬದಲಾವಣೆಯನ್ನು ಸಂಕ್ರಾಂತಿ ಎಂತಲೂ ಕರೆಯಲಾಗುತ್ತದೆ.   ಪ್ರತಿ ವರ್ಷ ಜನವರಿ 14/15ನೇ ತಾರೀಖಿನಂದು ಸೂರ್ಯ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಇದನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ದೇಶಾದ್ಯಂತ ವಿಭಿನ್ನವಾಗಿ ಈ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. 

ಪ್ರಸ್ತುತ, ಧನು ರಾಶಿಯಲ್ಲಿರುವ ಸೂರ್ಯ ಇನ್ನೆರಡು ದಿನಗಳ ಬಳಿಕ ತನ್ನ ರಾಶಿಚಕ್ರವನ್ನು ಬದಲಾಯಿಸಿ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಜನವರಿ 15, 2024 ರಂದು ಮಕರ ರಾಶಿಗೆ ಪ್ರವೇಶಿಸಲಿರುವ ಸೂರ್ಯ ಮುಂದಿನ ಒಂದು ತಿಂಗಳು ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ. ಈ ಸಮಯದಲ್ಲಿ ನಾಲ್ಕು ರಾಶಿಯ ಜನರ ಜೀವನದಲ್ಲಿ ಮಹತ್ವದ ಬದಲಾವಣೆಗಳು ಕಂಡುಬರಲಿವೆ. ಇದು ಈ ನಾಲ್ಕು ರಾಶಿಯವರು ಭಾರೀ ಅದೃಷ್ಟದ ಸಮಯ ಎಂದು ಸಾಬೀತುಪಡಿಸಲಿದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ-  Shubha Yoga: ಇಂದು ಎರಡು ಶುಭ ಯೋಗಗಳ ನಿರ್ಮಾಣ, ಹೊಳೆಯಲಿದೆ ಈ ನಾಲ್ಕು ರಾಶಿಯವರ ಅದೃಷ್ಟ

ಮಕರ ರಾಶಿಗೆ ಸೂರ್ಯನ ಪ್ರವೇಶದಿಂದ ಬದಲಾಗಲಿದೆ ಈ ನಾಲ್ಕು ರಾಶಿಯವರ ಭವಿಷ್ಯ: 
ಮೇಷ ರಾಶಿ: 

ಸೂರ್ಯನ ಮಕರ ಸಂಕ್ರಾಂತಿಯು ಮೇಷ ರಾಶಿಯವರ ಜೀವನದಲ್ಲಿ ತುಂಬಾ ಶುಭಕರ ಎಂದು ಸಾಬೀತುಪಡಿಸಲಿದೆ. ಸೂರ್ಯ ರಾಶಿ ಬದಲಾವಣೆಯಿಂದಾಗಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದ್ದು ಈ ಸಮಯದಲ್ಲಿ ವೃತ್ತಿ ಜೀವನಕ್ಕೆ ಸಂಬಂಧಿಸಿದ  ನಿಮ್ಮ ಕನಸುಗಳು ನನಸಾಗಲಿದೆ. ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವುಯವರಿಗೂ ಶುಭ ವಾರ್ತೆ ಸಿಗುವ ನಿರೀಕ್ಷೆಯಿದೆ. 

ವೃಷಭ ರಾಶಿ: 
ಸೂರ್ಯ ರಾಶಿ ಪರಿವರ್ತನೆ ವೃಷಭ ರಾಶಿಯವರಿಗೂ ಕೂಡ ಶುಭ ಫಲಗಳನ್ನು ನೀಡಲಿದೆ. ಸ್ವಂತ ಉದ್ಯೋಗ ಮಾಡುತ್ತಿರುವವರಿಗೆ ವಿದೇಶ ವ್ಯಾಪಾರದಿಂದ ಬಂಪರ್ ಲಾಭ ಸಾಧ್ಯತೆ ಕಂಡು ಬರಲಿದೆ. ವೃತ್ತಿ ಬದುಕಿನಲ್ಲಿ ಸಿಗುವ ಅದ್ಭುತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡರೆ ಹಣಕಾಸಿನ ಹರಿವು ಸಹ ಹೆಚ್ಚಾಗಲಿದೆ. 

ಇದನ್ನೂ ಓದಿ- ಇನ್ನು ನಾಲ್ಕು ತಿಂಗಳು ಈ ರಾಶಿಯವರ ಬಾಳು ಬಂಗಾರ ! ಹಣ, ಪ್ರತಿಷ್ಠೆ, ಸ್ಥಾನಮಾನ ಕರುಣಿಸುತ್ತಾನೆ ಗುರು

ಸಿಂಹ ರಾಶಿ: 
ಸೂರ್ಯ ರಾಶಿ ಬದಲಾವಣೆಯು ಸಿಂಹ ರಾಶಿಯವರ ಜೀವನದಲ್ಲಿಯೂ ಮಹತ್ವದ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ. ಸಿಂಹ ರಾಶಿಯ ಅಧಿಪತಿಯೂ ಆಗಿರುವ ಸೂರ್ಯ ಈ ರಾಶಿಯವರಿಗೆ ಧನಾತ್ಮಕ ಶಕ್ತಿಯನ್ನು ತುಂಬಳಿದ್ದಾನೆ. ನಿಮ್ಮ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ವೃತ್ತಿ ಬದುಕಿನಲ್ಲಿಯೂ ಪ್ರಗತಿಯನ್ನು ಕಾಣಬಹುದು. 

ವೃಶ್ಚಿಕ ರಾಶಿ: 
ಸೂರ್ಯ ಸಂಚಾರವು ವೃಶ್ಚಿಕ ರಾಶಿಯವರಿಗೆ ವಿಶೇಷವಾಗಿ ಅವರ ವೃತ್ತಿ ಬದುಕಿಗೆ ಸಂಬಂಧಿಸಿದಂತೆ ತುಂಬಾ ಪ್ರಯೋಜನಕಾರಿ ಆಗಿದೆ. ವೃತ್ತಿಜೀವನದಲ್ಲಿ ನಿಮ್ಮ ಕಠಿಣ ಪರಿಶ್ರಮದ ಉತ್ತಮ ಫಲವನ್ನು ನೀವೀಗ ಅನುಭವಿಸುವಿರಿ. ಉದ್ಯೋಗಸ್ಥರಿಗೆ ಬಡ್ತಿ ಸಾಧ್ಯತೆ ಇದ್ದರೆ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ನಿಮ್ಮ ನಿರೀಕ್ಷೆಯಂತೆ ಒಳ್ಳೆಯ ಕೆಲಸದ ಆಫರ್ ಬರಬಹುದು. ಪ್ರವಾಸಗಳಿಂದ ಧನಲಾಭವನ್ನು ನಿರೀಕ್ಷಿಸಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News