Sleeping Vastu Tips: ಮಲಗುವ ಈ ವಾಸ್ತು ನಿಯಮಗಳನ್ನು ಅನುಸರಿಸಿದರೆ, ಯಶಸ್ಸು ಗ್ಯಾರಂಟಿ ನಿಮ್ಮದಾಗುತ್ತದೆ!

Sleeping Vastu Tips: ಮಲಗುವಾಗ ದಿಕ್ಕು ತಪ್ಪಿದರೆ ಅದು ನಿಮ್ಮ ನಿದ್ದೆಯ ಮೇಲೆ ಪರಿಣಾಮ ಬೀರುವುದಲ್ಲದೆ, ನಿಮ್ಮ ಆರ್ಥಿಕ ಸ್ಥಿತಿ, ಘನತೆ ಮತ್ತು ಗೌರವದ ಮೇಲೂ ಪರಿಣಾಮ ಬೀರುತ್ತದೆ. (Spiritual News In Kannada)  

Written by - Nitin Tabib | Last Updated : Jan 20, 2024, 11:02 PM IST
  • ತಲೆಯನ್ನು ದಕ್ಷಿಣಕ್ಕೆ ಮತ್ತು ಪಾದಗಳನ್ನು ಉತ್ತರಕ್ಕೆ ಇರಿಸಿ ಮಲಗುವುದು ಉತ್ತಮವೆಂದು ಪರಿಗಣಿಸಲಾಗಿದೆ.
  • ಹೀಗೆ ಮಾಡುವುದರಿಂದ ವ್ಯಕ್ತಿ ಆರೋಗ್ಯವಂತನಾಗಿರುತ್ತಾನೆ. ಅವನ ವಯಸ್ಸು ಹೆಚ್ಚಾಗುತ್ತದೆ.
  • ಅವನು ತನ್ನ ಜೀವನದಲ್ಲಿ ಸಾಕಷ್ಟು ಹಣ, ಸಂತೋಷ, ಗೌರವವನ್ನು ಸಂಪಾದಿಸುತ್ತಾನೆ.
Sleeping Vastu Tips: ಮಲಗುವ ಈ ವಾಸ್ತು ನಿಯಮಗಳನ್ನು ಅನುಸರಿಸಿದರೆ, ಯಶಸ್ಸು ಗ್ಯಾರಂಟಿ ನಿಮ್ಮದಾಗುತ್ತದೆ! title=

ಬೆಂಗಳೂರು: :ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಐಶ್ವರ್ಯವನ್ನು ತರಲು, ಖರ್ಚುಗಳನ್ನು ನಿಯಂತ್ರಿಸಲು, ಆದಾಯವನ್ನು ಹೆಚ್ಚಿಸಲು ಹಲವಾರು ಸಲಹೆಗಳನ್ನು ನೀಡಲಾಗಿದೆ. ಇದರ ಜೊತೆಗೆ ನೀವು ಕೆಲ ವಿಷಯಗಳ ಬಗ್ಗೆ ಎಚ್ಚರಿಕೆಯನ್ನೂ ವಹಿಸಬೇಕು ಎಂದು ಹೇಳಲಾಗಿದೆ. ಇವುಗಳಲ್ಲಿ ಮಲಗುವ ದಿಕ್ಕು ಕೂಡ ಶಾಮೀಲಾಗಿದೆ. ರಾತ್ರಿ ಮಲಗುವಾಗ ನಿಮ್ಮ ತಲೆಯು ಯಾವ ದಿಕ್ಕಿನಲ್ಲಿರುತ್ತದೆ ಎಂಬುದು ತುಂಬಾ ಮಹತ್ವದ್ದಾಗಿದೆ, ಅದು ನಿಮ್ಮ ಜೀವನದಲ್ಲಿನ ಧನಾಗಮನ, ನಿಮ್ಮ ಗೌರವ, ಆರೋಗ್ಯ-ಸಂಬಂಧ ಇತ್ಯಾದಿಗಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ನಿಮ್ಮ ನಿದ್ರೆಯ ದಿಕ್ಕಿನ ಬಗ್ಗೆ ಬಹಳ ಜಾಗರೂಕರಾಗಿರಬೇಕು.(Spiritual News In Kannada)

ಮಲಗುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ 
>> ವಾಸ್ತು ಶಾಸ್ತ್ರದ ಪ್ರಕಾರ ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗಬೇಡಿ. ಇದನ್ನು ಮಾಡುವುದರಿಂದ ಕಾಂತೀಯ ಹರಿವು ನಿರ್ಬಂಧಿಸಲ್ಪಡುತ್ತದೆ ಮತ್ತು ಹದಗೆಡುತ್ತದೆ. ಈ ಕಾರಣದಿಂದಾಗಿ, ನಿದ್ರೆ ಸರಿಯಾಗಿ ಬರುವುದಿಲ್ಲ. ಈ ಸ್ಥಿತಿಯು ತಲೆನೋವು, ಮಾನಸಿಕ ಕಾಯಿಲೆಗಳಿಗೆ ಕಾರಣವಾಗಬಹುದು.

>> ತಲೆಯನ್ನು ದಕ್ಷಿಣಕ್ಕೆ ಮತ್ತು ಪಾದಗಳನ್ನು ಉತ್ತರಕ್ಕೆ ಇರಿಸಿ ಮಲಗುವುದು ಉತ್ತಮವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ವ್ಯಕ್ತಿ ಆರೋಗ್ಯವಂತನಾಗಿರುತ್ತಾನೆ. ಅವನ ವಯಸ್ಸು ಹೆಚ್ಚಾಗುತ್ತದೆ. ಅವನು ತನ್ನ ಜೀವನದಲ್ಲಿ ಸಾಕಷ್ಟು ಹಣ, ಸಂತೋಷ, ಗೌರವವನ್ನು ಸಂಪಾದಿಸುತ್ತಾನೆ.

ಇದೇ ವೇಳೆ ಪೂರ್ವ ದಿಕ್ಕಿನಲ್ಲಿ ತಲೆಯಿಟ್ಟು ಮಲಗುವುದರಿಂದ, ವ್ಯಕ್ತಿಯ ಸ್ಮರಣಶಕ್ತಿ, ​​ಏಕಾಗ್ರತೆ ಹೆಚ್ಚಾಗುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳು ಮತ್ತು ಆಧ್ಯಾತ್ಮದ ಕಡೆಗೆ ಒಲವು ಹೊಂದಿದವರು ಪೂರ್ವ ದಿಕ್ಕಿನ ಕಡೆಗೆ ತಲೆಯಿಟ್ಟು ಮಲಗಬೇಕು.

ಇದನ್ನೂ ಓದಿ-Mahalakshmi Yog 2024: ಹತ್ತು ವರ್ಷಗಳ ಬಳಿಕ ಮಹಾಲಕ್ಷ್ಮೀ ರಾಜಯೋಗ ನಿರ್ಮಾಣ, ಈ ಜನರಿಗೆ ಪ್ರಾಪ್ತಿಯಾಗಲಿದೆ ಕುಬೇರ ನಿಧಿ!

ಪಶ್ಚಿಮ ದಿಕ್ಕಿನಲ್ಲಿ ತಲೆ ಇಟ್ಟು ಮಲಗುವುದು ಕೂಡ ಒಳ್ಳೆಯದೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕು ಜಲದೇವನಾದ ವರುಣನ ದಿಕ್ಕು. ಈ ದಿಕ್ಕಿಗೆ ತಲೆಯಿಟ್ಟು ಮಲಗುವುದರಿಂದ ವ್ಯಕ್ತಿಗೆ ಕೀರ್ತಿ ಪ್ರಾಪ್ತಿಯಾಗುತ್ತದೆ. ಅವನ ಗೌರವ ಹೆಚ್ಚಾಗುತ್ತದೆ. ಅವನ ಜೀವನದಲ್ಲಿ ಸಮೃದ್ಧಿ ಬರುತ್ತದೆ.

ಇದನ್ನೂ ಓದಿ-Suya Sharavan Gochar 2024: ಶ್ರವಣ ನಕ್ಷತ್ರಕ್ಕೆ ಸೂರ್ಯನ ಪ್ರವೇಶ ಈ ರಾಶಿಗಳ ಜನರ ಮೇಲೆ ಹಣದ ಭಾರಿ ಸುರಿಮಳೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News