Shukra Gochar: ಮಕರ ರಾಶಿಗೆ ಧನದಾತನ ಪ್ರವೇಶ, ಇನ್ನೊಂದು ತಿಂಗಳು ಇವರಿಗಿಲ್ಲ ಹಣಕಾಸಿನ ಸಮಸ್ಯೆ

Shukra Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ ಧನಕಾರಕ ಎಂದೇ ಪರಿಗಣಿಸಲ್ಪಟ್ಟಿರುವ ಶುಕ್ರನು ಶೀಘ್ರದಲ್ಲೇ ಶನಿಯ ರಾಶಿಚಕ್ರ ಚಿಹ್ನೆಗೆ ಪ್ರವೇಶಿಸಲಿದ್ದಾನೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದಾಗ್ಯೂ, ಮೂರು ರಾಶಿಯವರ ಜೀವನದಲ್ಲಿ ಶುಕ್ರನು ಧನವೃಷ್ಟಿಯನ್ನೇ ಸುರಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Feb 8, 2024, 07:47 AM IST
  • ಫೆಬ್ರವರಿಯಲ್ಲಿ ಸಂಪತ್ತನ್ನು ಕೊಡುವ ಶುಕ್ರನು ಶನಿಯ ರಾಶಿಯಾದ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ
  • ಶುಕ್ರ ರಾಶಿ ಪರಿವರ್ತನೆಯ ಪ್ರಭಾವ ಎಲ್ಲಾ 12 ರಾಶಿಯವರ ಜೀವನದ ಮೇಲೂ ಕಂಡು ಬರುತ್ತದೆ.
  • ಆದಾಗ್ಯೂ, ಈ ಸಮಯವು ಕೆಲವು ರಾಶಿಯ ಜನರ ಜೀವನದಲ್ಲಿ ವಿಶೇಷ ಲಾಭವನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ.
Shukra Gochar: ಮಕರ ರಾಶಿಗೆ ಧನದಾತನ ಪ್ರವೇಶ, ಇನ್ನೊಂದು ತಿಂಗಳು ಇವರಿಗಿಲ್ಲ ಹಣಕಾಸಿನ ಸಮಸ್ಯೆ  title=

Venus entry in Capricorn: ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು  ಸಂಪತ್ತು, ಐಶ್ವರ್ಯ, ಪ್ರೇಮ ವ್ಯವಹಾರಗಳು, ಪ್ರಣಯದ ಅಂಶವೆಂದು ಪರಿಗಣಿಸಲಾಗಿದೆ. ಹಾಗಾಗಿ, ಶುಕ್ರ ಸಂಚಾರದಲ್ಲಿನ ಬದಲಾವಣೆಯು ದ್ವಾದಶ ರಾಶಿಗಳ ಜೀವನದಲ್ಲಿ ಮಹತ್ವದ ಪರಿಣಾಮವನ್ನು ಬೀರಲಿದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಶುಕ್ರನು ಶುಭ ಸ್ಥಾನದಲ್ಲಿದ್ದಾರೆ ಆತ  ಜೀವನದಲ್ಲಿ ಭೌತಿಕ ಸಂತೋಷವನ್ನು ಪಡೆಯುತ್ತಾನೆ. ಜೊತೆಗೆ ಅವರ ಪ್ರೇಮ, ವೈವಾಹಿಕ ಜೀವನವೂ ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ. 

ಫೆಬ್ರವರಿಯಲ್ಲಿ ಶುಕ್ರ ರಾಶಿ ಬದಲಾವಣೆ: 
ಶುಕ್ರನು ಶೀಘ್ರದಲ್ಲೇ ತನ್ನ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸಿ ಶನಿಯ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶುಕ್ರನು ಫೆಬ್ರವರಿ 12 ರಂದು ಮಕರ ರಾಶಿಯನ್ನು ಪ್ರವೇಶಿಸಲಿದ್ದು ಮಾರ್ಚ್ 06ರವರೆಗೆ ಅದೇ ರಾಶಿಯಲ್ಲಿ ಸಂಚರಿಸಲಿದ್ದಾನೆ. ಶುಕ್ರ ರಾಶಿ ಪರಿವರ್ತನೆಯು ಎಲ್ಲಾ 12  ರಾಶಿಯವರ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಆದರೂ, ಇದು ಮೂರು ರಾಶಿಯವರಿಗೆ ವಿಶೇಷ ಲಾಭವನ್ನು ತರಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

ಇದನ್ನೂ ಓದಿ- Surya Gochar 2024: ಶತ್ರು ಗ್ರಹದೊಂದಿಗೆ ಸೂರ್ಯ- ಈ ರಾಶಿಯವರಿಗೆ ಹೆಜ್ಜೆ ಹೆಜ್ಜೆಗೂ ಸಂಕಷ್ಟ

ಶನಿ ರಾಶಿಚಕ್ರ ಚಿಹ್ನೆಗೆ ಶುಕ್ರನ ಪ್ರವೇಶ: ಈ ರಾಶಿಯವರಿಗೆ ವಿಶೇಷ ಲಾಭ:-
ಮೇಷ ರಾಶಿ: 

ಶುಕ್ರ ರಾಶಿ ಬದಲಾವಣೆಯ ಪರಿಣಾಮವಾಗಿ ಮುಂದಿನ ಒಂದು ತಿಂಗಳು ಮೇಷ ರಾಶಿಯವರು ಉದ್ಯೋಗ-ವ್ಯವಹಾರದಲ್ಲಿ ಬಂಪರ್ ಲಾಭವನ್ನು ಪಡೆಯಲಿದ್ದಾರೆ. ಇದಕ್ಕಾಗಿ ಉದ್ಯೋಗ ಕ್ಷೇತ್ರದಲ್ಲಿ ನೀವು ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲವನ್ನು ಪಡೆಯಲಿದ್ದೀರಿ. ನಿಮ್ಮ ಗುರಿ ಸಾಧನೆಗಳಿಗೆ ಹಿರಿಯರ ಸಂಪೂರ್ಣ ಬೆಂಬಲ ದೊರೆಯಲಿದೆ. ಒಟ್ಟಾರೆಯಾಗಿ ಈ ಒಂದು ತಿಂಗಳು ಆರ್ಥಿಕ ಸಮೃದ್ಧಿಯನ್ನು ಅನುಭವಿಸುವಿರಿ. 

ಕರ್ಕಾಟಕ ರಾಶಿ: 
ಶುಕ್ರ ಸಂಕ್ರಮಣವು ಕರ್ಕಾಟಕ ರಾಶಿಯ ಜನರಿಗೆ ಪ್ರೇಮ ಹಾಗೂ ದಾಂಪತ್ಯ ಜೀವನದಲ್ಲಿ ಆನಂದಮಯ ಸಮಯವನ್ನು ತರಲಿದೆ.  ಅದೇ ಸಮಯದಲ್ಲಿ,  ಅವಿವಾಹಿತರಿಗೆ ಕಂಕಣಭಾಗ್ಯ ಕೂಡಿ ಬರುವ ಸಾಧ್ಯತೆಯೂ ಇದೆ. ವೃತ್ತಿ-ವ್ಯವಹಾರದಲ್ಲಿ ಎದುರಾಗಿದ್ದ ಸಮಸ್ಯೆಗಳನ್ನು ಬಗೆಹರಿಸಲು ಹಿರಿಯರು ನಿಮ್ಮ ಬೆನ್ನಿಗೆ ನಿಲ್ಲಲಿದ್ದಾರೆ. ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ನಿಮ್ಮ ಕೀರ್ತಿ ಹೆಚ್ಚಾಗಲಿದೆ. 

ಇದನ್ನೂ ಓದಿ- Ruchak Yog: ಮಂಗಳ ಸಂಚಾರದಿಂದ ರುಚಕ್ ರಾಜಯೋಗ: 3 ರಾಶಿಯವರಿಗೆ ಭಾಗ್ಯೋದಯದ ಸಮಯ

ಮಕರ ರಾಶಿ: 
ಸ್ವ ರಾಶಿಯಲ್ಲಿ ಶುಕ್ರನ ಸಂಚಾರವು ಈ ರಾಶಿಯವರಿಗೆ ವಿಶೇಷ ಪ್ರಯೋಜನವನ್ನು ನೀಡಲಿದೆ. ಈ ಸಮಯದಲ್ಲಿ ನಿಮ್ಮ ಸಂಬಂಧಿಕರ ನಡುವೆ ಮೂಡಿದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳಲಿವೆ. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಆನಂದಿಸುವಿರಿ. ವ್ಯವಹಾರದಲ್ಲಿ ತಲೆದೂರಿದ್ದ ಸಮಸ್ಯೆಗಳಿಂದ ಪರಿಹಾರ ದೊರೆಯಲಿದೆ. ಇದು ನಿಮ್ಮ ಜೀವನದಲ್ಲಿ ಸುಖ-ಸಂತೋಷವನ್ನು ಹೆಚ್ಚಿಸಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News