Shani Vakri: ಕೆಲವೇ ದಿನಗಳಲ್ಲಿ ಶನಿಯ ಹಿಮ್ಮುಖ ಚಲನೆ ಆರಂಭ- ಈ ರಾಶಿಯವರಿಗೆ ಭಾಗ್ಯೋದಯ

Shani Vakri: ಜ್ಯೋತಿಷ್ಯ ಶಾಸ್ತ್ರದಲ್ಲಿ, ನ್ಯಾಯದ ದೇವರು ಎಂದು ಬಣ್ಣಿಸಲ್ಪಡುವ ಶನಿ ದೇವನು ಇನ್ನು ಕೆಲವೇ ದಿನಗಳಲ್ಲಿ ಮಾರ್ಗಿಯಾಗಲಿದ್ದಾನೆ. ಶನಿ ಮಹಾತ್ಮನ ಈ ಹಿಮ್ಮುಖ ಚಲನೆಯು ಕೆಲವು ರಾಶಿಯವರ ಜೀವನದಲ್ಲಿ ಭಾರೀ ಲಾಭವನ್ನು ತರಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...  

Written by - Yashaswini V | Last Updated : Apr 25, 2023, 08:40 AM IST
  • ಜೂನ್ 17, 2023ರಿಂದ ಶನಿಯ ಹಿಮ್ಮುಖ ಚಲನೆ ಆರಂಭವಾಗಲಿದೆ.
  • ಶನಿ ದೇವನು 140 ದಿನಗಳ ಕಾಲ ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾನೆ
  • ಈ ಸಮಯದಲ್ಲಿ ನಾಲ್ಕು ರಾಶಿಯವರ ಮೇಲೆ ಶನಿಯ ಮಹಾಕೃಪೆ ಇರಲಿದೆ
Shani Vakri: ಕೆಲವೇ ದಿನಗಳಲ್ಲಿ ಶನಿಯ ಹಿಮ್ಮುಖ ಚಲನೆ ಆರಂಭ- ಈ ರಾಶಿಯವರಿಗೆ ಭಾಗ್ಯೋದಯ  title=

Saturn Retrograde Effect: ವೈದಿಕ ಜ್ಯೋತಿಷ್ಯದ ಪ್ರಕಾರ, ಕ್ರೂರ ಗ್ರಹ, ನ್ಯಾಯದ ದೇವರು ಎಂದು ಕರೆಯಲ್ಪಡುವ ಶನಿ ದೇವನು ಎಲ್ಲರಿಗೂ ಅವರವರ ಕರ್ಮಕ್ಕೆ ತಕ್ಕ ಫಲವನ್ನು ನೀಡುತ್ತಾನೆ. ಹಾಗಾಗಿಯೇ, ಶನಿ ಮಹಾತ್ಮನ ಹೆಸರು ಕೇಳಿದೊಡನೆ ಕೆಲವು ರಾಶಿಯವರು ಭಯಪಡುತ್ತಾರೆ. ಆದರೆ, ಜಾತಕದಲ್ಲಿ ಶನಿಯು ಶುಭ ಸ್ಥಾನದಲ್ಲಿದ್ದರೆ ಅಂತಹ ವ್ಯಕ್ತಿ ಜೀವನದಲ್ಲಿ ಸುಖ-ಸಂಪತ್ತನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. 

ಸದ್ಯ ಮೂರು ದಶಕಗಳ ಬಳಿಕ ತನ್ನದೇ ಆದ ಕುಂಭ ರಾಶಿಯಲ್ಲಿ ಕುಳಿತಿರುವ ಶನಿ ದೇವನು ಜೂನ್ ತಿಂಗಳಿನಲ್ಲಿ ಹಿಮ್ಮೆಟ್ಟಲಿದ್ದಾನೆ. ಯಾವುದೇ ಗ್ರಹದ ಹಿಮ್ಮುಖ ಚಲನೆಯನ್ನು ಗ್ರಹದ ವಕ್ರ ನಡೆ ಎಂತಲೂ ಕರೆಯಲಾಗುತ್ತದೆ. 

ಶನಿಯ ಹಿಮ್ಮುಖ ಚಲನೆ ದಿನಾಂಕ & ಸಮಯ: 
ಜೂನ್ 17, 2023 ರಂದು ರಾತ್ರಿ 10.48 ಕ್ಕೆ ಶನಿಯ ಹಿಮ್ಮುಖ ಚಲನೆ ಆರಂಭವಾಗಲಿದೆ. ನವೆಂಬರ್ 4, 2023 ರಂದು, ಬೆಳಿಗ್ಗೆ 8:26ರವರೆಗೆ ಶನಿ ಇದೇ ಸ್ಥಿತಿಯಲ್ಲಿರುತ್ತಾನೆ. ಅರ್ಥಾತ್ ಸುಮಾರು 140 ದಿನಗಳವರೆಗೆ ಶನಿ ಮಹಾತ್ಮ ಇದೇ ಸ್ಥಿತಿಯಲ್ಲಿರುತ್ತಾನೆ. ಈ ಸಮಯದಲ್ಲಿ ನಾಲ್ಕು ರಾಶಿಯವರ ಮೇಲೆ ಶನಿಯ ಮಹಾಕೃಪೆ ಇರಲಿದ್ದು, ಅದೃಷ್ಟದ ಜೊತೆಗೆ ಅಪಾರ ಧನಸಂಪತ್ತನ್ನು ಸಹ ಕರುಣಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

ಇದನ್ನೂ ಓದಿ- ಇನ್ನೆರಡು ದಿನಗಳಲ್ಲಿ ಗುರು ಪುಷ್ಯ ಯೋಗ: ಈ ಕೆಲಸಗಳನ್ನು ಆರಂಭಿಸಿದರೆ ಭಾರೀ ಯಶಸ್ಸು

ಶನಿಯ ಹಿಮ್ಮುಖ ಚಲನೆಯಿಂದ ಈ ರಾಶಿಯವರಿಗೆ ಭಾಗ್ಯೋದಯ:
ಸಿಂಹ ರಾಶಿ:

ಶನಿಯ ಹಿಮ್ಮುಖ ಚಲನೆಯು ಸಿಂಹ ರಾಶಿಯವರ ವ್ಯಾಪಾರ-ವ್ಯವಹಾರಗಳನ್ನು ವೃದ್ಧಿಸಲಿದೆ. ಈ ಸಮಯದಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿದ್ದು, ಹಣವೂ ಲಾಭದಾಯಕವಾಗಿರಲಿದೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. 

ಕನ್ಯಾ ರಾಶಿ: 
ಶನಿಯ ಮಹಾಕೃಪೆಯಿಂದಾಗಿ ವಿದೇಶದಲ್ಲಿ ಉದ್ಯೋಗಕ್ಕಾಗಿ ಯತ್ನಿಸುತ್ತಿರುವವರಿಗೆ ಸಮಯವು ಅತ್ಯುತ್ತಮವಾಗಿದೆ. ಈ ಸಮಯದಲ್ಲಿ ಕನ್ಯಾ ರಾಶಿಯವರು ಹಿಂದಿನ ಹೂಡಿಕೆಗಳಿಂದ ಬಂಪರ್ ಲಾಭವನ್ನು ಪಡೆಯಬಹುದು. ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಒಟ್ಟಾರೆಯಾಗಿ ಈ ಸಮಯವೌ ನಿಮಗೆ ತುಂಬಾ ಮಂಗಳಕರವಾಗಿದೆ.

ತುಲಾ ರಾಶಿ: 
ಶನಿಯ ಹಿಮ್ಮುಖ ಚಲನೆಯೊಂದಿಗೆ ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಈ ವೇಳೆ ನಿಮ್ಮ ನೆಚ್ಚಿನ ಉದ್ಯೋಗ ಪ್ರಾಪ್ತಿಯಾಗುವ ಸಾಧ್ಯತೆ ಇದ್ದು, ವಿದೇಶ ಪ್ರಯಾಣ ಯೋಗವೂ ಇದೆ. ಹಠಾತ್ ಧನ ಸಂಪತ್ತು ವೃದ್ಧಿಯಾಗಲಿದ್ದು ಕುಟುಂಬದಲ್ಲಿ ಸುಖ-ಶಾಂತಿ-ನೆಮ್ಮದಿ ನೆಲೆಸಲಿದೆ. 

ಇದನ್ನೂ ಓದಿ- Mahadhan Rajayoga: ಈ 3 ರಾಶಿಯವರಿಗೆ ಮಹಾಧನ ರಾಜಯೋಗ.. ಸಂಪತ್ತಿನ ಮಳೆ ಸುರಿಸಲಿದ್ದಾನೆ ಶುಕ್ರ!

ಮಕರ ರಾಶಿ: 
ಶನಿಯ ವಕ್ರ ನಡೆ ಮಕರ ರಾಶಿಯವರಿಗೂ ಸಹ ಲಾಭದಾಯಕ ಎಂದು ಸಾಬೀತು ಪಡಿಸಲಿದೆ. ಈ ಸಮಯದಲ್ಲಿ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದ್ದು, ಉದ್ಯೋಗ ರಂಗದಲ್ಲಿ ಪ್ರಗತಿಯನ್ನು ಕಾಣುವಿರಿ. ಇದರ ಹೊರತಾಗಿ, ನೀವು ಬಹಳ ದಿನಗಳಿಂದ ಯತ್ನಿಸುತ್ತಿರುವ ಕಾರ್ಯ ಸಿದ್ಧಿಯಾಗಲಿದ್ದು ಮನಃ ಸಂತೋಷವನ್ನು ಅನುಭವಿಸುವಿರಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News