Dina Bhavishya : ಶನಿದೇವನ ಕೃಪೆಯಿಂದ ಈ ರಾಶಿಗಳಿಗೆ ಇಂದು ದಿಢೀರ್‌ ಧನಲಾಭ.. ಅಂದುಕೊಂಡ ಕೆಲಸ ನೆರವೇರುವುದು !

Daily Horoscope in Kannada: ಚೈತ್ರ ಮಾಸದ ಕೃಷ್ಣ ಪಕ್ಷದ ಐದನೇ ದಿನ ಶನಿವಾರ. ಚೈತ್ರ ನವರಾತ್ರಿಯ ಐದನೇ ದಿನ. ಈ ದಿನ ಸ್ಕಂದಮಾತೆಯನ್ನು ಪೂಜಿಸಲಾಗುತ್ತದೆ. 

Written by - Chetana Devarmani | Last Updated : Apr 13, 2024, 07:03 AM IST
  • ಚೈತ್ರ ಮಾಸದ ಕೃಷ್ಣ ಪಕ್ಷದ ಐದನೇ ದಿನ ಶನಿವಾರ
  • ಇಂದು ದಿನವಿಡೀ ಅದೃಷ್ಟ ಈ ರಾಶಿಯವರ ಕಡೆ ಇರುತ್ತದೆ
  • ದ್ವಾದಶ ರಾಶಿಗಳ ಇಂದಿನ ರಾಶಿ ಭವಿಷ್ಯ
Dina Bhavishya : ಶನಿದೇವನ ಕೃಪೆಯಿಂದ ಈ ರಾಶಿಗಳಿಗೆ ಇಂದು ದಿಢೀರ್‌ ಧನಲಾಭ.. ಅಂದುಕೊಂಡ ಕೆಲಸ ನೆರವೇರುವುದು !   title=

Horoscope Today 13 April 2024: ಇಂದಿನ ದಿನಾಂಕ 13 ಏಪ್ರಿಲ್, ದಿನ ಶನಿವಾರ. ಚೈತ್ರ ಮಾಸದ ಕೃಷ್ಣ ಪಕ್ಷದ ಐದನೇ ದಿನ ಶನಿವಾರ. ಚೈತ್ರ ನವರಾತ್ರಿಯ ಐದನೇ ದಿನ. ಈ ದಿನ ಸ್ಕಂದಮಾತೆಯನ್ನು ಪೂಜಿಸಲಾಗುತ್ತದೆ. ಸೂರ್ಯೋದಯ: ಬೆಳಗ್ಗೆ 5:57. ಸೂರ್ಯಾಸ್ತ: ಸಂಜೆ 6:45. ರಾಹುಕಾಲವು ಬೆಳಿಗ್ಗೆ 9.10 ರಿಂದ 10.46 ರವರೆಗೆ ಇರುತ್ತದೆ. ಈ ಸಮಯದಲ್ಲಿ ಶುಭ ಕಾರ್ಯಗಳನ್ನು ಮಾಡಬಾರದು.

ಮೇಷ ರಾಶಿ: ಇಂದು ನೀವು ಚೈತನ್ಯದಿಂದ ಕೂಡಿರುತ್ತೀರ. ಇಂದು ಮಾಡುವ ಯಾವುದೇ ಕೆಲಸವು ಸಮಯಕ್ಕೆ ಪೂರ್ಣಗೊಳ್ಳುತ್ತದೆ. ನಿಮ್ಮ ಸಂಗಾತಿಯ ಸಲಹೆ ನಿಮಗೆ ಪ್ರಯೋಜನಕಾರಿಯಾಗಲಿದೆ.

ವೃಷಭ ರಾಶಿ: ಇಂದು ನಿಮ್ಮ ಪ್ರತಿಸ್ಪರ್ಧಿಗಳೊಂದಿಗೆ ವಾದ ಮಾಡಬೇಡಿ. ಹಣ ಮತ್ತು ಆಸ್ತಿ ವಿಷಯಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಜಾಗರೂಕರಾಗಿರಿ. ದಿನವು ತುಂಬಾ ಚೆನ್ನಾಗಿರಲಿದೆ. ದಿನವಿಡೀ ಅದೃಷ್ಟ ನಿಮ್ಮ ಕಡೆ ಇರುತ್ತದೆ.

ಮಿಥುನ ರಾಶಿ: ವ್ಯಾಪಾರದಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಲಾಭವನ್ನು ಪಡೆಯುತ್ತೀರಿ. ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಇಂದು ಕುಟುಂಬ ಸದಸ್ಯರೊಂದಿಗೆ ಕಲಹ ಉಂಟಾಗಬಹುದು.

ಇದನ್ನೂ ಓದಿ: ಮೀನದಲ್ಲಿ ಶುಕ್ರ ಸಂಕ್ರಮಣ.. ಈ ರಾಶಿಗಳ ಬದುಕೇ ಬದಲಾಗುವುದು, ವೃತ್ತಿಜೀವನದಲ್ಲಿ ಸಕ್ಸಸ್ ಪಕ್ಕಾ.. ಹಣದ ಹೊಳೆ, ರಾಜರಂತಹ ಬದುಕು! 

ಕಟಕ ರಾಶಿ: ಇಂದು ನಿಮಗೆ ಅನುಕೂಲಕರ ದಿನವಾಗಿದೆ. ಕೆಲವು ವಿಷಯಗಳ ಬಗ್ಗೆ ನೀವು ಅನುಮಾನಾನದಲ್ಲೇ ಉಳಿಯುತ್ತೀರಿ. ಇಂದು ದೈಹಿಕವಾಗಿ ಆಯಾಸ ಕಾಡಬಹುದು. ಮಾನಸಿಕವಾಗಿ ಸಂತೋಷವಾಗಿರುತ್ತೀರಿ.

ಸಿಂಹ ರಾಶಿ: ಇಂದು ಅದ್ಭುತ ದಿನವಾಗಲಿದೆ. ಯಾವುದೇ ಕೆಲಸದಲ್ಲಿ ಉತ್ತಮ ಸಾಧನೆ ಮಾಡಲು, ನೀವು ಹೊಸದನ್ನು ಮಾಡುವಿರಿ. ಖಂಡಿತ ಯಶಸ್ಸು ಸಿಗುತ್ತದೆ. ಆರ್ಥಿಕ ಅಂಶವು ಇಂದು ಬಲವಾಗಿರುತ್ತದೆ.

ಕನ್ಯಾ ರಾಶಿ: ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ಇಂದು ನೀವು ವಿವಿಧ ಕಾರ್ಯಗಳಲ್ಲಿ ನಿರತರಾಗಿರುತ್ತೀರಿ.  

ತುಲಾ ರಾಶಿ: ಇಂದು ಹಣದ ಮಳೆ ಸುರಿಯಲಿದೆ. ಜತೆಗೆ ಹೊಸ ವಾಹನ ಖರೀದಿಸುವ ಯೋಗವೂ ಇದೆ. ಸ್ನೇಹಿತರ ಸಹಕಾರದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ಇಂದು ನಿಮ್ಮ ಮನೆಗೆ ದೂರದ ಸಂಬಂಧಿಯೊಬ್ಬರು ಬರಬಹುದು.

ವೃಶ್ಚಿಕ ರಾಶಿ: ಇಂದು ಯಶಸ್ಸು ನಿಮ್ಮದಾಗುವುದು. ಪ್ರೀತಿಯ ಜೀವನದಲ್ಲಿ ಸಮಯದ ಕೊರತೆಯು ತೊಂದರೆಗೆ ಕಾರಣವಾಗಬಹುದು. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ಗೌರವವನ್ನು ಕಾಪಾಡಿಕೊಳ್ಳಲು ಮಾತನ್ನು ನಿಯಂತ್ರಿಸಿ.

ಧನು ರಾಶಿ: ವಿದ್ಯಾರ್ಥಿಗಳು ಸ್ವಲ್ಪ ಕಷ್ಟಪಡಬೇಕಾಗುತ್ತದೆ. ನೀವು ಶಾಂತವಾಗಿರಲು ಪ್ರಯತ್ನಿಸಿದರೆ, ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ.  

ಮಕರ ರಾಶಿ: ಕಠಿಣ ಪರಿಶ್ರಮದಿಂದ ನೀವು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ವ್ಯಾಪಾರದಲ್ಲಿ ಲಾಭದಿಂದ ಮನಸ್ಸು ಸಂತೋಷವಾಗುತ್ತದೆ. ಇಂದು ಹಣ ಖರ್ಚಾಗಬಹುದು. ಯಾರಿಗೂ ಸಾಲ ಕೊಡಬೇಡಿ.

ಕುಂಭ ರಾಶಿ: ವಿದ್ಯಾರ್ಥಿಗಳು ಸ್ವಲ್ಪ ಕಷ್ಟಪಡಬೇಕಾಗುತ್ತದೆ. ನೀವು ಶಾಂತವಾಗಿರಲು ಪ್ರಯತ್ನಿಸಿ. ಇಂದು ಕೆಲಸದ ಹೊರೆ ಹೆಚ್ಚಾಗಲಿದೆ.

ಮೀನ ರಾಶಿ: ಇಂದು ನಿಮ್ಮ ಮನಸ್ಸು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಲಿದೆ. ಕಬ್ಬಿಣದ ವ್ಯಾಪಾರದಲ್ಲಿ ನಿರೀಕ್ಷೆಗಿಂತ ಕಡಿಮೆ ಲಾಭ ದೊರೆಯಲಿದೆ.  

ಇದನ್ನೂ ಓದಿ: Shakun Shastra: ಕಾಗೆಗಳ ಬಗ್ಗೆ ಶಕುನ ಶಾಸ್ತ್ರದಲ್ಲಿ ಏನು ಹೇಳಿದೆ ಗೊತ್ತಾ..?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News