Shani Gochar 2023: 15 ದಿನಗಳಲ್ಲಿ 2 ಬಾರಿ ಶನಿ ಸಂಚಾರ, ಈ ರಾಶಿಯವರಿಗೆ ಬಂಪರ್ ಯೋಗ

Shani Gochar 2023: ಹೊಸ ವರ್ಷ 2023 ಆರಂಭವಾಗಿದೆ. ಹೊಸ ವರ್ಷದ ಆರಂಭದಲ್ಲಿ ಶನಿ ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. 2023ರ ಜನವರಿ 17 ರಂದು ಮೂವತ್ತು ವರ್ಷಗಳ ಬಳಿಕ ಶನಿಯು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದಾದ ಎರಡೇ ವಾರಗಳೊಳಗೆ ಶನಿ ಅಸ್ತಮಿಸಲಿದ್ದಾನೆ. ಹದಿನೈದು ದಿನಗಳ ಅಂತರದಲ್ಲಿ ಶನಿಯ ಸ್ಥಾನದಲ್ಲಿನ ಈ ಬದಲಾವಣೆಯಿಂದಾಗಿ ಮೂರು ರಾಶಿಯವರಿಗೆ ಭಾರೀ ಅದೃಷ್ಟ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ತಿಳಿಯಿರಿ. 

Written by - Yashaswini V | Last Updated : Jan 6, 2023, 08:11 AM IST
  • ವೈದಿಕ ಜ್ಯೋತಿಷ್ಯದ ಪ್ರಕಾರ, ಶನಿ ರಾಶಿ ಬದಲಾವಣೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ.
  • ಕೇವಲ ಹದಿನೈದು ದಿನಗಳ ಅಂತರದಲ್ಲಿ ಶನಿ ಸಂಚಾರದಲ್ಲಿನ ಈ ಬದಲಾವಣೆಯು ಎಲ್ಲಾ 12 ರಾಶಿಯವರ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ.
  • ಆದರೂ, ಈ ವೇಳೆ ಶನಿಯು ಮೂರು ರಾಶಿಯವರಿಗೆ ಅಪಾರ ಸಂಪತ್ತನ್ನು ಕರುಣಿಸಲಿದ್ದಾನೆ ಎಂದು ಹೇಳಲಾಗುತ್ತಿದೆ.
Shani Gochar 2023: 15 ದಿನಗಳಲ್ಲಿ 2 ಬಾರಿ ಶನಿ ಸಂಚಾರ, ಈ ರಾಶಿಯವರಿಗೆ ಬಂಪರ್ ಯೋಗ  title=
Shani Gochar 2023

Shani Gochar 2023: ಹೊಸ ವರ್ಷದಲ್ಲಿ ಹಲವು ಗ್ರಹಗಳು ತಮ್ಮ ಪಥವನ್ನು ಬದಲಾಯಿಸಿವೆ. ಕರ್ಮಫಲದಾತ, ನ್ಯಾಯದ ದೇವರು ಶನಿದೇವ ಕೂಡ ಇದೇ ತಿಂಗಳಿನಲ್ಲಿ ರಾಶಿ ಪರಿವರ್ತನೆ ಮಾಡಲಿದ್ದಾನೆ. ಈ ಮೂಲಕ ಶನಿಯು ಮೂರು ದಶಕಗಳ ಬಳಿಕ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. 2023ರ ಜನವರಿ 17 ರಂದು ಕುಂಭ ರಾಶಿಗೆ ಪ್ರವೇಶಿಸಲಿರುವ ಶನಿ ದೇವನು ಹದಿನೈದು ದಿನಗಳ ಒಳಗೆ ಅಂದರೆ 2023ರ ಜನವರಿ 30ರಂದು ಅಸ್ತಮಿಸಲಿದ್ದಾನೆ. ಸುಮಾರು ಒಂದು ತಿಂಗಳಿಗೂ ಹೆಚ್ಚು ಸಮಯ ಇದೇ ಸ್ಥಿತಿಯಲ್ಲಿರುವ ಶನಿಯು ಬಳಿಕ ಮಾರ್ಚ್ 6, 2023ರಂದು ಉದಯಿಸಲಿದ್ದಾನೆ.

ವೈದಿಕ ಜ್ಯೋತಿಷ್ಯದ ಪ್ರಕಾರ, ಶನಿ ರಾಶಿ ಬದಲಾವಣೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಕೇವಲ ಹದಿನೈದು ದಿನಗಳ ಅಂತರದಲ್ಲಿ ಶನಿ ಸಂಚಾರದಲ್ಲಿನ ಈ ಬದಲಾವಣೆಯು ಎಲ್ಲಾ 12 ರಾಶಿಯವರ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಆದರೂ, ಈ ವೇಳೆ ಶನಿಯು ಮೂರು ರಾಶಿಯವರಿಗೆ ಅಪಾರ ಸಂಪತ್ತನ್ನು ಕರುಣಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...

ಇದನ್ನೂ ಓದಿ- Shani Gochar 2023: 30 ವರ್ಷಗಳ ಬಳಿಕ ಈ ರಾಶಿಯವರಿಗೆ ವಿಶೇಷ ಕೃಪೆ ತೋರಲಿದ್ದಾನೆ ಶನಿ ದೇವ

ಹದಿನೈದು ದಿನಗಳಲ್ಲಿ 2 ಬಾರಿ ಶನಿ ಸಂಚಾರದಲ್ಲಿ ಬದಲಾವಣೆ, ಮೂರು ರಾಶಿಯವರಿಗೆ ಹೊಡೆಯಲಿದೆ ಬಂಪರ್ ಲಾಟರಿ:- 
ವೃಷಭ ರಾಶಿ:

ಹದಿನೈದು ದಿನಗಳ ಅಂತರದಲ್ಲಿ ಎರಡು ಬಾರಿ ಶನಿ ಸಂಚಾರದಲ್ಲಿನ ಬದಲಾವಣೆಯು ವೃಷಭ ರಾಶಿಯವರಿಗೆ ಶುಭ ಸಮಯವನ್ನು ತರಲಿದೆ. ಈ ಸಮಯದಲ್ಲಿ ಶನಿ ದೇವನ ಅಪಾರ ಆಶೀರ್ವಾದ ಈ ರಾಶಿಯವರಿಗೆ ಪ್ರಾಪ್ತಿಯಾಗಲಿದ್ದು ಇಷ್ಟು ದಿನಗಳ ಆರ್ಥಿಕ ಸಮಸ್ಯೆಗಳಿಂದ ಹೊರಬರುವಿರಿ. ಉದ್ಯೋಗಸ್ಥರಿಗೆ ಪ್ರಮೋಷನ್ ಯೋಗವಿದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಫಲ ದೊರೆಯಲಿದ್ದು ವೃತ್ತಿ ರಂಗದಲ್ಲಿ ಉತ್ತುಂಗದ ಶಿಖರವನ್ನು ಏರುವಿರಿ ಎಂದು ಹೇಳಲಾಗುತ್ತಿದೆ.

ತುಲಾ ರಾಶಿ:
2023ರಲ್ಲಿ ಶನಿ ರಾಶಿ ಪರಿವರ್ತನೆಯು ಈ ರಾಶಿಯವರಿಗೆ ಬಹಳಷ್ಟು ಪ್ರಯೋಜನಗಳನ್ನು ಹೊತ್ತು ತರಲಿದೆ. ಈ ಸಮಯದಲ್ಲಿ ಶನಿಯ ಆಶೀರ್ವಾದದಿಂದ ಈ ರಾಶಿಯ ಜನರು ಶಿಕ್ಷಣ ಮತ್ತು ವೃತ್ತಿ ಬದುಕಿನಲ್ಲಿ ಅಪಾರ ಪ್ರಯೋಜನವನ್ನು ಪಡೆಯಲಿದ್ದಾರೆ. ವ್ಯಾಪಾರಸ್ಥರಿಗೂ ಉತ್ತಮ ಸಮಯ ಇದಾಗಿದ್ದು ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದೆ. ಹೊಸ ಮನೆ, ವಾಹನ ಖರೀದಿ ಯೋಗವೂ ಇದೆ.

ಇದನ್ನೂ ಓದಿ- Shani Deva: ಜನವರಿ 16ರವರೆಗೆ ಈ ರಾಶಿಯವರಿಗೆ ಶನಿ ಕೃಪೆಯಿಂದ ಗೋಲ್ಡನ್ ಡೇಸ್

ಮಕರ ರಾಶಿ:
ಹದಿನೈದು ದಿನಗಳಲ್ಲಿ 2 ಬಾರಿ ಶನಿ ಸಂಚಾರದಲ್ಲಿ ಬದಲಾವಣೆಯು ಈ ರಾಶಿಯವರಿಗೆ ಬಂಪರ್ ಲಾಭವನ್ನು ತರಲಿದೆ. ಈ ಸಮಯದಲ್ಲಿ ನಿಮ್ಮ ದೀರ್ಘಕಾಲದಿಂದ ಸ್ಥಗಿತಗೊಂಡಿರುವ ಕೆಲಸಗಳು ವೇಗವನ್ನು ಪಡೆಯಲಿವೆ. ಹೊಸ ಆರ್ಥಿಕ ಮೂಲಗಳು ಸೃಷ್ಟಿಯಾಗಲಿದ್ದು ಆದಾಯವೂ ಹೆಚ್ಚಾಗಲಿದೆ. ವ್ಯಾಪಾರ-ವ್ಯವಹಾರದಲ್ಲಿಯೂ ನಿರೀಕ್ಷೆಗಿಂತ ಹೆಚ್ಚಿನ ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News