Ravi Pushya Yoga: ಮೂರು ದಿನಗಳಲ್ಲಿ ಈ ರಾಶಿಯವರಿಗೆ ಭಾಗ್ಯೋದಯ, ಬಂಪರ್ ಧನ ಯೋಗ

Ravi Pushya Yoga: 27 ನಕ್ಷತ್ರಪುಂಜಗಳಲ್ಲಿ ಪುಷ್ಯ ನಕ್ಷತ್ರವೂ ಒಂದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಪುಷ್ಯ ನಕ್ಷತ್ರವನ್ನು ಮಂಗಳಕರ ನಕ್ಷತ್ರ ಎಂದು ಹೇಳಲಾಗುತ್ತದೆ. ಭಾನುವಾರದ ದಿನ ಪುಷ್ಯ ನಕ್ಷತ್ರ ಬಂದಾಗ ರವಿ ಪುಷ್ಯ ಎಂಬ ಅಪರೂಪದ ಯೋಗ ನಿರ್ಮಾಣವಾಗುತ್ತದೆ. 

Written by - Yashaswini V | Last Updated : Sep 7, 2023, 02:28 PM IST
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರವಿ ಪುಷ್ಯ ಯೋಗವು 10 ಸೆಪ್ಟೆಂಬರ್ 2023ರ ಸಂಜೆ 5:06 ಗಂಟೆಯಿಂದ ಆರಂಭವಾಗಿ, ಸೆಪ್ಟೆಂಬರ್ 11 ರ ಬೆಳಿಗ್ಗೆ 6:15 ರವರೆಗೆ ಇರಲಿದೆ.
  • ಈ ಸಮಯವು ಮೂರು ರಾಶಿಯವರಿಗೆ ಭಾರೀ ಅದೃಷ್ಟವನ್ನು ತರಲಿದೆ ಎಂದು ಹೇಳಲಾಗುತ್ತಿದೆ.
  • ಮೂರು ದಿನಗಳಲ್ಲಿ ನಿರ್ಮಾಣವಾಗುತ್ತಿರುವ ರವಿ ಪುಷ್ಯ ನಕ್ಷತ್ರವು ಕೆಲವು ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದೆ ಎಂದು ಹೇಳಲಾಗುತ್ತಿದೆ.
Ravi Pushya Yoga: ಮೂರು ದಿನಗಳಲ್ಲಿ ಈ ರಾಶಿಯವರಿಗೆ ಭಾಗ್ಯೋದಯ, ಬಂಪರ್ ಧನ ಯೋಗ  title=

Ravi Pushya Yoga: ವೈದಿಕ ಜ್ಯೋತಿಷ್ಯದ ಪ್ರಕಾರ, ಒಟ್ಟು 27 ನಕ್ಷತ್ರ ಪುಂಜಗಳಿವೆ ಅದರಲ್ಲಿ ಪುಷ್ಯ ನಕ್ಷತ್ರವೂ ಒಂದಾಗಿದ್ದು ಇದನ್ನು ಅತ್ಯಂತ ಮಂಗಳಕರ ನಕ್ಷತ್ರ ಎಂದು ಬಣ್ಣಿಸಲಾಗುತ್ತದೆ. ಭಾನುವಾರದ ದಿನ ಪುಷ್ಯ ನಕ್ಷತ್ರ ಬಂದಾಗ ಇದರಿಂದ ಅತ್ಯಂತ ಶುಭಕರ ಎಂದು ಹೇಳಲಾಗುವ ರವಿ ಪುಷ್ಯ ಯೋಗ ನಿರ್ಮಾಣವಾಗುತ್ತದೆ. ಇದೀಗ ಈ ಭಾನುವಾರ ಸೆಪ್ಟೆಂಬರ್ 10, 2023ರಂದು ಪುಷ್ಯ ನಕ್ಷತ್ರವಿದೆ. ಇದೇ ದಿನ ಅಜ ಏಕಾದಶಿ ಕೂಡ ಇದೆ. ಹಾಗಾಗಿ, ಈ ದಿನ ತುಂಬಾ ವಿಶೇಷವಾಗಿದೆ ಎಂದು ಹೇಳಲಾಗುತ್ತದೆ. 

ಅಜ ಏಕಾದಶಿಯಂದು ನಿರ್ಮಾಣಗೊಳ್ಳಲಿರುವ ರವಿ ಪುಷ್ಯ ಯೋಗದಂದು ಭಗವಾನ್ ವಿಷ್ಣುವಿನ ಸ್ಮರಣೆ ಮಾಡುವುದರಿಂದ ಜೀವನದಲ್ಲಿ ಎದುರಾಗಿರುವ ನಾನಾ ಬಗೆಯ ಸಂಕಷ್ಟಗಳು ದೂರಾಗಿ, ವಿಷ್ಣು ಮತ್ತು ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗಬಹುದು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಈ ದಿನ ಚಿನ್ನ-ಬೆಳ್ಳಿ, ಹೊಸ ವಾಹನ, ಮನೆ, ಭೂಮಿ ಖರೀದಿಸಲು ಕೂಡ ಯೋಗ್ಯವಾದ ದಿನ ಎಂದು ಬಣ್ಣಿಸಲಾಗುತ್ತದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರವಿ ಪುಷ್ಯ ಯೋಗವು 10 ಸೆಪ್ಟೆಂಬರ್ 2023ರ ಸಂಜೆ 5:06 ಗಂಟೆಯಿಂದ ಆರಂಭವಾಗಿ, ಸೆಪ್ಟೆಂಬರ್ 11 ರ ಬೆಳಿಗ್ಗೆ 6:15 ರವರೆಗೆ ಇರಲಿದೆ. ಈ ಸಮಯವು ಮೂರು ರಾಶಿಯವರಿಗೆ ಭಾರೀ ಅದೃಷ್ಟವನ್ನು ತರಲಿದೆ ಎಂದು ಹೇಳಲಾಗುತ್ತಿದೆ.  ಮೂರು ದಿನಗಳಲ್ಲಿ ನಿರ್ಮಾಣವಾಗುತ್ತಿರುವ ರವಿ ಪುಷ್ಯ ನಕ್ಷತ್ರವು ಕೆಲವು ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

ಇದನ್ನೂ ಓದಿ- ಸೌತೆಕಾಯಿ ಇಲ್ಲದೆ ಅಪೂರ್ಣ ಕೃಷ್ಣಜನ್ಮಾಷ್ಟಮಿ: ಇದರ ಮಹತ್ವವೇನು ಗೊತ್ತಾ?

ರವಿ ಪುಷ್ಯ ಯೋಗದಿಂದ ಈ ಮೂರು ರಾಶಿಯವರಿಗೆ ಭರ್ಜರಿ ಲಾಭ: 
ಮಿಥುನ ರಾಶಿ: 

ಇನ್ನೂ ಮೂರು ದಿನಗಳಲ್ಲಿ ನಿರ್ಮಾಣವಾಗಲಿರುವ ರವಿ ಪುಷ್ಯ ಯೋಗವು ಮಿಥುನ ರಾಶಿಯವರಿಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ಮಿಥುನ ರಾಶಿಯವರು ಸಂಪತ್ತಿನ ದೇವತೆಯಾದ ಲಕ್ಷ್ಮಿ ಕೃಪೆಗೆ ಪಾತ್ರರಾಗಲಿದ್ದಾರೆ. ಇದರಿಂದಾಗಿ, ಹಠಾತ್ ಧನ ಲಾಭ ಸಂಭವವಿದೆ ಎಂದು ಹೇಳಲಾಗುತ್ತಿದೆ. 

ಸಿಂಹ ರಾಶಿ: 
ಸೆಪ್ಟೆಂಬರ್ 10, 2023ರಂದು ರವಿ ಪುಷ್ಯ ನಕ್ಷತ್ರ ಯೋಗವು ಸಿಂಹ ರಾಶಿಯವರಿಗೂ ಸಹ ಅತ್ಯುತ್ತಮ ಸಮಯ. ರವಿ ಪುಷ್ಯ ಯೋಗದ ಪರಿಣಾಮವಾಗಿ ಸಿಂಹ ರಾಶಿಯವರ ದೀರ್ಘ ಸಮಯದಿಂದ ಸ್ಥಗಿತಗೊಂಡಿದ್ದ ಕೆಲಸ ಕಾರ್ಯಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ. ಹೂಡಿಕೆಗೂ ಅತ್ಯುತ್ತಮ ಸಮಯ ಇದಾಗಿದ್ದು, ಭೂಮಿ-ವಾಹನ ಖರೀದಿ ಯೋಗವೂ ಇದೆ. 

ಇದನ್ನೂ ಓದಿ- Rahu Gochar 2023: ಒಂದೂವರೆ ವರ್ಷಗಳ ಬಳಿಕ ರಾಹು ಸಂಚಾರ, ಮೂರು ರಾಶಿಯವರಿಗೆ ಅಪಾರ ಕೀರ್ತಿ-ಸಂಪತ್ತು

ತುಲಾ ರಾಶಿ: 
ರವಿ ಪುಷ್ಯ ಯೋಗವು ತುಲಾ ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದೆ. ಈ ಸಂದರ್ಭದಲ್ಲಿ ದಿಢೀರ್ ಧನಾಗಮನ ಸಾಧ್ಯತೆ ಇದ್ದು, ಇದು ನಿಮ್ಮ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಲಿದೆ. ಮಾತ್ರವಲ್ಲ, ವೃತ್ತಿ ವ್ಯವಹಾರದಲ್ಲಿಯೂ ಭರ್ಜರಿ ಲಾಭವನ್ನು ಪಡೆಯುವ ನಿರೀಕ್ಷೆ ಇದೆ.  ಮಕ್ಕಳಿಗೆ ಸಂಬಂಧಿಸಿದಂತೆ ಗುಡ್ ನ್ಯೂಸ್ ಕೇಳಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News