Rahu-Ketu Gochar 2023: ಮುಂದಿನ ಒಂದೂವರೆ ವರ್ಷಗಳ ಕಾಲ ಈ ರಾಶಿಯವರ ಜೀವನದಲ್ಲಿ ಕೋಲಾಹಲ ಸೃಷ್ಟಿಸಲಿದ್ದಾರೆ ರಾಹು-ಕೇತು

Rahu-Ketu Gochar 2023: ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾಪ ಗ್ರಹಗಳೆಂದೇ ಬಿಂಬಿತವಾಗಿರುವ ರಾಹು-ಕೇತು ಗ್ರಹಗಳ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಕೂಡ ದ್ವಾದಶ ರಾಶಿಯವರ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಈ ವರ್ಷ ಅಕ್ಟೋಬರ್ ಮಾಸದಲ್ಲಿ ಈ ಎರಡೂ ಗ್ರಹಗಳ ಸಂಚಾರ ಬದಲಾವಣೆ ಆಗಲಿದ್ದು ಇದರ ಪರಿಣಾಮವಾಗಿ ಮುಂದಿನ ಒಂದೂವರೆ ವರ್ಷಗಳ ಕಾಲ ಕೆಲವು ರಾಶಿಯವರ ಜೀವನದಲ್ಲಿ ತುಂಬಾ ಎಚ್ಚರಿಕೆ ಅಗತ್ಯ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : May 24, 2023, 09:53 AM IST
  • ರಾಹು-ಕೇತು ಗ್ರಹಗಳು ಸದಾ ಹಿಮ್ಮುಖವಾಗಿ ಚಲಿಸುವ ಗ್ರಹಗಳಾಗಿವೆ.
  • ಈ ಎರಡೂ ಗ್ರಹಗಳು ಒಂದೂವರೆ ವರ್ಷಗಳಿಗೆ ಒಮ್ಮೆ ರಾಶಿ ಚಕ್ರವನ್ನು ಬದಲಾಯಿಸುತ್ತವೆ.
  • ಇದೀಗ ಈ ವರ್ಷ ಎಂದರೆ 2023ರ ಅಕ್ಟೋಬರ್ ತಿಂಗಳಿನಲ್ಲಿ ಈ ಎರಡೂ ಗ್ರಹಗಳು ರಾಶಿ ಪರಿವರ್ತನೆ ಹೊಂದಲಿವೆ.
Rahu-Ketu Gochar 2023: ಮುಂದಿನ ಒಂದೂವರೆ ವರ್ಷಗಳ ಕಾಲ ಈ ರಾಶಿಯವರ ಜೀವನದಲ್ಲಿ ಕೋಲಾಹಲ ಸೃಷ್ಟಿಸಲಿದ್ದಾರೆ ರಾಹು-ಕೇತು  title=
Rahu Ketu Transit Effect

Rahu-Ketu Transit Effect: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ನವಗ್ರಹಗಳಿಗೂ ಕೂಡ ಅದರದೇ ಆದ ಮಹತ್ವವಿದೆ ಎಂದು ಹೇಳಲಾಗುತ್ತದೆ. ನವಗ್ರಹಗಳಲ್ಲಿ ಪಾಪ ಗ್ರಹಗಳು ಎಂದೇ ಪರಿಗಣಿಸಲ್ಪಡುವ ರಾಹು-ಕೇತು ಗ್ರಹಗಳನ್ನು ತಪ್ಪಿಸಿಕೊಳ್ಳಲಾಗದ ಗ್ರಹಗಳು ಎಂತಲೂ ಕರೆಯಲಾಗುತ್ತದೆ. ಇವುಗಳ ಸಂಚಾರದಲ್ಲಿನ ಸಣ್ಣ ಬಡಲವಣೆಯೂ ಕೂಡ ಪ್ರತಿಯೊಬ್ಬರ ಮೇಲೂ ಮಹತ್ವದ ಪರಿಣಾಮವನ್ನು ಬೀರುತ್ತದೆ. 

ರಾಹು-ಕೇತು ಗ್ರಹಗಳು ಸದಾ ಹಿಮ್ಮುಖವಾಗಿ ಚಲಿಸುವ ಗ್ರಹಗಳಾಗಿವೆ. ಈ ಎರಡೂ ಗ್ರಹಗಳು ಒಂದೂವರೆ ವರ್ಷಗಳಿಗೆ ಒಮ್ಮೆ ರಾಶಿ ಚಕ್ರವನ್ನು ಬದಲಾಯಿಸುತ್ತವೆ. ಇದೀಗ ಈ ವರ್ಷ ಎಂದರೆ 2023ರ ಅಕ್ಟೋಬರ್ ತಿಂಗಳಿನಲ್ಲಿ ಈ ಎರಡೂ ಗ್ರಹಗಳು ರಾಶಿ ಪರಿವರ್ತನೆ ಹೊಂದಲಿವೆ. ಇದರ ಶುಭ-ಅಶುಭ ಪರಿಣಾಮಗಳು ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ. 

ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಗಳ ಪ್ರಕಾರ, ಪ್ರಸ್ತುತ ಮೇಷ ರಾಶಿಯಲ್ಲಿರುವ ರಾಹು ಮತ್ತು ತುಲಾ ರಾಶಿಯಲ್ಲಿರುವ ಕೇತು ಎರಡೂ ಗ್ರಹಗಳು ಕೂಡ 30 ಅಕ್ಟೋಬರ್ 2023ರಂದು ರಾಶಿ ಪರಿವರ್ತನೆ ಹೊಂದಲಿವೆ. ಗಮನಾರ್ಹವಾಗಿ ಈ ಸಮಯದಲ್ಲಿ ರಾಹು ಮೇಷ ರಾಶಿಯನ್ನು ತೊರೆದು ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದೇ ವೇಳೆ ಕೇತು ತುಲಾ ರಾಶಿಯನ್ನು ಬಿಟ್ಟು ಕನ್ಯಾ ರಾಶಿಯನ್ನು ಪ್ರವೇಶಿಸಲಿದ್ದಾನೆ. 

ಇದನ್ನೂ ಓದಿ-  Budha Gochar: ಜೂನ್ 7ರವರೆಗೆ ಈ ರಾಶಿಯವರಿಗೆ ವೃತ್ತಿ ರಂಗದಲ್ಲಿ ಭಾರೀ ಯಶಸ್ಸು

ಈ ಎರಡೂ ದುಷ್ಟ ಗ್ರಹಗಳ ಸಂಚಾರವು ಎಲ್ಲಾ ರಾಶಿಯವರ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳು ಉಂಟು ಮಾಡಲಿವೆ. ಆದಾಗ್ಯೂ, ಈ ಸಮಯದಲ್ಲಿ ಮೂರು ರಾಶಿಯವರ ಮೇಲೆ ಈ ದುಷ್ಟ ಗ್ರಹಗಳ ಕರಿನೆರಳು ಬೆಂಬಿಡದೆ ಕಾಡಲಿದ್ದು, ಈ ರಾಶಿಯವರು ಮುಂದಿನ ಒಂದೂವರೆ ವರ್ಷಗಳವರೆಗೆ ತುಂಬಾ ಎಚ್ಚರಿಕೆಯಿಂದ ಇರುವುದು ಮುಖ್ಯ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಯಾವ ರಾಶಿಯವರು ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ತಿಳಿಯೋಣ... 

ಮುಂದಿನ ಒಂದೂವರೆ ವರ್ಷಗಳ ಕಾಲ ಈ ರಾಶಿಯವರ ಜೀವನದಲ್ಲಿ ಕೋಲಾಹಲ ಸೃಷ್ಟಿಸಲಿದ್ದಾರೆ ರಾಹು-ಕೇತು: 
ಮೇಷ ರಾಶಿ: 

ಅಕ್ಟೋಬರ್ 30 ರಂದು ರಾಹು- ಕೇತು ಗ್ರಹಗಳ ರಾಶಿ ಪರಿವರ್ತನೆಯಿಂದ ಮೇಶರ್ ರಾಶಿಯವರಿಗೆ ಆರ್ಥಿಕ ನಷ್ಟ ಎದುರಾಗಲಿದೆ. ಈ ಸಮಯದಲ್ಲಿ ಯಾವುದೇ ರೀತಿಯ ಹೂಡಿಕೆಯನ್ನು ತಪ್ಪಿಸಿ. ಮಾತವಲ್ಲ, ದುಷ್ಟ ಗ್ರಹಗಳ ಸಂಚಾರ ನಿಮ್ಮ ಕೌಟುಂಬಿಕ ಜೀವನದ ಮೇಲೂ ಋಣಾತ್ಮಕ ಪರಿಣಾಮವನ್ನು ಬಿರುವುದರಿಂದ ಮಾತಿನ ಮೇಲೆ ಸಂಯಮ ಕಾಯ್ದುಕೊಳ್ಳಿ. ಸ್ನೇಹಿತರು, ಕುಟುಂಬಸ್ಥರೊಂದಿಗೆ ಮನಸ್ಥಾಪವನ್ನು ತಪ್ಪಿಸಲು ಅನಗತ್ಯ ವಾದ-ವಿವಾದಗಳನ್ನು ತಪ್ಪಿಸಿ. 

ವೃಷಭ ರಾಶಿ: 
2023ರ ಅಕ್ಟೋಬರ್ ಮಾಸದಲ್ಲಿ ರಾಹು-ಕೇತು ಗ್ರಹಗಳ ಸಂಚಾರದಿಂದ ವೃಷಭ ರಾಶಿಯವರ ಜೀವನದಲ್ಲಿ ನಾನಾ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅದರಲ್ಲೂ ಮುಖ್ಯವಾಗಿ ಉದ್ಯೋಗ ರಂಗದಲ್ಲಿ ಹಲವು ಸವಾಲುಗಳು ಎದುರಾಗಬಹುದು. ಆರ್ಥಿಕ ಸಂಕಷ್ಟಗಳು ಹೆಚ್ಚಾಗುವುದರಿಂದ ದಾಂಪತ್ಯದಲ್ಲಿ ಕಲಹಗಳಿಗೂ ಕಾರಣವಾಗಬಹುದು. ಏರಿಳಿತಗಳಿಂದ ಕೂಡಿದ ಜೀವನದಿಂದಾಗಿ ವೃತ್ತಿ, ವೈಯಕ್ತಿಕ ಬದುಕಿನಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಲಿದೆ. ಈ ಸಮಯದಲ್ಲಿ, ನಿಮ್ಮ ಮಾತಿನ ಮೇಲೆ ಸಂಯಮ ಕಾಯ್ದುಕೊಳ್ಳುವುದರಿಂದ ನಿಮ್ಮ ಸಮಸ್ಯೆಗಳು ಸಾಕಷ್ಟು ಕಡಿಮೆ ಆಗಲಿವೆ. 

ಇದನ್ನೂ ಓದಿ- Shukra Gochar 2023: ವಾರದ ಬಳಿಕ ಈ 3 ರಾಶಿಯವರಿಗೆ ಹಣದ ಸುರಿಮಳೆ ಸುರಿಸಲಿದ್ದಾನೆ ಶುಕ್ರ

ಕನ್ಯಾ ರಾಶಿ: 
ರಾಹು-ಕೇತು ಸಂಚಾರ, ಈ ಎರಡೂ ದುಷ್ಟ ಗ್ರಹಗಳ ಸ್ಥಾನದಲ್ಲಿನ ಬದಲಾವಣೆಯು ಕನ್ಯಾ ರಾಶಿಯವರ ಜೀವನದಲ್ಲಿ ಕೋಲಾಹಲ ಸೃಷ್ಟಿಸಲಿವೆ. ಅದರಲ್ಲೂ ವ್ಯಾಪಾರಸ್ಥರಿಗೆ ಹಣಕಾಸಿನ ಮುಗ್ಗಟ್ಟು ಎದುರಾಗಲಿದ್ದು ಇದು ನಿಮ್ಮ ಜೀವನದಲ್ಲಿ ಹಲವು ತಿರುವುಗಳನ್ನು ತರಬಹುದು. ಆದರೆ, ಎಲ್ಲವನ್ನೂ ತಾಳ್ಮೆಯಿಂದ ಎದುರಿಸಿ. ಕೋಪವನ್ನು ನಿಯಂತ್ರಿಸದಿದ್ದರೆ ಸಮಸ್ಯೆಗಳು ಉಲ್ಬಣಗೊಳ್ಳಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News