Rahu Ketu Transit 2023: ಇನ್ನು 96 ಗಂಟೆಗಳಲ್ಲಿ ಈ ರಾಶಿಯವರಿಗೆ ಆರಂಭವಾಗಲಿದೆ ಗೋಲ್ಡನ್ ಟೈಮ್

Rahu Ketu Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ ಕ್ರೂರ, ಪಾಪ ಗ್ರಹಗಳು ಎಂತಲೇ ಬಣ್ಣಿಸಲ್ಪಡುವ ರಾಹು-ಕೇತು ಸಂಚಾರದಲ್ಲಿ ಬದಲಾವಣೆ ಆದಾಗಲೆಲ್ಲಾ ಸಕಲ ಜೀವರಾಶಿಗಳ ಮೇಲೆ ಅದರ ಶುಭ-ಅಶುಭ ಪರಿಣಾಮಗಳು ಕಂಡು ಬರುತ್ತದೆ. ಇದೀಗ, ಇನ್ನೂ ನಾಲ್ಕು ದಿನಗಳಲ್ಲಿ ರಾಹು-ಕೇತುಗಳು ತಮ್ಮ ರಾಶಿಚಕ್ರವನ್ನು ಬದಲಾಯಿಸಲಿವೆ. 

Written by - Yashaswini V | Last Updated : Oct 26, 2023, 10:57 AM IST
  • ದೀಪಾವಳಿಗೂ ಮೊದಲು 30ನೇ ಅಕ್ಟೋಬರ್ 2023 ರಂದು ಈ ಎರಡೂ ಕ್ರೂರ ಗ್ರಹಗಳ ರಾಶಿ ಬದಲಾವಣೆ
  • ಮೇಷ ರಾಶಿಯನ್ನು ತೊರೆದು ಮೀನ ರಾಶಿಯನ್ನು ಪ್ರವೇಶಿಸಲಿರುವ ರಾಹು
  • ಕೇತು ತುಲಾ ರಾಶಿಯನ್ನು ಬಿಟ್ಟು ಕನ್ಯಾರಾಶಿಗೆ ಪ್ರವೇಶಿಸಲಿದ್ದಾನೆ.
Rahu Ketu Transit 2023: ಇನ್ನು 96 ಗಂಟೆಗಳಲ್ಲಿ ಈ ರಾಶಿಯವರಿಗೆ ಆರಂಭವಾಗಲಿದೆ ಗೋಲ್ಡನ್ ಟೈಮ್  title=

Rahu Ketu Gochar: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ನೆರಳು ಗ್ರಹಗಳು, ಪಾಪ-ಕ್ರೂರ ಗ್ರಹಗಳು ಎಂತಲೇ ಕರೆಯಲ್ಪಡುವ ರಾಹು-ಕೇತುಗಳು ಸದಾ ಹಿಮ್ಮುಖವಾಗಿ ಚಲಿಸುವ ಗ್ರಹಗಳು. ಮಾತ್ರವಲ್ಲ, ನವಗ್ರಹಗಳಲ್ಲಿ ಶನಿ ದೇವನನ್ನು ಬಿಟ್ಟರೆ ಅತಿ ನಿಧಾನವಾಗಿ ಚಲಿಸುವ ಗ್ರಹಗಳು. ರಾಹು-ಕೇತುಗಳು ಪ್ರತಿ ಒಂದೂವರೆ ವರ್ಷಗಳಲ್ಲಿ ಒಮ್ಮೆ ಎಂದರೆ 18 ತಿಂಗಳುಗಳಲ್ಲಿ ರಾಶಿಚಕ್ರ ಚಿಹ್ನೆಗಳನ್ನು ಬದಲಾಯಿಸುತ್ತವೆ. 

2023ರಲ್ಲಿ ರಾಹು-ಕೇತು ಗ್ರಹಗಳು ರಾಶಿ ಪರಿವರ್ತನೆ ಹೊಂದಲಿವೆ. 30ನೇ ಅಕ್ಟೋಬರ್ 2023 ರಂದು ರಾಹು-ಕೇತು ತಮ್ಮ ರಾಶಿಚಕ್ರವನ್ನು ಬದಲಾಯಿಸಲಿದ್ದಾರೆ. ಈ ಸಮಯದಲ್ಲಿ ರಾಹು ಮೇಷ ರಾಶಿಯನ್ನು ತೊರೆದು ಮೀನ ರಾಶಿಯನ್ನು ಪ್ರವೇಶಿಸಿದರೆ, ಕೇತು ತುಲಾ ರಾಶಿಯನ್ನು ಬಿಟ್ಟು ಕನ್ಯಾರಾಶಿಗೆ ಪ್ರವೇಶಿಸಲಿದ್ದಾನೆ. ದೀಪಾವಳಿಗೂ ಮೊದಲು ಈ ಎರಡೂ ಕ್ರೂರ ಗ್ರಹಗಳ ರಾಶಿ ಬದಲಾವಣೆಯು ಎಲ್ಲಾ ರಾಶಿಯ ಜನರ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಆದಾಗ್ಯೂ, ಈ ಸಮಯವನ್ನು ಮೂರು ರಾಶಿಯವರಿಗೆ ಸುವರ್ಣ ಸಮಯ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ- Chandra Grahan: ಇನ್ನೆರಡು ದಿನದಲ್ಲಿ ಚಂದ್ರಗ್ರಹಣ, ಈ ವಸ್ತುಗಳನ್ನು ದಾನ ಮಾಡಿದರೆ ಶ್ರೀಮಂತರಾಗುವ ಯೋಗ

ಅಕ್ಟೋಬರ್ 30ರಿಂದ ಮುಂದಿನ ಒಂದೂವರೆ ವರ್ಷಗಳ ಕಾಲ ಈ ರಾಶಿಯವರಿಗೆ ಸುವರ್ಣ ಕಾಲ: ಪ್ರತಿ ಕೆಲಸದಲ್ಲಿ ಯಶಸ್ಸು, ಕೈತುಂಬಾ ಹಣ: 
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ದೀಪಾವಳಿ ಹಬ್ಬಕ್ಕೂ ಮೊದಲು ತಮ್ಮ ರಾಶಿಚಕ್ರವನ್ನು ಬದಲಾಯಿಸಲಿರುವ ರಾಹು-ಕೇತು ಗ್ರಹಗಳು ಮೂರು ರಾಶಿಯವರ ಜೀವನದಲ್ಲಿ ಭಾಗ್ಯದ ಜ್ಯೋತಿಯನ್ನು ಬೆಳಗಿಸಲಿದ್ದು, ಪ್ರತಿ ಕೆಲಸದಲ್ಲೂ ಯಶಸ್ಸಿನ ಜೊತೆಗೆ ಕೈತುಂಬಾ ಹಣವನ್ನು ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವೆಂದರೆ...  

ಮೇಷ ರಾಶಿ: 
ರಾಹು-ಕೇತು ರಾಶಿ ಪರಿವರ್ತನೆಯು ಮೇಷ ರಾಶಿಯವರಿಗೆ ಮಂಗಳಕರ ಎಂದು ಸಾಬೀತುಪಡಿಸಲಿದೆ. ಮುಂದಿನ ಒಂದೂವರೆ ವರ್ಷಗಳ ಕಾಲ ಮೇಷ ರಾಶಿಯವರಿಗೆ ಉತ್ತಮ ಆರೋಗ್ಯ ಭಾಗ್ಯ ಇರಲಿದೆ. ಇದರೊಂದಿಗೆ, ನಿಮ್ಮ ದೀರ್ಘಕಾಲದ ಸಮಸ್ಯೆಗಳಿಂದ ಪರಿಹಾರ ದೊರೆತು, ಜೀವನದಲ್ಲಿ ಸುಖ-ಶಾಂತಿಯನ್ನು ಅನುಭವಿಸಲಿದ್ದೀರಿ. ಹಣಕಾಸಿನ ಸ್ಥಿತಿಯೂ ಸುಧಾರಿಸಲಿದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ- Rahu Ketu Upay: ರಾಹು-ಕೇತು ದೋಷದಿಂದ ಮುಕ್ತಿಗಾಗಿ ಈ ಕೆಲಸ ಮಾಡಿ

ವೃಷಭ ರಾಶಿ: 
ರಾಹು ಮತ್ತು ಕೇತು ಗ್ರಹಗಳ ರಾಶಿಚಕ್ರ ಬದಲಾವಣೆಯು ವೃಷಭ ರಾಶಿಯ ಜನರಿಗೆ ಕೂಡ ಸುವರ್ಣ ಸಮಯ ಎಂದು ಸಾಬೀತು ಪಡಿಸಲಿದೆ. ಈ ಸಮಯದಲ್ಲಿ, ನಿಮ್ಮ ಪ್ರತಿ ಕೆಲಸದಲ್ಲೂ ಅದೃಷ್ಟ ನಿಮ್ಮ ಜೊತೆಗಿರಲಿದೆ. ಕಾಲಕಾಲಕ್ಕೆ ದಿಢೀರ್ ಧನಲಾಭವು ನಿಮ್ಮ ಹಣಕಾಸಿನ ಸ್ಥಿತಿಯನ್ನು ಉತ್ತಮಗೊಳಿಸಲು ಸಹಕಾರಿ ಆಗಲಿದೆ. ವಿದೇಶಿ ವ್ಯವಹಾರದಲ್ಲಿ ಪಾಲ್ಗೊಂಡಿರುವವರು ಉತ್ತಮ ಲಾಭವನ್ನು ಕಾಣಬಹುದು.  ಇದಲ್ಲದೆ, ನಿಮ್ಮ ಪೂರ್ವಜರಾ ಆಸ್ತಿಯಿಂದಲೂ ಲಾಭವಾಗಲಿದೆ. 

ಕರ್ಕಾಟಕ ರಾಶಿ: 
ದೀಪಾವಳಿಗೂ ಮೊದಲು ರಾಹು-ಕೇತು ಸಂಚಾರವು ಕರ್ಕಾಟಕ ರಾಶಿಯವರಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಇದರ ಧನಾತ್ಮಕ ಪರಿಣಾಮ ನಿಮ್ಮ ಕೆಲಸ ಕಾರ್ಯಗಳಲ್ಲಿ ಕಂಡು ಬರಲಿದ್ದು ಪ್ರಗತಿಯ ಹೊಸ ಹಾದಿಗಳು ತೆರೆದುಕೊಳ್ಳುತ್ತವೆ. ವೃತ್ತಿ ರಂಗದಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆತು, ಕೀರ್ತಿ ಹೆಚ್ಚಾಗಲಿದೆ. ಬೇರೆಡೆ ಸಿಲುಕಿರುವ ಹಣ ಕೈಸೇರಲಿದೆ. ಇದರೊಂದಿಗೆ ಹಣಕಾಸಿನ ಹರಿವು ಹೆಚ್ಚಾಗಿ ಐಷಾರಾಮಿ ಜೀವನವನ್ನು ಆನಂದಿಸುವಿರಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News