ದಿನಭವಿಷ್ಯ 25-10-2024: ಶುಕ್ರವಾರ, ಪುಷ್ಯ ನಕ್ಷತ್ರ, ಶುಭ ಯೋಗ: ಈ ರಾಶಿಯವರಿಗೆ ಬಂಪರ್ ಧನಲಾಭ

Today Horoscope 25th October 2024: ಈ ದಿನ ಶುಕ್ರವಾರ, ಪುಷ್ಯ ನಕ್ಷತ್ರ, ಶುಭ ಯೋಗ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Oct 25, 2024, 07:40 AM IST
  • ನವಮಿ ತಿಥಿಯ ಈ ದಿನ ಶುಕ್ರವಾರ
  • ಪುಷ್ಯ ನಕ್ಷತ್ರ, ಶುಭ ಯೋಗ, ತೈತಿಲ ಕರಣ.
  • ಎಲ್ಲಾ 12 ರಾಶಿಯವರಿಗೆ ಇಂದಿನ ಭವಿಷ್ಯ ಹೇಗಿದೆ ತಿಳಿಯಿರಿ.
ದಿನಭವಿಷ್ಯ 25-10-2024:  ಶುಕ್ರವಾರ, ಪುಷ್ಯ ನಕ್ಷತ್ರ, ಶುಭ ಯೋಗ: ಈ ರಾಶಿಯವರಿಗೆ ಬಂಪರ್ ಧನಲಾಭ  title=

Shukravara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಅಶ್ವಯುಜ ಮಾಸ, ಕೃಷ್ಣ ಪಕ್ಷ, ನವಮಿ ತಿಥಿಯ ಈ ದಿನ ಶುಕ್ರವಾರ, ಪುಷ್ಯ ನಕ್ಷತ್ರ, ಶುಭ ಯೋಗ, ತೈತಿಲ ಕರಣ. ಎಲ್ಲಾ 12 ರಾಶಿಯವರಿಗೆ ಇಂದಿನ ಭವಿಷ್ಯ ಹೇಗಿದೆ ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ಇಂದು ಕೆಲಸ ಕಾರ್ಯಗಳಲ್ಲಿ ವಿಳಂಬವು ನಿಮ್ಮ ತಾಳ್ಮೆಯನ್ನು ಪರೀಕ್ಷಿಸಬಹುದು. ನಿಮ್ಮ ಯೋಜನೆಯಂತೆ ಯಾವುದೇ ಕೆಲಸಗಳು ನಡೆಯದೆ ಇರುವುದರಿಂದ ಮನಸ್ಸು ಗೊಂದಲಗೊಳ್ಳುವ ಸಾಧ್ಯತೆ ಇದೆ. ಆದರೆ, ಭರವಸೆಯನ್ನು ಕಳೆದುಕೊಳ್ಳಬೇಡಿ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ನಿಮ್ಮ ಪ್ರೀತಿಪಾತ್ರರೊಂದಿಗೆ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಉತ್ತಮ ದಿನ. ಯಾವುದೇ ವಿಚಾರವಿರಲಿ ಮನಬಿಚ್ಚಿ ಮಾತನಾಡಲು ಹಿಂಜರಿಯಬೇಡಿ. ಮುಕ್ತ ಸಂವಾದದಲ್ಲಿ ತೊಡಗುವುದರಿಂದ ಸಂಪರ್ಕಗಳು ಹೆಚ್ಚಾಗುತ್ತವೆ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ನಿಮ್ಮ ಸ್ನೇಹಿತರು ಅಥವಾ ಸಹೋದ್ಯೋಗಿಗಳು ನಿಮ್ಮ ಕಷ್ಟಕ್ಕೆ ಕರಗಬಹುದು. ಸವಾಲಿನ ಪರಿಸ್ಥಿತಿಗಳಲ್ಲಿ ನಿಮ್ಮ ಚಾತುರ್ಯದಿಂದ ಎಲ್ಲವನ್ನೂ ತಹಬದಿಗೆ ತರಲು ಯಶಸ್ವಿಯಾಗುವಿರಿ. ಸಂಗಾತಿಯೊಂದಿಗೆ ರೊಮ್ಯಾಂಟಿಕ್ ಕ್ಷಣಗಳನ್ನು ಆನಂದಿಸುವಿರಿ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ನಿಮ್ಮ ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿ ನಡೆದುಕೊಳ್ಳಿ. ಇಲ್ಲದಿದ್ದರೆ, ಇದು ಬಹು ದೊಡ್ಡ ಸಮಸ್ಯೆಯಾಗಿ ನಿಮ್ಮನ್ನು ಕಾಡಬಹುದು. ನಂಬಿಕೆಗೆ ಪೆಟ್ಟು ಬೀಳದಂತೆ ನಡೆದುಕೊಳ್ಳಿ. ಅನಿರೀಕ್ಷಿತ ಧನಾಗಮನವು ದಿನವನ್ನು ಬೆಳಗಲಿದೆ. 

ಇದನ್ನೂ ಓದಿ- ದೀಪಾವಳಿಯಲ್ಲಿ ಈ ರಾಶಿಯವರ ಬಾಳು ಬೆಳಗಳಿದ್ದಾನೆ 'ರಾಹು': ಲಕ್ಷ್ಮಿ ದಯೆಯಿಂದ ಹರಿದು ಬರಲಿದೆ ಅಪಾರ ಹಣ

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಹಳೆಯ ಪ್ರಣಯ ವ್ಯಾಮೋಹ ಮರುಕಳಿಸಬಹುದು. ಇದು ನಿಮ್ಮ ತಿಳಿಯಾದ ಭಾವನೆಗಳನ್ನು ಕದಡುವ ಸಾಧ್ಯತೆ ಇದೆ. ಆದರೆ, ಬೇರೆಯವರು ನಿಮ್ಮ ಭಾವನೆಗಳೊಂದಿಗೆ ಆಟವಾಡಲು ಬಿಡಬೇಡಿ. ಸ್ವಂತ ಅಗತ್ಯತೆಗಳಿಗೆ ಪ್ರಾಮುಖ್ಯತೆ ನೀಡಿ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಇಂದು ಹತಾಶೆಯ ದಿನವನ್ನು ಅನುಭವಿಸುವಿರಿ. ಕೆಲವು ಸಮಸ್ಯೆಗಳನ್ನು ತಕ್ಷಣ ಬಗೆಹರಿಸಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಸ್ವಲ್ಪ ಸಮಯಾವಕಾಶವನ್ನು ನೀಡಿ. ಆತ್ಮಾವಲೋಕನಕ್ಕೆ ಪರಿಪೂರ್ಣವಾದ ದಿನ ಇದಾಗಿದೆ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಯಾವುದೇ ವ್ಯಕ್ತಿಯ ಬಗ್ಗೆ ನಿಮ್ಮದೇ ಅಭಿಪ್ರಾಯಕ್ಕೆ ಬರಬೇಡಿ. ಇದು ಪರಿಸ್ಥಿತಿಯನ್ನು ಕೈ ಮೀರುವಂತೆ ಮಾಡಬಹುದು. ವೈಯಕ್ತಿಕ ಬದುಕಿನಲ್ಲಿ ಕುಳಿತು ಮಾತನಾಡುವುದರಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಇದಕ್ಕಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಮೇಲಾಧಿಕಾರಿಗಳ ಅವಾಸ್ತವಿಕ ನಿರೀಕ್ಷೆಗಳು ನಿಮ್ಮ ಒತ್ತಡವನ್ನು ಹೆಚ್ಚಿಸಬಹುದು. ಕುಟುಂಬದಲ್ಲೂ ಅನಗತ್ಯ ವಾದ-ವಿವಾದಗಳು ಘರ್ಷಣೆಗೆ ಕಾರಣವಾಗಬಹುದು. ಆದರೂ, ಅದೃಷ್ಟದ ಬೆಂಬಲ ಇರುವುದರಿಂದ ಎಲ್ಲವನ್ನೂ ಸಮರ್ಥವಾಗಿಯೇ ನಿಭಾಯಿಸುವಿರಿ. 

ಇದನ್ನೂ ಓದಿ- ಬೆಳ್ಳಿ ಉಂಗುರ ಧರಿಸಿದರಷ್ಟೇ ಈ  ರಾಶಿಯವರಿಗೆ ಜೀವನದಲ್ಲಿ ಪ್ರಗತಿ, ಧನಲಾಭ, ಭಾರೀ ಅದೃಷ್ಟ 

ಧನು ರಾಶಿಯವರ ಭವಿಷ್ಯ (Sagittarius Horoscope):  
ನೀವಿಂದು ಕೆಲಸ ಕಾರ್ಯಗಳಲ್ಲಿ ಅಪಾರ ಯಶಸ್ಸನ್ನು ಗಳಿಸುವಿರಿ. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಯಾವುದೇ ಸಂದರ್ಭದಲ್ಲಿ ಸತ್ಯವನ್ನು ಮರೆಮಾಚಲು ಬಿಡಬೇಡಿ. ಇದು ನಿಮ್ಮ ವ್ಯಕ್ತಿತ್ವಕ್ಕೆ ಕಳಂಕ ತರಬಹುದು. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ವ್ಯಾಪಾರ-ವ್ಯವಹಾರದಲ್ಲಿ ಉತ್ತಮ ಅವಕಾಶಗಳು ನಿಮಗಾಗಿ ಕಾದಿವೆ. ಜೀವನದಲ್ಲಿ ಹೊಸ ಆಯಾಮಕ್ಕಾಗಿ ನಿಮ್ಮನ್ನು ನೀವು ಸಿದ್ದರಾಗಿಸಿ. ಸಂಘಟಿತ ವ್ಯವಹಾರಸ್ಥರೊಂದಿಗೆ ವ್ಯವಹಾರಿಸುವಾಗ ಸಂಪೂರ್ಣ ತಯಾರಿ ಅಗತ್ಯವಾಗಿರುತ್ತದೆ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಇಂದು ನಿಮ್ಮ ಮಾತೇ ನಿಮಗೆ ಬಂಡವಾಳವಾಗಿದೆ. ಕೆಲವೊಂದು ಸಂದರ್ಭದಲ್ಲಿ ಸಂವಹನವು ನಿಮಗೆ ಸವಾಲೆನಿಸಬಹುದು. ಸಣ್ಣಪುಟ್ಟ ಅವಘಡಗಳು ಸಂಭವಿಸಬಹುದಾದ್ದರಿಂದ ಜಾಗರೂಕರಾಗಿರಿ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಇಂದು ನಿಮ್ಮ ಜೀವನದ ಪ್ರಮುಖ ವಿಚಾರಗಳಿಗೆ ಸಂಬಂಧಿಸಿದಂತೆ ದಿಢೀರ್ ನಿರ್ಧಾರಗಳನ್ನು ಕೈಗೊಳ್ಳಬೇಕಾಗಬಹುದು. ಆದರೆ, ಸಂದರ್ಭದಲ್ಲಿ ಭಾವನಾತ್ಮಕವಾಗಿ ಯೋಚಿಸದೆ ಸರಿ-ತಪ್ಪುಗಳನ್ನು ಅಳೆದು ತೂಗಿ ನಿರ್ಧಾರ ಕೈಗೊಳ್ಳಿ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News