August Grah Gochar: ಈ 3 ರಾಶಿಯ ಜನರ ಜೀವನದಲ್ಲಿ ದೊಡ್ಡ ಬದಲಾವಣೆ ಸಾಧ್ಯತೆ

ಗ್ರಹಗಳ ರಾಶಿ ಪರಿವರ್ತನೆ ಪರಿಣಾಮ:  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಚಲನೆಯು ದ್ವಾದಶ ರಾಶಿಗಳ ಮೇಲೆ ನೇರ ಪರಿಣಾಮ ಬೀರುತ್ತವೆ. ಮುಂದಿನ ತಿಂಗಳಲ್ಲಿ ಅಂದರೆ ಆಗಸ್ಟ್ ತಿಂಗಳಲ್ಲಿ ಕೆಲವು ಪ್ರಮುಖ ಗ್ರಹಗಳು ರಾಶಿ ಪರಿವರ್ತನೆ ಮಾಡಲಿದ್ದು ಈ ಬದಲಾವಣೆಯು ಮೂರು ರಾಶಿಚಕ್ರ ಚಿಹ್ನೆಗಳ ಜೀವನದಲ್ಲಿ ದೊಡ್ಡ ಪರಿಣಾಮ ಉಂಟುಮಾಡಲಿದೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ...

Written by - Yashaswini V | Last Updated : Jul 11, 2022, 12:37 PM IST
  • ಆಗಸ್ಟ್ ತಿಂಗಳಲ್ಲಿ ಮೂರು ಪ್ರಮುಖ ಗ್ರಹಗಳು ರಾಶಿಚಕ್ರವನ್ನು ಬದಲಾಯಿಸಲಿವೆ.
  • ಈ ತಿಂಗಳು ಬುಧ, ಶುಕ್ರ, ಸೂರ್ಯರು ರಾಶಿ ಬದಲಾವಣೆ ಮಾಡಲಿದ್ದಾರೆ.
  • ಈ ಮೂರು ಗ್ರಹಗಳು ಮೂರು ರಾಶಿಯವರ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಲಿವೆ
August Grah Gochar: ಈ 3 ರಾಶಿಯ  ಜನರ ಜೀವನದಲ್ಲಿ ದೊಡ್ಡ ಬದಲಾವಣೆ ಸಾಧ್ಯತೆ  title=
Planet Transit August

ಆಗಸ್ಟ್ ಮಾಸದ ಗ್ರಹ ಗೋಚಾರ: ಪ್ರತಿ ಗ್ರಹಗಳು ನಿರ್ದಿಷ್ಟ ಕಾಲಮಾನದಲ್ಲಿ ತಮ್ಮ ಸ್ಥಾನವನ್ನು ಬದಲಾಯಿಸುತ್ತವೆ. ಅದರ ಪರಿಣಾಮವು ದ್ವಾದಶ ರಾಶಿಗಳ ಮೇಲೆ ಕಂಡು ಬರುತ್ತದೆ. ಮುಂದಿನ ತಿಂಗಳಲ್ಲಿ ಅಂದರೆ ಆಗಸ್ಟ್ ತಿಂಗಳಲ್ಲಿ ಕೆಲವು ಪ್ರಮುಖ ಗ್ರಹಗಳು ರಾಶಿ ಪರಿವರ್ತನೆ ಮಾಡಲಿವೆ. ಅದರ ಪರಿಣಾಮವು ಎಲ್ಲಾ 12 ರಾಶಿಗಳ ಮೇಲೆ ಕಂಡುಬರುತ್ತದೆ. ಆದರೂ, ಮೂರು ರಾಶಿಯವರಿಗೆ ಈ ಗ್ರಹಗಳ ಬದಲಾವಣೆಯು ವಿಶೇಷ ಪರಿಣಾಮ ಬೀರಲಿವೆ ಎಂದು ಹೇಳಲಾಗುತ್ತಿದೆ. 

ಮೊದಲಿಗೆ 2022 ರ  ಆಗಸ್ಟ್‌ 9ರಂದು ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗಿರುವ ಬುಧ ಗ್ರಹವು ಸಿಂಹ ರಾಶಿಯನ್ನು ಪ್ರವೇಶಿಸಲಿದೆ. ಇದಾದ ಮೂರು ದಿನಗಳ ನಂತರ ಆಗಸ್ಟ್ 11 ರ ರಕ್ಷಾ ಬಂಧನ ದಿನದಂದು ಎರಡನೇ ಸಂಕ್ರಮಣ ನಡೆಯಲಿದೆ. ಈ ದಿನದಂದು ಶುಕ್ರ ಗ್ರಹವು ಕನ್ಯಾರಾಶಿಗೆ ಪ್ರವೇಶಿಸಲಿದೆ. ನಂತರ ಆಗಸ್ಟ್ 17ರಂದು ತಿಂಗಳ ಮೂರನೇ ಮತ್ತು ಕೊನೆಯ ಸಂಕ್ರಮಣ ಸಂಭವಿಸಲಿದೆ. ಈ ದಿನದಂದು ಸೂರ್ಯನು ಸಿಂಹ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಸಮಯದಲ್ಲಿ ಸಿಂಹ ರಾಶಿಯಲ್ಲಿ ಬುಧಾದಿತ್ಯ ಯೋಗವೂ ನಿರ್ಮಾಣವಾಗಲಿದೆ. ಈ ಗ್ರಹಗಳ ರಾಶಿ ಬದಲಾವಣೆಯು ಮೂರು ರಾಶಿಯವರ ಮೇಲೆ ಹೆಚ್ಚು ಪ್ರಭಾವ ಬೀರಲಿವೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ...

ಇದನ್ನೂ ಓದಿ- Lucky Zodiac Signs: ರಾಜಯೋಗದೊಂದಿಗೆ ಜನಿಸುತ್ತಾರಂತೆ ಈ 3 ರಾಶಿಯ ಜನ

ಆಗಸ್ಟ್‌ನಲ್ಲಿ ಪ್ರಮುಖ ಗ್ರಹಗಳ ಸಂಚಾರ: ಮೂರು ರಾಶಿಯವರಿಗೆ ವಿಶೇಷ ಪರಿಣಾಮ :-
ಮಿಥುನ ರಾಶಿ :-

ಆಗಸ್ಟ್ ತಿಂಗಳಲ್ಲಿ ಬುಧ, ಶುಕ್ರ, ಸೂರ್ಯ ಗ್ರಹದ ರಾಶಿ ಬದಲಾವಣೆಯು ಮಿಥುನ ರಾಶಿಯವರ ಜೀವನದ ಮೇಲೆ ವಿಶೇಷ ಪರಿಣಾಮವನ್ನು ಬೀರಲಿದೆ. ಈ ರಾಶಿಯವರ ಜೀವನದಲ್ಲಿ ಹಲವು ಧನಾತ್ಮಕ ಪರಿಣಾಮಗಳು ಕಂಡು ಬರುತ್ತವೆ. ಇದೇ ವೇಳೆಗೆ ಆಗಸ್ಟ್ ನಲ್ಲಿ ಬುಧ, ಶುಕ್ರ, ಸೂರ್ಯನ ಸಂಕ್ರಮಣದಿಂದಾಗಿ ಈ ರಾಶಿಯವರಿಗೆ ದಿಢೀರ್ ಧನಲಾಭವಾಗುತ್ತದೆ. ಕೆಲಸದ ಸ್ಥಳದಲ್ಲಿ ಹಲವು ಶತ್ರುಗಳು ನಿಮಗೆ ಹಾನಿ ಮಾಡಲು ಪ್ರಯತ್ನಿಸುತ್ತಾರೆ. ಆದರೂ ಅವರ ಪ್ರಯತ್ನಗಳು ವಿಫಲಗೊಳ್ಳುತ್ತವೆ. ಅಷ್ಟೇ ಅಲ್ಲ ಸಮಾಜದಲ್ಲಿ ಪ್ರತಿಷ್ಠೆಯೂ ಹೆಚ್ಚುತ್ತದೆ ಮತ್ತು ಕುಟುಂಬ ಸದಸ್ಯರೊಂದಿಗೆ ಉತ್ತಮ ಹೊಂದಾಣಿಕೆ ಇರುತ್ತದೆ. 

ಸಿಂಹ ರಾಶಿ:-
ಸಿಂಹ ರಾಶಿಯ ಜನರು ಆಗಸ್ಟ್‌ನಲ್ಲಿ ಎಲ್ಲಾ ಮೂರು ಗ್ರಹಗಳ ಸಂಚಾರದಿಂದ ಪ್ರಯೋಜನ ಪಡೆಯಲಿದ್ದಾರೆ. ಈ ಸಮಯದಲ್ಲಿ, ಅವರ ಉತ್ಸಾಹವು ಹೆಚ್ಚಾಗುತ್ತದೆ. ಆತ್ಮವಿಶ್ವಾಸದಿಂದ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಅಷ್ಟೇ ಅಲ್ಲ ಈ ಬಾರಿ ವ್ಯಾಪಾರಸ್ಥರಿಗೂ ಅನುಕೂಲವಾಗಲಿದೆ. ಈ ಸಮಯದಲ್ಲಿ, ಸಿಂಹ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದ್ದು, ನೀವು ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ.

ಇದನ್ನೂ ಓದಿ- Mercury and Sun Conjunction: ಬುಧಾದಿತ್ಯ ಯೋಗದಿಂದ ಈ ಮೂರು ರಾಶಿಯವರಿಗೆ ಸಿಗಲಿದೆ ಮಹಾಲಾಭ

ತುಲಾ ರಾಶಿ:-
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಸಂಚಾರವು ಈ ರಾಶಿಚಕ್ರದ ಉದ್ಯೋಗಿಗಳಿಗೆ ಪ್ರಗತಿಯನ್ನು ನೀಡುತ್ತದೆ. ಈ ರಾಶಿಚಕ್ರದ ವ್ಯಾಪಾರಿಗಳು ಈ ಸಂಚಾರದ ಸಮಯದಲ್ಲಿ ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಸೃಜನಾತ್ಮಕ ಆಲೋಚನೆಗಳು ಹೆಚ್ಚಾಗುತ್ತವೆ. ಅದೇ ಸಮಯದಲ್ಲಿ ಸರ್ಕಾರಿ ಉದ್ಯೋಗದಲ್ಲಿರುವ ಈ ರಾಶಿಯವರು ಉನ್ನತ ಅಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗುತ್ತಾರೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News