ಮನೆಯ ಈ ದಿಕ್ಕಿನಲ್ಲಿ ಗಡಿಯಾರವಿದ್ದರೆ ತಪ್ಪಿದ್ದಲ್ಲ ಆರ್ಥಿಕ ಬಿಕ್ಕಟ್ಟು!

Vastu Tips In Kannada: ವಾಸ್ತು ಶಾಸ್ತ್ರದ ಪ್ರಕಾರ, ತಪ್ಪಾದ ದಿಕ್ಕಿನಲ್ಲಿ ಗಡಿಯಾರ ಹಾಕುವುದರಿಂದ ಅದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ. ಇದರಿಂದಾಗಿ ಮನೆಯಲ್ಲಿ ನಾನಾ ರೀತಿಯ ಕಲಹ ಸೃಷ್ಟಿಯಾಗುತ್ತದೆ ಎಂತಲೂ ನಂಬಲಾಗಿದೆ.   ವಾಸ್ತು ತಜ್ಞರ ಪ್ರಕಾರ, ಮನೆಯ ದಕ್ಷಿಣ ದಿಕ್ಕಿನಲ್ಲಿ ಅಪ್ಪಿತಪ್ಪಿಯೂ ಗಡಿಯಾರವನ್ನು ಹಾಕಲೇಬಾರದು ಎಂದು ಹೇಳಲಾಗುತ್ತದೆ. 

Written by - Yashaswini V | Last Updated : Jan 19, 2024, 11:01 AM IST
  • ಧಾರ್ಮಿಕ ನಂಬಿಕೆಗಳ ಪ್ರಕಾರ, ದಕ್ಷಿಣ ದಿಕ್ಕನ್ನು ಯಮನ ದಿಕ್ಕು ಎಂದು ಪರಿಗಣಿಸಲಾಗುತ್ತದೆ.
  • ಹಾಗಾಗಿ, ಮನೆಯಲ್ಲಾಗಲಿ ಅಥವಾ ಕಚೇರಿಯಲ್ಲಾಗಲಿ ದಕ್ಷಿಣ ದಿಕ್ಕಿನಲ್ಲಿ ಗಡಿಯಾರವನ್ನು ಇಡುವುದರಿಂದ ಇದು ವ್ಯಕ್ತಿಯ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ.
  • ವ್ಯಾಪಾರಸ್ಥರು ಅಂಗಡಿಯಲ್ಲಿ ದಕ್ಷಿಣ ದಿಕ್ಕಿನಲ್ಲಿ ಗಡಿಯಾರವನ್ನು ನೇತು ಹಾಕುವುದರಿಂದ ವ್ಯವಹಾರದಲ್ಲಿ ಭಾರೀ ನಷ್ಟವನ್ನು ಎದುರಿಸಬೇಕಾಗುತ್ತದೆ
ಮನೆಯ ಈ ದಿಕ್ಕಿನಲ್ಲಿ ಗಡಿಯಾರವಿದ್ದರೆ ತಪ್ಪಿದ್ದಲ್ಲ ಆರ್ಥಿಕ ಬಿಕ್ಕಟ್ಟು! title=

Vastu Tips For Clock: ಗಡಿಯಾರವನ್ನು ಗೋಡೆಯ ಮೇಲೆ ನೇತು ಹಾಕುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮುಖ್ಯ. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಗಡಿಯಾರವೂ ಸಹ ನಮ್ಮ ಅದೃಷ್ಟದ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಹಾಗಾಗಿ, ನಾವು ಮನೆಯಲ್ಲಿ ಗಡಿಯಾರವನ್ನು ಹಾಕುವ ನಿಯಮಗಳ ಬಗ್ಗೆ ತಿಳಿದಿರುವುದು ಬಹಳ ಮುಖ್ಯ. 

ಗಡಿಯಾರವು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈಗಂತೂ ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್ ಫೋನ್.. ವಾಚ್‌ ಇದ್ದೇ ಇರುತ್ತದೆ. ಹಾಗಾಗಿ, ಟೈಮ್ ನೋಡಬೇಕೆಂದಾಗಲೆಲ್ಲ ಅವುಗಳನ್ನೇ ನೋಡಿ ಸಮಯ ತಿಳಿಯುತ್ತಾರೆ. ಆದಾಗ್ಯೂ, ಮನೆಯಲ್ಲಿ ಗಡಿಯಾರವನ್ನು ಬಳಸುವುದು ಕೂಡ ವಾಡಿಕೆಯಾಗಿದೆ. ಈಗಲೂ ಬಹುತೇಕ ಜನರು ಗೋಡೆಗೆ ನೇತು ಹಾಕುವ ಗಡಿಯಾರವನ್ನೇ ಬಳಸುತ್ತಾರೆ. ಮೊದಲೇ ತಿಳಿಸಿದಂತೆ ನಾವು ಮನೆಯ ಗೋಡೆಯ ಮೇಲೆ ನೇತು ಹಾಕುವ ಗಡಿಯಾರ ನಮ್ಮ ಅದೃಷ್ಟಕ್ಕೂ ಸಂಬಂಧಿಸಿದೆ. ಹಾಗಾದರೆ ವಾಸ್ತು ಪ್ರಕಾರ ಯಾವ ದಿಕ್ಕಿಗೆ ಗಡಿಯಾರ ಇರುವುದು ಒಳ್ಳೆಯದು ಎಂದು ತಿಳಿಯೋಣ... 

ವಾಸ್ತು ಪ್ರಕಾರ, ಈ ದಿಕ್ಕಿನಲ್ಲಿ ಇರಲೇಬಾರದು ಗಡಿಯಾರ!
ವಾಸ್ತು ಶಾಸ್ತ್ರದ ಪ್ರಕಾರ, ತಪ್ಪಾದ ದಿಕ್ಕಿನಲ್ಲಿ ಗಡಿಯಾರ ಹಾಕುವುದರಿಂದ ಅದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ. ಇದರಿಂದಾಗಿ ಮನೆಯಲ್ಲಿ ನಾನಾ ರೀತಿಯ ಕಲಹ ಸೃಷ್ಟಿಯಾಗುತ್ತದೆ ಎಂತಲೂ ನಂಬಲಾಗಿದೆ.   ವಾಸ್ತು ತಜ್ಞರ ಪ್ರಕಾರ, ಮನೆಯ ದಕ್ಷಿಣ ದಿಕ್ಕಿನಲ್ಲಿ ಅಪ್ಪಿತಪ್ಪಿಯೂ ಗಡಿಯಾರವನ್ನು ಹಾಕಲೇಬಾರದು ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- Graha Dosha: ಪ್ರಾಣಿ ಸೇವೆಯಿಂದಲೂ ಸಿಗುತ್ತೆ ಗ್ರಹ ದೋಷದಿಂದ ಮುಕ್ತಿ

ವಾಸ್ತವವಾಗಿ, ಧಾರ್ಮಿಕ ನಂಬಿಕೆಗಳ ಪ್ರಕಾರ,  ದಕ್ಷಿಣ ದಿಕ್ಕನ್ನು ಯಮನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ, ಮನೆಯಲ್ಲಾಗಲಿ ಅಥವಾ ಕಚೇರಿಯಲ್ಲಾಗಲಿ ದಕ್ಷಿಣ ದಿಕ್ಕಿನಲ್ಲಿ ಗಡಿಯಾರವನ್ನು ಇಡುವುದರಿಂದ ಇದು ವ್ಯಕ್ತಿಯ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ. ವ್ಯಾಪಾರಸ್ಥರು ಅಂಗಡಿಯಲ್ಲಿ ದಕ್ಷಿಣ ದಿಕ್ಕಿನಲ್ಲಿ ಗಡಿಯಾರವನ್ನು ನೇತು ಹಾಕುವುದರಿಂದ ವ್ಯವಹಾರದಲ್ಲಿ ಭಾರೀ ನಷ್ಟವನ್ನು ಎದುರಿಸಬೇಕಾಗುತ್ತದೆ ಎನ್ನಲಾಗುವುದು. 

ದಕ್ಷಿಣ ದಿಕ್ಕನ್ನು ಹೊರತುಪಡಿಸಿ, ಮನೆಯ ಮುಖ್ಯ ದ್ವಾರದ ಮೇಲ್ಭಾಗದಲ್ಲಿಯೂ ಗಡಿಯಾರವನ್ನು ಹಾಕಬಾರದು. ವಾಸ್ತು ಪ್ರಕಾರ, ಗಡಿಯಾರವನ್ನು ಮುಖ್ಯ ದ್ವಾರದ ಮೇಲ್ಭಾಗದಲ್ಲಿ ಹಾಕುವುದರಿಂದ ಆ ದ್ವಾರದ ಮೂಲಕ ಹಾದುಹೋಗುವವರ ಜೀವನದ್ಲಲಿ ಒತ್ತಡ ಹೆಚ್ಚಾಗುತ್ತದೆ. ಮಾತ್ರವಲ್ಲ, ಅವರು ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕುವ ಸಾಧ್ಯತೆಯೂ ಹೆಚ್ಚಾಗಬಹುದು. 

ಇದನ್ನೂ ಓದಿ- ಫ್ಲಾಟ್ ಖರೀದಿಸುವಾಗ ಈ 9 ವಿಷಯಗಳನ್ನು ನೆನಪಿನಲ್ಲಿಡಿ..!

ಅಷ್ಟೇ ಅಲ್ಲದೆ, ಮನೆಯಲ್ಲಿ ಯಾವುದೇ ರೀತಿಯ ಉಪಯೋಗಕ್ಕೆ ಬಾರದ ಗಡಿಯಾರಗಳು ಎಂದರೆ ಶೆಲ್ ಖಾಲಿಯಾಗಿ ನಿಂತು ಹೋಗಿರುವ ಗಡಿಯಾರ, ಕೆಟ್ಟಿರುವ ಗಡಿಯಾರಗಳನ್ನು ಕೂಡ ಮನೆಯಲ್ಲಿ ಇಡಬಾರದು. ಇದರಿಂದ ವ್ಯಕ್ತಿಯ ಪ್ರಗತಿ ನಿಲ್ಲುತ್ತದೆ ಎಂದು ಹೇಳಲಾಗುತ್ತದೆ.  

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News