People Born On Ekadashi: ಏಕಾದಶಿಯಂದು ಜನಿಸಿದವರ ಗುಣ, ಸ್ವಭಾವ ಹೇಗಿರುತ್ತೇ ಗೊತ್ತಾ!

People Born On Ekadashi: ಜ್ಯೋತಿಷ್ಯದ ಪ್ರಕಾರ, ವ್ಯಕ್ತಿಯ ಗುಣ ಸ್ವಭಾವವು ಅವರ ಹುಟ್ಟಿದ ದಿನಾಂಕ, ಸಮಯವನ್ನು ಆಧರಿಸಿರುತ್ತದೆ. ಇಂದು ನಾವು ಏಕಾದಶಿ ತಿಥಿಯಂದು ಜನಿಸಿದವರ ಗುಣ ಸ್ವಭಾವದ ಬಗ್ಗೆ ಮಾಹಿತಿ ನೀಡಲಿದ್ದೇವೆ.

Written by - Yashaswini V | Last Updated : Jun 24, 2022, 02:33 PM IST
  • ಹಿಂದೂ ಕ್ಯಾಲೆಂಡರ್ ಪ್ರಕಾರ, ವ್ಯಕ್ತಿಯ ಸ್ವಭಾವ ಮತ್ತು ವ್ಯಕ್ತಿತ್ವವನ್ನು ಸಹ ಜನ್ಮ ದಿನಾಂಕದ ಆಧಾರದ ಮೇಲೆ ತಿಳಿಯಬಹುದು.

    ವ್ಯಕ್ತಿಯ ಜನನದ ಸಮಯದಲ್ಲಿ ಅವನ ದಿನಾಂಕ ಮತ್ತು ನಕ್ಷತ್ರಪುಂಜವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ.
  • ಇದರ ಪರಿಣಾಮವನ್ನು ವ್ಯಕ್ತಿಯ ಸ್ವಭಾವದಲ್ಲಿ ಕಾಣಬಹುದು.
People Born On Ekadashi: ಏಕಾದಶಿಯಂದು ಜನಿಸಿದವರ ಗುಣ, ಸ್ವಭಾವ ಹೇಗಿರುತ್ತೇ ಗೊತ್ತಾ! title=
Ekadashi born people

ಏಕಾದಶಿ ದಿನದಂದು ಜನಿಸಿದವರ ಸ್ವಭಾವ: ಹಿಂದೂ ಧರ್ಮದಲ್ಲಿ, ಮಗು ಜನಿಸಿದ ದಿನ, ಸಮಯ, ಹುಟ್ಟಿದ ಸ್ಥಳದ ಆಧಾರದ ಮೇಲೆ ಅವರ ರಾಶಿ ಚಕ್ರವನ್ನು ತಿಳಿಯಲಾಗುತ್ತದೆ. ಅಷ್ಟು ಮಾತ್ರವಲ್ಲ ಜನ್ಮ ದಿನದ ಆಧಾರದ ಮೇಲೆ ಅವರ ಹೆಸರು ಯಾವ ಅಕ್ಷರದಿಂದ ಇಡಬೇಕು ಎಂಬುದನ್ನೂ ನಿರ್ಧರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ವ್ಯಕ್ತಿಯ ಸ್ವಭಾವ ಮತ್ತು ವ್ಯಕ್ತಿತ್ವವನ್ನು ಸಹ ಜನ್ಮ ದಿನಾಂಕದ ಆಧಾರದ ಮೇಲೆ ತಿಳಿಯಬಹುದು. ವ್ಯಕ್ತಿಯ ಜನನದ ಸಮಯದಲ್ಲಿ ಅವನ ದಿನಾಂಕ ಮತ್ತು ನಕ್ಷತ್ರಪುಂಜವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಇದರ ಪರಿಣಾಮವನ್ನು ವ್ಯಕ್ತಿಯ ಸ್ವಭಾವದಲ್ಲಿ ಕಾಣಬಹುದು. ಇಂದು, ಯೋಗಿನಿ ಏಕಾದಶಿಯ ದಿನದಂದು, ಏಕಾದಶಿಯ ದಿನದಂದು ಜನಿಸಿದವರ ಗುಣ-ಸ್ವಭಾವ ಹೇಗಿರುತ್ತದೆ ಎಂದು ತಿಳಿಯೋಣ...

ಏಕಾದಶಿಯಂದು ಹುಟ್ಟಿದವರ ಸ್ವಭಾವ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏಕಾದಶಿಯಂದು ಹುಟ್ಟಿದವರ ಮನಸ್ಸು ಚಂಚಲವಾಗಿರುತ್ತದೆ. ಮತ್ತು ಈ ಕಾರಣಕ್ಕಾಗಿ, ಅವರು ಯಾವುದೇ ಒಂದು ವಿಷಯದ ಮೇಲೆ ತಮ್ಮ ಗಮನವನ್ನು ಸುಲಭವಾಗಿ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- Mangal Gochar 2022: ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ- ಈ ರಾಶಿಯವರಿಗೆ ಸಂಕಷ್ಟ

ಏಕಾದಶಿಯಂದು ಹುಟ್ಟಿದವರು ಸ್ವಭಾವತಃ ದುರಾಸೆಯವರಲ್ಲ. ಅವರಲ್ಲಿ ಹೆಚ್ಚಿನದನ್ನು ಪಡೆಯುವ ಬಯಕೆ ಇರುವುದಿಲ್ಲ. ತಮಗೆ ಸಿಕ್ಕಿದ್ದರಲ್ಲಿ ಅವರು ತೃಪ್ತರಾಗುತ್ತಾರೆ. 

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಜನರು ನ್ಯಾಯದ ಹಾದಿಯಲ್ಲಿ ನಡೆಯಲು ಇಷ್ಟಪಡುತ್ತಾರೆ. ಅದೇ ಸಮಯದಲ್ಲಿ, ಇತರರಿಂದ ಅದೇ ನಿರೀಕ್ಷಿಸುತ್ತಾರೆ.

ಏಕಾದಶಿ ದಿನದಂದು ಜನಿಸಿದ ಜನರ ಆಲೋಚನೆಗಳು ಶುದ್ಧವಾಗಿರುತ್ತವೆ. ಧಾರ್ಮಿಕ ಕಾರ್ಯಗಳಲ್ಲಿ ಅವರಿಗೆ ವಿಶೇಷವಾದ ಬಾಂಧವ್ಯವಿದೆ. ಅಲ್ಲದೆ, ದಾನ ಮಾಡಲು ಅವರು ಎಂದಿಗೂ ಹಿಂಜರಿಯುವುದಿಲ್ಲ.

ಈ ಜನರು ಮಾತಿನಲ್ಲಿ ಕಠೋರವಾಗಿರಬಹುದು, ಆದರೆ ಹೃದಯದಲ್ಲಿ ವಿನಮ್ರರಾಗಿರುತ್ತಾರೆ. ಬೇರೆಯವರ ದುಃಖಕ್ಕೆ, ಕಷ್ಟಕ್ಕೆ ಇವರ ಮನಸ್ಸು ಬೇಗೆ ಮಿಡಿಯುತ್ತದೆ.  

ಇದನ್ನೂ ಓದಿ- ಜಾತಕದ ಈ ಮನೆಯಲ್ಲಿ ಶನಿ ಇದ್ದರೆ ವ್ಯಕ್ತಿಯ ಏಳಿಗೆ ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ .!

ಏಕಾದಶಿ ದಿನ ಈ ಕೆಲಸಗಳನ್ನು ಮಾಡುವುದು ತುಂಬಾ ಮಂಗಳಕರ:
ಪ್ರತಿ ಏಕಾದಶಿಯಲ್ಲಿ ಉಪವಾಸಕ್ಕೆ ವಿಶೇಷ ಮಹತ್ವವಿದೆ. ಈ ದಿನದಂದು ದಾನಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಈ ದಿನ ಹಳದಿ ವಸ್ತುಗಳನ್ನು ದಾನ ಮಾಡುವುದರಿಂದ ಮನೆಯಲ್ಲಿ ಸಮೃದ್ಧಿ ಇರುತ್ತದೆ. ಇದರೊಂದಿಗೆ ವಿಷ್ಣುವಿನ ಕೃಪೆಯೂ ದೊರೆಯಲಿದೆ ಎಂದು ನಂಬಲಾಗಿದೆ. 

ಏಕಾದಶಿಯ ದಿನದಂದು ವಿಷ್ಣುವಿಗೆ ಹಳದಿ ಹೂವುಗಳು, ಹಣ್ಣುಗಳು, ವಸ್ತ್ರಗಳು, ಧಾನ್ಯಗಳು ಇತ್ಯಾದಿಗಳನ್ನು ಅರ್ಪಿಸಿ. ಇದರೊಂದಿಗೆ ವ್ಯಕ್ತಿಯ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ.

ಏಕಾದಶಿಯ ದಿನವು ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ ಎಂದು ನಂಬಲಾಗಿದೆ. ಆದುದರಿಂದ ಈ ದಿನ ಶ್ರೀ ಹರಿಯನ್ನು ಪೂಜಿಸುವುದರಿಂದ ಎಲ್ಲಾ ಪಾಪಗಳು ನಾಶವಾಗಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. 

ಏಕಾದಶಿಯ ದಿನ ಅರಳಿ ಮರಕ್ಕೆ ನೀರನ್ನು ಅರ್ಪಿಸುವುದು ತುಂಬಾ ಶುಭ ಎಂದು ನಂಬಲಾಗಿದೆ. ಇದು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ. 

ಸೂಚನೆ:  ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News