Navratri 2023 : ದುಷ್ಟ ಶಕ್ತಿಯಿಂದ ರಕ್ಷಣೆ, ಮಾತೆ ದುರ್ಗೆಯ ಕೃಪಕಟಾಕ್ಷಕ್ಕೆ 9 ದಿನ ಹೀಗೆ ಮಾಡಿ..! 

Navratri Festival 2023 : ನವರಾತ್ರಿ ಹಬ್ಬಕ್ಕೆ ಹಿಂದೂ ಧರ್ಮದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇದೆ. ಎಲ್ಲಾ ಒಂಬತ್ತು ದಿನಗಳ ಕಾಲ, ತಾಯಿ ಚಾಮುಂಡೇಶ್ವರಿಯ ಆರಾಧನೆಯ ಜೊತೆಗೆ, ಈ ಕೆಳಗೆ ನೀಡಲಾದ ಈ ಒಂದು ಕೆಲಸವನ್ನು ನೀವು ಮಾಡಿದರೆ, ತಾರಿ ದುರ್ಗೆಯ ಆರ್ಶೀವಾದ ಸದಾ ನಿಮ್ಮ ಮೇಲಿರುತ್ತದೆ.

Written by - Krishna N K | Last Updated : Oct 15, 2023, 07:30 PM IST
  • ನವರಾತ್ರಿ ಹಬ್ಬಕ್ಕೆ ಹಿಂದೂ ಧರ್ಮದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇದೆ.
  • ನಾಡಿನೆಲ್ಲೆಡೆ ಒಂಬತ್ತು ದಿನಗಳ ಕಾಲ ತಾಯಿ ದುರ್ಗೆಯ ಆರಾಧನೆ ನಡೆಯುತ್ತದೆ.
  • ಮುಂಡೇಶ್ವರಿಯ ಕೃಪಕಟಾಕ್ಷಕ್ಕೆ ಪಾತ್ರರಾಗಲು ಈ ಕೆಳಗೆ ನೀಡಿರುವ ಸಲಹೆಗಳನ್ನು ತಪ್ಪದೇ ಪಾಲಿಸಿ.
Navratri 2023 : ದುಷ್ಟ ಶಕ್ತಿಯಿಂದ ರಕ್ಷಣೆ, ಮಾತೆ ದುರ್ಗೆಯ ಕೃಪಕಟಾಕ್ಷಕ್ಕೆ 9 ದಿನ ಹೀಗೆ ಮಾಡಿ..!  title=

Navaratri puja vidhi 2023 : ನಾಡಹಬ್ಬ ನವರಾತ್ರಿಗೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನ ಇದೆ. ಈ ಹಬ್ಬದಂದು ನಾಡಿನೆಲ್ಲೆಡೆ ಒಂಬತ್ತು ದಿನಗಳ ಕಾಲ ತಾಯಿ ದುರ್ಗೆಯ ಆರಾಧನೆ ವಿಜೃಂಭಣೆಯಿಂದ ನಡೆಯುತ್ತದೆ. ಸಧ್ಯ ತಾಯಿ ಚಾಮುಂಡೇಶ್ವರಿಯ ಕೃಪಕಟಾಕ್ಷಕ್ಕೆ ಪಾತ್ರರಾಗಲು ಈ ಕೆಳಗೆ ನೀಡಿರುವ ಸಲಹೆಗಳನ್ನು ತಪ್ಪದೇ ಪಾಲಿಸಿ.

ಹೌದು.. ನವರಾತ್ರಿಯ ಒಂಭತ್ತು ದಿನಗಳ ಕಾಲ ದುರ್ಗೆಯ ಆರಾಧನೆಯ ಜೊತೆ ಅಖಂಡ ಜ್ಯೋತಿಯನ್ನು ಬೆಳಗಿಸುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಈ ಅಖಂಡ ಜ್ಯೋತಿ ಸಕಾರಾತ್ಮಕ ಶಕ್ತಿಯನ್ನು ಹೊಂದಿದ್ದು ಶತ್ರುಗಳ ದುಷ್ಟ ಕಣ್ಣಿನಿಂದ ನಿಮ್ಮನ್ನು ರಕ್ಷಿಸುತ್ತದೆ. ಕತ್ತಲೆಯ ಮನೆಯಲ್ಲಿ ದೀಪ ಉರಿಯುವಂತೆ ಇಲ್ಲಿಯೂ ಅಮ್ಮನ ಹೆಸರಿನ ದೀಪ ನಮ್ಮ ಬದುಕಿನಿಂದ ಕತ್ತಲೆಯನ್ನು ಹೋಗಲಾಡಿಸುತ್ತದೆ. 

ಇದನ್ನೂ ಓದಿ:ವಾರದಲ್ಲಿ 2 ಬಾರಿ ಈ ಹಣ್ಣನ್ನು ತಿಂದರೆ ಶಾಶ್ವತವಾಗಿ ಬುಡದಿಂದಲೇ ಕಪ್ಪಾಗುತ್ತೆ ಬಿಳಿಕೂದಲು

ಯಾವುದೇ ರೀತಿಯ ಜಪವನ್ನು ದೀಪದ ಮುಂದೆ ಇಲ್ಲವೇ ಅಗ್ನಿಯ ಮುಂದೆ ಜಪಿಸಿದರೆ ಅದರ ಫಲ ಸಾವಿರ ಪಟ್ಟು ಹೆಚ್ಚಾಗುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಅಲ್ಲದೆ ನೀವು ತುಪ್ಪದ ದೀಪವನ್ನು ಬೆಳಗಿಸುತ್ತಿದ್ದರೆ, ಅದನ್ನು ಯಾವಾಗಲೂ ದೇವಿಯ ಬಲಭಾಗದಲ್ಲಿ ಇಡಬೇಕು. ಒಂದು ವೇಳೆ ಎಣ್ಣೆಯ ದೀಪವನ್ನು ಬೆಳಗಿಸುತ್ತಿದ್ದರೆ ಅದನ್ನು ದೇವರ ಎಡಭಾಗದಲ್ಲಿ ಇಡಬೇಕು. ನೆನಪಿಡಿ, ದೀಪ ಎಂದಿಗೂ ನಂದಿಸಬಾರದು. ಕಾಲಕಾಲಕ್ಕೆ ಅದನ್ನು ನೋಡಿಕೊಳ್ಳಬೇಕು ಮತ್ತು ಅದರಲ್ಲಿ ಸಾಕಷ್ಟು ಎಣ್ಣೆ ಅಥವಾ ತುಪ್ಪ ಇರುವಂತೆ ನೋಡಿಕೊಳ್ಳಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News