ಕಲಿಯುಗದಲ್ಲಿ ಶ್ರೀಕೃಷ್ಣನ ಪವಾಡ : ನಿರ್ಬಂಧಿತ ʼನಿಧಿವನʼಕ್ಕೆ ರಾತ್ರಿ ಬರ್ತಾನೆ ಭಗವಂತ..!

ವಿಚಿತ್ರ, ವಿಸ್ಮಯ, ನಿಗೂಡ ಅಂದ್ರೆ ಅದೇನೋ ಕುತೂಹಲ.. ಏನಿರಬಹುದು ಯಾಕಿರಬಹುದು ಎಂಬ ಗೊಂದಲ. ಇಂದಿಗೂ ಅದೆಷ್ಟೋ ವಿಸ್ಮಯಗಳು ಗೊಂದಲಮಯವಾಗೇ ಉಳಿದಿವೆ. ಇದೀಗ ನಾವು ಹೇಳಲು ಹೊರಟಿರುವ ಸ್ಟೋರಿ ಕೂಡ ಅಂತದ್ದೆ. ಹಾಗಾದ್ರೆ ಅಲ್ಲಿ ಅಂತದ್ದು ಏನಾಗ್ತಾ ಇದೆ.  ರಾತ್ರಿ ಹೊತ್ತಲ್ಲಿ ಅದೂ ದೇಲಾಯಲ್ಲಿ ನಡೀತಿರೊ ವಿಸ್ಮಯವಾದ್ರು ಏನು ಎಂಬೋದ್ರ ಬಗ್ಗೆ ತಿಳಿದುಕೊಳ್ಳೊಕೆ ಈ ಸ್ಟೋರಿ ಓದಿ..

Written by - K Karthik Rao | Edited by - Krishna N K | Last Updated : Nov 6, 2022, 03:54 PM IST
  • ಕಲಿಯುಗದಲ್ಲಿ ಶ್ರೀಕೃಷ್ಣನ ಪವಾಡ
  • ನಿರ್ಬಂಧಿತ ʼನಿಧಿವನʼಕ್ಕೆ ರಾತ್ರಿ ಬರ್ತಾನೆ ಭಗವಂತ
  • ಬೆಚ್ಚಿ ಬಿಳುವಂತಿದೆ ಶ್ರೀ ಕೃಷ್ಣನ ವಿಚಿತ್ರ, ವಿಸ್ಮಯ, ನಿಗೂಡ ಕಥೆ
ಕಲಿಯುಗದಲ್ಲಿ ಶ್ರೀಕೃಷ್ಣನ ಪವಾಡ : ನಿರ್ಬಂಧಿತ ʼನಿಧಿವನʼಕ್ಕೆ ರಾತ್ರಿ ಬರ್ತಾನೆ ಭಗವಂತ..! title=

ಬೆಂಗಳೂರು : ವಿಚಿತ್ರ, ವಿಸ್ಮಯ, ನಿಗೂಡ ಅಂದ್ರೆ ಅದೇನೋ ಕುತೂಹಲ.. ಏನಿರಬಹುದು ಯಾಕಿರಬಹುದು ಎಂಬ ಗೊಂದಲ. ಇಂದಿಗೂ ಅದೆಷ್ಟೋ ವಿಸ್ಮಯಗಳು ಗೊಂದಲಮಯವಾಗೇ ಉಳಿದಿವೆ. ಇದೀಗ ನಾವು ಹೇಳಲು ಹೊರಟಿರುವ ಸ್ಟೋರಿ ಕೂಡ ಅಂತದ್ದೆ. ಹಾಗಾದ್ರೆ ಅಲ್ಲಿ ಅಂತದ್ದು ಏನಾಗ್ತಾ ಇದೆ.  ರಾತ್ರಿ ಹೊತ್ತಲ್ಲಿ ಅದೂ ದೇಲಾಯಲ್ಲಿ ನಡೀತಿರೊ ವಿಸ್ಮಯವಾದ್ರು ಏನು ಎಂಬೋದು ತಿಳಿದುಕೊಳ್ಳೋಕೆ ತಪ್ಪದೆ ಈ ಸ್ಟೋರಿ ಓದಿ.

ಹೌದು, ನಮ್ಮ ದೇಶದಲ್ಲಿನ ಪ್ರತ್ಯೇಕವಾದ ಪ್ರದೇಶಗಳು ಇಂದಿಗೂ ರಹಸ್ಯವಾಗಿಯೇ ಇದೆ. ಇವುಗಳಲ್ಲಿ ಕೆಲವು ನಮ್ಮ ಪುರಾಣದಲ್ಲಿ ಮತ್ತು ಚಾರಿತ್ರಿಕತೆಗಳಿಗೆ ಸಂಬಂಧ ಹೊಂದಿದೆ. ಅಂಥಹ ರಹಸ್ಯವಾದ ಸ್ಥಳಗಳಲ್ಲಿ ನಿಧಿವನ್ ಇದೂ ಕೂಡ ಒಂದು. ಈ ಪ್ರದೇಶದ ರಹಸ್ಯವು ದ್ವಾಪರಯುಗದಲ್ಲಿನ ರಾಧ-ಕೃಷ್ಣರಿಗೆ ಸಂಬಂಧಿಸಿದೆ. ಅಸಲಿಗೆ ಈ ನಿಧಿವನ್ ಯಾವುದು? ಆ ನಿಧಿವನ್ನಲ್ಲಿರುವ ಪ್ರದೇಶಕ್ಕೂ ರಾಧ-ಕೃಷ್ಣರಿಗೂ ಸಂಬಂಧವಾದರೂ ಏನುಗೊತ್ತಾ..?

ಇದನ್ನೂ ಓದಿ: Vastu Tips: ಸೂರ್ಯಾಸ್ತದ ನಂತರ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ: ದಾರಿದ್ರ್ಯ ಆವರಿಸೋದು ಖಂಡಿತ

ಪುರಾಣಗಳ ಪ್ರಕಾರ, ರಾಧ-ಕೃಷ್ಣರ ಪ್ರೇಮಾಯಣದ ಕುರಿತು ಸಾಮಾನ್ಯವಾಗಿ ನಮಗೆಲ್ಲಾ ತಿಳಿದಿರುವುದೇ. ಆಶ್ಚರ್ಯ ಏನಪ್ಪ ಎಂದರೆ ರಾಧಕೃಷ್ಣರು ಇಂದಿಗೂ ಆ ನಿಧಿವನ್ನಲ್ಲಿ ಸೇರುತ್ತಾರಂತೆ. ಇಂಥಹ ರಹಸ್ಯಮಯವಾದ ಪ್ರದೇಶವು ಉತ್ತರ ಪ್ರದೇಶದ ಮಥುರ ಜಿಲ್ಲೆಯಲ್ಲಿ ಬೃಂದಾವನ್ ಎಂಬ ಊರಿನಲ್ಲಿದೆ.
ಇಲ್ಲಿರುವ ನಿಧಿವನ್ನಲ್ಲಿ ರಾತ್ರಿಯ ಸಮಯದಲ್ಲಿ ಶ್ರೀ ಕೃಷ್ಣನು ರಾಧಳನ್ನು ಸೇರಲು ಬರುತ್ತಾನೆ ಎಂದೂ, ಅಷ್ಟೇ ಅಲ್ಲದೇ ಗೋಪಿಕೆಯರ ಜೊತೆಗೆ ನೃತ್ಯವನ್ನು ಮಾಡುತ್ತಾನೆ ಎಂದು ಅಲ್ಲಿನ ಜನರ ನಂಬಿಕೆಯಾಗಿದೆ. 

ಸೂರ್ಯಾಸ್ತಮವಾದ ನಂತರ ದೇವಾಲಯದ ದ್ವಾರಗಳು, ನಿಧಿವನ್ ಪ್ರದೇಶದ ಮುಖ್ಯ ದ್ವಾರವೆಲ್ಲಾವನ್ನು ಮುಚ್ಚಿ ಹಾಕುತ್ತಾರೆ. ಇಲ್ಲಿನ ವಿಶೇಷವೆನೆಂದರೆ, ಈ ಪ್ರದೇಶದಲ್ಲಿ ರಾತ್ರಿಯ ಸಮಯದಲ್ಲಿ ಕೇವಲ ಮನುಷ್ಯರೇ ಅಲ್ಲ, ಕನಿಷ್ಟ ಪ್ರಾಣಿ-ಪಕ್ಷಿಗಳೂ ಕೂಡ ಆ ಪ್ರದೇಶಕ್ಕೆ ಹೋಗುವುದಿಲ್ಲ. ಆ ಪ್ರದೇಶವನ್ನು ಶ್ರೀ ಕೃಷ್ಣನ ಏಕಾಂತ ಪ್ರದೇಶವೆಂದೇ ಗುರುತಿಸಲಾಗಿದೆ. ಆತನ ಏಕಾಂತಕ್ಕೆ ಭಂಗ ಬಾರದಂತೆ ಆ ವನದ ಸುತ್ತ ಕೃಷ್ಣನ ಭಟರು ಮನುಷ್ಯ ರೂಪದಲ್ಲಿ ಕಾಯುತ್ತಾರೆ ಎಂದೂ, ಈ ಪ್ರದೇಶಕ್ಕೆ ಸಾಮಾನ್ಯ ಮಾನವರು ಪ್ರವೇಶ ಮಾಡಿದರೆ ಸಾವು ಸಂಭವಿಸುತ್ತದೆ ಎಂದು ಅಲ್ಲಿನ ಮಂದಿಯ ನಂಬಿಕೆಯಂತೆ.

ಇದನ್ನೂ ಓದಿ: ಚಂದ್ರಗ್ರಹಣದಿಂದ ಗರ್ಭಿಣಿಯರಿಗೆ ಕಾದಿದೆ ಭಾರೀ ಆಪತ್ತು! ಈ ಕೆಲಸ ಮಾಡಲೇಬೇಡಿ

ಕೆಲವು ಮಂದಿ ಆ ವನದಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳಲು ಹೋದವರು ಮರಣ ಹೊಂದರು ಅಥವಾ ಬುದ್ಧಿ ಮಾನ್ಯರಾದರಂತೆ. ಹಾಗಾಗಿ ಆನೇಕ ಮಂದಿ ಈ ಪ್ರದೇಶದ ಕುರಿತು ಪರಿಶೋಧನೆಗಳನ್ನು ಮಾಡಬೇಕು ಎಂದುಕೊಂಡರೂ ಕೂಡ ಸ್ಥಾನಿಕರು ಅನುಮತಿಯನ್ನು ನೀಡುವುದಿಲ್ಲ. ಆ ವನದ ಸುತ್ತ-ಮುತ್ತ ಇರುವ ಮನೆಯವರು ಕೂಡ ರಾತ್ರಿಯ ಸಮಯದಲ್ಲಿ ಆ ವನದ ದಿಕ್ಕಿಗೆ ಇರುವ ಎಲ್ಲಾ ಕಿಟಕಿಗಳು ಮುಚ್ಚಿ ಹಾಕುತ್ತಾರಂತೆ.

ಆ ಪ್ರದೇಶದಲ್ಲಿ ಯಾವುದೇ ಒಂದು ಮನೆಯ ದ್ವಾರವು ಕೂಡ ಆ ವನಕ್ಕೆ ಎದುರಿಗೆ ಮುಖ ಮಾಡಿ ನಿರ್ಮಾಣ ಮಾಡುವುದಿಲ್ಲವಂತೆ. ಈ ನಿಧಿವನ್ಗೆ ಪಕ್ಕದಲ್ಲಿಯೇ ಇರುವ ಮನೆಯವರಿಗೆ ರಾತ್ರಿಯ ಸಮಯದಲ್ಲಿ ಕೊಳಲಿನ ಮಧುರವಾದ ಶಬ್ಧ, ಕಾಲಿಗೆ ಹಾಕಿರುವ ಗೆಜ್ಜೆಯ ಶಬ್ಧ ಕೇಳಿಸುತ್ತವೆ ಎಂದು ಅಲ್ಲಿನ ಸ್ಥಾನಿಕರು ಹೇಳುತ್ತಾರೆ.

ಇದನ್ನೂ ಓದಿ: Chanakya Niti: ಹಣ ಸಂಪಾದಿಸಿದ ಬಳಿಕ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ!

ಈ ವನದಲ್ಲಿ ಒಂದು ಕೊಳ ಕೂಡ ಇದೆ. ಇದನ್ನು "ವಿಶಾಖ ಕುಂಡ" ಎಂದೂ ಕೂಡ ಕರೆಯುತ್ತಾರೆ. ಕೃಷ್ಣನ ಜೊತೆ ನೃತ್ಯ ಮಾಡುವ ಸಂದರ್ಭದಲ್ಲಿ ವಿಶಾಖ ಎಂಬ ಗೋಪಿಕೆಗೆ ದಾಹವಾಯಿತಂತೆ. ಆಗ ಶ್ರೀ ಕೃಷ್ಣನು ತನ್ನ ಕೊಳಲಿನಿಂದ ಬಾವಿಯನ್ನು ಸೃಷಿ ಮಾಡಿದನಂತೆ. ಅಂದಿನಿಂದ ಈ ಕೊಳಕ್ಕೆ ವಿಶಾಖ ಕೊಂಡ ಎಂದು ಕರೆಯಲಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News