Monthly Horoscope February 2024: ಮೇಷದಿಂದ ಮೀನ ರಾಶಿಯವರೆಗೆ ಫೆಬ್ರವರಿ ಮಾಸ ಭವಿಷ್ಯ

Monthly Horoscope February 2024: ವರ್ಷದ ಎರಡನೇ ಮಾಸವಾದ ಫೆಬ್ರವರಿ ತಿಂಗಳು ದ್ವಾದಶ ರಾಶಿಗಳ ಫಲಾಫಲ ಹೇಗಿದೆ. ಈ ತಿಂಗಳಿನಲ್ಲಿ ಯಾವ ರಾಶಿಯವರು ಅದೃಷ್ಟದ ಬೆಂಬಲವನ್ನು ಪಡೆಯಲಿದ್ದಾರೆ. ಯಾವ ರಾಶಿಯವರಿಗೆ ತಾಳ್ಮೆ ಅಗತ್ಯವಿದೆ ಎಂದು ತಿಳಿಯಿರಿ.  

Written by - Yashaswini V | Last Updated : Jan 31, 2024, 01:30 PM IST
  • ಕನ್ಯಾ ರಾಶಿಯವರು ಫೆಬ್ರವರಿ ತಿಂಗಳಿನಲ್ಲಿ ಮನೆ ಅಥವಾ ಭೂಮಿಯ ಮೇಲೆ ಹೂಡಿಕೆ ಮಾಡುವುದನ್ನು ಪರಿಗಣಿಸಬಹುದು.
  • ವೃಶ್ಚಿಕ ರಾಶಿಯವರಿಗೆ ಉದ್ಯೋಗಕ್ಕೆ ಸಂಬಂಧಿಸಿದಂತೆ ನಿಮ್ಮ ಕನಸುಗಳು ಈಡೇರಲಿದೆ.
  • ಕುಂಭ ರಾಶಿಯವರಿಗೆ ಫೆಬ್ರವರಿಯಲ್ಲಿ ಮಕ್ಕಳ ಪ್ರಗತಿಯಿಂದ ಮನಸ್ಸು ಸಂತೋಷಗೊಳ್ಳಲಿದೆ.
Monthly Horoscope February 2024: ಮೇಷದಿಂದ ಮೀನ ರಾಶಿಯವರೆಗೆ ಫೆಬ್ರವರಿ ಮಾಸ ಭವಿಷ್ಯ  title=

Monthly Horoscope February 2024: ಈ ವರ್ಷ ಫೆಬ್ರವರಿ ಮಾಸದಲ್ಲಿ ಕೆಲವರು ಪ್ರಮುಖ ಗ್ರಹಗಳ ಸಂಚಾರದಲ್ಲಿ ಬದಲಾವಣೆ ಕಂಡು ಬರಲಿದೆ. ಇದರಿಂದಾಗಿ ಕೆಲವು ರಾಶಿಯವರ ಜೀವನದಲ್ಲಿಯೂ ಕೂಡ ಮಹತ್ವದ ಬದಲಾವಣೆಗಳು ಕಂಡು ಬರುವ ಸಾಧ್ಯತೆ ಇದೆ. ಈ ತಿಂಗಳು ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿರಲಿದೆ. ಫೆಬ್ರವರಿ ತಿಂಗಳಿನಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಎಚ್ಚರಿಕೆ ಅಗತ್ಯ ಎಂದು ತಿಳಿಯಿರಿ.  

ಮೇಷ ರಾಶಿ: 
ಮೇಷ ರಾಶಿಯವರಿಗೆ ಫೆಬ್ರವರಿ ತಿಂಗಳು ಶುಭ ಫಲಗಳನ್ನು ತರಲಿದೆ. ಈ ಸಮಯದಲ್ಲಿ ನೀವು  ನಿಮ್ಮ ಸ್ನೇಹಿತರು, ಕುಟುಂಬದೊಂದಿಗೆ ಪ್ರವಾಸವನು ಯೋಜಿಸಬಹುದು. ಆದಾಗ್ಯೂ, ಎಲ್ಲರೊಟ್ಟಿಗೆ ಇರುವಾಗ ನಿಮ್ಮ ಕೋಪವನ್ನು ನಿಯಂತ್ರಿಸಿದರೆ ಒಳ್ಳೆಯದು. ಇಲ್ಲದಿದ್ದರೆ, ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು.  

ವೃಷಭ ರಾಶಿ: 
ಫೆಬ್ರವರಿ ಮಾಸದ ಆರಂಭದ ದಿನಗಳಲ್ಲಿ ವೃಷಭ ರಾಶಿಯವರ ಜೀವನದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಕಂಡು ಬರಬಹುದು. ಅದರಲ್ಲೂ ಅವಿಭಕ್ತ ಕುಟುಂಬಗಳಲ್ಲಿ ವಾಸಿಸುವವರಲ್ಲಿ ತಪ್ಪು ತಿಳಿವಳಿಕೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಬೇರೆಯವರ ಮಾತಿಗೆ ಕಿವಿಕೊಡುವುದನ್ನು ತಪ್ಪಿಸಿ. ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನವಹಿಸಿ.  

ಮಿಥುನ ರಾಶಿ: 
ಫೆಬ್ರವರಿಯಲ್ಲಿ ಮಿಥುನ ರಾಶಿಯ ಜನರು ತಾವು ಮಾಡುವ ಪ್ರತಿ ಕೆಲಸದಲ್ಲೂ ತಮ್ಮ ಪ್ರೀತಿಪಾತ್ರರಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಕುಟುಂಬದಲ್ಲಿ ನಿಮಗಿಂತ ಚಿಕ್ಕವರು ನಿಮ್ಮ ಪರವಾಗಿರುತ್ತಾರೆ. ಆದಾಗ್ಯೂ, ಅನಗತ್ಯ ವೆಚ್ಚಗಳು ನಿಮ್ಮ ಉಳಿತಾಯವನ್ನು ಹಾಳುಮಾಡಬಹುದಾದ್ದರಿಂದ ನಿಮ್ಮ ವೆಚ್ಚಗಳನ್ನು ನಿಯಂತ್ರಿಸುವುದು ಮುಖ್ಯವಾಗಿದೆ.  

ಕರ್ಕಾಟಕ ರಾಶಿ: 
ಕರ್ಕಾಟಕ ರಾಶಿಯವರೇ ಫೆಬ್ರವರಿ ತಿಂಗಳಿನಲ್ಲಿ ನಿಮ್ಮ ಪಿತೃ ಸಮಾನರಾದವರಿಗೆ ಸಮಯವನ್ನು ನೀಡಿ. ಸಾಧ್ಯವಾದಷ್ಟು ಅವರ ಮಾತುಗಳನ್ನು ಆಲಿಸಿ. ಈ ತಿಂಗಳು ನೀವು ನಿಮ್ಮ ಕುಟುಂಬದ ಪ್ರೀತಿಯನ್ನು ಅರ್ಥಮಾಡಿಕೊಳ್ಳುವಿರಿ.  ಆದಾಗ್ಯೂ, ಹಣಕಾಸಿನ ಸಮಸ್ಯೆ ಕಾಡುವ ಸಾಧ್ಯತೆ ಇರುವುದರಿಂದ ಯೋಚಿಸಿ ಖರ್ಚು ಮಾಡುವುದನ್ನು ಪರಿಗಣಿಸಿ. 

ಇದನ್ನೂ ಓದಿ- Gajlakshmi Rajyog 2024: ಗುರು-ಶುಕ್ರರ ಯುತಿಯಿಂದ ಗಜಲಕ್ಷ್ಮಿ ರಾಜಯೋಗ, 3 ರಾಶಿಯವರಿಗೆ ಭಾರೀ ಅದೃಷ್ಟ

ಸಿಂಹ ರಾಶಿ: 
ಸಿಂಹ ರಾಶಿಯವರಿಗೆ ಫೆಬ್ರವರಿ ತಿಂಗಳಿನಲ್ಲಿ ಕುಟುಂಬಸ್ಥರ ನಡುವೆ  ಸೈದ್ಧಾಂತಿಕ ವ್ಯತ್ಯಾಸಗಳು ಕಂಡುಬರಬಹುದು, ಆದರೆ ಅದು ವೈಯಕ್ತಿಕ ಅಪಶ್ರುತಿಯಾಗಿ ಬದಲಾಗಬಾರದು ಎಂಬುದನ್ನು ನೆನಪಿನಲ್ಲಿಡಿ. ನಿಮ್ಮ ಜೀವನಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಮನೆಯ ಹಿರಿಯರ ಸಲಹೆ ಪಡೆಯುವುದನ್ನು ಮರೆಯಬೇಡಿ.  ಆದಾಗ್ಯೂ, ಈ ಮಾಸದಲ್ಲಿ ನಿಮ್ಮ ಸಹೋದರ-ಸಹೋದರಿಯರ ಪ್ರಗತಿ ನಿಮ್ಮ ಮನಸ್ಸಿನ ಉಲ್ಲಾಸವನ್ನು ಹೆಚ್ಚಿಸಲಿದೆ. 

ಕನ್ಯಾ ರಾಶಿ: 
ಕನ್ಯಾ ರಾಶಿಯವರೇ ಫೆಬ್ರವರಿ ತಿಂಗಳಿನಲ್ಲಿ ನಿಮ್ಮ ಕುಟುಂಬದ ಸದಸ್ಯರು ನೀಡುವ ಸಲಹೆಗಳನ್ನು ನಿರ್ಲಕ್ಷಿಸಬೇಡಿ. ಇದು ನಿಮಗೆ ಭಾರೀ ನಷ್ಟವನ್ನು ಉಂಟು ಮಾಡಬಹುದು. ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಈಗಿನಿಂದಲೇ ಅವರಿಗೆ   ಸಂಸ್ಕಾರದ ಪಾಠವನ್ನು ಕಲಿಸಲು ಪ್ರಾರಂಭಿಸಿ. ಈ ತಿಂಗಳು ನೀವು ಮನೆ ಅಥವಾ ಭೂಮಿಯ ಮೇಲೆ ಹೂಡಿಕೆ ಮಾಡುವುದನ್ನು ಪರಿಗಣಿಸಬಹುದು. 

ತುಲಾ ರಾಶಿ: 
ತುಲಾ ರಾಶಿಯವರಿಗೆ ನೀವು ಕುಟುಂಬದೊಂದಿಗೆ ಪ್ರವಾಸ ಕೈಗೊಳ್ಳಲು ಯೋಚಿಸುತ್ತಿದ್ದರೆ ತಿಂಗಳ ಎರಡನೇ ವಾರ ಇದಕ್ಕೆ ಸೂಕ್ತವಾಗಿದೆ. ನೀವು ನಿಮ್ಮ ಕುಟುಂಬದೊಂದಿಗೆ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ನಿಮ್ಮ ಪೋಷಕರ ಆರೋಗ್ಯ ಕಾಳಜಿ ವಿಷಯವಾಗಿರಬಹುದು. ಆದಾಗ್ಯೂ, ಚಿಂತಿಸುವ ಅಗತ್ಯವಿಲ್ಲ. ವ್ಯಾಪಾರಸ್ಥರಿಗೆ ಹಣಕಾಸಿನ ಸ್ಥಿತಿ ಸುಧಾರಿಸಲಿದೆ. 

ವೃಶ್ಚಿಕ ರಾಶಿ: 
ವೃಶ್ಚಿಕ ರಾಶಿಯವರಿಗೆ ಫೆಬ್ರವರಿ ತಿಂಗಳಿನಲ್ಲಿ ಸ್ನೇಹಿತರ ಸಂಖ್ಯೆ ಹೆಚ್ಚಾಗಲಿದೆ. ನಿಮ್ಮ ಕಿರಿಯ ಸಹೋದರ ಮತ್ತು ಸಹೋದರಿಯರೊಂದಿಗೆ ಉತ್ತಮ ಹೊಂದಾಣಿಕೆ ಕಂಡು ಬರಲಿದೆ. ತಿಂಗಳ ಎರಡನೇ ವಾರದಲ್ಲಿ ಪ್ರೀತಿಪಾತ್ರರಿಗೆ ಹೆಚ್ಚಿನ ಸಮಯವನ್ನು ನೀಡಲು ಪ್ರಯತ್ನಿಸಿ. ಇದು ನಿಮ್ಮ ಜೀವನದಲ್ಲಿ ಸಂತೋಷದ ಕ್ಷಣಗಳನ್ನು ತರಲಿದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ನಿಮ್ಮ ಕನಸುಗಳು ಈಡೇರಲಿದೆ. ಧನಲಾಭವನ್ನು ಸಹ ನಿರೀಕ್ಷಿಸಬಹುದು. 

ಇದನ್ನೂ ಓದಿ- Rahu-Budh Yuti 2024: 15 ವರ್ಷಗಳ ಬಳಿಕ ಮೀನ ರಾಶಿಯಲ್ಲಿ ರಾಹು-ಬುಧ ಯುತಿ: ಈ ರಾಶಿಯವರಿಗೆ ಭಾಗ್ಯೋದಯ

ಧನು ರಾಶಿ :
ಧನು ರಾಶಿಯವರಿಗೆ ಫೆಬ್ರವರಿ ತಿಂಗಳಿನಲ್ಲಿ ನಿಮ್ಮ ಕೌಟುಂಬಿಕ ವಾತಾವರಣ ಸುಧಾರಿಸಲಿದೆ. ನೀವು ಕೈ ಹಾಕುವ ಪ್ರತಿ ಕೆಲಸದಲ್ಲೂ ಕುಟುಂಬದ ಸದಸ್ಯರಿಂದ ಪ್ರೋತ್ಸಾಹ ದೊರೆಯಲಿದೆ. ಇದು ನಿಮ್ಮನ್ನು ಮಾನಸಿಕವಾಗಿ ಆರೋಗ್ಯವಾಗಿರಿಸುತ್ತದೆ.  ತಿಂಗಳಾಂತ್ಯದಲ್ಲಿ ಪೂರ್ವಿಕರ ಆಸ್ತಿಯಿಂದ ಲಾಭವಾಗುವ ಸಾಧ್ಯತೆ ಇದ್ದು, ನಿಮ್ಮ ಹಣಕಾಸಿನ ಪರಿಸ್ಥಿತಿಗಳು ಸುಧಾರಣೆಗೊಳ್ಳಲಿವೆ. 

ಮಕರ ರಾಶಿ: 
ಮಕರ ರಾಶಿಯವರೇ ಫೆಬ್ರವರಿ ತಿಂಗಳಿನಲ್ಲಿ ನೀವು ನಿಮ್ಮ ಕುಟುಂಬದ ಜವಾಬ್ಧಾರಿಯನ್ನು ಹೊರಲು ಸಿದ್ದರಾಗಬೇಕು. ಕುಟುಂಬಕ್ಕೆ ನಿಮ್ಮ ಕೈಲಾದಷ್ಟು ಸಹಾಯ ಮಾಡುವುದನ್ನು ಪರಿಗಣಿಸಿ. ನಿಮ್ಮ ಸಹೋದರರ ಪ್ರಗತಿಗೆ ನಿಮ್ಮ ಸಹಕಾರ ಮುಖ್ಯವಾಗಿದೆ.  ಅವರಿಗೆ ನಿಮ್ಮ ಅವಶ್ಯಕತೆ ಇದ್ದರೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ. ದೀರ್ಘಾವಧಿಯಿಂದ ಬಾಕಿ ಉಳಿದಿದ್ದ ನಿಮ್ಮ ಮನೆಯ ಕೆಲಸಗಳು ಈ ಸಮಯದಲ್ಲಿ ಪೂರ್ಣಗೊಳ್ಳಲಿದೆ.  

ಕುಂಭ ರಾಶಿ: 
ಕುಂಭ ರಾಶಿಯವರಿಗೆ ಫೆಬ್ರವರಿಯಲ್ಲಿ ಮಕ್ಕಳ ಪ್ರಗತಿಯಿಂದ ಮನಸ್ಸು ಸಂತೋಷಗೊಳ್ಳಲಿದೆ. ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಈ ಸಮಯ ಅತ್ಯುತ್ತಮವಾಗಿದೆ. ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳಲು ಬಯಸುವವರು ಶುಭ ಸುದ್ದಿಯನ್ನು ನಿರೀಕ್ಷಿಸಬಹುದು. ಹಣಕಾಸಿನ ಹರಿವು ಹೆಚ್ಚಾಗಳಿದ್ದು ಕುಟುಂಬದ ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮ ಬದಲಾವಣೆ ಇರುತ್ತದೆ.  

ಮೀನ ರಾಶಿ: 
ಮೀನ ರಾಶಿಯವರೇ ನೀವು ನಿಮ್ಮ ಕುಟುಂಬದ ಯಾವುದೇ ಸದಸ್ಯರೊಂದಿಗೆ ಭಿನ್ನಾಭಿಪ್ರಾಯವನ್ನು ಹೊಂದಿದ್ದರೆ ಅವರೊಂದಿಗೆ ಕುಳಿತು ಮಾತನಾಡುವ ಮೂಲಕ ನಿಮ್ಮ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಿ. ನೀವು ಉದ್ಯೋಗ ನಿಮಿತ್ತ ದೂರದೂರಿಗೆ ಪ್ರಯಾಣ ಮಾಡಬೇಕಾಗಬಹುದು. ಅದಕ್ಕಾಗಿ, ಮಾನಸಿಕವಾಗಿ ಸಿದ್ದರಾಗಿರಿ.   ನಿಮ್ಮ ಪ್ರೀತಿಪಾತ್ರರ ಯೋಗಕ್ಷೇಮದ ಬಗ್ಗೆ ನಿಗಾವಹಿಸಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News