ಇನ್ನೆರಡು ದಿನಗಳಲ್ಲಿ 4 ರಾಶಿಯವರಿಗೆ ಅಪಾರ ಸಂಪತ್ತು ನೀಡಲಿದೆ ಲಕ್ಷ್ಮೀ ನಾರಾಯಣ ರಾಜಯೋಗ

ನಾಳೆ, ಡಿಸೆಂಬರ್ 28, 2029 ರಂದು, ಬುಧ ಸಂಕ್ರಮಣದ ನಂತರ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮರುದಿನ ಅಂದರೆ ಡಿಸೆಂಬರ್ 29, 2022 ರಂದು, ಶುಕ್ರ ಕೂಡಾ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಬುಧ ಮತ್ತು ಶುಕ್ರ ರಾಶಿಯನ್ನು ಬದಲಿಸಿ ಮಕರ ರಾಶಿ ಪ್ರವೇಶಿಸುವುದರಿಂದ ಲಕ್ಷ್ಮೀ ನಾರಾಯಣ ರಾಜಯೋಗ ಉಂಟಾಗುತ್ತದೆ. 

Written by - Ranjitha R K | Last Updated : Dec 27, 2022, 10:50 AM IST
  • ನಾಳೆ ಅಂದರೆ ಡಿಸೆಂಬರ್ 28, 2029 ರಂದು, ಬುಧ ಸಂಕ್ರಮಣ
  • ಡಿಸೆಂಬರ್ 29, 2022 ರಂದು ಮಕರ ರಾಶಿ ಪ್ರವೇಶಿಸಲಿರುವ ಶುಕ್ರ
  • ರೂಪುಗೊಳ್ಳುವುದು ಲಕ್ಷ್ಮೀ ನಾರಾಯಣ ರಾಜಯೋಗ
ಇನ್ನೆರಡು ದಿನಗಳಲ್ಲಿ  4 ರಾಶಿಯವರಿಗೆ ಅಪಾರ ಸಂಪತ್ತು ನೀಡಲಿದೆ  ಲಕ್ಷ್ಮೀ ನಾರಾಯಣ ರಾಜಯೋಗ title=
Mercury Venus Transit December 2022

ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಪ್ರತಿ ಗ್ರಹವು ಒಂದು ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತದೆ. ನಾಳೆ, ಡಿಸೆಂಬರ್ 28, 2029 ರಂದು, ಬುಧ ಸಂಕ್ರಮಣದ ನಂತರ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮರುದಿನ ಅಂದರೆ ಡಿಸೆಂಬರ್ 29, 2022 ರಂದು, ಶುಕ್ರ ಕೂಡಾ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಬುಧ ಮತ್ತು ಶುಕ್ರ ರಾಶಿಯನ್ನು ಬದಲಿಸಿ ಮಕರ ರಾಶಿ ಪ್ರವೇಶಿಸುವುದರಿಂದ ಲಕ್ಷ್ಮೀ ನಾರಾಯಣ ರಾಜಯೋಗ ಉಂಟಾಗುತ್ತದೆ. ಜ್ಯೋತಿಷ್ಯದಲ್ಲಿ, ಲಕ್ಷ್ಮೀ ನಾರಾಯಣ ರಾಜಯೋಗವನ್ನು ಅತ್ಯಂತ ಮಂಗಳಕರ ಯೋಗವೆಂದು  ಕರೆಯಲಾಗುತ್ತದೆ. ಈ ಯೋಗದ ಕಾರಣದಿಂದ ಧನ ಸಂಪತ್ತು ಹರಿದು ಬರುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಡಿಸೆಂಬರ್ 29 ರಿಂದ,  ಕೆಲವು ರಾಶಿಯವರ ಜೀವನದಲ್ಲಿ ಸುವರ್ಣ ದಿನಗಳು ಪ್ರಾರಂಭವಾಗಲಿವೆ.  

ಲಕ್ಷ್ಮೀ ನಾರಾಯಣ ರಾಜಯೋಗವು  ಈ ರಾಶಿಯವರನ್ನು ಶ್ರೀಮಂತರನ್ನಾಗಿ ಮಾಡುತ್ತದೆ  :
ಮೇಷ ರಾಶಿ : ಬುಧ ಮತ್ತು ಶುಕ್ರರ ಸಂಯೋಗದಿಂದ ರೂಪುಗೊಳ್ಳುವ ಲಕ್ಷ್ಮೀ ನಾರಾಯಣ ರಾಜಯೋಗವು ಮೇಷ ರಾಶಿಯವರ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ. ಉದ್ಯೋಗದಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಪ್ರಗತಿಯೂ  ಕಂಡು ಬರುತ್ತದೆ. ವ್ಯಾಪಾರ ವೃದ್ಧಿಯಾಗಲಿದೆ. ಧನಲಾಭವಾಗಲಿದ್ದು, ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ವಿವಾಹಿತರ ಜೀವನ ಸುಖಮಯವಾಗಿರುತ್ತದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ.

ಇದನ್ನೂ ಓದಿ : Rahu Transit 2023: ಮುಂದಿನ ವರ್ಷ ರಾಹು ಸಂಕ್ರಮಣ, ಈ ಒಂದು ರಾಶಿಯ ಮೇಲೆ ಹೆಚ್ಚು ಪರಿಣಾಮ!

ಮಿಥುನ ರಾಶಿ : ಡಿಸೆಂಬರ್ 29 ರಿಂದ ರಚನೆಯಾಗುತ್ತಿರುವ ಲಕ್ಷ್ಮೀ ನಾರಾಯಣ ರಾಜಯೋಗವು ಮಿಥುನ ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡಬಹುದು. ಆತ್ಮವಿಶ್ವಾಸ ಹೆಚ್ಚಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಎಲ್ಲರ ಸಹಕಾರ ಮತ್ತು ಸಂತೋಷದಿಂದ ಸಮಯವು ಅದ್ಭುತವಾಗಿರುತ್ತದೆ. 

ತುಲಾ ರಾಶಿ : ಬುಧ ಮತ್ತು ಶುಕ್ರರ ರಾಶಿ ಬದಲಾವಣೆಯು ತುಲಾ ರಾಶಿಯವರಿಗೆ ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. ಈವರೆಗೆ ಇದ್ದ ಸಮಸ್ಯೆಗಳು ದೂರವಾಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಹಳೆಯ ಆರ್ಥಿಕ ಸಮಸ್ಯೆ ದೂರವಾಗಲಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.

ಇದನ್ನೂ ಓದಿ : Shani Dev: ಈ ಜನರಿಗೆ ಶನಿ ಎಂದಿಗೂ ಕಾಟ ಕೊಡುವುದಿಲ್ಲ, ಕಾರಣ ಇಲ್ಲಿದೆ

ವೃಶ್ಚಿಕ ರಾಶಿ : ಲಕ್ಷ್ಮೀ ನಾರಾಯಣ ರಾಜಯೋಗವು ವೃಶ್ಚಿಕ ರಾಶಿಯವರ ಮನಸ್ಸಿಗೆ ನೆಮ್ಮದಿ ನೀಡಲಿದೆ. ಧಾರ್ಮಿಕ ಕಾರ್ಯಗಳ ಕಡೆಗೆ ಒಲವು ಹೆಚ್ಚಾಗುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. 

 

(  ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News