ಮುಂದಿನ ಎರಡು ತಿಂಗಳು ಈ ರಾಶಿಯವರ ಜೀವನದಲ್ಲಿ ಹಾನಿಯುಂಟು ಮಾಡಲಿದ್ದಾನೆ ಮಂಗಳ: ಇಲ್ಲಿದೆ ಅದನ್ನು ತಡೆಯುವ ಕ್ರಮ

ವೈದಿಕ ಜ್ಯೋತಿಷ್ಯದಲ್ಲಿ ಧೈರ್ಯ, ಶೌರ್ಯ, ವಿವಾಹಕಾರಕ ಎಂದು ಬಣ್ಣಿಸಲಾಗಿರುವ ಮಂಗಳ ಗ್ರಹವು ನಿನ್ನೆಯಷ್ಟೇ ಮಿಥುನ ರಾಶಿಯನ್ನು ಪ್ರವೇಶಿಸಿದೆ. ಈ ಸಮಯದಲ್ಲಿ ಮಂಗಳನು ಕೆಲವು ರಾಶಿಯವರ ಜೀವನದಲ್ಲಿ ಅಮಂಗಳಕರ ಫಲಗಳನ್ನು ನೀಡಲಿದ್ದಾನೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ಈ ರಾಶಿಯವರನ್ನು ಮುಂದಿನ ಎರಡು ತಿಂಗಳುಗಳು ಬಹಳ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗುತ್ತದೆ. 

Written by - Yashaswini V | Last Updated : Mar 14, 2023, 08:32 AM IST
  • ಈ ಸಮಯದಲ್ಲಿ ಮಂಗಳನು ಕೆಲವು ರಾಶಿಯವರ ಜೀವನದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಲಿದ್ದಾನೆ ಎಂದು ಹೇಳಲಾಗುತ್ತಿದೆ.
  • ಮಂಗಳನ ಅಶುಭ ಫಲಗಳನ್ನು ಕಡಿಮೆ ಮಾಡಲು ಮಂಗಳವಾರವನ್ನು ತುಂಬಾ ಪ್ರಾಶಸ್ತ್ಯ ದಿನ ಎಂದು ಬಣ್ಣಿಸಲಾಗುತ್ತದೆ.
  • ಹಾಗಿದ್ದರೆ, ಮುಂದಿನ ಎರಡು ತಿಂಗಳು ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು. ಈ ಸಮಯದಲ್ಲಿ ಯಾವ ಕ್ರಮ ಕೈಗೊಳ್ಳಬೇಕು ತಿಳಿಯೋಣ.
ಮುಂದಿನ ಎರಡು ತಿಂಗಳು ಈ ರಾಶಿಯವರ ಜೀವನದಲ್ಲಿ ಹಾನಿಯುಂಟು ಮಾಡಲಿದ್ದಾನೆ ಮಂಗಳ: ಇಲ್ಲಿದೆ ಅದನ್ನು ತಡೆಯುವ ಕ್ರಮ  title=
Mangala Gochara

ಬೆಂಗಳೂರು: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಾರ್ಚ್ 13ರಂದು ವೃಷಭ ರಾಶಿಯನ್ನು ತೊರೆದು ಮಿಥುನ ರಾಶಿಯನ್ನು ಪ್ರವೇಶಿಸಿರುವ ಮಂಗಳ ಮೇ 10ರವರೆಗೆ ಇದೇ ರಾಶಿಯಲ್ಲಿ ಇರಲಿದ್ದಾನೆ. ಈ ಸಮಯದಲ್ಲಿ ಮಂಗಳನು ಕೆಲವು ರಾಶಿಯವರ ಜೀವನದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಮಂಗಳನ ಅಶುಭ ಫಲಗಳನ್ನು ಕಡಿಮೆ ಮಾಡಲು ಮಂಗಳವಾರವನ್ನು ತುಂಬಾ ಪ್ರಾಶಸ್ತ್ಯ ದಿನ ಎಂದು ಬಣ್ಣಿಸಲಾಗುತ್ತದೆ. ಹಾಗಿದ್ದರೆ, ಮುಂದಿನ ಎರಡು ತಿಂಗಳು ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು. ಈ ಸಮಯದಲ್ಲಿ ಮಂಗಳನ ಅಶುಭ ಫಲಗಳಿಂದ ಪರಿಹಾರ ಪಡೆಯುವುದು ಹೇಗೆ ಎಂದು ತಿಳಿಯೋಣ...

ಮುಂದಿನ ಎರಡು ತಿಂಗಳು ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು?
ವೃಷಭ ರಾಶಿ:

2023ರಲ್ಲಿ ಮಂಗಳನ ರಾಶಿ ಪರಿವರ್ತನೆಯು ವೃಷಭ ರಾಶಿಯವರಿಗೆ ಶುಭ ಎಂದು ಹೇಳಲಾಗುವುದಿಲ್ಲ. ಈ ಸಮಯದಲ್ಲಿ ವೃಷಭ ರಾಶಿಯವರು ಜೀವನದ ಪ್ರತಿ ಭಾಗದಲ್ಲಿಯೂ ಒಂದಿಲ್ಲೊಂದು ಬೇಸರ, ಒತ್ತಡವನ್ನು ಎದುರಿಸಬೇಕಾಗಬಹುದು. ಹಣಕಾಸಿನ ವಿಷಯದಲ್ಲೂ ಜಾಗರೂಕರಾಗಿರಿ. ಯಾರಿಗೂ ಕೂಡ ಸಾಲ ನೀಡುವುದನ್ನು ತಪ್ಪಿಸಿ.

ಕರ್ಕಾಟಕ ರಾಶಿ:
ಮಂಗಳ ಸಂಚಾರದಿಂದ ಕರ್ಕಾಟಕ ರಾಶಿಯವರ ಖರ್ಚು ವೆಚ್ಚಗಳು ಹೆಚ್ಚಾಗಲಿವೆ. ಅನಾವಶ್ಯಕ ಸುತ್ತಾಟ, ಕಠಿಣ ಪರಿಶ್ರಮದ ಹೊರತಾಗಿಯೂ ಹಿಡಿದ ಕೆಲಸ ಪೂರ್ಣಗೊಳ್ಳುವುದಿಲ್ಲ. ಇದರಿಂದ ಕೋಪಗೊಳ್ಳುವುದು ಸಹಜವೇ ಆದರೂ, ನಿಮ್ಮ ಕೋಪವನ್ನು ನಿಯಂತ್ರಿಸಿ. ಜೊತೆ ಜೊತೆಗೆ ಯಾವುದೇ ಕೆಲಸದಲ್ಲಿ ಶ್ರದ್ಧೆಯಿಂದ ಮುಂದುವರೆಯಿರಿ.

ಇದನ್ನೂ ಓದಿ- Chanakya Niti: ಪತಿ ಎಂದಿಗೂ ಪತ್ನಿಯೊಂದಿಗೆ ಈ 4 ವಿಷಯಗಳನ್ನು ಹಂಚಿಕೊಳ್ಳಬಾರದಂತೆ!

ವೃಶ್ಚಿಕ ರಾಶಿ:
ಮಂಗಳನ ಸಂಚಾರದ ಈ ಸಮಯದಲ್ಲಿ ನಿಮ್ಮ ಜೀವನದಲ್ಲಿ ನಾನಾ ರೀತಿಯ ಏರಿಳಿತಗಳನ್ನು ಕಾಣಬಹುದು. ಅದರಲ್ಲೂ ಉದ್ಯೋಗ ಸ್ಥಳದಲ್ಲಿ ಯಾರಾದರೂ ನಿಮ್ಮ ವಿರುದ್ಧ ಪಿತೂರಿ ಮಾಡಬಹುದು. ಅಂತಹವರಿಂದ ಎಚ್ಚರಿಕೆಯಿಂದ ಇರಿ. ಯಾವುದೇ ರೀತಿಯ ಅನಾವಶ್ಯಕ ವಾದ-ವಿವಾದಗಳನ್ನು ತಪ್ಪಿಸಿ.

ಮೀನ ರಾಶಿ:
ಮಂಗಳ ರಾಶಿ ಪರಿವರ್ತನೆಯು ಮೀನ ರಾಶಿಯವರಿಗೆ ಅನಿರೀಕ್ಷಿತ ಫಲಗಳನ್ನು ನೀಡಲಿದೆ. ಪ್ರಯಾಣದ ವೇಳೆ ಎಚ್ಚರಿಕೆಯಿಂದ ಇರಿ. ಕೌಟುಂಬಿಕ ಭಿನ್ನಾಭಿಪ್ರಾಯಗಳು ನಿಮ್ಮ ಒತ್ತಡಕ್ಕೆ ಕಾರಣವಾಗಬಹುದು. 

ಇದನ್ನೂ ಓದಿ- Shukra Mangal Gochar 2023: ಈ 5 ರಾಶಿಗಳಿಗೆ 1 ತಿಂಗಳ ಕಾಲ ಅದೃಷ್ಟವೋ ಅದೃಷ್ಟ..!

ಮಂಗಳನ ಅಶುಭ ಪರಿಣಾಮಗಳನ್ನು ಕಡಿಮೆ ಮಾಡಲು ಇಂದೇ ಈ ಕ್ರಮ ಕೈಗೊಳ್ಳಿ:
ಮಂಗಳ ಗ್ರಹ ದೋಷ ಪರಿಹಾರಕ್ಕೆ ಮಂಗಳವಾರವನ್ನು ತುಂಬಾ ಪ್ರಾಶಸ್ತ್ರ್ಯ ದಿನ ಎಂದು ಹೇಳಲಾಗುತ್ತದೆ. ಮಂಗಳವಾರದಂದು ಕೆಲವು ವಿಶೇಷ ಕ್ರಮಗಳನ್ನು ಕೈಗೊಳ್ಳುವುದರಿಂದ ಮಂಗಳ ದೋಷದಿಂದ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ.

ಮಂಗಳ ಶಾಂತಿಗಾಗಿ ಪರಿಹಾರಕ್ಕಾಗಿ ಈ ದಿನ ತಪ್ಪದೇ ಈ ಪರಿಹಾರಗಳನ್ನು ಕೈಗೊಳ್ಳಿ-
* ಪ್ರತಿ ಮಂಗಳವಾರ ಹನುಮಾನ್ ಜಿಯನ್ನು ಪೂಜಿಸಿ.
* ಮಂಗಳವಾರದಂದು ಬೆಳಿಗ್ಗೆ  ಹನುಮಾನ್ ಚಾಲೀಸಾ ಪಠಿಸಿ. ಸಾಧ್ಯವಾದರೆ ಪ್ರತಿನಿತ್ಯ  ಹನುಮಾನ್ ಚಾಲೀಸಾ ಪಠಿಸಿದರೆ ಒಳ್ಳೆಯದು.
* ಮಂಗಳವಾರದಂದು ಹನುಮಂತನಿಗೆ ಕೆಂಪು ಬಣ್ಣದ ವಸ್ತ್ರವನ್ನು ಧರಿಸಿ ಸಿಂಧೂರವನ್ನು ಅರ್ಪಿಸಿ. ಸುಂದರಕಾಂಡವನ್ನೂ ಪಠಿಸಿ. 
* ಪ್ರತಿ ಮಂಗಳವಾರದಂದು ಕನಿಷ್ಠ 108 ಬಾರಿ 'ಓಂ ಕ್ರನ್ ಕ್ರೀಂ ಕ್ರೌನ್ ಎಸ್: ಭೌಮಾಯ ನಮಃ' ಮಂತ್ರವನ್ನು ಪಠಿಸಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News