ಹೋಳಿ ಬಳಿಕ ಈ 4 ರಾಶಿಯವರ ಜೀವನದಲ್ಲಿ ಭಾರೀ ಅದೃಷ್ಟ ತರಲಿದ್ದಾನೆ ಮಂಗಳ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳಲ್ಲಿ ಯಾವುದೇ ಒಂದು ಗ್ರಹದ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಕೂಡ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಶುಭಕರ ಗ್ರಹ ಎಂದು ಪರಿಗಣಿಸಲ್ಪಟ್ಟಿರುವ ಮಂಗಳನು ಕೂಡ ಶೀಘ್ರದಲ್ಲೇ ರಾಶಿ ಪರಿವರ್ತನೆ ಮಾಡಲಿದ್ದು ಇದು ಕೆಲವು ರಾಶಿಯವರ ಅದೃಷ್ಟವನ್ನು ಬೆಳಗಲಿದೆ ಎಂದು ಹೇಳಲಾಗುತ್ತಿದೆ.

Written by - Yashaswini V | Last Updated : Feb 14, 2023, 08:11 AM IST
  • ಮಂಗಳನು ಮುಂದಿನ ತಿಂಗಳು ಮಾರ್ಚ್ 13, 2023 ರಂದು ಮಿಥುನ ರಾಶಿಗೆ ಪ್ರವೇಶಿಸಲಿದ್ದಾನೆ.
  • ಈ ಸಂದರ್ಭದಲ್ಲಿ ಕೆಲವು ರಾಶಿಯವರ ಜೀವನದಲ್ಲಿ ಸುಖ-ಸಂತೋಷಕ್ಕೆ ಪಾರವೇ ಇರುವುದಿಲ್ಲ ಎಂದು ಬಣ್ಣಿಸಲಾಗುತ್ತಿದೆ.
  • ಹೋಳಿ ಬಳಿಕ ಮಂಗಳನ ಕೃಪೆಯಿಂದ ನಾಲ್ಕು ರಾಶಿಯವರ ಜೀವನದಲ್ಲಿ ಸುಖ-ಸಂತೋಷದ ಜೊತೆಗೆ ಹಣದ ಹೊಳೆಯೇ ಹರಿಯಲಿದೆ ಎಂದು ಹೇಳಲಾಗುತ್ತಿದೆ.
ಹೋಳಿ ಬಳಿಕ ಈ 4 ರಾಶಿಯವರ ಜೀವನದಲ್ಲಿ ಭಾರೀ ಅದೃಷ್ಟ ತರಲಿದ್ದಾನೆ ಮಂಗಳ  title=
Mangala Gochara

ಬೆಂಗಳೂರು: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಂಗಳ ಗ್ರಹದ ರಾಶಿ ಬದಲಾವಣೆಯು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಮಂಗಳನು ಮುಂದಿನ ತಿಂಗಳು ಮಾರ್ಚ್ 13, 2023 ರಂದು ಮಿಥುನ ರಾಶಿಗೆ ಪ್ರವೇಶಿಸಲಿದ್ದಾನೆ. ಈ ಸಂದರ್ಭದಲ್ಲಿ ಕೆಲವು ರಾಶಿಯವರ ಜೀವನದಲ್ಲಿ ಸುಖ-ಸಂತೋಷಕ್ಕೆ ಪಾರವೇ ಇರುವುದಿಲ್ಲ ಎಂದು ಬಣ್ಣಿಸಲಾಗುತ್ತಿದೆ. ಹೋಳಿ ಬಳಿಕ ಮಂಗಳನ ಕೃಪೆಯಿಂದ ನಾಲ್ಕು ರಾಶಿಯವರ ಜೀವನದಲ್ಲಿ ಸುಖ-ಸಂತೋಷದ ಜೊತೆಗೆ ಹಣದ ಹೊಳೆಯೇ ಹರಿಯಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...

ಹೋಳಿ ಬಳಿಕ ಈ 4 ರಾಶಿಯವರ ಜೀವನದಲ್ಲಿ ಭಾರೀ ಅದೃಷ್ಟ ತರಲಿದ್ದಾನೆ ಮಂಗಳ:
ವೃಷಭ ರಾಶಿ:

ಹೋಳಿ ಬಳಿಕ ಮಂಗಳ ರಾಶಿ ಪರಿವರ್ತನೆಯು ಈ ರಾಶಿಯವರ ಸಂಪತ್ತನ್ನು ಹೆಚ್ಚಿಸಲಿದೆ. ಈ ಸಮಯದಲ್ಲಿ ನೀವು ಭೂಮಿ, ವಾಹನ ಖರೀದಿಸುವ ಯೋಗವೂ ಇದೆ. ಆದರೆ, ವಾಹನ ಚಾಲನೆ ವೇಳೆ ಎಚ್ಚರಿಕೆಯಿಂದ ಇರಿ. ನಿಮ್ಮ ಆರೋಗ್ಯದ ಬಗ್ಗೆಯೂ ಕೊಂಚ ಗಮನಹರಿಸುವುದು ಉತ್ತಮ.

ಇದನ್ನೂ ಓದಿ- ಈ 2 ದಿನ ಯಾವುದೇ ಕಾರಣಕ್ಕೂ ತುಳಸಿ ಗಿಡಕ್ಕೆ ನೀರೆರೆಯಬೇಡಿ

ಸಿಂಹ ರಾಶಿ:
ಹೋಳಿ ಬಳಿಕ ಮಂಗಳನ ರಾಶಿ ಬದಲಾವಣೆಯು ಸಿಂಹ ರಾಶಿಯವರಿ ಬಂಪರ್ ಪ್ರಯೋಜನವನ್ನು ನೀಡಲಿದೆ. ಉದ್ಯೋಗಸ್ಥರಿಗೆ ಪ್ರಮೋಷನ್ ಸಾಧ್ಯತೆ ಇದೆ.  ನೀವು ಹಿಂದೆ ಮಾಡಿದ ಹೂಡಿಕೆಗಳಿಂದ ಲಾಭವಾಗಲಿದೆ. ಹೊಸ ವ್ಯಾಪಾರ-ವ್ಯವಹಾರ ಆರಂಭಿಸಲು ಇದು ಸೂಕ್ತ ಸಮಯ.  

ಮಕರ ರಾಶಿ:
ಮಂಗಳ ಸಂಚಾರದಿಂದ ಈ ರಾಶಿಯವರಿಗೆ ಆದಾಯ ಹೆಚ್ಚಾಗಲಿದೆ. ವಿದೇಶದಲ್ಲಿ ಉದ್ಯೋಗ ಬಯಸುತ್ತಿರುವವರಿಗೆ ನಿಮ್ಮ ಆಸೆ ಶೀಘ್ರದಲ್ಲೇ ಈಡೇರಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಉತ್ತಮ ಸಮಯ. ನಿಮ್ಮನ್ನು ಬಹುದಿನಗಳಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆಗಳು ಈ ಸಮಯದಲ್ಲಿ ಬಗೆಹರಿಯಲಿವೆ.

ಇದನ್ನೂ ಓದಿ- Hindu New Year: ಶೀಘ್ರದಲ್ಲಿಯೇ ಹೊಸ ಸಂವತ್ಸರ ಆರಂಭ, 30 ವರ್ಷಗಳ ಬಳಿಕ ಶುಭ ಸಂಯೋಗ, ಈ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ

ಮೀನ ರಾಶಿ: 
ಮಂಗಳ ರಾಶಿ ಪರಿವರ್ತನೆಯು ಈ ರಾಶಿಯವರಿಗೆ ಪೂರ್ವಿಕರ ಆಸ್ತಿಯಿಂದ ಲಾಭವನ್ನು ತರಲಿದೆ. ವ್ಯಾಪಾರಸ್ಥರಿಗೆ ಉತ್ತಮ ಸಮಯವಾಗಿದೆ. ಉದ್ಯೋಗಸ್ಥರು ವೃತ್ತಿ ಜೀವನದಲ್ಲಿ ಹೊಸ ಉತ್ತುಂಗವನ್ನು ಏರುವ ಸಾಧ್ಯತೆ ಇದೆ. ಈ ರಾಶಿಯವರಿಗೆ ಹೊಸ ವಾಹನ, ಮನೆ ಖರೀದಿ ಯೋಗವೂ ಇದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News