Mahashivratri: ಶನಿಯ ಸಾಡೇಸಾತಿ ಹಾಗೂ ಎರಡೂವರೆ ವರ್ಷಗಳ ಕಾಟದಿಂದ ಮುಕ್ತಿಪಡೆಯಲು ಈ ಉಪಾಯ ಮಾಡಿ!

Rudrabhishek On Mahashivratri: ಫೆಬ್ರುವರಿ 18 ರಂದು ಈ ಬಾರಿ ಮಹಾಶಿವರಾತ್ರಿ ಮಹಾಪರ್ವವನ್ನು ಆಚರಿಸಲಾಗುತ್ತಿದೆ. ಈ ದಿನ ಶಿವನ ಸಂಪೂರ್ಣ ಕೃಪೆಗೆ ಪಾತ್ರರಾಗಲು ರುದ್ರಾಭಿಷೇಕ ಮಾಡಲಾಗುತ್ತದೆ. ಜೋತಿರ್ಲಿಂಗ ಸ್ಥಳದಲ್ಲಿ, ಮಹಾಶಿವರಾತ್ರಿ, ಪ್ರದೋಷ ಅಥವಾ ಶ್ರಾವಣ ಮಾಸದ ಸೋಮವಾರದಂದು ಮಾಡಲಾಗುವ ರುದ್ರಾಭಿಷೇಕ ಹೆಚ್ಚು ಫಲಪ್ರದವಾಗಿರುತ್ತದೆ.  

Written by - Nitin Tabib | Last Updated : Feb 16, 2023, 05:45 PM IST
  • "ಮಹಾ" ಎಂಬ ಪದದ ಅರ್ಥ ಶ್ರೇಷ್ಠ ಮತ್ತು "ಶಿವರಾತ್ರಿ" ಎಂದರೆ "ಶಿವನ ರಾತ್ರಿ".
  • ಈ ರಾತ್ರಿಯಲ್ಲಿ ಶಿವನು ತಾಂಡವ ನೃತ್ಯವನ್ನು ಮಾಡಿದನೆಂದು ನಂಬಲಾಗುತ್ತದೆ;
  • ಇದು ಸೃಷ್ಟಿ, ಸಂರಕ್ಷಣೆ ಮತ್ತು ವಿನಾಶದ ಚಕ್ರವನ್ನು ಪ್ರತಿನಿಧಿಸುತ್ತದೆ.
Mahashivratri: ಶನಿಯ ಸಾಡೇಸಾತಿ ಹಾಗೂ ಎರಡೂವರೆ ವರ್ಷಗಳ ಕಾಟದಿಂದ ಮುಕ್ತಿಪಡೆಯಲು ಈ ಉಪಾಯ ಮಾಡಿ! title=
ಮಹಾಶಿವರಾತ್ರಿಯಂದು ಸಾಡೆಸಾತಿಯಿಂದ ತಪ್ಪಿಸಿಕೊಳ್ಳುವ ಉಪಾಯಗಳು

Mahashivratri 2023: ಮಹಾಶಿವರಾತ್ರಿಯು ಹಿಂದೂ ತಿಂಗಳ ಫಾಲ್ಗುಣ ಮಾಸದ 13 ನೇ ರಾತ್ರಿ ಅಥವಾ 14 ನೇ ದಿನ (ಚತುರ್ದಶಿ ತಿಥಿ) ದಂದು ವಾರ್ಷಿಕವಾಗಿ ಆಚರಿಸಲಾಗುವ ಅತ್ಯಂತ ಪವಿತ್ರ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ಈ ವರ್ಷ, ಇದನ್ನು ಫೆಬ್ರವರಿ 18, 2023 ರಂದು ಆಚರಿಸಲಾಗುತ್ತದೆ. "ಮಹಾ" ಎಂಬ ಪದದ ಅರ್ಥ ಶ್ರೇಷ್ಠ ಮತ್ತು "ಶಿವರಾತ್ರಿ" ಎಂದರೆ "ಶಿವನ ರಾತ್ರಿ". ಈ ರಾತ್ರಿಯಲ್ಲಿ ಶಿವನು ತಾಂಡವ ನೃತ್ಯವನ್ನು ಮಾಡಿದನೆಂದು ನಂಬಲಾಗುತ್ತದೆ; ಇದು ಸೃಷ್ಟಿ, ಸಂರಕ್ಷಣೆ ಮತ್ತು ವಿನಾಶದ ಚಕ್ರವನ್ನು ಪ್ರತಿನಿಧಿಸುತ್ತದೆ. ಈ ದಿನದಂದು ಶಿವನು ಕೈಲಾಸ ಪರ್ವತದಲ್ಲಿ ಪಾರ್ವತಿ ದೇವಿಯನ್ನು ವಿವಾಹವಾದನೆಂದು ನಂಬಲಾಗಿದೆ.

ಈ ವರ್ಷ ಮಹಾಶಿವರಾತ್ರಿಯ ಜೊತೆಗೆ ಹಲವು ಶುಭ ಹಾಗೂ ಅಪರೂಪದ ಕಾಕತಾಳೀಯಗಳು ರೂಪಗೊಳ್ಳುತ್ತಿದ್ದು, ಹಬ್ಬದ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ. ಒಂದೆಡೆ ಸೂರ್ಯ, ಚಂದ್ರ ಮತ್ತು ಶನಿಯೊಂದಿಗೆ ತ್ರಿಗ್ರಹಿ ಯೋಗವು ರೂಪಿಸುತಿದ್ದರೆ, ಮತ್ತೊಂದೆಡೆ ಶನಿ ಪ್ರದೋಷ ವ್ರತವನ್ನು 2023 ರ ಮಹಾ ಶಿವರಾತ್ರಿಯ ದಿನದಂದು ಆಚರಿಸಲಾಗುತ್ತದೆ. ಹೀಗಾಗಿ, ಈ ಅಪರೂಪದ ಮತ್ತು ಮಂಗಳಕರ ಕಾಕತಾಳೀಯದಿಂದಾಗಿ, ಶನಿಯ ದೆಸೆಯಿಂದ ಬಾಧಿತ ಜನರು ಅಂದರೆ ಸಾಡೆಸಾತಿ ಮತ್ತು ಎರಡೂವರೆ ವರ್ಷಗಳ ಕಾಟವನ್ನು ಎದುರಿಸುವವರು ಸ್ವಲ್ಪ ನೆಮ್ಮದಿಯನ್ನು ಪಡೆಯಲಿದ್ದಾರೆ.

ಮಹಾಶಿವರಾತ್ರಿ 2023 ರ ದಿನಾಂಕ ಮತ್ತು ಸಮಯ ಮತ್ತು ಶನಿ ಪ್ರದೋಷ ವ್ರತ
ಮಹಾಶಿವರಾತ್ರಿ ಹಬ್ಬವನ್ನು ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನಾಂಕದಂದು ಆಚರಿಸಲಾಗುತ್ತದೆ, ಇದು ಫೆಬ್ರವರಿ 18, 2023 ರಂದು ರಾತ್ರಿ 08:05 ರಿಂದ ಪ್ರಾರಂಭವಾಗಿ ಫೆಬ್ರವರಿ 19, 2023 ರಂದು ಸಂಜೆ 04:21 ಕ್ಕೆ ಮುಕ್ತಾಯಗೊಳ್ಳುತ್ತದೆ. ಮಧ್ಯ ಶಿವರಾತ್ರಿ ಮಹಾಶಿವರಾತ್ರಿ ಪಾರಾಯನವು 19 ಫೆಬ್ರವರಿ 2023 ರಂದು ಬೆಳಗ್ಗೆ 6:57 ರಿಂದ ಮಧ್ಯಾಹ್ನ 3:25 ರವರೆಗೆ ಇರಲಿದ್ದು, ನಿಶಿತಾ ಕಾಲ ಪೂಜೆಯು ಫೆಬ್ರವರಿ 19 ರಂದು ಮಧ್ಯಾಹ್ನ 12:09 ರಿಂದ 1:00 ರವರೆಗೆ ಇರಲಿದೆ.

ಇದರೊಂದಿಗೆ ಮಹಾಶಿವರಾತ್ರಿಯ ದಿನದಂದು ಶನಿ ಪ್ರದೋಷ ಉಪವಾಸವನ್ನು ಸಹ ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಫಾಲ್ಗುನ್ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ದಿನಾಂಕವು ಶುಕ್ರವಾರ, ಫೆಬ್ರವರಿ 17, ರಾತ್ರಿ 11:38 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಶನಿವಾರ, ಫೆಬ್ರವರಿ 18, 2023 ರಂದು ರಾತ್ರಿ 08:05 ಕ್ಕೆ ಕೊನೆಗೊಳ್ಳುತ್ತದೆ.

ಮಹಾಶಿವರಾತ್ರಿ 2023 ರಂದು ತ್ರಿಗ್ರಹಿ ಯೋಗದ ರಚನೆ
ಮೂರು ಗ್ರಹಗಳು ಒಂದೇ ರಾಶಿಯಲ್ಲಿದ್ದಾಗ ತ್ರಿಗ್ರಹಿ ಯೋಗವು ರೂಪುಗೊಳ್ಳುತ್ತದೆ ಮತ್ತು ಈ ಸಮಯದಲ್ಲಿ ಕುಂಭ ರಾಶಿಯಲ್ಲಿ ಸೂರ್ಯ, ಚಂದ್ರ ಮತ್ತು ಶನಿ ಯುತಿ ಇರಲಿದೆ. ಮಹಾ ಶಿವರಾತ್ರಿ 2023 ಮತ್ತು ಶನಿ ಪ್ರದೋಷ ವ್ರತವು ಒಂದೇ ದಿನದಲ್ಲಿ ನಡೆಯುವುದರಿಂದ, ಈ ಯೋಗದ ಮಹತ್ವವು ಇನ್ನಷ್ಟು ಹೆಚ್ಚಾಗುತ್ತದೆ! ಈ ಯೋಗವು ಶನಿಯ ಸಾಡೆ ಸತಿ ಮತ್ತು ಎರಡೂವರೆ ವರ್ಷಗಳ ದುಷ್ಪರಿಣಾಮಗಳನ್ನು ಒಬ್ಬರ ಜೀವನದಿಂದ ಅಂತ್ಯಗೊಳಿಸಲು ಸಹಾಯ ಮಾಡುತ್ತವೆ.

ಮಹಾಶಿವರಾತ್ರಿ 2023 ರಂದು ಈ ಜ್ಯೋತಿಷ್ಯ ಪರಿಹಾರಗಳನ್ನು ಮಾಡಿ
ಮಹಾ ಶಿವರಾತ್ರಿಯ ಹಬ್ಬವನ್ನು ಭಾರತದ ವಿವಿಧ ಭಾಗಗಳಲ್ಲಿ ಅತ್ಯಂತ ಉತ್ಸಾಹ ಮತ್ತು ಉಲ್ಲಾಸದಿಂದ ಆಚರಿಸಲಾಗುತ್ತದೆ, ಪ್ರತಿಯೊಂದು ಪ್ರದೇಶವು ಹಬ್ಬವನ್ನು ಆಚರಿಸಲು ತನ್ನದೇ ಆದ ವಿಶಿಷ್ಟ ವಿಧಾನವನ್ನು ಹೊಂದಿದೆ. ಜನರು ಶಿವನ ದೇವಾಲಯಗಳಿಗೆ ಭೇಟಿ ನೀಡುತ್ತಾರೆ ಮತ್ತು ಶಿವನ ಆಶೀರ್ವಾದವನ್ನು ಪಡೆಯಲು ಪ್ರಾರ್ಥನೆ, ಬಿಲ್ವಪತ್ರಿ, ಧತ್ತೂರಿಯನ್ನು ಅರ್ಪಿಸುತ್ತಾರೆ ಮತ್ತು ಸಾಂಪ್ರದಾಯಿಕ ಸಂಗೀತ ಮತ್ತು ನೃತ್ಯವನ್ನು ಮಾಡುತ್ತಾರೆ, ಉಪವಾಸವನ್ನು ಆಚರಿಸುತ್ತಾರೆ, ರುದ್ರಾಭಿಷೇಕವನ್ನು ಮಾಡುತ್ತಾರೆ.

ಇದನ್ನೂ ಓದಿ-ಮೀನ ರಾಶಿಯಲ್ಲಿ ದೇವಗುರು ಬೃಹಸ್ಪತಿ ಉದಯ, ತ್ರಿಕೋನ ರಾಜಯೋಗದಿಂದ 3 ರಾಶಿಗಳ ಭಾಗ್ಯೋದಯ!

ಆದಾಗ್ಯೂ, ಮಹಾಶಿವರಾತ್ರಿಯ ದಿನದಂದು ರೂಪುಗೊಳ್ಳುತ್ತಿರುವ ಶುಭ ಕಾಕತಾಳೀಯಗಳ ಕಾರಣ, ಶನಿಯ ಸಾಡೇಸಾತಿ ಮತ್ತು ಎರಡೂವರೆ ವರ್ಷಗಳ ಕಾಟದಿಂದ ಬಳಲುತ್ತಿರುವ ಜನರು ಅವುಗಳಿಂದ ಮುಕ್ತರಾಗುವ ಅವಕಾಶವನ್ನು ಪಡೆಯಬಹುದು. ಶನಿಯ ದುಷ್ಪರಿಣಾಮಗಳನ್ನು ತೊಡೆದುಹಾಕಲು ಈ ಕೆಳಗಿನ ಉಪಾಯಗಳನ್ನು ಮಾಡಿ.

ಇದನ್ನೂ ಓದಿ-Mahashivratri 2023 ದಿನ ವಿಶೇಷ ಕಾಕತಾಳೀಯ ನಿರ್ಮಾಣ, ಹೊಳೆಯಲಿದೆ ಈ ಜನರ ಭಾಗ್ಯ!

>> ಎಳ್ಳನ್ನು ನೀರಿನಲ್ಲಿ ಬೆರೆಸಿ ಶಿವನ ಜಲಾಭಿಷೇಕವನ್ನು ಮಾಡಿ.
>> ಮಹಾಶಿವರಾತ್ರಿಯಂದು ಅಶ್ವತ್ಥ ಮರಕ್ಕೆ ನೀರನ್ನು ಅರ್ಪಿಸಿ ಮತ್ತು ಅದರ ಬೇರಿಗೆ ಐದು ಸಿಹಿತಿಂಡಿಗಳನ್ನು ಅರ್ಪಿಸಿ.
>> ಶನಿಯ ಸಾಡೇಸಾತಿ ಮತ್ತು ಎರಡೂವರೆ ವರ್ಷಗಳ ಕಾಟದಿಂದ ಬಾಧಿತರಾಗಿರುವ ಜನರು ಹನುಮನನ್ನು ಪೂಜಿಸಬೇಕು.
>>2023ರ ಮಹಾಶಿವರಾತ್ರಿಯಂದು ಛಾಯಾ ದಾನ ಮಾಡಿ.
>> ಈ ದಿನ ಶಿವಪುರಾಣವನ್ನು ಪಠಿಸಿ ಮತ್ತು ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸಿ.

ಇದನ್ನೂ ಓದಿ-12 ಗಂಟೆಗಳ ಬಳಿಕ ಕುಂಭ ರಾಶಿಯಲ್ಲಿ ಸೂರ್ಯ, 3 ರಾಶಿಗಳ ಜನರಿಗೆ ಭಾರಿ ಧನಲಾಭ, ಬಡ್ತಿ-ಇನ್ಕ್ರಿಮೆಂಟ್ ಭಾಗ್ಯ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News