Mahalaxmi Vrat 2023: 16 ದಿನಗಳ ಮಹಾಲಕ್ಷ್ಮಿ ವ್ರತ ಪ್ರಾರಂಭ, ಪೌರಾಣಿಕ ಕಥೆ ತಿಳಿಯಿರಿ

Mahalaxmi Vrat 2023: ತಾಯಿ ಲಕ್ಷ್ಮಿದೇವಿಯ ಆಶೀರ್ವಾದವನ್ನು ಪಡೆಯಲು ಬಹುತೇಕರು ಭಕ್ತಿಯಿಂದ ಪೂಜಿಸುತ್ತಾರೆ. ತಾಯಿಯ ಆಶೀರ್ವಾದ ಪಡೆದ ವ್ಯಕ್ತಿಯು ಜೀವನದಲ್ಲಿ ಯಾವುದೇ ರೀತಿಯ ಕಷ್ಟವನ್ನು ಎದುರಿಸಬೇಕಾಗಿಲ್ಲ. ಮಹಾಲಕ್ಷ್ಮಿದೇವಿ ವೃತದ ಬಗ್ಗೆ ತಿಳಿಯಿರಿ.

Written by - Puttaraj K Alur | Last Updated : Sep 26, 2023, 10:48 PM IST
  • ಶುಕ್ರವಾರವು ತಾಯಿ ಲಕ್ಷ್ಮಿದೇವಿಯನ್ನು ಭಕ್ತಿ-ಭಾವದಿಂದ ಪೂಜಿಸಬೇಕು
  • ಭಾದ್ರಪದ ಶುಕ್ಲ ಪಕ್ಷದಲ್ಲಿ ಮಹಾಲಕ್ಷ್ಮಿ ಉಪವಾಸವನ್ನು ಆಚರಿಸಲಾಗುತ್ತದೆ
  • 16 ದಿನ ನಡೆಯುವ ಈ ಉಪವಾಸವನ್ನುಫಲಪ್ರದವೆಂದು ಪರಿಗಣಿಸಲಾಗುತ್ತದೆ
Mahalaxmi Vrat 2023: 16 ದಿನಗಳ ಮಹಾಲಕ್ಷ್ಮಿ ವ್ರತ ಪ್ರಾರಂಭ, ಪೌರಾಣಿಕ ಕಥೆ ತಿಳಿಯಿರಿ title=
ಮಹಾಲಕ್ಷ್ಮಿ ವ್ರತ ದಿನಾಂಕ

ಮಹಾಲಕ್ಷ್ಮಿ ವ್ರತ ದಿನಾಂಕ: ತಾಯಿ ಲಕ್ಷ್ಮಿದೇವಿಯ ಆಶೀರ್ವಾದ ಪಡೆದ ವ್ಯಕ್ತಿಯು ಶ್ರೀಮಂತನಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲವೆಂದು ನಂಬಲಾಗಿದೆ. ಹೀಗಾಗಿ ಜನರು ಲಕ್ಷ್ಮಿದೇವಿಯನ್ನು ಮೆಚ್ಚಿಸಲು ಪೂಜೆ ಮತ್ತು ವಿವಿಧ ಪರಿಹಾರ ಕ್ರಮಗಳನ್ನು ಮಾಡುತ್ತಾರೆ. ತಾಯಿ ಲಕ್ಷ್ಮಿದೇವಿ ತಮ್ಮ ಮನೆಯಲ್ಲಿ ನೆಲೆಸಲಿ ಆಶೀರ್ವಾದ ನೀಡಲಿ ಎಂದು ಭಕ್ತಿಯಿಂದ ಪೂಜಿಸುತ್ತಾರೆ.

ವಾಸ್ತವವಾಗಿ ಶುಕ್ರವಾರವು ಲಕ್ಷ್ಮಿದೇವಿಗೆ ಸಮರ್ಪಿತವಾಗಿದೆ. ಈ ದಿನ ಯಾರಾದರೂ ಮಾತೃದೇವತೆಯನ್ನು ಪೂಜಿಸಿದರೆ, ಅವರಿಗೆ ವಿಶೇಷ ಆಶೀರ್ವಾದ ಸಿಗುತ್ತದೆ. ಆದರೆ ಭಾದ್ರಪದ ಶುಕ್ಲ ಪಕ್ಷದಲ್ಲಿ ಮಹಾಲಕ್ಷ್ಮಿ ಉಪವಾಸವನ್ನು ಆಚರಿಸಲಾಗುತ್ತದೆ. 16 ದಿನಗಳ ಕಾಲ ನಡೆಯುವ ಈ ಉಪವಾಸವನ್ನು ವಿಶೇಷವಾಗಿ ಫಲಪ್ರದವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಈ ರಾಶಿಯವರಿಗೆ ಅದೃಷ್ಟದ ಕಾಲ ! ವರ್ಷದ ಬಳಿಕ ಧನ ಸಂಪತ್ತು ಕರುಣಿಸುತ್ತಿದ್ದಾರೆ ಸೂರ್ಯ ಮತ್ತು ಅಂಗಾರಕ

ಮುಕ್ತಾಯದ ದಿನಾಂಕ: ತಾಯಿ ಲಕ್ಷ್ಮಿದೇವಿಯ ಆಶೀರ್ವಾದ ಪಡೆಯಲು ಮಹಾಲಕ್ಷ್ಮಿ ವ್ರತ ಆರಂಭವಾಗಿದೆ. ಈ 16 ದಿನಗಳ ಕಾಲ ಮಹಿಳೆಯರು ಶಾಸ್ತ್ರೋಕ್ತವಾಗಿ ಲಕ್ಷ್ಮಿದೇವಿಯನ್ನು ವ್ರತವನ್ನು ಆಚರಿಸುತ್ತಾರೆ. ಭಾದ್ರಪದ ಶುಕ್ಲ ಪಕ್ಷದ ಅಷ್ಟಮಿ ತಿಥಿಯಿಂದ ಮಹಾಲಕ್ಷ್ಮಿ ವ್ರತ ಆರಂಭವಾಗುತ್ತದೆ. ಈ ಬಾರಿ ಭಾದ್ರಪದ ಶುಕ್ಲ ಪಕ್ಷದ ಅಷ್ಟಮಿ ತಿಥಿಯು ಸೆಪ್ಟೆಂಬರ್ 22ರಂದು ಬಂದಿದ್ದು, ಇದು ಅಶ್ವಿನ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಅಂದರೆ ಅಕ್ಟೋಬರ್ 6ರಂದು ಕೊನೆಗೊಳ್ಳುತ್ತದೆ.

ಪುರಾಣ: ತಾಯಿ ಮಹಾಲಕ್ಷ್ಮಿ ವ್ರತದ ಆರಂಭದ ಹಿಂದೆ ಒಂದು ಪೌರಾಣಿಕ ಕಥೆಯಿದೆ. ಮಹಾರಾಜ ಜಿಯುತ್‌ಗೆ ಮಕ್ಕಳಿರಲಿಲ್ಲ. ಅವರು ಲಕ್ಷ್ಮಿದೇವಿಯನ್ನು ಧ್ಯಾನಿಸಿದರು, ನಂತರ ಲಕ್ಷ್ಮಿದೇವಿಯು ಅವನ ಕನಸಿನಲ್ಲಿ ಕಾಣಿಸಿಕೊಂಡಳು ಮತ್ತು 16 ದಿನಗಳ ಕಾಲ ಉಪವಾಸ ಮಾಡುವಂತೆ ಕೇಳಿಕೊಂಡಳು. ಮಹಾರಾಜನು ತನ್ನ ಕನಸಿನಲ್ಲಿ ಲಕ್ಷ್ಮಿದೇವಿಯನ್ನು ನೋಡಿದ ನಂತರ ಅದೇ ರೀತಿ ಮಾಡಿದನು. ವ್ರತವನ್ನು ಆಚರಿಸಿದ ನಂತರ ಅವರಿಗೆ ಸಂತಾನ ಪ್ರಾಪ್ತಿಯಾಯಿತು ಎಂದು ಹೇಳಲಾಗುತ್ತದೆ. ಅಂದಿನಿಂದ ಈ ಸಂಪ್ರದಾಯವು ನಡೆದುಕೊಂಡು ಬಂದಿದೆ.

ಇದನ್ನೂ ಓದಿ: Vastu Tips: ಮನೆ ಮುಂದೆ ಬೇವಿನ ಮರ ಇರುವುದು ಶುಭವೋ? ಅಶುಭವೋ?

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News