Guru Rahu Yuti: ಈ ವರ್ಷದ ಆರಂಭದಲ್ಲಿ ಮೇಷ ರಾಶಿಗೆ ಪ್ರವೇಶಿಸಿರುವ ದೇವಗುರು ಬೃಹಸ್ಪತಿ ಸೆಪ್ಟೆಂಬರ್ 4, 2023 ರಿಂದ ಇದೇ ರಾಶಿಯಲ್ಲಿ ಹಿಮ್ಮುಖ ಚಲನೆಯನ್ನು ಆರಂಭಿಸಲಿದ್ದಾನೆ. 31 ಡಿಸೆಂಬರ್ 2023 ರವರೆಗೆ ಗುರು ಇದೇ ಸ್ಥಿತಿಯಲ್ಲಿ ಸಂಚರಿಸಲಿದ್ದಾನೆ. ಇನ್ನೊಂದೆಡೆ, ಸದಾ ಹಿಮ್ಮುಖವಾಗಿಯೇ ಚಲಿಸುವ ಪಾಪ ಗ್ರಹ, ಕ್ರೂರ ಗ್ರಹ ರಾಹು ಶೀಘ್ರದಲ್ಲೇ ಮೇಷ ರಾಶಿಯಲ್ಲಿ ತನ್ನ ವಕ್ರ ನಡೆಯನ್ನು ಆರಂಭಿಸಲಿದ್ದಾನೆ.
ಮೇಷ ರಾಶಿಯಲ್ಲಿ ಈ ಎರಡೂ ಗ್ರಹಗಳ ಹಿಮ್ಮುಖ ಚಲನೆಯಿಂದ ಇದೇ ರಾಶಿಯಲ್ಲಿ ಗುರು- ರಾಹು ಯುತಿ ನಿರ್ಮಾಣವಾಗುತ್ತಿದೆ. ಸೆಪ್ಟೆಂಬರ್ 4, 2023ರಿಂದ ಮೇಷ ರಾಶಿಯಲ್ಲಿ ರಾಹು ಮತ್ತು ಗುರು ಗ್ರಹಗಳ ಹಿಮ್ಮುಖ ನಡೆ ಆರಂಭವಾಗಲಿದ್ದು ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಮೇಷ ರಾಶಿಯಲ್ಲಿ ಗುರು-ರಾಹು ಸಂಯೋಜನೆಯು ಕೆಲವು ರಾಶಿಯವರ ಜೀವನದಲ್ಲಿ ನಾನಾ ರೀತಿಯ ಕಷ್ಟಗಳನ್ನು ತಂದೊಡ್ಡಲಿದೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ, ಈ ಸಮಯದಲ್ಲಿ ಯಾವ ರಾಶಿಯವರು ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ತಿಳಿಯೋಣ...
ಮೇಷ ರಾಶಿಯಲ್ಲಿ ಗುರು-ರಾಹು ಸಂಯೋಜನೆ: ಮೂರು ರಾಶಿಯವರ ಜೀವನದಲ್ಲಿ ಹೆಚ್ಚಾಗಲಿದೆ ಸಮಸ್ಯೆ:
ವೃಷಭ ರಾಶಿ:
ಮೇಷ ರಾಶಿಯಲ್ಲಿ ಗುರು-ರಾಹು ಹಿಮ್ಮುಖ ಚಲನೆ ಮತ್ತು ಗುರು-ರಾಹು ಗ್ರಹಗಳ ಸಂಯೋಜನೆಯು ವೃಷಭ ರಾಶಿಯವರ ಜೀವನದಲ್ಲಿ ನಾನಾ ರೀತಿಯ ಸವಾಲುಗಳನ್ನು ತಂದೊಡ್ಡಲಿವೆ. ಈ ಸಮಯದಲ್ಲಿ ನಿಮ್ಮ ಆದಾಯಕ್ಕಿಂತ ಖರ್ಚುಗಳು ಹೆಚ್ಚಾಗುವುದರಿಂದ ಹಣಕಾಸಿನ ತೊಂದರೆ ನಿಮ್ಮನ್ನು ಕಾಡಬಹುದು. ಮಾತ್ರವಲ್ಲ, ಆರೋಗ್ಯದ ಸ್ಥಿತಿಯೂ ಹದಗೆಡಬಹುದು. ಹಾಗಾಗಿ, ತುಂಬಾ ಎಚ್ಚರಿಕೆಯಿಂದ ಇರಿ.
ಇದನ್ನೂ ಓದಿ- Surya Gochar 2023: ಸಿಂಹ ರಾಶಿಗೆ ಸೂರ್ಯನ ಪ್ರವೇಶ, ಈ ರಾಶಿಯವರಿಗೆ ಕಷ್ಟದ ದಿನಗಳು ಆರಂಭ
ಕನ್ಯಾ ರಾಶಿ:
ಗುರು ರಾಹು ಹಿಮ್ಮುಖ ಚಲನೆಯು ಕನ್ಯಾ ರಾಶಿಯವರ ಜೀವನದಲ್ಲಿಯೂ ಸಮಸ್ಯೆಗಳನ್ನು ಹೆಚ್ಚಿಸಲಿದೆ. ಈ ಸಮಯದಲ್ಲಿ ನಿಮಗೆ ಗುಪ್ತ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೇ. ವೈಯಕ್ತಿಕ ಜೀವನದಲ್ಲಿ ಮಾತ್ರವಲ್ಲದೆ, ವೃತ್ತಿ ಜೀವನದಲ್ಲಿಯೂ ಹಲವು ಸಮಸ್ಯೆಗಳು ತಲೆ ದೂರಲಿವೆ. ಇದನ್ನು ನಿಭಾಯಿಸಲು ಮೊದಲೇ ಯೋಜನೆ ರೂಪಿಸಿ ಕಾರ್ಯಪ್ರವೃತ್ತರಾಗುವುದು ತುಂಬಾ ಅಗತ್ಯ. ವ್ಯಾಪಾರಸ್ಥರು ಬೇರೆಯವರನ್ನು ನಂಬಡೆ ಸ್ವ ಬುಡ್ಡಿಯಿಂದ ಮುಂದುವರೆದರಷ್ಟೇ ಲಾಭ, ಇಲ್ಲದಿದ್ದರೆ ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು.
ಇದನ್ನೂ ಓದಿ- Surya Gochara: ನಿಮ್ಮ ರಾಶಿಗೆ ಅನುಗುಣವಾಗಿ ಈ ಪರಿಹಾರ ಕೈಗೊಳ್ಳುವುದರಿಂದ ಬದಲಾಗಲಿದೆ ಅದೃಷ್ಟ
ವೃಶ್ಚಿಕ ರಾಶಿ:
ಮೇಷ ರಾಶಿಯಲ್ಲಿ ಗುರು ರಾಹುವಿನ ಹಿಮ್ಮುಖ ಚಲನೆಯು ವೃಶ್ಚಿಕ ರಾಶಿಯವರ ಜೀವನದಲ್ಲಿಯೂ ಕೂಡ ನಕಾರಾತ್ಮಕ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ಹಠಾತ್ ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು. ಮಾತ್ರವಲ್ಲ, ಅನಾವಶ್ಯಕ ಖರ್ಚುಗಳು ಕೂಡ ಹೆಚ್ಚಾಗಬಹುದು. ಆದಾಗ್ಯೂ, ನೀವು ಬಹಳ ಎಚ್ಚರಿಕೆಯಿಂದ ಮುಂದುವರೆದರೆ ಹಾಗೂ ಭಾವನಾತ್ಮಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳದೆ ಸರಿ-ತಪ್ಪುಗಳ ಬಗ್ಗೆ ವಿಮರ್ಶಿಸಿ ನಿರ್ಧಾರಗಳನ್ನು ಕೈಗೊಳ್ಳುವುದರಿಂದ ಭವಿಷ್ಯದಲ್ಲಿ ಹೆಚ್ಚಿನ ಲಾಭವನ್ನು ನಿರೀಕ್ಷಿಸಬಹುದು.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.