Vastu Tips: ಹೊಸ ವರ್ಷದ ಕ್ಯಾಲೆಂಡರ್ ಈ ದಿಕ್ಕಿನಲ್ಲಿದ್ದರೆ ಧನಾಗಮನ

Vastu Tips For Calendar: ವಾಸ್ತುವಿನಲ್ಲಿ ಮನೆಗೆ ಸಂಬಂಧಿಸಿದಂತೆ ಹಲವು ನಿಯಮಗಳನ್ನು ಉಲ್ಲೇಖಿಸಲಾಗಿದೆ. ಅಂತೆಯೇ ಮನೆಯ ಯಾವ ದಿಕ್ಕಿನಲ್ಲಿ ಹೊಸ ಕ್ಯಾಲೆಂಡರ್‌ ಅನ್ನು ಸ್ಥಾಪಿಸಿದರೆ ಶುಭವಾಗಲಿದೆ ಎಂಬ ಬಗ್ಗೆಯೂ ಉಲ್ಲೇಖಿಸಲಾಗಿದೆ. ನೀವೂ ಕೂಡ ನಿಮ್ಮ ಕುಟುಂಬದ ಏಳ್ಗೆ, ಸುಖ-ಸಂತೋಷಕ್ಕಾಗಿ ಮನೆಯ ಯಾವ ದಿಕ್ಕಿನಲ್ಲಿ ಕ್ಯಾಲೆಂಡರ್ ಸ್ಥಾಪಿಸುವುದು ಉತ್ತಮ ಎಂದು ತಿಳಿಯಿರಿ.

Written by - Yashaswini V | Last Updated : Jan 2, 2023, 07:20 AM IST
  • ವಾಸ್ತು ಶಾಸ್ತ್ರದ ಪ್ರಕಾರ, ಸರಿಯಾದ ದಿಕ್ಕಿನಲ್ಲಿ ಕ್ಯಾಲೆಂಡರ್ ಸ್ಥಾಪನೆಯಿಂದ ಅಂತಹ ಮನೆಯಲ್ಲಿ ಅದೃಷ್ಟ ಜಾಗೃತಗೊಳ್ಳುತ್ತದೆ.
  • ಮಾತ್ರವಲ್ಲ, ಇದರಿಂದ ಹಲವು ರೀತಿಯಲ್ಲಿ ಪ್ರಯೋಜನವಾಗುತ್ತದೆ ಎಂದು ಹೇಳಲಾಗುತ್ತದೆ.
  • ಹಾಗಿದ್ದರೆ ಹೊಸ ವರ್ಷದಲ್ಲಿ ಹೊಸ ಕ್ಯಾಲೆಂಡರ್ ಅನ್ನು ಮನೆಯ ಯಾವ ದಿಕ್ಕಿನಲ್ಲಿ ಸ್ಥಾಪಿಸುವುದು ಮಂಗಳಕರ ಎಂದು ತಿಳಿಯಿರಿ.
Vastu Tips: ಹೊಸ ವರ್ಷದ ಕ್ಯಾಲೆಂಡರ್ ಈ ದಿಕ್ಕಿನಲ್ಲಿದ್ದರೆ ಧನಾಗಮನ  title=
Vastu Tips For Calendar

Vastu Tips For Calendar: ಹೊಸ ವರ್ಷ 2023 ಆರಂಭವಾಗಿದೆ. ಹೊಸ ವರ್ಷದಲ್ಲಿ ಹಲವು ವಿಷಯಗಳು ಬದಲಾಗುತ್ತವೆ. ಅದರಲ್ಲೂ ಪ್ರಮುಖವಾಗಿ ಕ್ಯಾಲೆಂಡರ್ ಕೂಡ ಬದಲಾಗುತ್ತದೆ. ಆದರೆ, ವಾಸ್ತು ಪ್ರಕಾರ, ಕ್ಯಾಲೆಂಡರ್ ಅನ್ನು ಮನೆಯಲ್ಲಿ ಬೇಕಾಬಿಟ್ಟಿಯಾಗಿ ಎಲ್ಲೆಲ್ಲೋ ಸ್ಥಾಪಿಸುವುದರಿಂದ ವಾಸ್ತು ದೋಷ ಉಂಟಾಗಬಹುದು. ಇದರ ಬದಲಿಗೆ ಸರಿಯಾದ ದಿಕ್ಕಿನಲ್ಲಿ ಕ್ಯಾಲೆಂಡರ್ ಸ್ಥಾಪಿಸುವುದರಿಂದ ಅಂತಹ ಮನೆಯಲ್ಲಿ ಧನಾಗಮನವಾಗಿ ಸಂಪತ್ತಿಗೆ ಕೊರತೆ ಇರುವುದಿಲ್ಲ ಎಂದು ಹೇಳಲಾಗುತ್ತದೆ. 

ವಾಸ್ತು ಶಾಸ್ತ್ರದ ಪ್ರಕಾರ, ಸರಿಯಾದ ದಿಕ್ಕಿನಲ್ಲಿ ಕ್ಯಾಲೆಂಡರ್ ಸ್ಥಾಪನೆಯಿಂದ ಅಂತಹ ಮನೆಯಲ್ಲಿ ಅದೃಷ್ಟ ಜಾಗೃತಗೊಳ್ಳುತ್ತದೆ. ಮಾತ್ರವಲ್ಲ, ಇದರಿಂದ ಹಲವು ರೀತಿಯಲ್ಲಿ ಪ್ರಯೋಜನವಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ ಹೊಸ ವರ್ಷದಲ್ಲಿ ಹೊಸ ಕ್ಯಾಲೆಂಡರ್ ಅನ್ನು ಮನೆಯ ಯಾವ ದಿಕ್ಕಿನಲ್ಲಿ ಸ್ಥಾಪಿಸುವುದು ಮಂಗಳಕರ ಎಂದು ತಿಳಿಯಿರಿ.

ಮನೆಯ ಈ ದಿಕ್ಕಿನಲ್ಲಿ ಕ್ಯಾಲೆಂಡರ್ ಸ್ಥಾಪನೆಯಿಂದ ಧನವೃಷ್ಟಿ:
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಉತ್ತರ ದಿಕ್ಕನ್ನು ಕುಬೇರನ ದಿಕ್ಕು ಎಂದು ಹೇಳಲಾಗುತ್ತದೆ. ನೀವು ಮನೆಯ ಏಳ್ಗೆಗಾಗಿ, ಕುಟುಂಬಸ್ಥರ ಸುಖ-ಸಂತೋಷ, ಸಮೃದ್ಧಿಗಾಗಿ, ಹಣಕಾಸಿನ ಪ್ರಯೋಜನಗಳನ್ನು ಪಡೆಯಲು ಬಯಸಿದರೆ ಉತ್ತರ ದಿಕ್ಕಿನಲ್ಲಿ ಕ್ಯಾಲೆಂಡರ್ ಸ್ಥಾಪಿಸುವುದು ಉತ್ತಮ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ- Bathroom Vastu: ಬಾತ್ ರೂಂನಲ್ಲಿರುವ ಬಕೆಟ್ ಕೂಡ ನಿಮ್ಮ ಅದೃಷ್ಟವನ್ನು ಬದಲಿಸಬಹುದು

ಪೂರ್ವ ದಿಕ್ಕಿನಲ್ಲಿ ಕ್ಯಾಲೆಂಡರ್ ಸ್ಥಾಪನೆಯಿಂದ ಸಿಗುತ್ತೆ ಉತ್ತಮ ಅವಕಾಶ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯದೇವನನ್ನು ಗ್ರಹಗಳ ಅಧಿಪತಿ ಎಂದು ಪರಿಗಣಿಸಲಾಗಿದೆ. ಹಾಗಾಗಿ, ಸೂರ್ಯ ಉದಯಿಸುವ ದಿಕ್ಕು, ಪೂರ್ವ ದಿಕ್ಕಿನಲ್ಲಿ ಕ್ಯಾಲೆಂಡರ್ ಸ್ಥಾಪಿಸುವುದರಿಂದ ವೃತ್ತಿ ಜೀವನದಲ್ಲಿ ಉತ್ತಮ ಅವಕಾಶಗಳು ಪ್ರಾಪ್ತಿಯಾಗುತ್ತವೆ ಎಂದು ಹೇಳಲಾಗುತ್ತದೆ. ಇದಲ್ಲದೆ, ಈ ದಿಕ್ಕಿನಲ್ಲಿ ಕ್ಯಾಲೆಂಡರ್ ಸ್ಥಾಪನೆಯಿಂದ ಮಕ್ಕಳ ಪ್ರಗತಿಯ ಹಾದಿ ತೆರೆಯುತ್ತದೆ ಎಂಬ ನಂಬಿಕೆಯೂ ಇದೆ.

ಇದನ್ನೂ ಓದಿ- Vastu Tips 2023 : ಹೊಸ ವರ್ಷದಲ್ಲಿ ಪಾಲಿಸಿ ಈ ವಾಸ್ತು ಸಲಹೆಗಳನ್ನು, ನಿಮಗೆ ಪ್ರಗತಿ, ಗಳಿಕೆ ಹೆಚ್ಚಾಗುತ್ತದೆ!

ಅಪ್ಪಿತಪ್ಪಿಯೂ ಮನೆಯ ಈ ದಿಕ್ಕಿನಲ್ಲಿ ಕ್ಯಾಲೆಂಡರ್ ಸ್ಥಾಪಿಸಲೇಬೇಡಿ:
ವಾಸ್ತುವಿನ ಪ್ರಕಾರ, ಮನೆಯ ಮುಖ್ಯ ದ್ವಾರದಲ್ಲಿ ಅಥವಾ ಮನೆಗೆ ಪ್ರವೇಶಿಸುತ್ತಿದ್ದಂತೆ ಕ್ಯಾಲೆಂಡರ್ ಕಾಣುವ ರೀತಿಯಲ್ಲಿ ಎಂದಿಗೂ ಅದನ್ನು ಸ್ಥಾಪಿಸಬಾರದು. ಅದರಲ್ಲಿ ನಿಮ್ಮ ಮನೆಯ ಮುಖ್ಯ ದ್ವಾರ ದಕ್ಷಿಣಾಭಿಮುಖವಾಗಿದ್ದರೆ ಈ ಬಗ್ಗೆ ವಿಶೇಷ ಕಾಳಜಿವಹಿಸಿ. ಏಕೆಂದರೆ, ವಾಸ್ತುವಿನ ಪ್ರಕಾರ, ಈ ದಿಕ್ಕಿನಲ್ಲಿ ಕ್ಯಾಲೆಂಡರ್ ಸ್ಥಾಪನೆಯಿಂದ ನಿಮ್ಮ ಪ್ರಗತಿಗೆ ಅಡ್ಡಿಯುಂಟಾಗಬಹುದು ಎಂದು ಹೇಳಲಾಗುತ್ತದೆ. ಇದಲ್ಲದೆ, ಕೆಲವರು ಬಾಗಿಲಿನ ಹಿಂದೆ ಕ್ಯಾಲೆಂಡರ್ ನೇತು ಹಾಕುವ ಅಭ್ಯಾಸ ಹೊಂದಿರುತ್ತಾರೆ. ಈ ತಪ್ಪನ್ನು ಎಂದಿಗೂ ಮಾಡಲೇಬಾರದು. ಏಕೆಂದರೆ, ಇದು ಮನೆಯ ಮುಖ್ಯಸ್ಥರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ಮತ್ತು ಸಾಮಾನ್ಯ ಮಾಹಿತಿಯನ್ನು ಮಾತ್ರ ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News