ಬೆಂಗಳೂರು : ವೈದಿಕ ಜ್ಯೋತಿಷ್ಯದಲ್ಲಿ ಅನೇಕ ರೀತಿಯ ರಾಜ ಯೋಗಗಳನ್ನು ಹೇಳಲಾಗಿದೆ. ಗ್ರಹಗಳ ಸಂಚಾರ, ಗ್ರಹಗಳ ಸಂಯೋಗ ಮತ್ತು ವಿವಿಧ ಮನೆಗಳಲ್ಲಿ ಗ್ರಹಗಳ ಸ್ಥಾನದಿಂದಾಗಿ ರಾಜಯೋಗಗಳು ರೂಪುಗೊಳ್ಳುತ್ತವೆ. ಈ ರಾಜಯೋಗವು ಬಹಳ ಶುಭ ಫಲವನ್ನು ನೀಡುತ್ತದೆ. ಸದ್ಯಕ್ಕೆ ಮಂಗಳ ಗ್ರಹ ಮಿಥುನ ರಾಶಿಯಲ್ಲಿದ್ದು, ಶನಿಯು ಕುಂಭ ರಾಶಿಯಲ್ಲಿ ಉದಯಿಸಿದ್ದಾನೆ. ಈ ರೀತಿಯಾಗಿ ಶನಿಯ ಉದಯ ಮತ್ತು ಮಂಗಳ ಸಂಕ್ರಮಣ ಒಟ್ಟಿಗೆ ನವಪಂಚಮ ರಾಜಯೋಗವನ್ನು ರೂಪಿಸುತ್ತಿದೆ. ವಾಸ್ತವವಾಗಿ, ಈ ಸಮಯದಲ್ಲಿ ಮಂಗಳನು ಶನಿಯಿಂದ ಐದನೇ ಮನೆಯಲ್ಲಿ ಕುಳಿತಿದ್ದಾನೆ ಮತ್ತು ಶನಿಯು ಮಂಗಳನಿಂದ ಒಂಭ ತ್ತನೇ ಮನೆಯಲ್ಲಿ ಕುಳಿತಿದ್ದಾನೆ. ಈ ನವಪಂಚಮ ರಾಜಯೋಗವು ಮೂರು ರಾಶಿಯವರ ಜೀವನದಲ್ಲಿ ಅದೃಷ್ಟ ಹೊತ್ತು ತರಲಿದೆ.
ನವಪಂಚಮ ರಾಜಯೋಗವು ಈ ಜನರ ಅದೃಷ್ಟವನ್ನು ಬೆಳಗಿಸುತ್ತದೆ :
ಮೇಷ ರಾಶಿ : ನವಪಂಚಮ ರಾಜಯೋಗವು ಮೇಷ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಈ ರಾಶಿಯವರ ಧೈರ್ಯ ಹೆಚ್ಚಾಗುತ್ತದೆ. ಯಾವುದೇ ಕೆಲಸವನ್ನು ಸುಲಭವಾಗಿ ಮಾಡಿ ಮುಗಿಸುತ್ತಾರೆ. ವ್ಯಾಪಾರದಲ್ಲಿ ದೊಡ್ಡ ಮಟ್ಟದ ಲಾಭವಾಗಲಿದೆ. ಐಟಿ ಕ್ಷೇತ್ರದ ಜನರು ಹೆಚ್ಚು ಪ್ರಯೋಜನ ಪಡೆಯುತ್ತಾರೆ.
ಇದನ್ನೂ ಓದಿ : ಉತ್ತರ ಕರ್ನಾಟಕದ ಯುಗಾದಿ ಹಬ್ಬದ ವಿಶೇಷ ತಿಂಡಿ ತಿನಿಸುಗಳು..!
ಕನ್ಯಾ ರಾಶಿ : ನವಪಂಚಮ ರಾಜಯೋಗವು ಕನ್ಯಾ ರಾಶಿಯವರಿಗೂ ಪ್ರಯೋಜನಕಾರಿಯಾಗಿರಲಿದೆ. ಉದ್ಯೋಗದಲ್ಲಿ ಬಡ್ತಿ ಸಿಕ್ಕಿ, ವೇತನ ಹೆಚ್ಚಾಗುವ ಸಾಧ್ಯತೆ ಇದೆ. ದೊಡ್ಡ ಜವಾಬ್ದಾರಿ ಹೆಗಲೇರಬಹುದು. ದೊಡ್ಡ ಕಂಪನಿಯಿಂದ ಉನ್ನತ ಹುದ್ದೆಯ ಆಫರ್ ಬರಬಹುದು. ಶತ್ರುಗಳು ನಿಮ್ಮ ಮುಂದೆ ಮಂಡಿಯೂರುತ್ತಾರೆ.
ಕುಂಭ ರಾಶಿ : ನವಪಂಚಮ ರಾಜಯೋಗವು ಕುಂಭ ರಾಶಿಯವರ ಗೌರವವನ್ನು ಹೆಚ್ಚಿಸುತ್ತದೆ. ಕೆಲಸದ ಸ್ಥಳದಲ್ಲಿ ಖ್ಯಾತಿ ಹೆಚ್ಚಾಗುತ್ತದೆ. ವ್ಯಾಪಾರ ವೃದ್ಧಿಯಾಗಲಿದೆ. ಸ್ನೇಹಿತರು ಮತ್ತು ಸಹೋದರರ ಸಹಾಯದಿಂದ ದೊಡ್ಡ ಕೆಲಸವನ್ನು ಪೂರ್ಣಗೊಳಿಸುವುದು ಸಾಧ್ಯವಾಗುತ್ತದೆ. ಜೀವನದಲ್ಲಿ ಹಣದ ಹರಿವು ಹೆಚ್ಚಾಗುತ್ತದೆ. ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಇದು ಉತ್ತಮ ಸಮಯ.
ಇದನ್ನೂ ಓದಿ : ವಾಸ್ತು ಮಾತ್ರವಲ್ಲ ವಿಜ್ಞಾನವೂ ಹೇಳುತ್ತದೆ ಈ ದಿಕ್ಕಿಗೆ ತಲೆ ಹಾಕಿ ಮಲಗಬಾರದಂತೆ !
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.