ಇಂದಿನ ರಾಶಿ ಭವಿಷ್ಯ: ಆಂಜನೇಯನ ಕೃಪೆಯಿಂದ ಈ ಜನರ ಬಹುದಿನದ ಕನಸು ನನಸಾಗುವುದು.!

Horoscope Today 11 November 2023: ಕರ್ಕ ರಾಶಿಯ ಜನರ ಬುದ್ಧಿವಂತಿಕೆ ಮತ್ತು ತಿಳುವಳಿಕೆ ಕೆಲಸದಲ್ಲಿ ಉನ್ನತಿಯನ್ನು ತರುವುದು. ಉನ್ನತ ಅಧಿಕಾರಿಗಳು ನಿಮಗೆ ಅನೇಕ ದೊಡ್ಡ ಜವಾಬ್ದಾರಿಗಳನ್ನು ವಹಿಸಿಕೊಡಬಹುದು. ಗ್ರಾಹಕರ ಬೇಡಿಕೆಯನ್ನು ಪೂರೈಸುವುದು ವ್ಯಾಪಾರ ವರ್ಗದ ಆದ್ಯತೆಯಾಗಬೇಕು.   

Written by - Chetana Devarmani | Last Updated : Nov 11, 2023, 06:48 AM IST
  • ಇಂದು ಶನಿವಾರ, 11 ನವೆಂಬರ್‌ 2023
  • ಆಂಜನೇಯನ ಕೃಪೆಯಿಂದ ಈ ರಾಶಿಗಳಿಗೆ ಶುಭ ದಿನ
  • ಈ ರಾಶಿಯವರು ಭಾರಿ ಲಾಭವನ್ನು ಪಡೆಯುತ್ತಾರೆ
ಇಂದಿನ ರಾಶಿ ಭವಿಷ್ಯ: ಆಂಜನೇಯನ ಕೃಪೆಯಿಂದ ಈ ಜನರ ಬಹುದಿನದ ಕನಸು ನನಸಾಗುವುದು.!  title=

Daily Horoscope : ಶನಿವಾರದಂದು ಈ ರಾಶಿಗಳಿಗೆ ಅಪಾರ ಧನಲಾಭವಾಗಲಿದೆ. ಎಲೆಕ್ಟ್ರಾನಿಕ್ ಸಾಧನ ಮಾರಾಟ ಮಾಡುವ ಮಕರ ರಾಶಿಯವರು ಭಾರಿ ಲಾಭವನ್ನು ಪಡೆಯುತ್ತಾರೆ. ದೀಪಾವಳಿ ಹಬ್ಬದ ಪ್ರಭಾವದಿಂದ 12 ರಾಶಿಗಳ ಇಂದಿನ ಫಲಾಫಲ ಹೇಗಿದೆ ಎಂದು ತಿಳಿಯೋಣ.. 

ಮೇಷ ರಾಶಿ - ಈ ರಾಶಿಯ ಜನರು ಕೆಲಸದಲ್ಲಿ ಪ್ರಗತಿ ಹೊಂದಲು ಕ್ಲೀನ್ ಇಮೇಜ್ ಹೊಂದಿರುವುದು ಬಹಳ ಮುಖ್ಯ. ಬ್ಯುಸಿನೆಸ್ ವರ್ಗದವರಿಗೆ ಎಲ್ಲ ಕೆಲಸಗಳು ಸುಸೂತ್ರವಾಗಿ ಮುಗಿದು ಆತ್ಮವಿಶ್ವಾಸ ಹೆಚ್ಚುತ್ತದೆ. ಯುವಕರು ಆಪ್ತ ಸ್ನೇಹಿತನಿಗೆ ಆರ್ಥಿಕವಾಗಿ ಹಾಯ ಮಾಡಬೇಕಾಗಬಹುದು. 

ವೃಷಭ ರಾಶಿ - ಉನ್ನತ ಅಧಿಕಾರಿಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿರಬೇಕು. ಇದರಿಂದಕೆಲಸದಲ್ಲಿ ಯಶಸ್ಸು ಮತ್ತು ಖ್ಯಾತಿಯನ್ನು ಸಾಧಿಸಬಹುದು. ಚಿನ್ನ ಮತ್ತು ಬೆಳ್ಳಿ ವ್ಯಾಪಾರ ಮಾಡುವವರಿಗೆ ಲಾಭವಾಗಲಿದೆ. 

ಮಿಥುನ ರಾಶಿ - ಹೊಸ ಉದ್ಯೋಗಕ್ಕೆ ಸೇರಿದ ಈ ರಾಶಿಯ ಜನರು ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಿರೋಧಿಗಳು ವ್ಯಾಪಾರ ವರ್ಗವನ್ನು ಪ್ರಚೋದಿಸಲು ಪ್ರಯತ್ನಿಸಬಹುದು, ಆದರೆ ಅದರತ್ತ ನೀವು ಗಮನ ಕೊಡಬೇಡಿ. ಮಕ್ಕಳಿಗೆ ಶಿಕ್ಷಕರು ಮತ್ತು ಪೋಷಕರ ಮಾರ್ಗದರ್ಶನ ಬೇಕಾಗಬಹುದು. 

ಇದನ್ನೂ ಓದಿ : ದೀಪಾವಳಿಯಂದು ಗಜಕೇಸರಿ ರಾಜಯೋಗ.. ಈ ರಾಶಿಯ ಜನ ಲಕ್ಷಾಧಿಪತಿ ಆಗೋದು ಖಚಿತ, ಹಣದ ಜೊತೆ ನೆಮ್ಮದಿ ತರುವಳು ಶ್ರೀಲಕ್ಷ್ಮಿ! 

ಕರ್ಕ ರಾಶಿ - ನಿಮ್ಮ ಬುದ್ಧಿವಂತಿಕೆ ಮತ್ತು ತಿಳುವಳಿಕೆಯನ್ನು ನಂಬಿ, ಉನ್ನತ ಅಧಿಕಾರಿಗಳು ನಿಮಗೆ ಅನೇಕ ದೊಡ್ಡ ಜವಾಬ್ದಾರಿಗಳನ್ನು ವಹಿಸಿಕೊಡಬಹುದು. ಗ್ರಾಹಕರ ಬೇಡಿಕೆಗಳನ್ನು ಪೂರೈಸುವುದು ವ್ಯಾಪಾರ ವರ್ಗದ ಆದ್ಯತೆಯಾಗಿರಬೇಕು. ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವ ಯುವಕರು ಹೆಚ್ಚು ಶ್ರಮವಹಿಸಬೇಕು.  

ಸಿಂಹ ರಾಶಿ - ಈ ರಾಶಿಯ ಜನರು ಆಫೀಸ್‌ ಮೀಟಿಂಗ್‌ಗೆ ಹೋಗುತ್ತಿದ್ದರೆ ಇಂದಿನ ವಿಚಾರಗಳ ಬಗ್ಗೆ ಅಪ್‌ಡೇಟ್‌ ಆಗಿರುವುದು ಬಹಳ ಮುಖ್ಯ. ಈ ಬಗ್ಗೆ ವಿಶೇಷ ಕಾಳಜಿ ವಹಿಸಿ. ಇಂದು  ಯುವಕರು ಬಹುಮುಖ ಪ್ರತಿಭೆಗಳಾಗಬೇಕು. ಮನೆಗೆ ಕುಟುಂಬದ ಸದಸ್ಯರ ಆಗಮನದಿಂದ, ಮಹಿಳೆಯರಿಗೆ ಕೆಲಸದ ಹೊರೆ ಹೆಚ್ಚಾಗಬಹುದು.

ಕನ್ಯಾ ರಾಶಿ -  ಮಾಧ್ಯಮ ಪ್ರಪಂಚಕ್ಕೆ ಸಂಬಂಧಿಸಿದ ಜನರು ಉನ್ನತ ವ್ಯಕ್ತಿಗಳ ಕಥೆಗಳನ್ನು ಕವರ್ ಮಾಡಲು ಅವಕಾಶವನ್ನು ಪಡೆಯಬಹುದು. ವ್ಯಾಪಾರ ವರ್ಗದ ಆರ್ಥಿಕ ಸ್ಥಿತಿಯ ಬಲವಾಗುವ ಸಾಧ್ಯತೆಯಿದೆ. ಆದರೆ ನೀವು ಕಷ್ಟಪಟ್ಟು ಕೆಲಸ ಮಾಡಿದರೆ ಮಾತ್ರ ಇದು ಸಾಧ್ಯವಾಗುತ್ತದೆ.  

ತುಲಾ ರಾಶಿ - ಈ ರಾಯ ಜನರ ನಿರ್ವಹಣೆ ಕೆಲಸದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಇದರಿಂದಾಗಿ ನಿಮ್ಮ ಬಾಸ್ ಕೂಡ ಪ್ರಭಾವಿತರಾಗುತ್ತಾರೆ. ನಿಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಯಾವುದೇ ನೌಕರನ ಸಂಬಳ ಬಾಕಿ ಉಳಿದಿದ್ದರೆ ಸಾಧ್ಯವಾದಷ್ಟು ಬೇಗ ಪಾವತಿಸಬೇಕು. ಮನೆಯಲ್ಲಿ ಯಾವುದೇ ಪ್ರಮುಖ ವಿಷಯವನ್ನು ಚರ್ಚಿಸುವಾಗ ಸಂಯಮದಿಂದಿರಿ.

ವೃಶ್ಚಿಕ ರಾಶಿ - ವೃಶ್ಚಿಕ ರಾಶಿಯ ಜನರು ಕೆಲಸದ ಸಮಯದಲ್ಲಿ ಸ್ವಲ್ಪ ಕಿರಿಕಿರಿಯನ್ನು ಅನುಭವಿಸಬಹುದು. ಆದ್ದರಿಂದ ವಿರಾಮ ತೆಗೆದುಕೊಳ್ಳಿ ಮತ್ತು ಸ್ವಲ್ಪ ಸಮಯ ವಿಶ್ರಾಂತಿ ಪಡೆಯಿರಿ. ಸಾರಿಗೆ ವ್ಯಾಪಾರ ಮಾಡುವವರು ಹಣಕಾಸಿನ ವಿಷಯಗಳಿಗಾಗಿ ಯೋಜಿತ ರೀತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಇದರಿಂದ ನೀವು ಹಣಕಾಸಿನ ನಷ್ಟವನ್ನು ತಪ್ಪಿಸಬಹುದು. ಮನೆಯಲ್ಲಿ ಅಲಂಕಾರಿಕ ವಸ್ತುಗಳ ಸ್ಥಳವನ್ನು ಬದಲಾಯಿಸಲು ಸ್ವಲ್ಪ ಗಮನ ನೀಡಬೇಕು.

ಇದನ್ನೂ ಓದಿ : ಈ ರಾಶಿಗಳ ಅದೃಷ್ಟ ಬದಲಾಗಿದೆ.. ಸಂಪತ್ತು ಹುಡುಕಿ ಬರಲಿದೆ, ಕಷ್ಟ ದೂರ ಮಾಡಿ ಸುಖ ನೀಡುವರು ಶನಿ-ಶುಕ್ರ! 

ಧನು ರಾಶಿ - ಈ ರಾಶಿಯ ಜನರು ಬಾಸ್‌ ಆಗಿದ್ದರೆ ಅಧೀನದಲ್ಲಿರುವವರಿಗೆ ಅವರ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸಿ. ಆಗ ಮಾತ್ರ ಅವರು ತಮ್ಮ ಕೆಲಸವನ್ನು ಉತ್ತಮವಾಗಿ ಮಾಡಲು ಸಾಧ್ಯವಾಗುತ್ತದೆ. ದೊಡ್ಡ ಉದ್ಯಮಿಗಳೇ ಎಚ್ಚರವಾಗಿರಬೇಕು, ಹಬ್ಬದ ಭರಾಟೆಯಲ್ಲಿ ಯಾರೋ ನಿಮಗೆ ಹಣದ ವಿಚಾರದಲ್ಲಿ ವಂಚಿಸಬಹುದು. ಇಂದು  ಅದೃಷ್ಟವು ಹೆಚ್ಚಾಗುತ್ತದೆ . 

ಮಕರ ರಾಶಿ - ಮಕರ ರಾಶಿಯವರು ಹೆಚ್ಚು ಕೆಲಸ ನೋಡಿ ಗಾಬರಿಯಾಗಬಾರದು, ಒಂದೊಂದಾಗಿ ಕೆಲಸ ಮುಗಿಸಿದರೆ ಕೆಲಸ ಬೇಗ ಮುಗಿಯುತ್ತದೆ. ಎಲೆಕ್ಟ್ರಾನಿಕ್ ಗ್ಯಾಜೆಟ್‌ ಮಾರಾಟ ಮಾಡುವ ಉದ್ಯಮಿಗಳು ಭಾರಿ ಲಾಭವನ್ನು ಗಳಿಸುತ್ತಾರೆ. ಮನೆಯಲ್ಲಿ ಯಾರಿಗಾದರೂ ಕಣ್ಣಿನ ಸೋಂಕು ಇದ್ದರೆ, ಅವರಿಗೆ ಎಚ್ಚರವಾಗಿರಲು ಸಲಹೆ ನೀಡಿ. 

ಕುಂಭ ರಾಶಿ - ಇಂದು ನೀವು ನಿಮ್ಮ ಕೆಲಸದ ಸ್ಥಳದಲ್ಲಿರುವ ವಿರೋಧಿಗಳಿಂದ ಸ್ವಲ್ಪ ಜಾಗರೂಕರಾಗಿರಬೇಕು. ವ್ಯಾಪಾರ ವರ್ಗದವರಿಗೆ ಉತ್ತಮ ಲಾಭ ಬರುವ ಸಾಧ್ಯತೆ ಇದ್ದು, ಲಾಭದಿಂದಲೇ ಹಳೆ ಸಾಲ ಮರುಪಾವತಿಸಲು ಸಿದ್ಧತೆಯನ್ನೂ ಆರಂಭಿಸಬೇಕು. ಹಳೆಯ ಸ್ನೇಹಿತರನ್ನು ಭೇಟಿ ಮಾಡಲು ಮತ್ತು ಚಾಟ್ ಮಾಡಲು ನಿಮಗೆ ಅವಕಾಶ ಸಿಗುತ್ತದೆ.

ಮೀನ ರಾಶಿ - ಈ ರಾಶಿಯ ಜನರು ಮೀಟಿಂಗ್‌ ಸಮಯದಲ್ಲಿ ಬಾಸ್‌ಗೆ ನಿಮ್ಮ ಸಲಹೆಯನ್ನು ತಿಳಿಸಿ, ಅವರು ಇದನ್ನು ಇಷ್ಟಪಡಬಹುದು. ಉದ್ಯೋಗಿಗಳ ಕಠಿಣ ಪರಿಶ್ರಮ ಮತ್ತು ನಿಮ್ಮ ಬುದ್ಧಿವಂತಿಕೆಯಿಂದ ವ್ಯಾಪಾರ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಕುಟುಂಬದಲ್ಲಿ ತಾಯಿಯ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News