ದಿನಭವಿಷ್ಯ 17-06-2022: ಈ ರಾಶಿಯವರಿಗೆ ಇಂದು ವ್ಯರ್ಥ ಖರ್ಚು

ದಿನಭವಿಷ್ಯ 17, 2022:  ಶುಕ್ರವಾರ, ಕೆಲವು ರಾಶಿಯ ಜನರು ಸ್ವಲ್ಪ ಎಚ್ಚರಿಕೆಯಿಂದ ಖರ್ಚು ಮಾಡಬೇಕಾಗುತ್ತದೆ. ಇಲ್ಲದಿದ್ದರೆ... ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಿಸಬೇಕಾಗಬಹುದು. ಶುಕ್ರವಾರದಂದು ದ್ವಾದಶ ರಾಶಿಯವರಿಗೆ ದಿನ ಹೇಗಿರಲಿದೆ ಎಂದು ತಿಳಿಯೋಣ.

Written by - Yashaswini V | Last Updated : Jun 17, 2022, 07:03 AM IST
  • ಸಿಂಹ ರಾಶಿಯವರಿಗೆ ಇಂದು ಉದಾಸೀನತೆಯು ನಿಮ್ಮನ್ನು ಸ್ವಲ್ಪ ಚಂಚಲಗೊಳಿಸಬಹುದು.
  • ಧನು ರಾಶಿಯವರಿಗೆ ಇಂದು ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು.
  • ಮೀನ ರಾಶಿಯ ವಿವಾಹಿತರಿಗೆ ಇಂದು ಉತ್ತಮ ದಿನ.
ದಿನಭವಿಷ್ಯ 17-06-2022: ಈ ರಾಶಿಯವರಿಗೆ ಇಂದು ವ್ಯರ್ಥ ಖರ್ಚು  title=
Horoscope 17 June 2022

ದಿನಭವಿಷ್ಯ 17-06-2022 :   ಶುಕ್ರವಾರದಂದು ಕೆಲವು ರಾಶಿಯ ಜನರಿಗೆ ಖರ್ಚು ವೆಚ್ಚಗಳು ಹೆಚ್ಚಾಗಲಿವೆ. ಆದಾಗ್ಯೂ, ಸ್ವಲ್ವ ಜಾಗರೂಕತೆಯಿಂದ ಖರ್ಚು ಮಾಡಬೇಕಾಗುತ್ತದೆ. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಸಮಸ್ಯೆಗಳು ಎದುರಾಗಲಿವೆ. ಶುಕ್ರವಾರ ಯಾವ ರಾಶಿಯವರಿಗೆ ಹೇಗಿರಲಿದೆ ತಿಳಿಯಿರಿ...

ಮೇಷ ರಾಶಿ :- ಈ ದಿನ ಕಚೇರಿಯಲ್ಲಿ ಕೆಲಸ ಮಾಡುವ ಯುವಕರು ಪ್ರಮುಖ ವಿಚಾರಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸುವರು. ಇದರೊಂದಿಗೆ, ನೀವು ಕೆಲವು ಕಚೇರಿ ಕೆಲಸಗಳಿಗೆ ಸಂಬಂಧಿಸಿದಂತೆ ಹೊರಗೆ ಹೋಗಬಹುದು.

ವೃಷಭ ರಾಶಿ :- ಕಳೆದ ಹಲವು ದಿನಗಳಿಂದ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕರಿಗೆ ಇಂದು ವಿಶೇಷವಾಗಲಿದೆ, ಶೀಘ್ರದಲ್ಲೇ ವಿದೇಶದಿಂದ ಸುವರ್ಣ ಉದ್ಯೋಗಾವಕಾಶ ದೊರೆಯಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಮಿಥುನ ರಾಶಿ :- ಈ ದಿನ ಮಾತಿನ ಮೇಲೆ ಸ್ವಲ್ಪ ಸಂಯಮವನ್ನು ಇಟ್ಟುಕೊಳ್ಳಿ, ಆಗ ನೀವು ಯಾವುದೇ ದೊಡ್ಡ ವಿವಾದವನ್ನು ತಪ್ಪಿಸಬಹುದು. ನಿಮ್ಮ ಆರೋಗ್ಯ ಹದಗೆಡಬಹುದು.

ಕರ್ಕಾಟಕ ರಾಶಿ:- ಇಂದು ನಿಮ್ಮ ದಿನವನ್ನು ಮನರಂಜನೆ ಮತ್ತು ವಿನೋದದಲ್ಲಿ ಕಳೆಯಬಹುದು. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ.

ಇದನ್ನೂ ಓದಿ- Mangal Gochar: ಜೂನ್ 27 ರಿಂದ ಈ ರಾಶಿಯವರಿಗೆ ಕರುಣೆ ತೋರಲಿದ್ದಾನೆ ಮಂಗಳ

ಸಿಂಹ ರಾಶಿ:- ಇಂದು ಉದಾಸೀನತೆಯು ನಿಮ್ಮನ್ನು ಸ್ವಲ್ಪ ಚಂಚಲಗೊಳಿಸಬಹುದು. ಕೆಲಸದ ಸ್ಥಳದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಕೆಲಸ ಮಾಡಿ. ಇದರೊಂದಿಗೆ ಅಧಿಕಾರಿಗಳ ಜತೆ ವಾಗ್ವಾದ ಬೇಡ.

ಕನ್ಯಾ ರಾಶಿ:- ಇಂದು ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಏಕಾಗ್ರತೆ ಸಾಧ್ಯವಾಗುವುದಿಲ್ಲ. ಆತ್ಮೀಯ ವ್ಯಕ್ತಿಯನ್ನು ಭೇಟಿಯಾಗಬೇಕಾಗುವುದು. ನೀವು ಯಾರೊಬ್ಬರ ಕಡೆಗೆ ಆಕರ್ಷಣೆಯನ್ನು ಅನುಭವಿಸುವಿರಿ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಿ.

ತುಲಾ ರಾಶಿ:- ಇಂದು ನೀವು ಎಚ್ಚರಿಕೆಯಿಂದ ಮತ್ತು ಶಾಂತವಾಗಿರಬೇಕು. ಈ ದಿನ ಯಾವುದೇ ಪ್ರಯಾಣವನ್ನು ತಪ್ಪಿಸಿ. ಪೂರ್ವಿಕರ ಆಸ್ತಿಯ ವಿಚಾರದಲ್ಲಿ ಎಚ್ಚರಿಕೆಯಿಂದ ಮುಂದುವರಿಯಬೇಕು.

ವೃಶ್ಚಿಕ ರಾಶಿ:- ಇಂದು ನೀವು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ನೀವು ದೈಹಿಕ, ಮಾನಸಿಕ ತಾಜಾತನ ಮತ್ತು ಆನಂದವನ್ನು ಅನುಭವಿಸುವಿರಿ. ನೀವು ಕೆಲವು ಆಧ್ಯಾತ್ಮಿಕ ಕೆಲಸಗಳಲ್ಲಿ ಭಾಗವಹಿಸಬಹುದು.

ಇದನ್ನೂ ಓದಿ- Maha Lakshmi yoga: ಮಹಾಲಕ್ಷ್ಮಿ ಯೋಗದಿಂದ 3 ರಾಶಿಯವರಿಗೆ ಅದ್ಬುತ ಸಂಪತ್ತು

ಧನು ರಾಶಿ:- ಇಂದು ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಮನಸ್ಸಿನ ಗೊಂದಲದಿಂದಾಗಿ, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಷ್ಟವಾಗುತ್ತದೆ.

ಮಕರ ರಾಶಿ:- ಇಂದು ಕೌಟುಂಬಿಕ ವಾತಾವರಣ ತುಂಬಾ ಉತ್ತಮವಾಗಿರುತ್ತದೆ. ನೀವು ವಿಶೇಷ ಸ್ನೇಹಿತರನ್ನು ಭೇಟಿ ಮಾಡಬಹುದು. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಇಂದು ವಾಹನ ಚಲಾಯಿಸುವಾಗ ಜಾಗರೂಕರಾಗಿರಿ.

ಕುಂಭ ರಾಶಿ:- ಇಂದು ನೀವು ಹಣದ ವ್ಯವಹಾರದಲ್ಲಿ ಸ್ವಲ್ಪ ನಷ್ಟವನ್ನು ಅನುಭವಿಸಬೇಕಾಗಬಹುದು. ಯಾರಿಗಾದರೂ ಒಳ್ಳೆಯದನ್ನು ಮಾಡುವಲ್ಲಿ ನೀವು ನಷ್ಟವನ್ನು ತೆಗೆದುಕೊಳ್ಳಬಹುದು.

ಮೀನ ರಾಶಿ:- ಇಂದು ನೀವು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ. ನೀವು ವಿಶೇಷ ಸ್ನೇಹಿತರಿಂದ ಸಹಾಯ ಪಡೆಯುತ್ತೀರಿ. ವಿವಾಹಿತರಿಗೆ ಇಂದು ಉತ್ತಮ ದಿನ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
     

Trending News