Guru Chandal Yoga: ಈ ಮೂರು ರಾಶಿಯವರಿಗೆ ಆರ್ಥಿಕ ನಷ್ಟ, ಆರೋಗ್ಯದ ಮೇಲೂ ಕೆಟ್ಟ ಪರಿಣಾಮ

Guru Chandala Yoga: ಗ್ರಹಗಳಲ್ಲೆಲ್ಲಾ ಅತ್ಯಂತ ಬುದ್ದಿವಂತ ಗ್ರಹ, ಗ್ರಹಗಳ ಗುರು ಎಂದು ಕರೆಯಲ್ಪಡುವ ಬೃಹಸ್ಪತಿಯು ಪ್ರಸ್ತುತ ಮೇಷ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಇದಕ್ಕೂ ಮುನ್ನವೇ ಮೇಷ ರಾಶಿಯಲ್ಲಿ ಪಾಪ ಗ್ರಹ ರಾಹು ಕೂಡ ಸಂಚರಿಸುತ್ತಿದ್ದಾನೆ. ಗುರು ರಾಹುವಿನ ಸಂಯೋಗದಿಂದ ಗುರು ಚಂಡಾಲ ಯೋಗ ಸೃಷ್ಟಿಯಾಗಿದೆ. ಇದರ ಪ್ರಭಾವ ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೂ, ಕೆಲವು ರಾಶಿಯವರಿಗೆ ಈ ಸಂದರ್ಭದಲ್ಲಿ ತುಂಬಾ ಎಚ್ಚರಿಕೆ ಆಗತ್ಯ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Aug 8, 2023, 08:14 AM IST
  • ಈ ವರ್ಷ 2023ರ ಏಪ್ರಿಲ್‌ನಲ್ಲಿ ದೇವಗುರು ಬೃಹಸ್ಪತಿ ತನ್ನ ರಾಶಿ ಪರಿವರ್ತನೆ ಹೊಂದಿ ಮೇಷ ರಾಶಿಯನ್ನು ಪ್ರವೇಶಿಸಿದ್ದಾನೆ.
  • ಪಾಪ ಗ್ರಹ ರಾಹು ಈಗಾಗಲೇ ಮೇಷ ರಾಶಿಯಲ್ಲಿ ಉಪಸ್ಥಿತನಿದ್ದನು. ಗುರು 2024 ರ ಮೇ 1 ರಂದು ತನ್ನ ರಾಶಿಯನ್ನು ಬದಲಾಯಿಸುತ್ತಾನೆ.
  • ಪ್ರಸ್ತುತ, ಮೇಷ ರಾಶಿಯಲ್ಲಿ ಗುರು-ರಾಹು ಸಂಯೋಗದಿಂದಾಗಿ "ಗುರು ಚಂಡಾಲ ಯೋಗ" ನಿರ್ಮಾಣವಾಗಿದೆ.
Guru Chandal Yoga: ಈ ಮೂರು ರಾಶಿಯವರಿಗೆ ಆರ್ಥಿಕ ನಷ್ಟ, ಆರೋಗ್ಯದ ಮೇಲೂ ಕೆಟ್ಟ ಪರಿಣಾಮ  title=

Guru Chandala Yoga: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳಿಗೂ ಕೂಡ ಅದರದ್ದೇ ಆದ ಮಹತ್ವವಿದೆ. ಪ್ರತಿ ಗ್ರಹವೂ ಕೂಡ ತನ್ನದೇ ಆದ ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತದೆ. ಅದರಂತೆ, ದೇವ-ದೇವತೆಗಳ ಗುರು ಎಂತಲೇ ಕರೆಯಲ್ಪಡುವ ಬೃಹಸ್ಪತಿಯು ವರ್ಷಕ್ಕೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಇದಲ್ಲದೆ, ಪಾಪ ಗ್ರಹಗಳು ಎಂದು ಕರೆಯಲ್ಪಡುವ ಸದಾ ಹಿಮ್ಮುಖವಾಗಿಯೇ ಚಲಿಸುವ ರಾಹು-ಕೇತುಗಳು ಒಂದೂವರೆ ವರ್ಷಗಳಿಗೆ ಒಮ್ಮೆ ತಮ್ಮ ರಾಶಿಚಕ್ರವನ್ನು ಬದಲಾಯಿಸುತ್ತಾರೆ. 

ಈ ವರ್ಷ 2023ರ  ಏಪ್ರಿಲ್‌ನಲ್ಲಿ ದೇವಗುರು ಬೃಹಸ್ಪತಿ ತನ್ನ ರಾಶಿ ಪರಿವರ್ತನೆ ಹೊಂದಿ ಮೇಷ ರಾಶಿಯನ್ನು ಪ್ರವೇಶಿಸಿದ್ದಾನೆ. ಪಾಪ ಗ್ರಹ ರಾಹು ಈಗಾಗಲೇ ಮೇಷ ರಾಶಿಯಲ್ಲಿ ಉಪಸ್ಥಿತನಿದ್ದನು. ಗುರು 2024 ರ ಮೇ 1 ರಂದು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಅದಕ್ಕೂ ಮೊದಲು 30 ಅಕ್ಟೋಬರ್ 2023 ರಂದು ರಾಹು ರಾಶಿ ಪರಿವರ್ತನೆ ಆಗಲಿದೆ. 

ಪ್ರಸ್ತುತ, ಮೇಷ ರಾಶಿಯಲ್ಲಿ ಗುರು-ರಾಹು ಸಂಯೋಗದಿಂದಾಗಿ "ಗುರು ಚಂಡಾಲ ಯೋಗ" ನಿರ್ಮಾಣವಾಗಿದೆ.  ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಯೋಗವನ್ನು  ಅತ್ಯಂತ ಅಶುಭಕರ ಯೋಗವೆಂದು ಪರಿಗಣಿಸಲಾಗಿದೆ. ಯಾವ ವ್ಯಕ್ತಿಯ ಜಾತಕದಲ್ಲಿ ಗುರು ಚಂಡಾಲ ಯೋಗವಿದೆಯೋ ಅಂತಹ ವ್ಯಕ್ತಿಗೆ ಸಂಪತ್ತಿನ ನಷ್ಟವಾಗುತ್ತದೆ ಎಂದು ಹೇಳಲಾಗುತ್ತದೆ. ಮಾತ್ರವಲ್ಲ ಈ ಯೋಗದ ದುಷ್ಪರಿಣಾಮಗಳು ಅವರ ಆರೋಗ್ಯದ ಮೇಲೂ ಕಂಡು ಬರುತ್ತದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ- Shukra Gochara:  ಕರ್ಕಾಟಕ ರಾಶಿಯಲ್ಲಿ ಶುಕ್ರ ಸಂಚಾರ, ಹೆಚ್ಚಾಗಲಿದೆ ಈ ರಾಶಿಯವರ ಸಂಕಷ್ಟ

ವಾಸ್ತವವಾಗಿ, ಗುರು ಚಂಡಾಲ ಯೋಗವು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಇದನ್ನು ಮೂರು ರಾಶಿಯವರ ದೃಷ್ಟಿಯಿಂದ ತುಂಬಾ ಎಚ್ಚರಿಕೆಯ ಸಮಯ ಎಂದು ಹೇಳಲಾಗುತ್ತಿದೆ. ಹಾಗಾಗಿ, ಈ ರಾಶಿಯ ಜನರು 2023ರ ಅಕ್ಟೋಬರ್ ವರೆಗೆ ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುತ್ತಿದೆ. 

ಗುರು ಚಂಡಾಲ ಯೋಗ: ಈ ಮೂರು ರಾಶಿಯವರಿಗೆ ತುಂಬಾ ಎಚ್ಚರಿಕೆ ಅಗತ್ಯ :
ಮೇಷ ರಾಶಿ: 

ಸ್ವ ರಾಶಿಯಲ್ಲಿಯೇ ರಾಹು ಮತ್ತು ಗುರು ಸಂಯೋಗದಿಂದ ನಿರ್ಮಾಣವಾಗಿರುವ  ಗುರು ಚಂಡಾಲ ಯೋಗವು ಈ ರಾಶಿಯವರ ಮೇಲೆ ಗರಿಷ್ಠ ಪರಿಣಾಮವನ್ನು ಉಂಟು ಮಾಡಲಿದೆ. ಮುಂದಿನ ಅಕ್ಟೋಬರ್ ವರೆಗೆ ಮೇಷ ರಾಶಿಯವರು ಯಾವುದೇ ರೀತಿಯ ಹಣಕಾಸಿನ ವಹಿವಾಟಿನಲ್ಲಿ, ವ್ಯವಹಾರದಲ್ಲಿ ತುಂಬಾ ಎಚ್ಚರಿಕೆಯಿಂದ ಇರುವುದು ಅಗತ್ಯ. ಮಾತ್ರವಲ್ಲ, ನಿಮ್ಮ ಆರೋಗ್ಯದ ಬಗ್ಗೆಯೂ ವಿಶೇಷ ಕಾಳಜಿ ವಹಿಸಿ. ವೃತ್ತಿ ರಂಗದಲ್ಲೂ ಹಲವು ರೀತಿಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಮೈಯೆಲ್ಲಾ ಕಣ್ಣಾಗಿ ಕೆಲಸ ಮಾಡುವುದು ಅಗತ್ಯವಾಗಿದೆ. 

ಮಿಥುನ ರಾಶಿ: 
ಗುರು ಚಂಡಾಲ ಯೋಗವು ಮಿಥುನ ರಾಶಿಯ ಜನರಿಗೆ ಕೂಡ ಅಷ್ಟು ಮಂಗಳಕರ ಎಂದು ಹೇಳಲಾಗುವುದಿಲ್ಲ. ಈ ಸಮಯದಲ್ಲಿ ನೀವು ಎಷ್ಟೇ ಕಷ್ಟ ಪಟ್ಟು ಕೆಲಸ ಮಾಡಿದರೂ ನಿರೀಕ್ಷಿತ ಫಲ ದೊರೆಯದೇ ಇರುವುದು ನಿಮ್ಮ ಅಸಮಾಧಾನಕ್ಕೆ ಕಾರಣವಾಗಲಿದೆ. ಮುಂದಿನ ಅಕ್ಟೋಬರ್ ವರೆಗೆ ನಿಮ್ಮ ಆದಾಯಕ್ಕಿಂತ ಖರ್ಚುಗಳು ಹೆಚ್ಚಾಗುವುದರಿಂದ ಹಣಕಾಸಿನ ಸಮಸ್ಯೆಗಳು ಬಾಧಿಸಬಹುದು. ಆದಾಗ್ಯೂ, ಸಾಧ್ಯವಾದಷ್ಟು ಯಾರಿಗಾದರೂ ಸಾಲ ನೀಡುವುದಾಗಲಿ, ಇಲ್ಲವೇ ಯಾರಿಂದಾದರೂ ಸಾಲ ಪಡೆಯುವುದನ್ನಾಗಲಿ ಮಾಡದೇ ಇರುವುದು ತುಂಬಾ ಒಳ್ಳೆಯದು. ಉದ್ಯೋಗ ರಂಗದಲ್ಲೂ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮಾನಸಿಕವಾಗಿ ಸಿದ್ಧವಾಗಿರಿ. 

ಇದನ್ನೂ ಓದಿ- Weekly Horoscope: ಈ ವಾರ ಕೆಲವು ರಾಶಿಯವರಿಗೆ ಧನಯೋಗ, ಕೈ ತುಂಬಾ ಹಣ

ಕನ್ಯಾ ರಾಶಿ: 
ಮೇಷ ರಾಶಿಯಲ್ಲಿ ನಿರ್ಮಾಣವಾಗಿರುವ ಗುರು ಚಂಡಾಲ ಯೋಗವು ಕನ್ಯಾ ರಾಶಿಯ ಜನರಿಗೆ ಆರೋಗ್ಯ ಸಮಸ್ಯೆಗಳನ್ನು ಉಲ್ಪಣಗೊಳಿಸಲಿದೆ. ಅದರಲ್ಲೂ, ಗುಪ್ತ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಅಧಿಕವಾಗಿರುವುದರಿಂದ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ. ಅಪಘಾತಗಳ ಸಾಧ್ಯತೆ ಇರುವುದರಿಂದ ವಾಹನ ಚಾಲನೆಯಲ್ಲಿ ತುಂಬಾ ಎಚ್ಚರಿಕೆ ಅಗತ್ಯ. ಇದಲ್ಲದೆ, ಅಕ್ಟೋಬರ್ ಅಂತ್ಯದವರೆಗೆ ಯಾವುದೇ ರೀತಿಯ ಹೊಸ ಕೆಲಸಗಳಿಗೆ ಕೈ ಹಾಕದೆ ಇರುವುದು ಒಳ್ಳೆಯದು.  

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News