Grah Gochar 2023: ಮೇಷ ರಾಶಿಯಲ್ಲಿ ವಿನಾಶಕಾರಿ ಯೋಗ ಸೃಷ್ಟಿ: ಈ ರಾಶಿಯವರ ಜೀವನ ಸಮುದ್ರದ ಬಿರುಗಾಳಿಗೆ ಸಿಕ್ಕಂತಾಗುವುದು ಖಚಿತ!

Grah Gochar 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅತ್ಯಂತ ವಿನಾಶಕಾರಿ ಎಂದು ಪರಿಗಣಿಸಲಾದ ಗುರು ಚಂಡಾಲ ಯೋಗ ಸೃಷ್ಟಿಯಾಗಲಿದೆ. ಬುಧವು ಏಪ್ರಿಲ್ 21 ರಂದು ಮೇಷ ರಾಶಿಯನ್ನು ಮತ್ತು ಏಪ್ರಿಲ್ 22 ರಂದು ಗುರುವನ್ನು ಪ್ರವೇಶಿಸುವ ಕಾರಣದಿಂದ ಈ ಯೋಗ ರೂಪುಗೊಳ್ಳಲಿದೆ.

Written by - Bhavishya Shetty | Last Updated : Apr 3, 2023, 12:31 AM IST
    • ಬುಧವು ಏಪ್ರಿಲ್ 21 ರಂದು ಮೇಷ ರಾಶಿಯನ್ನು ಮತ್ತು ಏಪ್ರಿಲ್ 22 ರಂದು ಗುರುವನ್ನು ಪ್ರವೇಶಿಸುತ್ತಿದೆ
    • ಎರಡೂ ಗ್ರಹಗಳ ಸಂಯೋಜನೆಯು ಮೇಷದಲ್ಲಿ ಸಾಗುವ ಮೂಲಕ ಗುರು ಚಂಡಾಲ ಯೋಗ ಸೃಷ್ಟಿ
    • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಯೋಗವನ್ನು ಅತ್ಯಂತ ವಿನಾಶಕಾರಿ ಎಂದು ಪರಿಗಣಿಸಲಾಗಿದೆ
Grah Gochar 2023: ಮೇಷ ರಾಶಿಯಲ್ಲಿ ವಿನಾಶಕಾರಿ ಯೋಗ ಸೃಷ್ಟಿ: ಈ ರಾಶಿಯವರ ಜೀವನ ಸಮುದ್ರದ ಬಿರುಗಾಳಿಗೆ ಸಿಕ್ಕಂತಾಗುವುದು ಖಚಿತ!  title=
Grah Gochar 2023

Guru Chandala Yoga Effect: ವೈದಿಕ ಜ್ಯೋತಿಷ್ಯದ ಪ್ರಕಾರ, ಏಪ್ರಿಲ್ 2023 ರಲ್ಲಿ ಅನೇಕ ಗ್ರಹಗಳು ಕೆಲ ರಾಶಿಗಳಲ್ಲಿ ತನ್ನ ಸ್ಥಾನವನ್ನು ಬದಲಾಯಿಸುತ್ತಾ  ಹೋಗುತ್ತವೆ. ಈ ಸಮಯದಲ್ಲಿ, ಬುಧ ಗ್ರಹ ಮತ್ತು ದೇವಗುರು ಗ್ರಹ  ಮೇಷ ರಾಶಿಯಲ್ಲಿ ಸಾಗುತ್ತವೆ. ಬುಧವು ಏಪ್ರಿಲ್ 21 ರಂದು ಮೇಷ ರಾಶಿಯನ್ನು ಮತ್ತು ಏಪ್ರಿಲ್ 22 ರಂದು ಗುರುವನ್ನು ಪ್ರವೇಶಿಸುತ್ತಿದೆ. ಎರಡೂ ಗ್ರಹಗಳ ಸಂಯೋಜನೆಯು ಮೇಷದಲ್ಲಿ ಸಾಗುವ ಮೂಲಕ ಗುರು ಚಂಡಾಲ ಯೋಗವನ್ನು ಸೃಷ್ಟಿಸುತ್ತದೆ.

ಇದನ್ನೂ ಓದಿ: ಈ ಗಂಭೀರ ಕಾಯಿಲೆ ನಿವಾರಣೆಗೆ ಬೆಲ್ಲ-ಕಾಬೂಲಿ ಕಡಲೆ ಸೇವನೆ ಒಂದು ಸೂಪರ್ ಫುಡ್!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಯೋಗವನ್ನು ಅತ್ಯಂತ ವಿನಾಶಕಾರಿ ಎಂದು ಪರಿಗಣಿಸಲಾಗಿದೆ. ಗ್ರಹಗಳ ರಾಜನಾದ ಸೂರ್ಯನು ಈಗಾಗಲೇ ರಾಹು ಕುಳಿತಿರುವ ಮೇಷ ರಾಶಿಯನ್ನು ಪ್ರವೇಶಿಸಿದ್ದಾನೆ. ರಾಹು ಮತ್ತು ಸೂರ್ಯನ ಸಂಯೋಜನೆಯು ಗ್ರಹಣ ಯೋಗವನ್ನು ಸೃಷ್ಟಿಸುತ್ತದೆ. ಈ ಎರಡೂ ಯೋಗಗಳು ಏಪ್ರಿಲ್ ತಿಂಗಳಲ್ಲಿ ತುಂಬಾ ಅಪಾಯಕಾರಿ ಎಂದು ಸಾಬೀತುಪಡಿಸುತ್ತದೆ. ಅದಕ್ಕಾಗಿಯೇ ಕೆಲವು ರಾಶಿಗಳ ಜನರು ಹೆಚ್ಚು ಜಾಗರೂಕರಾಗಿರಬೇಕು. ಅಷ್ಟಕ್ಕೂ ಆ ರಾಶಿಚಕ್ರದ ಚಿಹ್ನೆಗಳು ಯಾವುವು ಎಂದು ತಿಳಿಯೋಣ.

ಸಿಂಹ ರಾಶಿ:

ಸಿಂಹ ರಾಶಿಯ ಜನರು ಏಪ್ರಿಲ್ ತಿಂಗಳಿನಲ್ಲಿ ಜಾಗರೂಕರಾಗಿರಬೇಕು. ಕೆಲಸದ ಸ್ಥಳದಲ್ಲಿ ನೀವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಈ ರಾಶಿಯ ಜನರಿಗೆ ಶತ್ರುಗಳಿಂದ ಭಾರೀ ಸಮಸ್ಯೆಯಿದೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ದುರ್ಬಲವಾಗಬಹುದು. ಅದಕ್ಕಾಗಿಯೇ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸಿ.

ತುಲಾ ರಾಶಿ:

ಏಪ್ರಿಲ್ ತಿಂಗಳಿನಲ್ಲಿ ಈ ಯೋಗವು ತುಲಾ ರಾಶಿಯವರಿಗೆ ಬಹಳ ತೊಂದರೆಗಳನ್ನು ಉಂಟುಮಾಡುತ್ತದೆ. ತುಲಾ ರಾಶಿಯ ಜನರು ಈ ಅವಧಿಯಲ್ಲಿ ತಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಜಾಗರೂಕರಾಗಿರಬೇಕು. ಇದಲ್ಲದೇ ಸಂಸಾರದಲ್ಲಿ ಬಿರುಕು ಮೂಡುವ ಸಾಧ್ಯತೆ ಇದೆ. ವೈವಾಹಿಕ ಜೀವನದ ಬಗ್ಗೆ ಮಾತನಾಡುವುದಾದರೆ ಮನೆಯಲ್ಲಿ ತೊಂದರೆಯಾಗುವ ಸಾಧ್ಯತೆಯಿದೆ. ಸಂಬಂಧವು ಮುರಿಯುವ ಅಂಚಿಗೆ ತಲುಪಬಹುದು.

ವೃಶ್ಚಿಕ ರಾಶಿ:

ಈ ಯೋಗವು ವೃಶ್ಚಿಕ ರಾಶಿಯವರಿಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಸಮಸ್ಯೆಗಳನ್ನು ಎದುರಿಸಬಹುದು, ಸಾಧ್ಯವಾದರೆ ಯಾವುದೇ ವಿವಾದಕ್ಕೆ ಒಳಗಾಗುವುದನ್ನು ತಪ್ಪಿಸಿ. ಈ ಯೋಗದಿಂದಾಗಿ ನೀವು ಭಾರೀ ಆರ್ಥಿಕ ನಷ್ಟವನ್ನೂ ಎದುರಿಸಬೇಕಾಗಬಹುದು. ದಾಂಪತ್ಯ ಜೀವನದಲ್ಲಿ ವಿರಹ ಉಂಟಾಗಬಹುದು.

ಇದನ್ನೂ ಓದಿ: Eclipse 2023: ಸೂರ್ಯಗ್ರಹಣ-ಚಂದ್ರಗ್ರಹಣದಿಂದ ನಿಮ್ಮ ಜೀವನದ ಮೇಲೆ ಬಹುದೊಡ್ಡ ಪರಿಣಾಮ!

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News