ನಾಳೆಯಿಂದ ಈ ಮೂರು ರಾಶಿಯವರ ಭಾಗ್ಯ ಬೆಳಗುತ್ತಾನೆ ಸೂರ್ಯ

ಶನಿ ಮತ್ತು ಸೂರ್ಯ ಸಂಯೋಗ ನಾಳೆ ಕೊನೆಗೊಳ್ಳುವುದರೊಂದಿಗೆ ಮೂರು ರಾಶಿಯವರ ಅದೃಷ್ಟ ಬೆಳಗಲಿದೆ.    

Written by - Ranjitha R K | Last Updated : Mar 14, 2023, 11:39 AM IST
  • ಜ್ಯೋತಿಷ್ಯದ ಪ್ರಕಾರ ಸೂರ್ಯ ಮತ್ತು ಶನಿಯ ಸಂಯೋಗವು ನಾಳೆ ಕೊನೆ
  • ಬೆಳಗಲಿದೆ ಮೂರು ರಾಶಿಯವರ ಅದೃಷ್ಟ
  • ಸೂರ್ಯನ ಸಂಕ್ರಮಣದಿಂದ ಮೂರು ರಾಶಿಯವರಿಗೆ ಹೆಚ್ಚು ಲಾಭ
ನಾಳೆಯಿಂದ ಈ ಮೂರು ರಾಶಿಯವರ ಭಾಗ್ಯ ಬೆಳಗುತ್ತಾನೆ ಸೂರ್ಯ  title=

ಬೆಂಗಳೂರು :  ಜ್ಯೋತಿಷ್ಯದ ಪ್ರಕಾರ ಸೂರ್ಯ ಮತ್ತು ಶನಿಯ ಸಂಯೋಗವು ನಾಳೆ ಕೊನೆಗೊಳ್ಳಲಿದೆ. ಇಲ್ಲಿಯವರೆಗೆ ಈ ಎರಡೂ ಗ್ರಹಗಳು ಒಂದೇ ರಾಶಿಯಲ್ಲಿ ಇರುವುದರಿಂದ ಕೆಲವು ರಾಶಿಯವರಿಗೆ ಸಮಸ್ಯೆ ಎದುರಾಗಿತ್ತು. ಆದರೆ ನಾಳೆಯಿಂದ ಈ ಕಷ್ಟದ ದಿನಗಳು ಕಳೆಯಲಿವೆ. ನಾಳೆ ಅಂದರೆ ಮಾರ್ಚ್ 15ರಂದು ಸೂರ್ಯನು ಕುಂಭ ರಾಶಿಯನ್ನು ಬಿಟ್ಟು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಮೂಲಕ ಶನಿ ಮತ್ತು ಸೂರ್ಯ ಸಂಯೋಗ ನಾಳೆ ಕೊನೆಗೊಳ್ಳುವುದರೊಂದಿಗೆ ಮೂರು ರಾಶಿಯವರ ಅದೃಷ್ಟ ಬೆಳಗಲಿದೆ. ಈ ರಾಶಿಯವರು ವೃತ್ತಿ ಕ್ಷೇತ್ರದಲ್ಲಿ ಅಪಾರ ಯಶಸ್ಸನ್ನು ಪಡೆಯುವುದು ಸಾಧ್ಯವಾಗುತ್ತದೆ. ಕೆಲವು ರಾಶಿಯವರಿಗೆ ಸೂರ್ಯ ಮತ್ತು ಶನಿಯ ಸಂಯೋಜನೆಯು ಲಾಭದಾಯಕವಾಗಿರಲಿದೆ. 

ಈ ಸೂರ್ಯನ ಸಂಕ್ರಮಣದಿಂದ ಮೂರು ರಾಶಿಯವರಿಗೆ ಹೆಚ್ಚು ಲಾಭ : 
ವೃಷಭ ರಾಶಿ : 
ಕೆಲಸದ ಸ್ಥಳದಲ್ಲಿ ಉನ್ನತ ಅಧಿಕಾರಿಗಳ ಬೆಂಬಲ ಸಿಗಲಿದೆ. ಮಾಡುವ ಕೆಲಸಕ್ಕೆ ಸೂಕ್ತ ಮನ್ನಣೆ ಸಿಗುವುದು. ವ್ಯಾಪಾರ ಮಾಡುವವರಿಗೂ ಹೆಚ್ಚು ಲಾಭವಾಗಲಿದೆ. ಉದ್ಯೋಗ ಪಡೆಯಲು ಹುಡುಕಾಟ ನಡೆಸುತ್ತಿರುವವರ ನಿರೀಕ್ಷೆ ಕೊನೆಯಾಗಲಿದೆ. 

ಇದನ್ನೂ ಓದಿ : ಶನಿ ಉದಯದಿಂದ ಶಶ ಮಹಾಪುರುಷ ರಾಜಯೋಗ ಸೃಷ್ಟಿ: ಇನ್ಮುಂದೆ ಈ ರಾಶಿಯವರು ಮುಟ್ಟಿದ್ದೆಲ್ಲಾ ಬಂಗಾರ!

ಕರ್ಕಾಟಕ ರಾಶಿ : 
ಸೂರ್ಯ ಪಥ ಬದಲಾಯಿಸುತ್ತಿದ್ದಂತೆಯೇ ಕರ್ಕಾಟಕ ರಾಶಿಯವರ ಅದೃಷ್ಟ ಕೂಡಾ ಬದಲಾಗಲಿದೆ. ಸರ್ಕಾರಿ ಕೆಲಸದಲ್ಲಿದ್ದವರು ಬಡ್ತಿ ಪಡೆಯಬಹುದು. ಇಲ್ಲಿಯವರೆಗೆ ಎದುರಿಸುತ್ತಿದ್ದ ಹಣದ ಕೊರತೆ ನೀಗಲಿದೆ. ಮಕ್ಕಳಿಂದ ನಿಮಗೆ ಸಿಗುವ ಸಂತೋಷ ಹೆಚ್ಚಾಗಲಿದೆ. 

ಮಕರ ರಾಶಿ : 
ಹೆಚ್ಚು ಸಂಪಾದನೆ ಈ ಹೊತ್ತಿನಲ್ಲಿ ಸಾಧ್ಯವಾಗಲಿದೆ. ವಿದೇಶದಲ್ಲಿ ಕೆಲಸ ಮಾಡುವವರಿಗೆ ಒಳ್ಳೆಯ ಸುದ್ದಿ ಬರಲಿದೆ. ಕೌಟುಂಬಿಕ ಕಲಹಗಳು ಕೊನೆಗೊಳ್ಳುತ್ತವೆ. ಸಮಾಜದಲ್ಲಿ ನಿಮ್ಮ ಮೌಲ್ಯ ಹೆಚ್ಚಾಗುತ್ತದೆ.

ಇದನ್ನೂ ಓದಿ :  Shukra Mangal Gochar 2023: ಈ 5 ರಾಶಿಗಳಿಗೆ 1 ತಿಂಗಳ ಕಾಲ ಅದೃಷ್ಟವೋ ಅದೃಷ್ಟ..!

 

( ಸೂಚನೆ : ಈ ಲೇಖನವು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ಇದನ್ನು Zee NEWS ದೃಢೀಕರಿಸುವುದಿಲ್ಲ. )

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News