Money Tips: ಪ್ರತಿದಿನ ರಾತ್ರಿ ಮಲಗುವ ಮುನ್ನ ಈ ಒಂದು ಕೆಲಸ ಮಾಡಿದ್ರೆ ಹಣ ಸುರಿಮಳೆಯಾಗುತ್ತದೆ!

ಹಣದ ವಾಸ್ತು ಸಲಹೆಗಳು: ವಾಸ್ತು ಶಾಸ್ತ್ರದಲ್ಲಿ ಕೆಲವು ಪರಿಹಾರಗಳನ್ನು ಉಲ್ಲೇಖಿಸಲಾಗಿದೆ. ಯಾವುದೇ ಒಬ್ಬ ವ್ಯಕ್ತಿಯು ಮಲಗುವ ಮೊದಲು ಈ ಸಲಹೆಗಳನ್ನು ಅಳವಡಿಸಿಕೊಂಡರೆ, ಆತನ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳನ್ನು ಕಾಣಬಹುದು. ಪ್ರತಿದಿನ ಅಳವಡಿಸಿಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳಿರಿ.

Written by - Puttaraj K Alur | Last Updated : Oct 16, 2023, 04:05 PM IST
  • ಸಂಪತ್ತನ್ನು ಹೆಚ್ಚಿಸಲು ವಾಸ್ತುಶಾಸ್ತ್ರದಲ್ಲಿ ಹಲವು ಕ್ರಮಗಳನ್ನು ಸೂಚಿಸಲಾಗಿದೆ
  • ರಾತ್ರಿ ಮಲಗುವ ಮೊದಲು ಕೆಲವು ಸಲಹೆ ಪಾಲಿಸಿದ್ರೆ ವ್ಯಕ್ತಿಯ ಸಂಪತ್ತು ಹೆಚ್ಚುತ್ತದೆ
  • ಧಾರ್ಮಿಕ ನಂಬಿಕೆಗಳ ಪ್ರಕಾರ ಸಂಪತ್ತಿನ ದೇವತೆ ಲಕ್ಷ್ಮಿದೇವಿಯು ಸಂಜೆ ಭೂಮಿಗೆ ಬರುತ್ತಾಳೆ
Money Tips: ಪ್ರತಿದಿನ ರಾತ್ರಿ ಮಲಗುವ ಮುನ್ನ ಈ ಒಂದು ಕೆಲಸ ಮಾಡಿದ್ರೆ ಹಣ ಸುರಿಮಳೆಯಾಗುತ್ತದೆ!  title=
ಹಣದ ವಾಸ್ತು ಸಲಹೆಗಳು

ನವದೆಹಲಿ: ಸಂಪತ್ತನ್ನು ಹೆಚ್ಚಿಸಲು ವಾಸ್ತುಶಾಸ್ತ್ರದಲ್ಲಿ ಹಲವು ಕ್ರಮಗಳನ್ನು ಸೂಚಿಸಲಾಗಿದೆ, ಇವುಗಳನ್ನು ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇವುಗಳಲ್ಲಿ ಕೆಲವು ಸಲಹೆಗಳನ್ನು ರಾತ್ರಿ ಮಲಗುವ ಮೊದಲು ಪಾಲಿಸಿದರೆ ವ್ಯಕ್ತಿಯ ಸಂಪತ್ತು ಹೆಚ್ಚುವುದು ಮಾತ್ರವಲ್ಲದೆ ನಕಾರಾತ್ಮಕತೆಯು ದೂರವಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಸಂಪತ್ತಿನ ದೇವತೆಯಾದ ಲಕ್ಷ್ಮಿದೇವಿಯು ಸಂಜೆ ಭೂಮಿಗೆ ಬರುತ್ತಾಳೆ.

ಹೀಗಾಗಿ ಸಂಜೆ ವೇಳೆ ಕೆಲವು ಸಲಹೆಗಳನ್ನು ಪಾಲಿಸುವ ಮೂಲಕ ಯಾವುದೇ ಒಬ್ಬ ವ್ಯಕ್ತಿಯು ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಇದಲ್ಲದೆ ಮನೆಯಲ್ಲಿ ಯಾವಾಗಲೂ ಸಕಾರಾತ್ಮಕ ಶಕ್ತಿ ಇರುತ್ತದೆ. ಮಲಗುವ ಮುನ್ನ ಮಾಡಬೇಕಾದ ಕೆಲವು ಕಾರ್ಯಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳಿರಿ. ಇದರಿಂದ ಯಾವುದೇ ವ್ಯಕ್ತಿಗೆ ಆರ್ಥಿಕ ಸಮಸ್ಯೆಗಳು ಬರುವುದಿಲ್ಲ ಮತ್ತು ಆತ ಲಕ್ಷ್ಮಿದೇವಿಯ ಆಶೀರ್ವಾದವನ್ನು ಪಡೆಯುತ್ತಾನೆ.

ಪ್ರತಿದಿನ ಮುಖ್ಯದ್ವಾರ ಸ್ವಚ್ಛಗೊಳಿಸಿ: ವಾಸ್ತುಶಾಸ್ತ್ರದ ಪ್ರಕಾರ ಸೂರ್ಯಾಸ್ತದ ಮೊದಲು ಮನೆಯ ಮುಖ್ಯದ್ವಾರವನ್ನು ಸ್ವಚ್ಛಗೊಳಿಸಿ. ಧಾರ್ಮಿಕ ನಂಬಿಕೆಗಳ ಪ್ರಕಾರ ಲಕ್ಷ್ಮಿದೇವಿಯು ಸಂಜೆ ಭೂಮಿಯಲ್ಲಿ ತಿರುಗಾಡಲು ಹೊರಬರುತ್ತಾಳೆ. ಹೀಗಾಗಿ ಯಾವಾಗಲೂ ಮನೆಯ ಮುಖ್ಯ ಬಾಗಿಲನ್ನು ಸ್ವಚ್ಛವಾಗಿಡಿ, ಇದು ಲಕ್ಷ್ಮಿದೇವಿಯನ್ನು ಮನೆಗೆ ಪ್ರವೇಶಿಸಲು ಸಹಾಯ ಮಾಡುತ್ತದೆ. ತಾಯಿ ಲಕ್ಷ್ಮಿದೇವಿಗೆ ಕೊಳೆ ಅಂದರೆ ಇಷ್ಟವಿಲ್ಲ. ಅವಳು ಯಾವಾಗಲೂ ಸ್ವಚ್ಛ ಪರಿಸರದಲ್ಲಿ ವಾಸಿಸುತ್ತಾಳೆ. ಆದ್ದರಿಂದ ಪ್ರತಿದಿನ ಸಂಜೆ ಮೊದಲು ಮುಖ್ಯ ಬಾಗಿಲನ್ನು ಸ್ವಚ್ಛಗೊಳಿಸಿ.

ಇದನ್ನೂ ಓದಿ: ತಲೆಹೊಟ್ಟು ಮತ್ತು ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರ ಕಾಫಿ ಪುಡಿ..! ಆದರೆ ಹೀಗೆ ಬಳಸಿ

ಉತ್ತರ ದಿಕ್ಕು ಮಂಗಳಕರ: ವಾಸ್ತು ಶಾಸ್ತ್ರದಲ್ಲಿ ಉತ್ತರ ದಿಕ್ಕನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕನ್ನು ದೇವರು ಮತ್ತು ದೇವತೆಗಳ ವಾಸಸ್ಥಾನವೆಂದು ಪರಿಗಣಿಸಲಾಗಿದೆ. ಆದ್ದರಿಂದಲೇ ಉತ್ತರ ದಿಕ್ಕಿಗೆ ಮಾತ್ರ ಮನೆಯ ಪೂಜಾ ಕೋಣೆಯನ್ನು ಸ್ಥಾಪಿಸಲು ಹೇಳಲಾಗುತ್ತದೆ. ಉತ್ತರ ದಿಕ್ಕನ್ನು ಕುಬೇರನ ದಿಕ್ಕು ಎಂದೂ ಕರೆಯುತ್ತಾರೆ. ಈ ದಿಕ್ಕಿನ ಶುಚಿತ್ವವನ್ನು ಗಮನದಲ್ಲಿಟ್ಟುಕೊಂಡು ಯಾವಾಗಲೂ ಸುರಕ್ಷಿತವಾಗಿ ಈ ದಿಕ್ಕಿನಲ್ಲಿ ಇರಿಸಿ. ಇದರಿಂದ ಸಂಪತ್ತು ಹೆಚ್ಚುತ್ತದೆ.

ದೇವಸ್ಥಾನದಲ್ಲಿ ಹಳೆಯ ಹೂ ಇಡಬೇಡಿ: ಮನೆಯ ಪೂಜಾ ಕೋಣೆಯಲ್ಲಿ ಬೆಳಗ್ಗೆ ಪೂಜಿಸಿದ ಹೂವುಗಳನ್ನು ರಾತ್ರಿಯವರೆಗೆ ಇಡಬಾರದು. ಈ ಹಳೆಯ ಹೂವುಗಳನ್ನು ಸಂಜೆ ತೆಗೆದುಹಾಕಬೇಕು. ಅಲ್ಲದೆ ಪಾತ್ರೆಯಲ್ಲಿ ಹಳಸಿದ ನೀರು ಇದ್ದರೆ, ಅದನ್ನು ಸಹ ತೆಗೆದುಹಾಕಿ.

ನಕಾರಾತ್ಮಕತೆ ತೊಡೆದುಹಾಕುವ ಮಾರ್ಗಗಳು: ಮನೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದರೆ ಲವಂಗವನ್ನು ಕರ್ಪೂರದಿಂದ ಸುಟ್ಟು ಹಾಕಿ. ಹೀಗೆ ಮಾಡುವುದರಿಂದ ನಿಮ್ಮ ಸಂಪತ್ತು ಹೆಚ್ಚುವುದಲ್ಲದೆ ಧನಾತ್ಮಕ ಶಕ್ತಿಯೂ ಹರಡುತ್ತದೆ.

ಇದನ್ನೂ ಓದಿ: Astro Tips: ದುರದೃಷ್ಟವನ್ನೂ ಅದೃಷ್ಟವಾಗಿ ಬದಲಾಯಿಸುತ್ತೆ ತುಳಸಿ ಎಲೆ

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News