Astro Tips: ಭಕ್ತಿಯಿಂದ ಒಂದೆರಡು ಬಿಲ್ವಪತ್ರೆಯನ್ನು ಅರ್ಪಿಸಿದರೂ ಸಾಕು ಭಕ್ತರ ಮಾತಿಗೆ ಕಿವಿಗೊಡುವ ಭೋಲೆನಾಥ ಇರುವಲ್ಲಿ ನಂದಿ ವಿಗ್ರಹ ಇಲ್ಲದಿದ್ದರೆ ಅದನ್ನು ಅಪೂರ್ಣ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರ ಮಾತ್ರವಲ್ಲ, ವಾಸ್ತು ಶಾಸ್ತ್ರದಲ್ಲಿಯೂ ಕೂಡ ಯಾವ ಮನೆಯಲ್ಲಿ ಶಿವಲಿಂಗವನ್ನು ಸ್ಥಾಪಿಸಲಾಗಿರುತ್ತದೆಯೋ ಅಂತಹ ಮನೆಯಲ್ಲಿ ನಂದಿ ವಿಗ್ರಹವನ್ನು ಸ್ಥಾಪಿಸುವುದು ಕೂಡ ಬಹಳ ಮುಖ್ಯ ಎಂದು ಉಲ್ಲೇಖಿಸಲಾಗಿದೆ. ಆದಾಗ್ಯೂ, ಮನೆಯಲ್ಲಿ ನಂದಿ ವಿಗ್ರಹವನ್ನು ಪ್ರತಿಷ್ಠಾಪಿಸುವಾಗ ಕೆಲವು ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯ ಎಂತಲೂ ಹೇಳಲಾಗುತ್ತದೆ.
ಮನೆಯಲ್ಲಿ ನಂದಿ ವಿಗ್ರಹವನ್ನು ಪ್ರತಿಷ್ಠಾಪಿಸುವಾಗ ನೆನಪಿರಲಿ ಈ ವಿಷಯಗಳು:-
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ನಂದಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡುವಾಗ ಕೆಲವು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ. ಅವುಗಳೆಂದರೆ...
* ಸೋಮವಾರದಂದು ನಂದಿಯ ವಿಗ್ರಹವನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಆದಾಗ್ಯೂ, ಒಂದೊಮ್ಮೆ ನಿಮಗೆ ಸೋಮವಾರದಂದು ನಂದಿ ವಿಗ್ರಹವನ್ನು ಖರೀದಿಸಲು ಸಾಧ್ಯವಾಗದಿದ್ದರೆ ಬುಧವಾರ, ಗುರುವಾರ ಅಥವಾ ಶುಕ್ರವಾರದ ದಿನ ಮನೆಗೆ ನಂದಿ ವಿಗ್ರಹವನ್ನು ತರಬಹುದು.
ಇದನ್ನೂ ಓದಿ- Shukra Margi 2023: ಈ ರಾಶಿಯವರಿ ಗೋಲ್ಡನ್ ಡೇಸ್ ಆರಂಭ, ವೃತ್ತಿಯಲ್ಲಿ ಪ್ರಗತಿ, ಕೈ ತುಂಬಾ ಹಣ
* ನಂದಿ ವಿಗ್ರಹವನ್ನು ಮನೆಗೆ ತಂದ ಬಳಿಕ ವಿಗ್ರಹಕ್ಕೆ ಹಸಿ ಹಾಲು, ತುಪ್ಪದಿಂದ ಅಭಿಷೇಕ ಮಾಡಿ. ಇದರ ನಂತರ, ನಂದಿ ವಿಗ್ರಹಕ್ಕೆ ಜಲಾಭಿಷೇಕವನ್ನು ಮಾಡಿ ಮತ್ತು ನಿರಂತರವಾಗಿ ಓಂ ನಮಃ ಶಿವಾಯ ಮಂತ್ರವನ್ನು ಜಪಿಸಿ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ರೀತಿ ಮಾಡುವುದರಿದ್ನ ವಿಗ್ರಹದ ದೋಷ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.
* ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಂದಿ ವಿಗ್ರಹವನ್ನು ಪೂಜಿಸುವಾಗ "ಓಂ ನಮಃ ಶಿವಾಯ" ಎಂಬ ಮಂತ್ರವನ್ನು ಪಠಿಸುವುದರಿಂದ ಭಕ್ತರ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.
* ಇನ್ನೊಂದು ಪ್ರಮುಖ ವಿಷಯವೆಂದರೆ, ಅಪ್ಪಿತಪ್ಪಿಯೂ ಕೂಡ ಶಿವಲಿಂಗದೊಂದಿಗೆ ನಂದಿ ವಿಗ್ರಹವನ್ನು ಇಡಬಾರದು. ಬದಲಿಗೆ ನಂದಿ ವಿಗ್ರಹವನ್ನು ಶಿವಲಿಂಗದ ಮುಂದೆ ಸ್ಥಾಪಿಸಬೇಕು ಎಂಬುದನ್ನು ನೆನಪಿನಲ್ಲಿಡಿ.
ಇದನ್ನೂ ಓದಿ- Mangala Gochar: ಮೂರು ರಾಶಿಯವರಿಗೆ ಅಪಾರ ಧನ-ಸಂಪತ್ತಿನ ಜೊತೆ ರಾಜಯೋಗ ನೀಡಲಿದ್ದಾನೆ ಮಂಗಳ
* ಇನ್ನೊಂದು ನಂಬಿಕೆಗಳ ಪ್ರಕಾರ, ಸಂಪತ್ತಿರುವ ಜಾಗದಲ್ಲಿ ನಂದಿ ವಿಗ್ರಹವನ್ನು ಸ್ಥಾಪಿಸುವುದರಿಂದ ಅಂತ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸಿರುತ್ತಾಳೆ ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.