Chanakya Niti: ನಿಮಗೆ ಯಶಸ್ಸು ಬೇಕಾದ್ರೆ ಈ 4 ವಿಷಯಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ!

ಜೀವನದಲ್ಲಿ ಪ್ರಗತಿ ಸಾಧಿಸುವುದು ಪ್ರತಿಯೊಬ್ಬರ ಬಯಕೆ. ಆದರೆ ಇದಕ್ಕಾಗಿ 4 ವಿಷಯಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳಬಾರದು. ಇಲ್ಲದಿದ್ದರೆ ನಿಮ್ಮ ಜೀವನ ನಾಶವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಚಾಣಕ್ಯ ನೀತಿಯಲ್ಲಿ ಈ 4 ವಿಷಯಗಳ ಬಗ್ಗೆ ಹೇಳಲಾಗಿದೆ.

Written by - Puttaraj K Alur | Last Updated : Dec 17, 2022, 10:02 AM IST
  • ಆಚಾರ್ಯ ಚಾಣಕ್ಯರ ಪ್ರಕಾರ ಯಾವುದೇ ವ್ಯಕ್ತಿ ತನ್ನ ಸ್ವಾಭಿಮಾನದೊಂದಿಗೆ ರಾಜಿ ಮಾಡಿಕೊಳ್ಳಬಾರದು
  • ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ನೀವು ಪ್ರಾಣಸ್ನೇಹಿತರನ್ನು ದೂರವಿಡಬಾರದು
  • ಸಮಯಕ್ಕೆ ಬೆಲೆ ಕೊಡುವ ಮೂಲಕ ನೀವು ಸರಿಯಾದ ಸಮಯಕ್ಕೆ ಕೆಲಸಗಳನ್ನು ಮಾಡಬೇಕು
Chanakya Niti: ನಿಮಗೆ ಯಶಸ್ಸು ಬೇಕಾದ್ರೆ ಈ 4 ವಿಷಯಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ!  title=
ಯಶಸ್ಸಿಗೆ ಆಚಾರ್ಯ ಚಾಣಕ್ಯರ ಸಲಹೆಗಳು

ನವದೆಹಲಿ: ಅನೇಕ ಜನರು ಜೀವನದಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ, ಆದರೆ ಕೆಲವೇ ಜನರು ಅದರಲ್ಲಿ ಯಶಸ್ವಿಯಾಗುತ್ತಾರೆ. ಜೀವನದಲ್ಲಿ ಯಶಸ್ಸನ್ನು ಸಾಧಿಸುವಲ್ಲಿ ಕಠಿಣ ಪರಿಶ್ರಮದ ಜೊತೆಗೆ ಅದೃಷ್ಟವೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ನೂರಾರು ವರ್ಷಗಳ ಹಿಂದೆಯೇ ನಾಡಿನಲ್ಲಿ ಜನಿಸಿದ ಆಚಾರ್ಯ ಚಾಣಕ್ಯರು ಇಂತಹ 5 ಸಲಹೆಗಳನ್ನು ಹೇಳಿದ್ದಾರೆ.

ಯಾರೇ ಆಗಲಿ ಚಾಣಕ್ಯರ ಈ ಸಲಹೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನದಲ್ಲಿ ಯಶಸ್ಸು ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾದ್ರೆ ಚಾಣಕ್ಯ ನೀತಿಯಲ್ಲಿ ಹೇಳಿರುವ ಯಶಸ್ಸಿನ ಆ 4 ಸೂತ್ರಗಳು ಯಾವುವು ಎಂದು ತಿಳಿಯಿರಿ.

ಇದನ್ನೂ ಓದಿHoroscope Today: ಈ ರಾಶಿಯವರು ಬುದ್ಧಿವಂತಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು

ಯಶಸ್ಸಿಗೆ ಆಚಾರ್ಯ ಚಾಣಕ್ಯರ ಸಲಹೆಗಳು  

ಸ್ವಾಭಿಮಾನದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳಬೇಡಿ

ಆಚಾರ್ಯ ಚಾಣಕ್ಯರ ಪ್ರಕಾರ, ಯಾವುದೇ ವ್ಯಕ್ತಿ ತನ್ನ ಸ್ವಾಭಿಮಾನದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳಬಾರದು. ಯಾವುದೇ ವ್ಯಕ್ತಿಯು ತನ್ನ ದೌರ್ಬಲ್ಯ ಮತ್ತು ಶಕ್ತಿ ಎರಡನ್ನೂ ಚೆನ್ನಾಗಿ ತಿಳಿದಿರಬೇಕು. ಜೀವನ ನಡೆಸಲು ಹಣ ಸಂಪಾದಿಸಬೇಕು, ಆದರೆ ಎಂದಿಗೂ ತನ್ನ ಸ್ವಾಭಿಮಾನದಲ್ಲಿ ರಾಜಿ ಮಾಡಿಕೊಳ್ಳಬಾರದು. ತಮ್ಮ ಆತ್ಮಸಾಕ್ಷಿಯನ್ನು ಮಾರಿಕೊಳ್ಳುವವರು ಸಮಾಜದಲ್ಲಿ ಶಾಶ್ವತವಾಗಿ ಗೌರವವನ್ನು ಕಳೆದುಕೊಳ್ಳುತ್ತಾರೆ.

ನಿಜವಾದ ಸ್ನೇಹಿತರನ್ನು ದೂರವಿಡಬೇಡಿ

ಕೇವಲ ಸ್ವಂತ ಪರಿಶ್ರಮದಿಂದ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿಲ್ಲ, ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಸಹ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಹೀಗಾಗಿಯೇ ಜೀವನದಲ್ಲಿ ನಿಜವಾದ ಸ್ನೇಹಿತರನ್ನು ಗುರುತಿಸಿ, ಅವರು ಎಂದಿಗೂ ನಿಮ್ಮಿಂದ ದೂರಹೋಗಲು ಬಿಡಬೇಡಿ. ನಿಜವಾದ ಸ್ನೇಹಿತನು ನಿಮ್ಮನ್ನು ತಪ್ಪು ದಾರಿಯಲ್ಲಿ ಹೋಗದಂತೆ ತಡೆಯುತ್ತಾನೆ. ಸರಿಯಾದ ಮಾರ್ಗದ ಕಡೆಗೆ ನಿಮ್ಮನ್ನು ಕರೆದುಕೊಂಡು ಹೋಗುತ್ತಾನೆ. ನಿಮ್ಮ ಕೆಟ್ಟ ಸಮಯದಲ್ಲಿ ಅವರು ನಿಮಗೆ ಸಹಾಯ ಮಾಡುತ್ತಾರೆ.   

ಇದನ್ನೂ ಓದಿ: Relationship Tips: ಹುಡುಗಿಯರು ಈ 5 ಗುಣಗಳಿಗೆ ಆಕರ್ಷಿತರಾಗುತ್ತಾರೆ, ನೀವೂ ಪ್ರಯತ್ನಿಸಿ!

ಸರಿಯಾದ ಸಮಯಕ್ಕೆ ಕೆಲಸ ಮುಗಿಸಿ

ಯಾವಾಗಲೂ ಸಮಯವನ್ನು ಗೌರವಿಸಿ ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಸಮಯವನ್ನು ಗೌರವಿಸದವನನ್ನು, ಸಮಯವೂ ಗೌರವಿಸುವುದಿಲ್ಲ. ಸಮಯಕ್ಕೆ ಬೆಲೆ ಕೊಡದಿದ್ದರೆ ಯಾವುದೇ ವ್ಯಕ್ತಿ ದೊಡ್ಡ ಸಮಸ್ಯೆಗೆ ಸಿಲುಕಿಕೊಳ್ಳುತ್ತಾನೆ. ಹೀಗಾಗಿ ಆಚಾರ್ಯ ಚಾಣಕ್ಯ ಹೇಳುವಂತೆ ಸಮಯಕ್ಕೆ ತಕ್ಕಂತೆ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಬೇಕು. ಹೀಗೆ ಮಾಡಿದರೆ ನಿಮಗೆ ಅನೇಕ ಅವಕಾಶಗಳು ದೊರೆಯುತ್ತವೆ. ಜೀವನದಲ್ಲಿ ಉನ್ನತ ಸಾಧನೆ ಮಾಡಲು ಸಮಯದ ಸದ್ಭಳಕೆ ನೆರವಾಗುತ್ತದೆ.    

ಅಪ್ರಾಮಾಣಿಕತೆ ಮತ್ತು ಮೋಸದಿಂದ ಹಣ ಗಳಿಸಬೇಡಿ

ಆಚಾರ್ಯ ಚಾಣಕ್ಯರು ಹೇಳುವಂತೆ ಪ್ರಗತಿ ಹೊಂದಲು ಹಣ ಸಂಪಾದಿಸುವುದು ಅಗತ್ಯ. ಆದರೆ ಅದನ್ನು ಯಾವಾಗಲೂ ಪ್ರಾಮಾಣಿಕವಾಗಿ ಗಳಿಸಬೇಕು. ಅಪ್ರಾಮಾಣಿಕತೆ, ವಂಚನೆಯಿಂದ ಕೂಡಿದ ಹಣ ಯಾರ ಮನೆಯಲ್ಲಿಯೂ ಬಹುಕಾಲ ಉಳಿಯದೆ ಆ ಕುಟುಂಬವು ಸದಾ ನರಳಬೇಕಾಗುತ್ತದೆ. ಹಣ ಗಳಿಸುವುದರೊಂದಿಗೆ ಹಣ ಉಳಿತಾಯದ ಕಡೆಗೂ ಸಂಪೂರ್ಣ ಗಮನ ನೀಡಬೇಕು. ಈ ಉಳಿತಾಯವು ಕೆಟ್ಟ ಸಮಯದಲ್ಲಿ ವ್ಯಕ್ತಿಯ ಶಕ್ತಿಯಾಗುತ್ತದೆ. ಆ ಹಣದ ಸಹಕಾರಿದಂದ ಆ ವ್ಯಕ್ತಿ ಕಷ್ಟದ ಸಮಯದಿಂದ ಹೊರಬರುತ್ತಾನೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿ ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News