ವಕ್ರಿ ಬುಧ ಪರಿಣಾಮ: ಪ್ರತಿಯೊಂದು ಗ್ರಹವೂ ಒಂದು ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತದೆ ಎಂದು ವೈದಿಕ ಜ್ಯೋತಿಷ್ಯ ತಿಳಿಸುತ್ತದೆ. ಬುಧ ಗ್ರಹವು ಸೆಪ್ಟೆಂಬರ್ 10 ರಂದು ಕನ್ಯಾರಾಶಿಯಲ್ಲಿ ತನ್ನ ಹಿಮ್ಮುಖ ಚಲನೆಯನ್ನು ಆರಂಭಿಸಲಿದೆ. ಬುಧನ ಈ ಬದಲಾವಣೆಯು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ, ವಕ್ರಿ ಬುಧನು ಕೆಲವು ರಾಶಿಯವರಿಗೆ ಈ ಸಮಯದಲ್ಲಿ ವೃತ್ತಿ, ವ್ಯವಹಾರದಲ್ಲಿ ಅಪಾರ ಯಶಸ್ಸಿನ ಜೊತೆಗೆ ಹಲವು ಪ್ರಯೋಜನಗಳನ್ನು ನೀಡಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಿಥುನ ಮತ್ತು ಕನ್ಯಾ ರಾಶಿಯನ್ನು ಬುಧ ಗ್ರಹ ಆಳುತ್ತದೆ. ಅಲ್ಲದೆ, ಕನ್ಯಾರಾಶಿಯು ಬುಧದ ಉತ್ಕೃಷ್ಟ ಚಿಹ್ನೆ. ಅಂತಹ ಪರಿಸ್ಥಿತಿಯಲ್ಲಿ, ಈ ರಾಶಿಚಕ್ರದಲ್ಲಿ ಬುಧದ ಹಿಮ್ಮೆಟ್ಟುವಿಕೆಯಿಂದಾಗಿ, ಈ ರಾಶಿಚಕ್ರ ಚಿಹ್ನೆಗಳು ವಿಶೇಷವಾಗಿ ಪ್ರಯೋಜನವನ್ನು ಪಡೆಯುತ್ತವೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- ಬುಧಾದಿತ್ಯ ಯೋಗ: ಸೂರ್ಯ, ಶುಕ್ರ, ಬುಧ ಸಂಕ್ರಮಣದಿಂದ ಯಾರಿಗೆ ಲಾಭ
ಇನ್ನು ಮೂರು ದಿನಗಳಲ್ಲಿ ಈ ರಾಶಿಯವರಿಗೆ ಭಾರೀ ಅದೃಷ್ಟ ಕರುಣಿಸಲಿದ್ದಾನೆ ವಕ್ರಿ ಬುಧ :
ಕನ್ಯಾ ರಾಶಿ:
ಸೆಪ್ಟೆಂಬರ್ 10 ರಂದು ಬುಧ ಗ್ರಹವು ಕನ್ಯಾರಾಶಿಯಲ್ಲಿ ಹಿಮ್ಮೆಟ್ಟಲಿದೆ. ಆದ್ದರಿಂದ, ಈ ರಾಶಿಚಕ್ರದ ಜನರು ಅದರ ವಿಶೇಷ ಪ್ರಯೋಜನಗಳನ್ನು ಪಡೆಯಲಿದ್ದಾರೆ. ವಕ್ರಿ ಬುಧನು ಕನ್ಯಾ ರಾಶಿಯವರಿಗೆ ಉದ್ಯೋಗ, ವ್ಯವಹಾರದಲ್ಲಿ ಭಾರೀ ಪ್ರಗತಿ ನೀಡಲಿದ್ದಾನೆ. ಈ ಸಂದರ್ಭದಲ್ಲಿ ಅವರು ವೃತ್ತಿ ಜೀವನದಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಇರಲಿದ್ದಾರೆ. ಸಮಾಜದಲ್ಲಿ ಅಪಾರ ಗೌರವ ಪ್ರಾಪ್ತಿಯಾಗಲಿದೆ. ಬುಸಿನೆಸ್ ಪ್ರವಾಸವು ಈ ಸಮಯದಲ್ಲಿ ಲಾಭದಾಯಕವಾಗಿದೆ.
ಧನು ರಾಶಿ:
ಬುಧನ ಹಿಮ್ಮುಖ ಚಲನೆಯ ಈ ಸಂದರ್ಭದಲ್ಲಿ ಧನು ರಾಶಿಯವರಿಗೆ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಂಬಂಧ ಸುಧಾರಿಸಲಿದೆ. ವ್ಯವಹಾರದಲ್ಲಿ ಯಶಸ್ಸನ್ನು ಪಡೆಯಲು ಉತ್ತಮ ಸಮಯ. ಹಣ ಕೂಡಿಡಲು ಸಾಧ್ಯವಾಗುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಯಾವುದೇ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಕೆಲಸದ ಸ್ಥಳದಲ್ಲಿ ಗೌರವ ಹೆಚ್ಚಾಗುವುದು.
ಇದನ್ನೂ ಓದಿ- ರಾಹುವಿನ ಅನುಗ್ರಹದಿಂದ ಇದ್ದಕ್ಕಿದ್ದಂತೆ ಸಿರಿವಂತರಾಗುತ್ತಾರೆ ಈ ದಿನಾಂಕದಲ್ಲಿ ಜನಿಸಿದವರು
ಮಕರ ರಾಶಿ:
ಬುಧನ ಹಿಮ್ಮುಖ ಚಲನೆಯು ಮಕರ ರಾಶಿಯವರಿಗೆ ತುಂಬಾ ಅನುಕೂಲಕರವಾಗಿದೆ. ಎಲ್ಲ ಕೆಲಸಗಳಲ್ಲಿಯೂ ಅದೃಷ್ಟ ಕೈ ಹಿಡಿಯಲಿದ್ದು ಕೌಟುಂಬಿಕ ಸಂತೋಷ ಹೆಚ್ಚಾಗಲಿದೆ. ಹಠಾತ್ ಧನ ಲಾಭ ಸಾಧ್ಯತೆ ಇದ್ದು, ಇಷ್ಟು ದಿನಗಳ ನಿಮ್ಮ ಆರ್ಥಿಕ ಸಮಸ್ಯೆಗಳು ನಿವಾರಣೆ ಆಗಲಿವೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.