Akshaya Tritiya 2023 Effect: ಹಿಂದೂ ಧರ್ಮದಲ್ಲಿ, ಪ್ರತಿ ವರ್ಷ ವೈಶಾಖ ಮಾಸದ ತೃತೀಯ ದಿನದಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಈ ವರ್ಷ 22 ಏಪ್ರಿಲ್ 2023 ಶನಿವಾರದಂದು ಅಕ್ಷಯ ತೃತೀಯ ಇರಲಿದೆ. ಈ ದಿನ ಯಾವುದೇ ಶುಭ ಕೆಲಸಗಳನ್ನು ಮಾಡಲು ತುಂಬಾ ಪ್ರಾಶಸ್ತ್ಯವಾದ ದಿನ ಎಂದು ಹೇಳಲಾಗುತ್ತದೆ. ಮಾತ್ರವಲ್ಲ, ಅಕ್ಷಯ ತೃತೀಯದಲ್ಲಿ ಕೆಲವು ಪದಾರ್ಥಗಳನ್ನು ಖರೀದಿಸಿ ಮನೆಗೆ ತರುವುದರಿಂದ ಮನೆಯಲ್ಲಿ ಏಳ್ಗೆ ಆಗುತ್ತದೆ. ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯೂ ಇದೆ.
ಧರ್ಮ ಗ್ರಂಥಗಳ ಪ್ರಕಾರ, ತಾಯಿ ಮಹಾಲಕ್ಷ್ಮಿಯ ಆಶೀರ್ವಾದಕ್ಕಾಗಿ ಅಕ್ಷಯ ತೃತೀಯದಲ್ಲಿ ಈ ಕೆಳಗಿನ ವಸ್ತುಗಳಲ್ಲಿ ಯಾವುದಾದರೂ ಒಂದು ವಸ್ತುವನ್ನು ಮನೆಗೆ ತಂದರೂ ತುಂಬಾ ಮಂಗಳಕರ. ಈ ಬಾರಿ ಅಕ್ಷಯ ತೃತೀಯದಲ್ಲಿ ಏಪ್ರಿಲ್ 22 ರಂದು ಬೆಳಿಗ್ಗೆ 8.04ರಿಂದ ಏಪ್ರಿಲ್ 23 ರಂದು ಬೆಳಿಗ್ಗೆ 8.08 ರವರೆಗೆ ವಸ್ತುಗಳ ಖರೀದಿಗೆ ಶುಭ ಮುಹೂರ್ತ ಇರಲಿದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- Daan On Akshaya Tritiya: ಅಕ್ಷಯ ತೃತೀಯದಂದು ಈ ವಸ್ತುಗಳನ್ನು ದಾನ ಮಾಡಿದರೆ ಸದಾ ಇರುತ್ತೆ ಲಕ್ಷ್ಮೀ ಕೃಪೆ
ಅಕ್ಷಯ ತೃತೀಯದಂದು ಈ ವಸ್ತುಗಳನ್ನು ಮನೆಗೆ ತಂದರೆ ಸದಾ ಇರುತ್ತೆ ಲಕ್ಷ್ಮಿ ಕೃಪೆ:
ಚಿನ್ನ-ಬೆಳ್ಳಿ:
ಅಕ್ಷಯ ತೃತೀಯದ ದಿನ ಚಿನ್ನ-ಬೆಳ್ಳಿಯ ಆಭರಣಗಳನ್ನು ಖರೀದಿಸುವುದನ್ನು ತುಂಬಾ ಮಂಗಳಕರ ಎಂದು ಬಣ್ಣಿಸಲಾಗುತ್ತದೆ. ವೈಶಾಖ ಮಾಸದ ತೃತೀಯ ದಿನದಂದು ಚಿನ್ನ-ಬೆಳ್ಳಿಯ ಆಭರಣಗಳನ್ನು ಮನೆಗೆ ತರುವುದರಿಂದ ಅದು ಮನೆಯಲ್ಲಿ ಅಕ್ಷಯ ಎಂದರೆ ವೃದ್ಧಿಯಾಗುತ್ತದೆ ಎಂಬುದು ನಂಬಿಕೆ.
ಮಣ್ಣಿನ ಮಡಿಕೆ:
ಧರ್ಮ ಗ್ರಂಥಗಳ ಪ್ರಕಾರ, ಚಿನ್ನ-ಬೆಳ್ಳಿ, ಆಭರಣಗಳನ್ನು ಮನೆಗೆ ತರುವುದು ಮಾತ್ರವಲ್ಲ, ಈ ದಿನ ಮಣ್ಣಿನ ಮಡಿಕೆಯನ್ನು ಮನೆಗೆ ತರುವುದನ್ನು ಕೂಡ ಮಂಗಳಕರ ಎಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ- Akshaya Tritiya 2023: ಅಕ್ಷಯ ತೃತೀಯದಂದು ಈ ಕೆಲಸ ಮಾಡಿದ್ರೆ ಎಂದಿಗೂ ಖಾಲಿಯಾಗಲ್ಲ ಖಜಾನೆ
ಹಿತ್ತಾಳೆ/ತಾಮ್ರದ ಪಾತ್ರೆ:
ಅಕ್ಷಯ ತೃತೀಯ ದಿನದಂದು ಹಿತ್ತಾಳೆ ಅಥವಾ ತಾಮ್ರದ ಪಾತ್ರೆಗಳನ್ನು ಮನೆಗೆ ತರುವುದನ್ನು ಕೂಡ ತುಂಬಾ ಶ್ರೇಷ್ಠ ಎಂದು ಹೇಳಲಾಗುತ್ತದೆ.
ಪೊರಕೆ:
ಅಕ್ಷಯ ತೃತೀಯ ದಿನದಂದು ಮನೆಗೆ ಹೊಸ ಪೊರಕೆ ತರುವುದನ್ನು ಸಹ ತುಂಬಾ ಶುಭ. ಇದರಿಂದ ಮನೆಗೆ ಲಕ್ಷ್ಮಿ ದೇವಿಯ ಪ್ರವೇಶವಾಗುತ್ತದೆ ಎಂದು ನಂಬಲಾಗಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.