ಈ ರಾಶಿಯವರಿಗೆ ಭದ್ರ ರಾಜಯೋಗ.! ತೆರೆಯುವುದು ಅದೃಷ್ಟದ ಬಾಗಿಲು

ಈ ಸಂಕ್ರಮಣದಿಂದ ಭದ್ರಾ ರಾಜಯೋಗ ಸೃಷ್ಟಿಯಾಗುತ್ತದೆ. ಜ್ಯೋತಿಷ್ಯದಲ್ಲಿ, ಈ ರಾಜಯೋಗವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. 

Written by - Ranjitha R K | Last Updated : Jan 18, 2023, 11:42 AM IST
  • ಬುಧ ಸಂಕ್ರಮಣದಿಂದ ಭದ್ರಾ ರಾಜಯೋಗ ಸೃಷ್ಟಿ
  • ಕೆಲವು ರಾಶಿಯವರಿಗೆ ವಿಶೇಷ ಫಲ ನೀಡುತ್ತದೆ ಈ ಯೋಗ
  • ನಿಮ್ಮ ರಾಶಿ ಇದರಲ್ಲಿದೆಯೇ ನೋಡಿಕೊಳ್ಳಿ
ಈ ರಾಶಿಯವರಿಗೆ ಭದ್ರ ರಾಜಯೋಗ.! ತೆರೆಯುವುದು ಅದೃಷ್ಟದ ಬಾಗಿಲು  title=

ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಯಾವುದೇ ಗ್ರಹ, ತನ್ನ ರಾಶಿ ಮತ್ತು ನಕ್ಷತ್ರವನ್ನು ಬದಲಾಯಿಸಿದಾಗ, ಅದು ಎಲ್ಲಾ 12 ರಾಶಿಯವರ ಮೇಲೂ ಪರಿಣಾಮ ಬೀರುತ್ತದೆ. ಇನ್ನು ಕೆಲವು ಬಾರಿ, ಗ್ರಹಗಳ ರಾಶಿ  ಬದಲಾವಣೆಯೊಂದಿಗೆ ಶುಭ ಯೋಗವು ಸೃಷ್ಟಿಯಾಗುತ್ತದೆ. ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧ ಫೆಬ್ರವರಿ 7 ರಂದು ಧನು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಸಂಕ್ರಮಣದಿಂದ ಭದ್ರಾ ರಾಜಯೋಗ ಸೃಷ್ಟಿಯಾಗುತ್ತದೆ. ಜ್ಯೋತಿಷ್ಯದಲ್ಲಿ, ಈ ರಾಜಯೋಗವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಯೋಗವು ಕೆಲವು ರಾಶಿಯವರಿಗೆ ವಿಶೇಷ ಫಲ ನೀಡುತ್ತದೆ.  

ಮೇಷ ರಾಶಿ : 
ಮೇಷ ರಾಶಿಯವರಿಗೆ ಬುಧ ಸಂಕ್ರಮಣ ಬಹಳ ಶುಭಕರವಾಗಿರುತ್ತದೆ. ಭದ್ರ ರಾಜಯೋಗದ ಪ್ರಭಾವದಿಂದ ಈ ರಾಶಿಯವರಿಗೆ ಅದೃಷ್ಟ ಒಲಿದು ಪ್ರತಿ ಹೆಜ್ಜೆಯಲ್ಲೂ ಯಶಸ್ಸು ಸಿಗುತ್ತದೆ. ಶಿಕ್ಷಣ ಮತ್ತು ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ಕಂಡುಬರುವುದು. ಈ ರಾಶಿಯವರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಇರುತ್ತದೆ.

ಇದನ್ನೂ ಓದಿ : 'ಶನಿ' ರಾಶಿಯಲ್ಲಿ ಶುಕ್ರನ ಪ್ರವೇಶ: ಧನ ಲಾಭದಿಂದ ಈ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಲಿದೆ!

ಮಿಥುನ ರಾಶಿ :
ಮಿಥುನ ರಾಶಿಯವರಿಗೆ ಬುಧ ಸಂಚಾರವು ಶುಭ ಫಲಿತಾಂಶಗಳನ್ನು ತರಲಿದೆ. ಎಲ್ಲಾ ಕೆಲಸದಲ್ಲಿಯೂ ಅದೃಷ್ಟ ಕೈ ಹಿಡಿಯಲಿದೆ. ಈ ಸಮಯದಲ್ಲಿ ಮಾಡುವ ಪ್ರತಿಯೊಂದು ಕೆಲಸವೂ ಪೂರ್ಣಗೊಳ್ಳುತ್ತದೆ.   ಉದ್ಯೋಗದಲ್ಲಿರುವವರಿಗೆ ಮತ್ತು ಉದ್ಯಮಿಗಳಿಗೆ ದೊಡ್ಡ ಮಟ್ಟದ ಲಾಭವಾಗಲಿದೆ. 

ಕನ್ಯಾರಾಶಿ : 
ಭದ್ರ ರಾಜಯೋಗವು ಕನ್ಯಾ ರಾಶಿಯವರ ಮಲಗಿರುವ ಅದೃಷ್ಟವನ್ನು ಕೂಡಾ ಹೊಡೆದೆಬ್ಬಿಸುತ್ತದೆ. ಅವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಇರಲಿದೆ. ಅನಿರೀಕ್ಷಿತ ಮೂಲಗಳಿಂದ ಇದ್ದಕ್ಕಿದ್ದಂತೆ ಹಣದ ಲಾಭವಾಗುವುದು. 

ಇದನ್ನೂ ಓದಿ : ಫೆಬ್ರುವರಿ 15 ಬಳಿಕ ಈ ಜನರಿಗೆ ಬಂಬಾಟ್ ಲಾಟರಿ ಭಾಗ್ಯ, ಅಪಾರ ಧನವೃಷ್ಟಿಯಿಂದ ತಿಜೋರಿ ಫುಲ್ !

ಧನು ರಾಶಿ :
ಧನು ರಾಶಿಯವರು ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ, ಭದ್ರ ರಾಜಯೋಗ ರೂಪುಗೊಂಡ ನಂತರ ಮಾಡಬಹುದು. ಈ ಸಮಯದಲ್ಲಿ, ದೊಡ್ಡ ಲಾಭವನ್ನು ಗಳಿಸುವ ಸಾಧ್ಯತೆಯಿದೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಈ ಪೂರ್ಣಗೊಳ್ಳಲಿವೆ. ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯಲಿದೆ. 

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News