ದಿನಭವಿಷ್ಯ 03-10-2024: ಇಂದು ನವರಾತ್ರಿ ಆರಂಭದ ದಿನ ದ್ವಾದಶ ರಾಶಿಗಳಿಗೆ ಏನು ಫಲ!

Today Horoscope 03rd October 2024: ಗುರುವಾರದ ಈ ದಿನ ಹಸ್ತ ನಕ್ಷತ್ರ, ಐಂದ್ರ ಯೋಗ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Oct 3, 2024, 07:44 AM IST
  • ಶರದ ಋತು, ಆಶ್ವಯುಜ ಮಾಸ, ಶುಕ್ಲ ಪಕ್ಷ
  • ಪ್ರತಿಪದಾ ತಿಥಿ, ಗುರುವಾರದ ಈ ದಿನ ಹಸ್ತ ನಕ್ಷತ್ರ, ಐಂದ್ರ ಯೋಗ
  • ಇಂದಿನಿಂದ ನವರಾತ್ರಿ ಆರಂಭವಾಗಲಿದ್ದು ನಿಮ್ಮ ರಾಶಿಗೆ ಹೇಗಿದೆ ತಿಳಿಯಿರಿ.
ದಿನಭವಿಷ್ಯ 03-10-2024:  ಇಂದು ನವರಾತ್ರಿ ಆರಂಭದ ದಿನ ದ್ವಾದಶ ರಾಶಿಗಳಿಗೆ ಏನು ಫಲ!  title=

Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ ಋತು, ಆಶ್ವಯುಜ ಮಾಸ, ಶುಕ್ಲ ಪಕ್ಷ, ಪ್ರತಿಪದಾ ತಿಥಿ, ಗುರುವಾರದ ಈ ದಿನ ಹಸ್ತ ನಕ್ಷತ್ರ, ಐಂದ್ರ ಯೋಗ ಇರಲಿದೆ. ಇಂದಿನಿಂದ ನವರಾತ್ರಿ ಆರಂಭವಾಗಲಿದ್ದು ಎಲ್ಲಾ 12 ರಾಶಿಗಳ ಮೇಲೆ ಏನು ಪರಿಣಾಮ ಬೀರಲಿದೆ ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ನವರಾತ್ರಿಯ ಆರಂಭವು ಈ ರಾಶಿಯವರಿಗೆ ಶುಭ ಫಲಗಳನ್ನು ತರಲಿದೆ. ಕೆಲಸಗಳಲ್ಲಿ ಯಶಸ್ಸು, ವ್ಯಾಪಾರದಲ್ಲಿ ಭಾರೀ ಲಾಭವನ್ನು ಕಾಣುವಿರಿ. ವ್ಯವಹಾರ ಸಂಬಂಧಿತ ಪ್ರಯಾಣವು ಲಾಭದಾಯಕವಾಗಿರಲಿದೆ. ಬೇರೆಯವರ ವಿಷಯದಲ್ಲಿ ಮೂಗು ತೂರಿಸದಿದ್ದರೆ ಒಳ್ಳೆಯದು. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಯಾವುದೇ ಕೆಲಸದಲ್ಲಿ ಅತಿಯಾದ ಆತ್ಮವಿಶ್ವಾಸ ನಿಮಗೆ ಅಡ್ಡಿ ಉಂಟು ಮಾಡಬಹುದು. ನಿಮ್ಮ ನಡವಳಿಕೆಯನ್ನು ಸರಿಪಡಿಸಿಕೊಳ್ಳದೆ ಇದ್ದಲ್ಲಿ ಸಮಸ್ಯೆಗಳು ಉಲ್ಬಣಿಸಬಹುದು. ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ. ಸಣ್ಣ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಬೇರೆಯವರಿಗೆ ಸಾಲ ನೀಡಿದ್ದ ಹಣ ಕೈ ಸೇರಲಿದೆ. ಈ ಹಣವನ್ನು ಹೂಡಿಕೆ ಮಾಡುವುದರಿಂದ ಭವಿಷ್ಯದಲ್ಲಿ ಲಾಭವಾಗಲಿದೆ. ವೃತ್ತಿ ಸಂಬಂಧಿತ ವಿಷಯಗಳಲ್ಲಿ ಗುಡ್ ನ್ಯೂಸ್ ಕೇಳಬಹುದು. ಯಾವುದಾದರೂ ಶುಭ ಸಮಾರಂಭದಲ್ಲಿ ಭಾಗಿಯಾಗುವ ಅವಕಾಶವಿದೆ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಈ ರಾಶಿಯವರಿಗೆ ಇಂದು ನಿರ್ಣಾಯಕವಾದ ದಿನ. ಭವಿಷ್ಯದ ಲಾಭಕ್ಕಾಗಿ ಇಂದು ಉತ್ತಮ ಸ್ಥಳದಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ಕೆಲಸದಲ್ಲಿ ಕೌಶಲ್ಯಗಳನ್ನು ಬಳಸಿಕೊಳ್ಳುವುದರಿಂದ ಪ್ರಗತಿಯಾಗಲಿದೆ. ಇದ್ದಕ್ಕಿದ್ದಂತೆ ವಿಶೇಷ ವ್ಯಕ್ತಿಯ ಆಗಮನ ಮನಸ್ಸಿಗೆ ಮುದ ನೀಡಲಿದೆ. 

ಇದನ್ನೂ ಓದಿ- ಮುಂದಿನ 179 ದಿನಗಳವರೆಗೆ ಈ ರಾಶಿಯವರಿಗೆ ಶನಿ ಕೃಪೆ, ಕೈ ಸೇರಲಿದೆ ಅಪಾರ ಸಂಪತ್ತು, ಜೀವನದಲ್ಲಿ ಭಾರೀ ಯಶಸ್ಸು​

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಈ ರಾಶಿಯ ಜನರಿಗೆ ಇಂದು ಅತ್ಯಂತ ಅನುಕೂಲಕರ ಸಮಯ. ಉನ್ನತ ವಿದ್ಯಾಭ್ಯಾಸದ ಕಡೆ ಗಮನಹರಿಸಲು ಸುವರ್ಣಾವಕಾಶ ದೊರೆಯಲಿದೆ.. ಹಣಕಾಸಿನ ಸ್ಥಿತಿ ಮೊದಲಿಗಿಂತ ಉತ್ತಮಗೊಳ್ಳಲಿದ್ದು, ಕುಟುಂಬದಲ್ಲಿ ಶಾಂತಿಯನ್ನು ಕಾಣಬಹುದು. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಈ ರಾಶಿಯ ಜನರಿಗೆ ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ದೊರೆಯುವ ಸಮಯ ಇದಾಗಿದೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಪಡೆಯುವಿರಿ. ನಿಮ್ಮ ಎಲ್ಲಾ ಯೋಜನೆಗಳು ಫಲಪ್ರದತೆಯ ದಿಕ್ಕಿನಲ್ಲಿ ಚಲಿಸುತ್ತವೆ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಈ ರಾಶಿಯ ಜನರು ಇಂದು ಬಹಳ ಉತ್ಸಾಹ ಮತ್ತು ಶಕ್ತಿಯಿಂದ ತುಂಬಿರುತ್ತೀರಿ. ನಿರುದ್ಯೋಗಿಗಳಿಗೆ ಉದ್ಯೋಗ ಪಡೆಯಲು ಸಾಕಷ್ಟು ಅವಕಾಶಗಳಿವೆ. ನಿಮ್ಮ ಪ್ರೀತಿಯ ಜೀವನವನ್ನು ನೀವು ಆನಂದಿಸುವಿರಿ. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸ್ವಲ್ಪ ಬುದ್ದಿವಂತಿಕೆಯಿಂದ ವರ್ತಿಸಿ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಉದ್ಯೋಗ ಕ್ಷೇತ್ರದಲ್ಲಿ ನೀವಿಂದು ಅಸಾಧಾರಣವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವಿರಿ. ಹೊಸ ಆದಾಯದ ಮೂಲಗಳು ನಿಮ್ಮ ಮನಸ್ಸಿಗೆ ಶಾಂತಿಯನ್ನು ನೀಡಲಿದೆ. ನಿಮ್ಮ ಪ್ರತಿಷ್ಠೆ ಹೆಚ್ಚಾಗಲಿದೆ. ನೀವು ಪ್ರೀತಿಪಾತ್ರರ ಜೊತೆಗೆ ಉತ್ತಮ ಬಾಂಧವ್ಯವನ್ನು ಆನಂದಿಸುವಿರಿ. 

ಇದನ್ನೂ ಓದಿ- 18 ವರ್ಷಗಳ ನಂತರ ಕನ್ಯಾ ರಾಶಿಯಲ್ಲಿ ಸೂರ್ಯ-ಕೇತು ಸಂಯೋಗ; ಈ 3 ರಾಶಿಗಳಿಗೆ ಕಾದಿದೆ ಭಾರೀ ಆಪತ್ತು!

ಧನು ರಾಶಿಯವರ ಭವಿಷ್ಯ (Sagittarius Horoscope):  
ನೀವು ನಂಬಿದವರೇ ನಿಮಗೆ ದ್ರೋಹ ಬಗೆಯಬಹುದು ಈ ಬಗ್ಗೆ ಜಾಗರೂಕರಾಗಿರಿ. ಯಾರನ್ನೂ ನಂಬಿ ಹಣ ನೀಡುವುದನ್ನು ತಪ್ಪಿಸಿ. ನೀವು ನಿಮ್ಮ ಕೆಲಸದಲ್ಲಿ ನಿರತರಾಗಿರುತ್ತೀರಿ. ಇದರಿಂದಾಗಿ ಕುಟುಂಬದ ವಿಚಾರಗಳ ಬಗ್ಗೆ ಗಮನಹರಿಸಲು ಸಾಧ್ಯವಾಗದೆ ಇರಬಹುದು. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ನಿಮ್ಮ ಅಕ್ಕ-ಪಕ್ಕದವರಿಂದ ಕೆಲವು ವಿವಾದಗಳು ಉಂಟಾಗಬಹುದು. ಆದಾಗ್ಯೂ, ವಿಷಯವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವುದು ಜಾಣತನ. ನಿಮ್ಮ ವ್ಯವಹಾರದಲ್ಲಿ ನೀವು ಯಾರನ್ನೂ ಕುರುಡಾಗಿ ನಂಬಬೇಡಿ. ವೃತ್ತಿ ಬದುಕಿನಲ್ಲಿ ನಿಮ್ಮ ಸಮರ್ಪಣೆಯು ನಿಮಗೆ ಪ್ರಗತಿಯ ಹೊಸ ಬಾಗಿಲುಗಳನ್ನು ತೆರೆಯುತ್ತದೆ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ನಿಮಗಿಂದು ಮಿಶ್ರ ಫಲಿತಾಂಶಗಳಿಂದ ಕೂಡಿದ ದಿನ. ಪಾಲುದಾರಿಕೆ ವ್ಯವಹಾರಗಳಲ್ಲಿ ಸಾಮಾನ್ಯ ಲಾಭವನ್ನು ನಿರೀಕ್ಷಿಸಬಹುದು. ನಿಮ್ಮ ಪ್ರೀತಿಪಾತ್ರರೊಂದಿಗೆ ಪ್ರವಾಸಿ ತಾಣಕ್ಕೆ ಹೋಗಲು ಪ್ಲಾನ್ ಮಾಡಬಹುದು. ಕೆಲಸದ ದಕ್ಷತೆ ಹೆಚ್ಚಾಗಲಿದ್ದು, ಆದಾಯದಲ್ಲಿ ಏರಿಕೆ ಕಾಣಬಹುದು. 

ಮೀನ ರಾಶಿಯವರ ಭವಿಷ್ಯ (Pisces Horoscope): 
ನಿಮ್ಮ ಕೆಲಸ ಮತ್ತು ವ್ಯವಹಾರದಲ್ಲಿ ಸಾಕಷ್ಟು ಅಡೆತಡೆಗಳು ಎದುರಾಗಬಹುದು. ಆದರೂ, ಎಲ್ಲವನ್ನೂ ನೀವು ಧೈರ್ಯವಾಗಿ ಸಮರ್ಥವಾಗಿ ಎದುರಿಸುತ್ತೀರಿ. ಆದಾಯ ಇಮ್ಮಡಿಗೊಳ್ಳುವುದರಿಂದ ಸಂತೋಷ ಇರಲಿದೆ. ಭೌತಿಕ ಸುಖ-ಸೌಕರ್ಯಗಳು ಹೆಚ್ಚಾಗಲಿವೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News