ಮೂರು ಗ್ರಹಗಳು ಒಟ್ಟಿಗೆ ಸೇರಿ ಕಾಡುತ್ತವೆ ಈ ಮೂರು ರಾಶಿಯವರನ್ನು

ಹೊಸ ವರ್ಷ ಶುರುವಾಗಿದ್ದು ಈ ತಿಂಗಳು, ಮೂರು ದೊಡ್ಡ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಲಿವೆ. ಇನ್ನು ಎರಡು ಗ್ರಹಗಳು ತಮ್ಮ  ಪಥವನ್ನು ಬದಲಾಯಿಸಲಿವೆ. 

Written by - Ranjitha R K | Last Updated : Jan 5, 2023, 03:36 PM IST
  • ಮೂರು ದೊಡ್ಡ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಲಿವೆ.
  • ಇನ್ನು ಎರಡು ಗ್ರಹಗಳು ತಮ್ಮ ಪಥವನ್ನು ಬದಲಾಯಿಸಲಿವೆ.
  • ಜ್ಯೋತಿಷ್ಯದ ಪ್ರಕಾರ, ಈ ತಿಂಗಳು ಬಹಳ ಮಹತ್ವದ್ದಾಗಿದೆ.
ಮೂರು ಗ್ರಹಗಳು ಒಟ್ಟಿಗೆ ಸೇರಿ ಕಾಡುತ್ತವೆ ಈ ಮೂರು ರಾಶಿಯವರನ್ನು  title=

ಬೆಂಗಳೂರು : ಜ್ಯೋತಿಷ್ಯದಲ್ಲಿ ಗ್ರಹಗಳ ಚಲನೆ ಮತ್ತು ಸಾಗಣೆ ಬಹಳ ಮುಖ್ಯ. ಹೊಸ ವರ್ಷ ಶುರುವಾಗಿದ್ದು ಈ ತಿಂಗಳು, ಮೂರು ದೊಡ್ಡ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಲಿವೆ. ಇನ್ನು ಎರಡು ಗ್ರಹಗಳು ತಮ್ಮ  ಪಥವನ್ನು ಬದಲಾಯಿಸಲಿವೆ. ಜ್ಯೋತಿಷ್ಯದ ಪ್ರಕಾರ, ಈ ತಿಂಗಳು ಬಹಳ ಮಹತ್ವದ್ದಾಗಿದೆ. ಗ್ರಹಗಳ ಸಾಗಣೆ ಮತ್ತು ಚಲನೆಯು ಎಲ್ಲಾ ರಾಶಿಯವರ ಮೇಲೆ ಪ್ರಭಾವ ಬೀರುತ್ತದೆ. 

ಸೂರ್ಯ ಸಂಚಾರ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನವರಿ 14, 2023 ರಂದು ಗ್ರಹಗಳ ರಾಜನಾದ ಸೂರ್ಯನು ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಈ ದಿನ ಬೆಳಗ್ಗೆ 8.57ಕ್ಕೆ ಧನು ರಾಶಿಯಿಂದ ಹೊರಟು ಮಕರ ರಾಶಿ ಪ್ರವೇಶಿಸಲಿದ್ದಾನೆ.  ಇದನ್ನು ಮಕರ ಸಂಕ್ರಾಂತಿ ಎಂದೂ ಕರೆಯುತ್ತಾರೆ. ಈ ಕಾರಣದಿಂದಾಗಿ, ಮಕರ ರಾಶಿಯ ಜನರು ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ.

ಇದನ್ನೂ ಓದಿ : Vastu Tips : ನಿಮ್ಮ ಮನೆಯ ಕನ್ನಡಿಯಲ್ಲಿ ಅಡಗಿದೆ ನೀವು ಶ್ರೀಮಂತರಾಗುವ ರಹಸ್ಯ, ಅದೃಷ್ಟಕ್ಕೆ ಈ ಕೆಲಸ

ಶನಿ ಸಂಚಾರ :
ಈ ತಿಂಗಳು ಕರ್ಮಫಲದಾತನಾದ ಶನಿದೇವನು ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಜನವರಿ 17 ರಂದು ಬೆಳಿಗ್ಗೆ 8:02 ಕ್ಕೆ ಮಕರ ರಾಶಿಯಿಂದ ಹೊರಟು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಕುಂಭ ರಾಶಿಯಲ್ಲಿ ಶನಿ ಸಂಕ್ರಮಿಸಿದ ಕೂಡಲೇ ಹಲವು ರಾಶಿಯವರ ಏಳೂವರೆ ವರ್ಷದ ಶನಿ ದೆಸೆ ಕೊನೆಗೊಳ್ಳಲಿದೆ. 

ಶುಕ್ರ ಸಂಚಾರ :
ಜ್ಯೋತಿಷ್ಯದ ಪ್ರಕಾರ, ಮತ್ತೊಂದು ಮುಖ್ಯ ಗ್ರಹವಾದ ಶುಕ್ರ ಕೂಡಾ ತನ್ನ ರಾಶಿಯನ್ನು ಜನವರಿ 22 ರಂದು ಬದಲಾಯಿಸುತ್ತದೆ. ಈ ದಿನ ಸಂಜೆ 4:30 ಕ್ಕೆ ಮಕರ ರಾಶಿಯಿಂದ ಕುಂಭ ರಾಶಿಗೆ  ಪ್ರವೇಶ ಮಾಡಲಿದೆ. ಇದು ಕೆಲವು ರಾಶಿಯವರ ಜೀನವದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಬುಧ-ಮಂಗಳ  ಗ್ರಹಗಳ ಪಥ ಬದಲಾವಣೆ : 
ಮತ್ತೊಂದೆಡೆ, ಗ್ರಹಗಳ ರಾಜಕುಮಾರ ಬುಧ ಜನವರಿ 18 ರಂದು ಸಂಜೆ 6.41 ಕ್ಕೆ ಹಿಮ್ಮುಖ ಚಲನೆ ಆರಂಭಿಸಿದ್ದಾನೆ. ಇನ್ನೊಂದೆಡೆ, ಜನವರಿ 13 ರಂದು ಬೆಳಗಿನ ಜಾವ 2.27 ಕ್ಕೆ ಮಂಗಳ ಗ್ರಹ ಕೂಡಾ ಹಿಮ್ಮುಖ ಚಲನೆ ಆರಂಭಿಸಲಿದೆ. 

ಇದನ್ನೂ ಓದಿ : Astro Tips: ಲಾಲ್ ಕಿತಾಬ್‌ನ ಈ ಸಲಹೆ ಪಾಲಿಸಿದ್ರೆ ನಿಮ್ಮ ಬಡತನ ದೂರವಾಗಿ ಸಿರಿವಂತಿಕೆ ಹೆಚ್ಚುತ್ತದೆ!

ಈ ರಾಶಿಯವರಿಗೆ ಕಷ್ಟ : 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೂರು ಗ್ರಹಗಳ ಸಂಚಾರ ಮತ್ತು ಎರಡು ಗ್ರಹಗಳ ಚಲನೆಯ ಬದಲಾವಣೆಯು ಕೆಲವು ರಾಶಿಚಕ್ರದ ಚಿಹ್ನೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮೇಷ, ಕರ್ಕ, ಕನ್ಯಾ ಮತ್ತು ವೃಶ್ಚಿಕ  ರಾಶಿಯವರ ಮೇಲೆ ಈ ಗ್ರಹಗಳು ನಕಾರಾತ್ಮಕ ಪರಿಣಾಮ ಬೀರುತ್ತವೆ.   ಹೀಗಾಗಿ ಈ ಅವಧಿಯಲ್ಲಿ ಈ ರಾಶಿಯವರು ವಿಶೇಷ ಕಾಳಜಿಯನ್ನು ವಹಿಸ ಬೇಕಾಗುತ್ತದೆ. ಆರೋಗ್ಯದ ಕಡೆಗೆ ಗಮನ ಹರಿಸಬೇಕಾಗುತ್ತದೆ. ಹೂಡಿಕೆ ಮಾಡುವಾಗ ಬುದ್ಧಿವಂತಿಕೆ ಅವಶ್ಯಕ. ಚಾಲನೆ ಮಾಡುವಾಗ ಜಾಗರೂಕರಾಗಿರಿ.

 

 ( ಸೂಚನೆ :ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G

Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News