ದಿನಭವಿಷ್ಯ 07-10-2024: ಇಂದು ಆಯುಷ್ಮಾನ್ ಯೋಗ, ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ..!

Today Horoscope 08th October 2024: ನವರಾತ್ರಿಯ ಆರನೇ ದಿನವಾದ ಇಂದು ಆಯುಷ್ಮಾನ್ ಯೋಗ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Oct 8, 2024, 07:52 AM IST
  • ಇಂದು ನವರಾತ್ರಿಯ ಆರನೇ ದಿನ
  • ಈ ದಿನ ದುರ್ಗಾದೇವಿಯ ಕಾತ್ಯಾಯಿನಿ ದೇವಿಯನ್ನು ಆರಾಧಿಸಲಾಗುತ್ತದೆ.
  • ಈ ದಿನ ಆಯುಷ್ಮಾನ್ ಯೋಗವು ಯಾವ ರಾಶಿಯವರ ಅದೃಷ್ಟ ಬೆಳಗಲಿದೆ ತಿಳಿಯಿರಿ.
ದಿನಭವಿಷ್ಯ 07-10-2024:  ಇಂದು ಆಯುಷ್ಮಾನ್ ಯೋಗ, ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ..!  title=

Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವಯುಜ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಮಂಗಳವಾರದ ಈ ದಿನ  ಆಯುಷ್ಮಾನ್ ಯೋಗ, ಕೌಲವ ಕರಣ ಇರಲಿದೆ. ನವರಾತ್ರಿಯ ಆರನೇ ದಿನವಾದ ಇಂದು ಯಾವೆಲ್ಲ ರಾಶಿಗಳಿಗೆ ತರಲಿದೆ ಶುಭ ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ಈ ರಾಶಿಯವರು ಇಂದು ವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲವು ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾಗಬಹುದು. ಪೋಷಕರ ವ್ಯವಹಾರವನ್ನು ಬೆಳೆಸಲು ಸಾಕಷ್ಟು ಪರಿಶ್ರಮದ ಅಗತ್ಯವಿದೆ. ಕೆಲವು ಗೊಂದಲಮಯ ಪರಿಸ್ಥಿತಿಗಳಲ್ಲಿ ಜಾಗರೂಕರಾಗಿ ವರ್ತಿಸಿ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಇಂದು ಕೊಂಚ ಆತಂಕ, ಚಡಪಡಿಕೆಯು ನಿಮ್ಮನ್ನು ಬಾಧಿಸಬಹ್ದೂ. ಹೂಡಿಕೆಗಳಲ್ಲಿ ಎಚ್ಚರಿಕೆವಹಿಸಿ, ಇಲ್ಲವೇ ಭಾರೀ ನಷ್ಟ ಸಾಧ್ಯತೆ ಇದೆ. ದೂರದ ಪ್ರಯಾಣಗಳನ್ನು ತಪ್ಪಿಸಿದರೆ ಒಳಿತು. ಸಾಧ್ಯವಾದಷ್ಟು ಉತ್ತಮ ನಿದ್ರೆಗೆ ಆದ್ಯತೆ ನೀಡಿ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಗುರು-ಹಿರಿಯರ ಆಶೀರ್ವಾದದಿಂದ ಆನಂದದಾಯಕ ದಿನ ನಿಮ್ಮದಾಗಲಿದೆ. ಹೂಡಿಕೆಗಳಿಂದ ಉತ್ತಮ ಲಾಭವನ್ನು ಗಳಿಸುವಿರಿ. ನಿಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹೂಡಿಕೆಯನ್ನು ಪರಿಗಣಿಸಿ. ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸುವುದನ್ನು ತಪ್ಪಿಸಿ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಉದ್ಯೋಗ ರಂಗದಲ್ಲಿ ಇಂದು ನಿಮ್ಮ ಕೆಲಸಕ್ಕೆ ಮನ್ನಣೆ ಸಿಗಲಿದೆ. ನಿರ್ಗತಿಕರಿಗೆ ಸಹಾಯ ಮಾಡುವುದರಿಂದ ಶುಭ ಫಲಗಳನ್ನು ಅನುಭವಿಸುವಿರಿ. ಸಾಧ್ಯವಾದರೆ ಕುಟುಂಬದೊಂದಿಗೆ ಹೊರಹೋಗಲು ಯೋಜನೆ ರೂಪಿಸಿ. 

ಇದನ್ನೂ ಓದಿ- 30 ವರ್ಷಗಳ ಬಳಿಕ ದೀಪಾವಳಿಯಲ್ಲಿ ಒಟ್ಟಿಗೆ 'ಮೂರು' ರಾಜಯೋಗಗಳು: ಈ ರಾಶಿಯವರಿಗೆ ಲಕ್ಷ್ಮಿಯ ವಿಶೇಷ ಆಶೀರ್ವಾದ

ಸಿಂಹ ರಾಶಿಯವರ ಭವಿಷ್ಯ (Leo Horoscope):  
ದೀರ್ಘ ಸಮಯದಿಂದ ಸ್ಥಗಿತಗೊಂಡಿದ್ದ ಕೆಲಸವೊಂದು ವೇಗವನ್ನು ಪಡೆಯಲಿದೆ. ಕೆಲಸಕ್ಕೆ ಸಂಬಂಧಿಸಿದ ಪ್ರವಾಸಗಳು ಲಾಭದಾಯಕವಾಗಿರಲಿದೆ. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವುದು ನಿಮ್ಮ ಆಂತರಿಕ ಶಕ್ತಿಯನ್ನು ವೃದ್ಧಿಸಲಿದೆ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ನಿಮಗಿಂದು ಆರೋಗ್ಯ ಸಮಸ್ಯೆಗಳು ಹೆಚ್ಚು ಬಾಧಿಸಬಹುದು. ಈ ಬಗ್ಗೆ ಜಾಗರೂಕರಾಗಿರಿ. ಎಂತಹುದೇ ಪರಿಸ್ಥಿತಿಯಲ್ಲಿ ನಿಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ. ಯಾವುದೇ ಕಾಗದ ಪತ್ರಗಳಿಗೆ ಸಹಿ ಮಾಡುವಾಗ ಜಾಗರೂಕರಾಗಿರಿ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ನಿಮ್ಮ ಮನೆಯ ನವೀಕರಣಕ್ಕಾಗಿ ಹೆಚ್ಚು ಖರ್ಚು ಮಾಡಬೇಯಾಗಬಹುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಬಹುದು. ಸ್ಥಿರಾಸ್ತಿಗಳಲ್ಲಿ ಹೂಡಿಕೆಯು ಭವಿಷ್ಯದಲ್ಲಿ ಲಾಭವನ್ನು ತಂದುಕೊಡಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಬಹುದು. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಇಂದು ಬೇರೆಡೆ ಸಿಲುಕಿರುವ ನಿಮ್ಮ ಹಣ ಕೈ ಸೇರಲಿದೆ. ವ್ಯವಹಾರದಲ್ಲಿ ಏಳ್ಗೆಯನ್ನು ಕಾಣುವಿರಿ. ಉದ್ಯೋಗಸ್ಥರು ಬಡ್ತಿಗಾಗಿ ಹೊಸ ಉದ್ಯೋಗವನ್ನು ಹುಡುಕುವುದು ಹೆಚ್ಚು ಸೂಕ್ತವಾಗಿದೆ. ಉದ್ಯೋಗಾಕಾಂಕ್ಷಿಗಳಿಗೆ ಸ್ನೇಹಿತರ ಸಹಕಾರದಿಂದ ಒಳ್ಳೆಯ ಕೆಲಸ ಸಿಗಲಿದೆ. 

ಇದನ್ನೂ ಓದಿ- ಈ ರಾಶಿಯವರಿಗೆ ಶನಿ ಬಲ: ಕೈಗೂಡುವುದು ಹಿಡಿದೆಲ್ಲಾ ಕೆಲಸ, ಹರಿಯುವುದು ಹಣದ ಹೊಳೆ

ಧನು ರಾಶಿಯವರ ಭವಿಷ್ಯ (Sagittarius Horoscope):  
ಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಿ. ಇದರಿಂದ ಹೆಚ್ಚು ಲಾಭವಾಗಲಿದೆ. ಕೆಲವು ಸಣ್ಣ ಸಣ್ಣ ತಪ್ಪುಗಳನ್ನು ನಿರ್ಲಕ್ಷಿಸಿ ಮುಂದುವರೆಯುವುದು ಹೆಚ್ಚು ಸೂಕ್ತ. ಕೆಲಸದ ಒತ್ತಡ ಹೆಚ್ಚಾಗುತ್ತದೆ. ಆದರೂ, ಇದರಿಂದ ಉತ್ತಮ ಲಾಭವನ್ನೇ ಪಡೆಯುವಿರಿ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಇಂದು ಕೆಲವು ಪರಿಸ್ಥಿತಿಗಳು ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸಬಹುದು. ಇದು ನಿಮ್ಮ ಆತ್ಮವಿಶ್ವಾಸದ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡಬಹುದು. ನಿಗದಿತ ಯೋಜನೆಗಳು ವಿಳಂಬವಾಗಬಹುದು. ಯಾವುದಕ್ಕೂ ಕುಗ್ಗಬೇಡಿ. ನಿಮ್ಮ ಪ್ರಯತ್ನವನ್ನು ಮುಂದುವರೆಸಿ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ನಿಮ್ಮ ಸ್ಥಿತಿಯನ್ನು ಸುಧಾರಿಸಲು ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರಿ. ಹೊಸ ಯೋಜನೆಗಳನ್ನು ಆರಂಭಿಸಲು ಅಧೀನ ಅಧಿಕಾರಿಗಳು ನಿಮ್ಮ ಸಹಾಯಕ್ಕೆ ನಿಲ್ಲಲಿದ್ದಾರೆ.ಕುಟುಂಬ ಸಮಸ್ಯೆಗಳನ್ನು ಬಗೆಹರಿಸಲು ನಿಮ್ಮ ಹಿರಿಯರು ಸಹಕಾರ ನೀಡುವರು. 

ಮೀನ ರಾಶಿಯವರ ಭವಿಷ್ಯ (Pisces Horoscope): 
ನಿಮ್ಮ ಸೃಜನಶೀಲತೆಯಿಂದ ಕಚೇರಿ, ಮನೆಯಲ್ಲಿನ ವಾತಾವರಣವನ್ನು ಇನ್ನಷ್ಟು ಸುಂದರಗೊಳಿಸಬಹುದು. ಸಮಾಜದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗಲಿದೆ. ಉಳಿತಾಯದ ಮಹತ್ವ ಅರಿತು ಇಂದಿನಿಂದಲೇ ಕೈಲಾದಷ್ಟು ಉಳಿತಾಯ ಮಾಡಲು ಪ್ರಯತ್ನಿಸಿ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News