ದಿನಭವಿಷ್ಯ 08-08-2024: ಇಂದು ಶಿವ ಯೋಗ, ಈ ರಾಶಿಯವರಿಗೆ ಧನ-ಸಂಪತ್ತು!

Today Horoscope 08th August 2024: ಗುರುವಾರದ ಈ ದಿನ ಉತ್ತರಾ ನಕ್ಷತ್ರ, ಶಿವ ಯೋಗ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Aug 8, 2024, 08:38 AM IST
  • ವೃಷಭ ರಾಶಿಯವರು ಇಂದು ಮನೆಯಲ್ಲಿ ಕೆಲವು ಶುಭ ಕಾರ್ಯಕ್ರಮಗಳ ಬಗ್ಗೆ ಯೋಚಿಸಬಹುದು.
  • ಕರ್ಕಾಟಕ ರಾಶಿಯವರೇ ಹಣಕಾಸಿನ ದೃಷ್ಟಿಯಿಂದ ಇಂದು ನಿಮಗೆ ಉತ್ತಮ ದಿನ.
  • ಸಿಂಹ ರಾಶಿಯವರೇ ಇಂದು ನೀವು ನಿಮ್ಮ ಸೋಮಾರಿತನವನ್ನು ಬಿಟ್ಟು ಮುನ್ನಡೆಯುವ ದಿನ.
ದಿನಭವಿಷ್ಯ 08-08-2024:  ಇಂದು ಶಿವ ಯೋಗ, ಈ ರಾಶಿಯವರಿಗೆ ಧನ-ಸಂಪತ್ತು!  title=

Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ, ಗುರುವಾರದ ಈ ದಿನ ಉತ್ತರಾ ನಕ್ಷತ್ರ, ಶಿವ ಯೋಗ ಯಾವ ರಾಶಿಯವರಿಗೆ ತರಲಿದೆ ಅದೃಷ್ಟ ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ದಾನ ಕಾರ್ಯಗಳಲ್ಲಿ ಇಂದು ಸಕ್ರಿಯರಾಗಿರುವಿರಿ. ಕೆಲಸದಲ್ಲಿ ಬದಲಾವಣೆಗೆ ಯೋಚಿಸುತ್ತಿದ್ದರೆ ಸದ್ಯಕ್ಕೆ ಯಾವುದೇ ಬದಲಾವಣೆ ಮಾಡದಿರುವುದು ಸೂಕ್ತ. ಇಲ್ಲವೇ ನಷ್ಟವನ್ನು ಅನುಭವಿಸಬಹುದು. ಕುಟುಂಬದ ಸದಸ್ಯರ ಆರೋಗ್ಯದ ಕ್ಷೀಣತೆಯಿಂದಾಗಿ ಚಿಂತಿತರಾಗಿರುತ್ತೀರಿ. ಇಂದು ಓಡಾಟ ಹೆಚ್ಚಾಗಬಹುದು. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಇಂದು ಮನೆಯಲ್ಲಿ ಕೆಲವು ಶುಭ ಕಾರ್ಯಕ್ರಮಗಳ ಬಗ್ಗೆ  ಯೋಚಿಸಬಹುದು. ಕುಟುಂಬದ ಸದಸ್ಯರ ನಡುವಿನ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ. ನಿಮ್ಮ ಮಗುವಿನ ಭವಿಷ್ಯದ ಬಗ್ಗೆ ನೀವು ಚಿಂತಿತರಾಗಿರಬಹುದು. ಹೊಸ ಹೂಡಿಕೆಗಳು ಲಾಭದಾಯಕವಾಗಿದೆ. ಉದ್ಯೋಗ ರಂಗದಲ್ಲಿ ಒಳ್ಳೆಯ ಸುದ್ದಿಗಳನ್ನು ನಿರೀಕ್ಷಿಸಬಹುದು.  

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಇಂದು ನಿಮಗೆ ಸಾಮಾನ್ಯ ದಿನವಾಗಲಿದೆ. ಸಮಾಜದಲ್ಲಿ ನಿಮ್ಮ ಪ್ರಭಾವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ವೃತ್ತಿ ರಂಗದಲ್ಲಿ ಉತ್ತಮ ಲಾಭವನ್ನು ಗಳಿಸುವಿರಿ. ನಿಮ್ಮ ಕೆಲಸದಲ್ಲಿ ನೀವು ಜಾಗರೂಕರಾಗಿರಬೇಕು. ಉದ್ಯೋಗದಲ್ಲಿ ನಿಮ್ಮ ಕೆಲಸದ ದಕ್ಷತೆಯು ಹೆಚ್ಚಾಗುತ್ತದೆ.  ನಿಮ್ಮ ಕಠಿಣ ಪರಿಶ್ರಮದಿಂದ ನೀವು ಉತ್ತಮ ಸ್ಥಾನವನ್ನು ಗಳಿಸುವಿರಿ.  

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಹಣಕಾಸಿನ ದೃಷ್ಟಿಯಿಂದ ಇಂದು ನಿಮಗೆ ಉತ್ತಮ ದಿನ. ಇಂದು ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಬೇರೆಡೆ ಸಿಲುಕಿರುವ ಹಣ ನಿಮ್ಮ ಕೈ ಸೇರಲಿದೆ.  ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಸಮಾಜದಲ್ಲಿ ಗೌರವ, ಕೀರ್ತಿ ಹೆಚ್ಚಾಗಲಿದೆ. ನೀವು ಯಾವುದೇ ಕೆಲಸದ ಬಗ್ಗೆ ಆತುರದ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು.

ಇದನ್ನೂ ಓದಿ- Gold Ring: ಈ ಬೆರಳಿಗೆ ಅಪ್ಪಿತಪ್ಪಿಯೂ ಚಿನ್ನದ ಉಂಗುರ ಧರಿಸಬೇಡಿ! ಕೆಟ್ಟ ದಿನಗಳು ಆರಂಭವಾಗಲು ಸಮಯವೇ ಬೇಕಿಲ್ಲ!

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಇಂದು ನೀವು ನಿಮ್ಮ ಸೋಮಾರಿತನವನ್ನು ಬಿಟ್ಟು ಮುನ್ನಡೆಯುವ ದಿನ. ಕೆಲವು ಪ್ರಮುಖ ಕೆಲಸದ ಬಗ್ಗೆ ನಿಮ್ಮ ಸುತ್ತಮುತ್ತಲಿನ ಜನರೊಂದಿಗೆ ನೀವು ಮಾತುಕತೆ ನಡೆಸಬಹುದು. ಸಮಾಜದಲ್ಲಿ ನಿಮ್ಮ ಪ್ರಭಾವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಕೆಲವು ಕೆಲಸದ ಬಗ್ಗೆ ನಿಮಗೆ ಯಾವುದೇ ತಪ್ಪು ತಿಳುವಳಿಕೆ ಇದ್ದರೆ, ಕುಳಿತು ಮಾತನಾಡುವ ಮೂಲಕ ಅದನ್ನು ಪರಿಹರಿಸಲು ಪ್ರಯತ್ನಿಸಿ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಇಂದು ನಿಮಗೆ ಸಾಮಾನ್ಯ ದಿನ. ಭಾವನಾತ್ಮಕವಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ, ಇಲ್ಲದಿದ್ದರೆ ಅದು ನಿಮಗೆ ನಂತರ ಸಮಸ್ಯೆಗಳನ್ನು ಉಂಟುಮಾಡುತ್ತದೆ.ನಿಮ್ಮ ಸಂಗಾತಿಯು ನಿಮ್ಮ ಮೇಲೆ ಯಾವುದೋ ವಿಷಯಕ್ಕೆ ಕೋಪಗೊಳ್ಳಬಹುದು. ಈ ಸಂದರ್ಭದಲ್ಲಿ ನೀವೂ ಕೋಪಗೊಳ್ಳುವ ಬದಲಿಗೆ ತಾಳ್ಮೆಯಿಂದ ಮಾತನಾಡಿ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಇಂದು ನಿಮ್ಮ ಆದಾಯದ ಮೂಲಗಳು ಹೆಚ್ಚಾಗಲಿವೆ. ವ್ಯವಹಾರದಲ್ಲಿ ಯೋಚಿಸಿ ಮುಂದುವರೆಯುವುದರಿಂದ ಶುಭಬಾಗಲಿದೆ. ನಿಮ್ಮ ಮಾತಿನ ಸೌಮ್ಯತೆಯಿಂದ ಜನರನ್ನು ನಿಮ್ಮ ಕಡೆಗೆ ಆಕರ್ಷಿಸುವಿರಿ, ಇದು ನಿಮ್ಮ ಸ್ನೇಹಿತರ ಸಂಖ್ಯೆಯನ್ನು ಹೆಚ್ಚಿಸುತ್ತದೆ.  ನಿಮ್ಮ ಮಗುವಿನ ಶಿಕ್ಷಣದ ಬಗ್ಗೆ ನೀವು ಚಿಂತಿತರಾಗಬಹುದು.

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಉದ್ಯೋಗಸ್ಥರಿಗೆ ಇಂದು ಉತ್ತಮ ದಿನವಾಗಲಿದೆ. ಪೂರ್ವಜರ ಆಸ್ತಿಯಿಂದ ಲಾಭ ಪಡೆಯುವ ಸಾಧ್ಯತೆಯಿದೆ, ಇದರಿಂದಾಗಿ ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಯಾರೊಬ್ಬರ ಸಲಹೆಯ ಮೇರೆಗೆ ನೀವು ಯಾವುದೇ ಹೂಡಿಕೆ ಮಾಡುವುದನ್ನು ತಪ್ಪಿಸಬೇಕು. ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಹಾದಿ ಸುಗಮವಾಗಲಿದೆ. ವ್ಯವಹಾರ ಸಂಬಂಧಿತ ವಿಷಯಗಳಲ್ಲಿ ಜಾಗರೂಕರಾಗಿರಬೇಕು.

ಇದನ್ನೂ ಓದಿ- ಬರೋಬ್ಬರಿ 200 ವರ್ಷಗಳ ನಂತರ ಈ ರಾಶಿಗೆ ಮಹಾ ರಾಜಯೋಗ: ಇನ್ಮುಂದೆ ಹಿಡಿದ ಪ್ರತಿ ಕೆಲಸದಲ್ಲೂ ಗೆಲುವೇ! ಅದೃಷ್ಟದ ಬಲದಿಂದ ಹೆಚ್ಚಲಿದೆ ಸಿರಿಸಂಪತ್ತು

ಧನು ರಾಶಿಯವರ ಭವಿಷ್ಯ (Sagittarius Horoscope):  
ವ್ಯಾಪಾರ ಮಾಡುವವರಿಗೆ ಇಂದು ಉತ್ತಮ ದಿನವಾಗಲಿದೆ. ದೀರ್ಘ ಸಮಯದಿಂದ ಬೇರೆಡೆ ಸಿಲುಕಿರುವ ಹಣ ನಿಮ್ಮ ಕೈ ಸೇರುವ ಸಾಧ್ಯತೆ ಇದೆ.  ಕಾನೂನಾತ್ಮಕ ವಿಷಯಗಳಲ್ಲಿ ಜಯ ಸಾಧಿಸುವಿರಿ. ಐಷಾರಾಮಿ ಜೀವನಕ್ಕಾಗಿ ಹಣವನ್ನು ಖರ್ಚು ಮಾಡುತ್ತೀರಿ. ನಿಮ್ಮ ಹೆತ್ತವರ ಆಶೀರ್ವಾದದಿಂದ, ದೊಡ್ಡ ಹೂಡಿಕೆ ಮಾಡಲು ಅವಕಾಶವನ್ನು ಪಡೆಯುತ್ತೀರಿ.  

ಮಕರ ರಾಶಿಯವರ ಭವಿಷ್ಯ (Capricorn Horoscope):  
ಇಂದು ನಿಮ್ಮ ಆದಾಯವನ್ನು ಹೆಚ್ಚಿಸುವ ದಿನವಾಗಿರುತ್ತದೆ. ಅದೃಷ್ಟವು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ, ಆದ್ದರಿಂದ ನೀವು ಯಾವುದೇ ಕೆಲಸವನ್ನು ಕೈಗೊಂಡರೂ ಅದರಲ್ಲಿ ನೀವು ಸುಲಭವಾಗಿ ಯಶಸ್ಸನ್ನು ಪಡೆಯುತ್ತೀರಿ. ನೀವು ವಾಹನಗಳನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ. ನಿಮ್ಮ ಕುಟುಂಬ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುತ್ತೀರಿ.

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಇಂದು ನಿಮಗೆ ಮಿಶ್ರ ಫಲಪ್ರದವಾದ ದಿನವಾಗಲಿದೆ. ನೀವು ಕೆಲಸದ ಸ್ಥಳದಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗುವುದನ್ನು ತಪ್ಪಿಸಬೇಕು. ಹೊಸ ಆಸ್ತಿಯನ್ನು ಖರೀದಿಸುವುದು ನಿಮಗೆ ಪ್ರಯೋಜನಕಾರಿ ಆಗಿದೆ. ಯಾರೊಬ್ಬರ ಸಲಹೆಯ ಮೇರೆಗೆ ಯಾವುದೇ ವ್ಯವಹಾರವನ್ನು ಮಾಡಬೇಡಿ, ಇಲ್ಲದಿದ್ದರೆ ನೀವು ಸ್ವಲ್ಪ ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ.  

ಮೀನ ರಾಶಿಯವರ ಭವಿಷ್ಯ (Pisces Horoscope): 
ಇಂದು ನಿಮಗೆ ಸಾಮಾನ್ಯ ದಿನವಾಗಲಿದೆ. ಕೆಲಸದ ಸ್ಥಳದಲ್ಲಿ ಒತ್ತಡ ಹೆಚ್ಚಾಗುತ್ತದೆ. ನೀವು ಯಾವುದಾದರೂ ವಿಷಯದಲ್ಲಿ ಉದ್ವೇಗವನ್ನು ಅನುಭವಿಸುತ್ತಿದ್ದರೆ, ಅದು ಹೆಚ್ಚಾಗಬಹುದು. ನಿಮ್ಮ ವೈವಾಹಿಕ ಜೀವನದಲ್ಲಿ ಸಮನ್ವಯವನ್ನು ಕಾಪಾಡಿಕೊಳ್ಳಬೇಕು ಮತ್ತು ನಿಮ್ಮ ಸಂಗಾತಿಯ ಸಮಸ್ಯೆಗಳನ್ನು ಆಲಿಸಲು ಸಮಯ ಮೀಸಲಿಡಬೇಕು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News