ದಿನಭವಿಷ್ಯ 29-11-2023: ಈ ರಾಶಿಯವರು ಇಂದು ದುಂದುವೆಚ್ಚಕ್ಕೆ ಕಡಿವಾಣ ಹಾಕದಿದ್ದರೆ ಆರ್ಥಿಕ ಬಿಕ್ಕಟ್ಟು ಹೆಚ್ಚಾಗಬಹುದು ಎಚ್ಚರ!

Today Horoscope 29th November 2023: ಹಿಂದೂ ಧರ್ಮದಲ್ಲಿ ಪ್ರತಿ ದಿನವೂ ಒಂದೊಂದು ದೇವರಿಗೆ ಮೀಸಲಾಗಿದೆ. ಇಂದು ಬುಧವಾರವನ್ನು ಗಣಪತಿಗೆ ಮೀಸಲಾದ ದಿನ ಎಂದು ಹೇಳಲಾಗುತ್ತದೆ. ಈ ದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ತಿಳಿಯೋಣ.. 

Written by - Yashaswini V | Last Updated : Nov 29, 2023, 07:08 AM IST
  • ಕರ್ಕಾಟಕ ರಾಶಿಯವರಿಗೆ ಇಂದು ದಿನದ ಆರಂಭ ಉತ್ತಮವಾಗಿರಲಿದೆ.
  • ತುಲಾ ರಾಶಿಯ ಉದ್ಯೋಗಸ್ಥರಿಗೆ ಉದ್ಯೋಗ ರಂಗದಲ್ಲಿ ಇಂದು ಸಮಸ್ಯೆಗಳು ಹೆಚ್ಚಾಗಬಹುದು.
  • ಧನು ರಾಶಿಯವರಿಗೆ ಇಂದು ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ.
ದಿನಭವಿಷ್ಯ 29-11-2023:  ಈ ರಾಶಿಯವರು ಇಂದು ದುಂದುವೆಚ್ಚಕ್ಕೆ ಕಡಿವಾಣ ಹಾಕದಿದ್ದರೆ ಆರ್ಥಿಕ ಬಿಕ್ಕಟ್ಟು ಹೆಚ್ಚಾಗಬಹುದು ಎಚ್ಚರ! title=

ದಿನಭವಿಷ್ಯ :  ಬುಧವಾರ ನವೆಂಬರ್ 29, 2023ರಂದು ಎಲ್ಲಾ 12 ರಾಶಿಯವರ ದಿನ ಹೇಗಿದೆ. ಮೇಷ ರಾಶಿಯಿಂದ ಮೀನ ರಾಶಿಯವರೆಗೆ ಇಂದಿನ ದಿನ ಹೇಗಿದೆ ತಿಳಿಯಿರಿ. 

ಮೇಷ ರಾಶಿ:  
ಮೇಷ ರಾಶಿಯವರು ಉದ್ಯೋಗ ರಂಗದಲ್ಲಿ ಇಂದು ನಿರೀಕ್ಷಿತ ಫಲಗಳನ್ನು ಪಡೆಯದೆ ನಿರಾಶೆಯನ್ನು ಅನುಭವಿಸಬೇಕಾಗಬಹುದು. ವಿನಾಕಾರಣ ಒತ್ತಡ ಹೆಚ್ಚಾಗಲಿದ್ದು ಮನಸ್ಸಿನ ನೆಮ್ಮದಿ ಹದಗೆಡಬಹುದು. ಇದರಿಂದ ಹೊರಬರಲು ಧ್ಯಾನವಣ್ ನು ಅಭ್ಯಾಸ ಮಾಡಿ. 

ವೃಷಭ ರಾಶಿ:  
ಜೀವನ ಎಂದ ಮೇಲೆ ಏರಿಳಿತಗಳು ಇದ್ದದ್ದೇ.ಇದನ್ನು ಅರಿತು ಮುಂದುವರೆದರೆ ಮನಸ್ಸಿನ ಬೇಸರ ಕೊಂಚ ಕಡಿಮೆಯಾಗಬಹುದು. ದುಂದುವೆಚ್ಚಕ್ಕೆ ಕಡಿವಾಣ ಹಾಕದಿದ್ದರೆ ಆರ್ಥಿಕ ಬಿಕ್ಕಟ್ಟು ಹೆಚ್ಚಾಗಬಹುದು ಎಚ್ಚರ. ದಿನದ ಉತ್ತರಾರ್ಧದಲ್ಲಿ ಕೊಂಚ ನೆಮ್ಮದಿಯನ್ನು ಕಾಣಬಹುದು. 

ಮಿಥುನ ರಾಶಿ:   
ಮಿಥುನ ರಾಶಿಯವರಿಗೆ ಇಂದು ಕೆಲಸಕಾರ್ಯಗಳು ಸ್ವಲ್ಪ ನಿಧಾನವಾಗುವ ಸಾಧ್ಯತೆ ಇದೆ. ಇದು ನಿಮ್ಮ ಮನಸ್ಸಿಗೆ ಕಿರಿಕಿರಿ ಉಂಟು ಮಾಡಬಹುದು. ವ್ಯಾಪಾರಸ್ಥರು ಸಂಭಾವ್ಯ ನಷ್ಟವನ್ನು ತಪ್ಪಿಸಲು ಇಂದು ಎಚ್ಚರಿಕೆಯಿಂದ ಹೆಜ್ಜೆ ಇಡುವುದನ್ನು ಪರಿಗಣಿಸಿ. 

ಕರ್ಕಾಟಕ ರಾಶಿ: 
ಕರ್ಕಾಟಕ ರಾಶಿಯವರಿಗೆ ಇಂದು ದಿನದ ಆರಂಭ ಉತ್ತಮವಾಗಿರಲಿದೆ. ಆದರೆ, ಮಧ್ಯಾಹ್ನದ ನಂತರ ಕೆಲವು ಅನಿರೀಕ್ಷಿತ ಘಟನೆಗಳು ನಡೆಯುವ ಸಾಧ್ಯತೆ ಇರುವುದರಿಂದ ನಿಮ್ಮ ನಿಗದಿತ ಕೆಲಸಗಳು ಪೂರ್ಣಗೊಳ್ಳುವಲ್ಲಿ ವಿಳಂಬವಾಗಬಹುದು. ಸಂಜೆ ವೇಳೆಗೆ ಕುಟುಂಬ ಸದಸ್ಯರಿಂದ ಶುಭ ಸುದ್ದಿ ನಿರೀಕ್ಷಿಸಿ. 

ಇದನ್ನೂ ಓದಿ- Wednesday Remedies: ಆರ್ಥಿಕ ಸಂಕಷ್ಟದಿಂದ ಮುಕ್ತಿಗಾಗಿ ಇಂದೇ ಮಾಡಿ ಈ ಪರಿಹಾರ

ಸಿಂಹ ರಾಶಿ:   
ಸಿಂಹ ರಾಶಿಯವರು ಇಂದು ಪೂರ್ವಾರ್ಧದಲ್ಲಿ ಕೆಲಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸವಾಲುಗಳನ್ನು ಎದುರಿಸಬೇಕಾಗಬಹುದು. ಇದು ನಿಮ್ಮ ಒತ್ತಡವನ್ನು ಕೂಡ ಹೆಚ್ಚಿಸಲಿದೆ. ಆದರೆ, ಮಾನಸಿಕ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಜೀವಂದಲ್ಲಿ ಸವಾಲುಗಳನ್ನು ಧೈರ್ಯದಿಂದ ಮುಂದುವರೆಸಿದರಷ್ಟೇ ಗೆಲುವು ಸಾಧ್ಯ ಎಂಬುದನ್ನೂ ನೆನಪಿಡಿ. 

ಕನ್ಯಾ ರಾಶಿ: 
ಕನ್ಯಾ ರಾಶಿಯವರಿಗೆ ಇಂದು ಮಿಶ್ರಫಲಗಳ ದಿನ. ನೀವು ನಿಮ್ಮ ನಿಗದಿತ ಕೆಲಸಗಳನ್ನು ಪೂರ್ಣಗೊಳಿಸಲು ಹೆಚ್ಚು ಶ್ರಮವಹಿಸಬೇಕಾಗುತ್ತದೆ. ವ್ಯಾಪಾರಸ್ಥರಿಗೆ ಆರ್ಥಿಕ ನಷ್ಟ ಸಾಧ್ಯತೆ ಇರುವುದರಿಂದ ಎಚ್ಚರ. ಆದಾಗ್ಯೂ, ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳಿ. 

ತುಲಾ ರಾಶಿ:  
ತುಲಾ ರಾಶಿಯ ಉದ್ಯೋಗಸ್ಥರಿಗೆ ಉದ್ಯೋಗ ರಂಗದಲ್ಲಿ ಇಂದು ಸಮಸ್ಯೆಗಳು ಹೆಚ್ಚಾಗಬಹುದು. ಆದರೆ, ವ್ಯಾಪಾರಸ್ಥರಿಗೆ ಇಂದು ಉತ್ತಮ ದಿನ. ಯಾವುದೇ ಕೆಲಸವನ್ನು ತಾಳ್ಮೆಯಿಂದ ಪೂರ್ಣಗೊಳಿಸಿದರೆ ಅದ್ಭುತ ಫಲವನ್ನು ನಿರೀಕ್ಷಿಸಬಹುದು. 

ವೃಶ್ಚಿಕ ರಾಶಿ:   
ವೃಶ್ಚಿಕ ರಾಶಿಯವರಿಗೆ ಇಂದು ಅದೃಷ್ಟದ ದಿನ ಎಂದು ಸಾಬೀತುಪಡಿಸಲಿದೆ. ನಿಮ್ಮ ಬಹುಕಾಲದ ಕನಸು ಇಂದು ನನಸಾಗಲಿದೆ. ಹಣಕಾಸಿನ ಹರಿವು ಹೆಚ್ಚಾಗಲಿದ್ದು ಉತ್ತಮ ಲಾಭವನ್ನು ಗಳಿಸುವಿರಿ. ಕಚೇರಿಯಲ್ಲಿ ನಿಮ್ಮ ಕೆಲಸವನ್ನು ಅಧಿಕಾರಿಗಳು ಪ್ರಶಂಸಿಸುವರು. 

ಇದನ್ನೂ ಓದಿ- ಡಿಸೆಂಬರ್‌ನಲ್ಲಿ ಗುರು ಬಲದಿಂದ ಈ ರಾಶಿಯವರಿಗೆ ಅದೃಷ್ಟ, ಮುಟ್ಟಿದ್ದೆಲ್ಲಾ ಚಿನ್ನ

ಧನು ರಾಶಿ:  
ಧನು ರಾಶಿಯವರಿಗೆ ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ವೈಫಲ್ಯಗಳನ್ನು ಅನುಭವಿಸುವ ಸಾಧ್ಯತೆ ಇದ್ದು, ಇದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು. ಆತ್ಮವಿಶ್ವಾಸ ಒಳ್ಳೆಯದು ಆದರೆ, ಅತಿಯಾದರೆ ಯಾವುದೂ ಒಳ್ಳೆಯದಲ್ಲ ಎಂಬುದನ್ನೂ ಮರೆಯಬೇಡಿ. 

ಮಕರ ರಾಶಿ:  
ಮಕರ ರಾಶಿಯವರಿಗೆ ಇಂದು ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ನೀವು ಯಾವುದೇ ಹೊಸ ಕೆಲಸವನ್ನು ಆರಂಭಿಸಲು ಯೋಚಿಸುತ್ತಿದ್ದರೆ ಇಂದು ಅತ್ಯುತ್ತಮವಾದ ದಿನ. ಆದರೆ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. 

ಕುಂಭ ರಾಶಿ:  
ಕುಂಭ ರಾಶಿಯ ಯುವಕರಿಗೆ ಅದರಲ್ಲೂ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಇಂದು ಒಳ್ಳೆಯ ದಿನ. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಲು ಇಚ್ಚಿಸುತ್ತಿರುವವರು ಆ ನಿಟ್ಟಿನಲ್ಲಿ ಇಂದು ಕೆಲಸ ಮಾಡಿದರೆ ಶುಭ ಫಲಗಳನ್ನು ನಿರೀಕ್ಷಿಸಬಹುದು. ಆದಾಯದಲ್ಲಿ ಹೆಚ್ಚಳ ಸಾಧ್ಯತೆ ಇದೆ. 

ಮೀನ ರಾಶಿ:  
ಮೀನ ರಾಶಿಯವರಿಗೆ ಇಂದು ಹಣಕಾಸಿನ ಹರಿವು ಉತ್ತಮವಾಗಿರಲಿದೆ. ಇದರಿಂದ ನಿಮ್ಮ ಕೆಲವು ಕಷ್ಟಗಳಿಗೆ ಪರಿಹಾರವನ್ನು ಸಹ ಕಾಣಬಹುದು. ದಿನದ ಉತ್ತರಾರ್ಧದಲ್ಲಿ ಉದ್ಯೋಗಸ್ಥರು ಶುಭ ಫ್ಲಾಗಳನ್ನು ನಿರೀಕ್ಷಿಸಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News