ಮಾರ್ಗಿ ಗುರು ಪರಿಣಾಮ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳೂ ಸಹ ನಿರ್ದಿಷ್ಟ ಸಮಯದಲ್ಲಿ ತಮ್ಮ ಸ್ಥಾನವನ್ನು ಬದಲಾಯಿಸುತ್ತವೆ. ಗ್ರಹಗಳ ಸ್ಥಾನದಲ್ಲಿನ ಸಣ್ಣ ಬದಲಾವಣೆಯೂ ಸಹ 12 ರಾಶಿ ಚಕ್ರಗಳ ಜನರ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತವೆ. ಬೆಳಕಿನ ಹಬ್ಬ ದೀಪಾವಳಿಯ ಬಳಿಕ ಗುರು ಮಾರ್ಗಿಯಾಗುತ್ತಾನೆ. ಮಾರ್ಗಿ ಗುರುವು ದ್ವಾದಶ ರಾಶಿಗಳಲ್ಲಿ ನಾಲ್ಕು ರಾಶಿಯ ಜನರಿಗೆ ಭಾಗ್ಯೋದಯವನ್ನು ಕರುಣಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
ಈ 4 ರಾಶಿಯವರ ಅದೃಷ್ಟವನ್ನು ಬೆಳಗಿಸಲಿದ್ದಾನೆ ಮಾರ್ಗಿ ಗುರು:
ವೃಷಭ ರಾಶಿ: ಗುರು ಗ್ರಹ ಮಾರ್ಗಿಯು ವೃಷಭ ರಾಶಿಯವರ ಆದಾಯವನ್ನು ಹೆಚ್ಚಿಸಲಿದ್ದು, ವೃತ್ತಿ ರಂಗದಲ್ಲೂ ಭಾರೀ ಯಶಸ್ಸನ್ನು ನೀಡಲಿದ್ದಾನೆ. ಈ ಸಮಯದಲ್ಲಿ ವೃಷಭ ರಾಶಿಯವರಿಗೆ ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಇದರೊಂದಿಗೆ ವ್ಯಾಪಾರ-ವ್ಯವಹಾರದಲ್ಲಿಯೂ ಲಾಭ ಗಳಿಸಬಹುದು. ಮಾತ್ರವಲ್ಲ ಭೂಮಿ ಮತ್ತು ವಾಹನ ಖರೀದಿ ಯೋಗವೂ ಇದೆ.
ಇದನ್ನೂ ಓದಿ- Surya Grahan 2022: ದೀಪಾವಳಿಯ ಮರುದಿನವೇ ವರ್ಷದ ಕೊನೆಯ ಸೂರ್ಯಗ್ರಹಣ, ಈ ರಾಶಿಯವರು ಜಾಗರೂಕರಾಗಿರಿ
ಮಿಥುನ ರಾಶಿ: ಗುರು ಗ್ರಹವು ಮಿಥುನ ರಾಶಿಯ ಹತ್ತನೇ ಮನೆಯಲ್ಲಿ ಸಾಗಲಿದೆ. ಗುರುವಿನ ಈ ಸಂಚಾರದಿಂದ ಮಿಥುನ ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ ಎಂದು ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ಈ ರಾಶಿಯವರಿಗೆ ಹೊಸ ಉದ್ಯೋಗಾವಕಾಶ ಸಿಗುವ ಸಾಧ್ಯತೆಯಿದೆ. ಉದ್ಯೋಗದಲ್ಲಿರುವವರಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ವ್ಯಾಪಾರಸ್ಥರು ದೊಡ್ಡ ದೊಡ್ಡ ಆರ್ಡರ್ಗಳನ್ನು ಪಡೆಯಬಹುದು ಮತ್ತು ಉತ್ತಮ ಲಾಭವನ್ನು ಗಳಿಸಬಹುದು ಎಂದು ಹೇಳಲಾಗುತ್ತಿದೆ.
ಕರ್ಕಾಟಕ ರಾಶಿ: ಗುರು ಗ್ರಹವು ಕರ್ಕ ರಾಶಿಯ ಒಂಬತ್ತನೇ ಮನೆಯಲ್ಲಿ ಸಾಗಲಿದ್ದಾನೆ ಮತ್ತು ಈ ಕಾರಣದಿಂದಾಗಿ ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಕರ್ಕಾಟಕ ರಾಶಿಯವರಿಗೆ ಮಾರ್ಗಿ ಗುರುವು ದೀರ್ಘಕಾಲದಿಂದ ಸ್ಥಗಿತಗೊಂಡಿರುವ ಕೆಲಸಗಳನ್ನು ಪೂರ್ಣಗೊಳಿಸಲಿದ್ದಾನೆ. ಬ್ಯುಸಿನೆಸ್ ಟ್ರಿಪ್ ಗಳು ಉತ್ತಮ ಲಾಭವನ್ನು ನೀಡಲಿವೆ. ವಿದೇಶಿ ವ್ಯಾಪಾರಕ್ಕೆ ಸಂಬಂಧಿಸಿದ ಜನರು ಉತ್ತಮ ಆದಾಯ ಗಳಿಸುವ ಸಾಧ್ಯತೆಯಿದೆ.
ಇದನ್ನೂ ಓದಿ- ಶನಿಯ ಕೃಪೆಯಿಂದ ರೂಪುಗೊಳ್ಳಲಿದೆ. 'ಅಖಂಡ ಸಾಮ್ರಾಜ್ಯ ರಾಜಯೋಗ' ಈ ಮೂರು ರಾಶಿಯವರಿಗೆ ಅದೃಷ್ಟ
ಕುಂಭ ರಾಶಿ: ಗುರು ಗ್ರಹವು ಕುಂಭ ರಾಶಿಯ ಎರಡನೇ ಮನೆಯಲ್ಲಿ ಸಾಗಲಿದೆ ಮತ್ತು ಅದು ನಿಮಗೆ ಮಂಗಳಕರವೆಂದು ಸಾಬೀತುಪಡಿಸಬಹುದು. ಈ ಸಂದರ್ಭದಲ್ಲಿ ಕುಂಭ ರಾಶಿಯವರಿಗೆ ಅನಿರೀಕ್ಷಿತ ಮೂಲಗಳಿಂದ ಹಣ ಬರುವ ಸಾಧ್ಯತೆ ಇದೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಲಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.